ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಸಿಎಂ ಜೊತೆ ಶೀಘ್ರ ಚರ್ಚೆ
ಕೊಡಗು

ಪೊನ್ನಂಪೇಟೆ ತಾಲೂಕು ರಚನೆ ಬಗ್ಗೆ ಸಿಎಂ ಜೊತೆ ಶೀಘ್ರ ಚರ್ಚೆ

June 4, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕು ಭೌಗೋಳಿಕವಾಗಿ ಅತಿ ದೊಡ್ಡ ಪ್ರದೇಶ ಹಾಗೂ ಜನಸಂಖ್ಯೆ ಹಾಗೂ ಅಧಿಕ ಗ್ರಾಮಗಳ ಆಧಾರದಲ್ಲೂ ಇದು ದೊಡ್ಡ ತಾಲೂಕು ಆಗಿರುವುದರಿಂದ ಇದನ್ನು ವಿಂಗ ಡಿಸಿ ಪೊನ್ನಂಪೇಟೆಯ ಸುತ್ತಮುತ್ತಲ ಗ್ರಾಮಗಳನ್ನು ಹೊಂದಿಕೊಂಡಂತೆ ಪೊನ್ನಂ ಪೇಟೆಯನ್ನು ಹೊಸ ತಾಲೂಕನ್ನು ರಚಿಸು ವುದು ನ್ಯಾಯಸಮ್ಮತವಾಗಿದೆ ಎಂದು ಜಾತ್ಯ ತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯ ತಾಲೂಕು ಪುನರ್ ರಚನಾ ಹೋರಾಟ ಸಮಿತಿ ಮತ್ತು ಪೊನ್ನಂ ಪೇಟೆಯ ನಾಗರಿಕ ಸಮಿತಿಯ ನಿಯೋಗ ಇಂದು ಸಂಕೇತ್ ಪೂವಯ್ಯ ಅವರ ಗೃಹ ಕಚೇರಿಯಲ್ಲಿ ಪೊನ್ನಂಪೇಟೆ ತಾಲೂಕು ಪುನರ್ರಚನೆ ಕುರಿತು ಸಂಕೇತ್ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದಾಗ ಮನವಿ ಯನ್ನು ಪರಿಶೀಲಿಸಿದ ಸಂಕೇತ್ ಅವರು ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಯನ್ನು ಎರಡು ದಿನಗಳೊಳಗೆ ಸಂಪರ್ಕಿಸಿ ಅವರ ಗಮನಕ್ಕೆ ತರಲಾಗವುದು. ಜೊತೆಗೆ ಪೊನ್ನಂಪೇಟೆ ತಾಲೂಕು ಪುನರ್ ರಚನೆ ಆಯೋಗವನ್ನು ಕುಮಾರಸ್ವಾಮಿ ಅವರೊಂದಿಗೆ ಖುದ್ದು ಭೇಟಿ ಮಾಡಿಸಿ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಭರವಸೆಯಿತ್ತರು.

ಕಳೆದ ಏಪ್ರಿಲ್ ತಿಂಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ವಿರಾಜಪೇಟೆಗೆ ಆಗಮಿಸಿದಾಗ ಪಕ್ಷದ ಸಮಾವೇಶದ ಕೊನೆಯಲ್ಲಿ ಸಂಕೇತ್ ಪೂವಯ್ಯ ಅವರು ನೀಡಿದ ಮನವಿಯನ್ನು ಪುರಸ್ಕರಿಸಿ ಜನತಾದಳ ಸರಕಾರದಿಂದ ರೈತರ ಸಾಲ ಮನ್ನಾದೊಂದಿಗೆ ಪೊನ್ನಂಪೇಟೆ, ಕುಶಾಲನಗರವನ್ನು ಹೊಸ ತಾಲೂಕುಗಳಾಗಿ ರಚಿಸಲಾಗುವುದು ಎಂದು ವಾಗ್ದಾನ ನೀಡಿದ ಹಿನ್ನಲೆಯಲ್ಲಿ ಇದನ್ನು ಅವರ ಗಮನಕ್ಕೆ ತಂದು ಬೇಡಿಕೆ ಈಡೇರಿಸಲಾಗುವುದು ಎಂದು ಸಂಕೇತ್ ಪೂವಯ್ಯ ಆಯೋ ಗಕ್ಕೆ ಭರವಸೆ ನೀಡಿದರು.

ಪೊನ್ನಂಪೇಟೆಯನ್ನು ಹೊಸ ತಾಲೂಕು ಆಗಿ ರಚಿಸಿದರೆ ಇದಕ್ಕೆ 4 ಹೋಬಳಿಗಳು, 21 ಗ್ರಾಮ ಪಂಚಾಯಿತಿಗಳು, 48 ಗ್ರಾಮ ಗಳು ಒಳಪಡಲಿವೆ. ವಿರಾಜಪೇಟೆ ಅತಿ ದೊಡ್ಡ ತಾಲೂಕು ಆಗಿದೆ. ಈ ಹಿಂದೆ 1950 ರಿಂದಲೂ ಪೊನ್ನಂಪೇಟೆ ಕಿಗ್ಗಟ್ಟುನಾಡು ತಾಲೂಕು ಆಗಿತ್ತು. ನಂತರ ಕೊಡಗು ಸರ ಕಾರ ಕರ್ನಾಟಕದೊಂದಿಗೆ ವಿಲೀನಗೊಂಡಾಗ ಇದು ವಿರಾಜಪೇಟೆ ತಾಲೂಕಿಗೆ ಸೇರ್ಪಡೆ ಗೊಂಡಿತು. ಈಗ ಇದನ್ನು ಪುನರ್ ರಚಿಸಿ ಪೊನ್ನಂಪೇಟೆ ತಾಲೂಕು ಆಗಿ ಪುನರ್ರ ಚನೆ ಮಾಡುವಂತೆ ನಿಯೋಗದ ಮನವಿ ಯನ್ನು ಸರಕಾರ ಪರಿಶೀಲಿಸುವಂತಾಗ ಬೇಕು. ಹೊಸ ತಾಲೂಕು ರಚನೆಯಿಂದ ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಕಡತಗಳ ವಿಲೇವಾರಿ ವಿಳಂಬ, ಕೆಲಸದ ಒತ್ತಡ ಕಡಿಮೆಯಾಗಲಿದೆ, ಎಂ.ಸಿ.ಪ್ರಕರಣ, ಪೋಡಿ ಪ್ರಕರಣಗಳು ಶೀಘ್ರದಲ್ಲಿ ಇತ್ಯ ರ್ಥವಾಗಲು ಸಾಧ್ಯವಾಗಲಿದೆ ಎಂಬು ದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು ಎಂದು ಸಂಕೇತ್ ಪೂವಯ್ಯ ಭರವಸೆ ನೀಡಿ ದರಲ್ಲದೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ತಕ್ಷಣ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಬಿ.ಪೂಣಚ್ಚ ಮಾತ ನಾಡಿ, ವಿರಾಜಪೇಟೆ ಪಕ್ಷದ ಚುನಾವಣಾ ಸಮಾವೇಶಕ್ಕೆ ಆಗಮಿಸಿದ ಕುಮಾರ ಸ್ವಾಮಿ ಅವರಿಗೆ ಸಂಕೇತ್ ಪೂವಯ್ಯ ಅವರು ಸಲ್ಲಿಸಿದ ಪೊನ್ನಂಪೇಟೆ ತಾಲೂಕು ಪುನರ್ ರಚನೆಯ ಮನವಿಗೆ ಸ್ಪಂದಿಸಿ ದ್ದಾರೆ. ಇದರಿಂದ ಮುಖ್ಯಮಂತ್ರಿ ಅವರು ನಮ್ಮ ಮನವಿಗೆ ಪಾರದರ್ಶಕವಾಗಿ ಸ್ಪಂದಿ ಸಲಿರುವುದಾಗಿ ಹೇಳಿದರಲ್ಲದೆ, ಹೊಸ ತಾಲೂಕು ರಚನೆಗಾಗಿ ಪೊನ್ನಂಪೇಟೆಯಲ್ಲಿ ಕಟ್ಟಡ ಹಾಗೂ ಇತರ ಸೌಲಭ್ಯಗಳ ಅವಕಾಶ ಇದೆ ಎಂದರು. ನಿಯೋಗದಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ಸಿ.ಕೆ.ಸೋಮಯ್ಯ, ಕಾನೂನು ಸಲಹೆಗಾರರಾದ ಪಿ.ಅಪ್ಪಚ್ಚು, ಪದಾಧಿಕಾ ರಿಗಳಾದ ಎಂ.ಎಸ್.ಕುಶಾಲಪ್ಪ ಇದ್ದರು.

Translate »