ಮೈಸೂರು: ಗುಜರಾತ್‍ನ ಕೆವಾಡಿಯಾ ಗ್ರಾಮದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟೆಯ ಬಳಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ಲೋಕಾರ್ಪಣೆಯಾಗಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ, 1948ರಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿನ ತಮ್ಮ ಅನುಭವವನ್ನು ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕರೊಬ್ಬರು `ಮೈಸೂರು ಮಿತ್ರ’ನೊಂದಿಗೆ ಹಂಚಿಕೊಂಡಿದ್ದಾರೆ. ಮೈಸೂರಿನ ಕುವೆಂಪುನಗರದ ಪಂಚಮಂತ್ರ ರಸ್ತೆಯ ನಿವಾಸಿ, ಶಿಕ್ಷಣ ಇಲಾಖೆಯ ನಿವೃತ್ತ ಸಹನಿರ್ದೇಶಕ ಪ್ರೊ.ಕೆ.ಜಿ.ಸತ್ಯನಾರಾಯಣ (91),…
ಮಾಜಿ ಮೇಯರ್ ನರಸಿಂಹ ಅಯ್ಯಂಗಾರ್ ಬಂಧನ ವಾರಂಟ್ ಜಾರಿ
November 1, 2018ಮೈಸೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಆರ್.ಜಿ.ನರಸಿಂಹ ಅಯ್ಯಂಗಾರ್ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾ ಲಯ ವಜಾಗೊಳಿಸಿದ ಬೆನ್ನಲ್ಲೇ, ಅಧೀನ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಫೋರ್ಜರಿ ಸಹಿ ಮಾಡಿ, ಕಕ್ಷಿದಾರರ ಹಣ ಡ್ರಾ ಮಾಡಿ ವಂಚಿಸಿದ್ದ ಪ್ರಕರಣ ಸಂಬಂಧ ಶಿಕ್ಷೆ ವಿಧಿಸಿದ್ದ 1ನೇ ಎಸಿಜೆ ಮತ್ತು ಸಿಜೆಎಂ ನ್ಯಾಯಾ ಲಯದ ತೀರ್ಪನ್ನು ಪ್ರಶ್ನಿಸಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯಕ್ಕೆ ಆರ್.ಜಿ.ನರಸಿಂಹ ಅಯ್ಯಂಗಾರ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಜಯ್‍ಕುಮಾರ್ ಎಂ.ಆನಂದ…
ಧರ್ಮಸ್ಥಳ ಪಟ್ಟಾಧಿಕಾರಿಯಾಗಿ 50 ವರ್ಷ ಪೂರೈಸಿದ ಹಿನ್ನೆಲೆ: ನಾಳೆ ಮೈಸೂರಿನಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ನಾಗರಿಕ ಗೌರವ ಸಮರ್ಪಣೆ
November 1, 2018ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳದ ಪಟ್ಟಾಧಿಕಾರಿಯಾಗಿ 50 ವರ್ಷಗಳನ್ನು ಪೂರೈಸಿರುವ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಸಮರ್ಪಣೆ ಹಾಗೂ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಒಕ್ಕೂಟ ಗಳ ಪದಗ್ರಹಣ ಸಮಾರಂಭವನ್ನು ನ.2ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಗೌರವಾರ್ಪಣೆ ಸಮಿತಿಯ ಗೌರವಾಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮತ್ತು ಕಾರ್ಯಾಧ್ಯಕ್ಷ ಎಚ್.ವಿ. ರಾಜೀವ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಐದು ದಶಕಗಳಿಂದ…
ಇಂದು ಗಂಗೋತ್ರಿ ಗ್ಲೇಡ್ಸ್‍ನಲ್ಲಿ ಜಿಲ್ಲಾಡಳಿತ ಅಧಿಕಾರಿಗಳ ತಂಡ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯ
November 1, 2018ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಳೆ(ನ.1) ಮಧ್ಯಾಹ್ನ 12.30ಕ್ಕೆ ಮಾನಸಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ತಂಡ(ಡಿಸಿಘಿI ) ಹಾಗೂ ಪೊಲೀಸ್ ಅಧಿಕಾರಿಗಳ ತಂಡ(ಸಿಪಿಘಿI)ಗಳ ನಡುವೆ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಡಿಸಿಘಿI ತಂಡದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎಡಿಸಿ ಟಿ.ಯೋಗೇಶ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಮುಡಾ ಆಯುಕ್ತ ಕಾಂತರಾಜು, ಗ್ರಂಥಾಲಯ ಉಪ ನಿರ್ದೇಶಕ ಬಿ.ಮಂಜುನಾಥ್, ಪಾಲಿಕೆ ಕಂದಾಯ ಅಧಿಕಾರಿ ಉಮೇಶ್, ಕಾವೇರಿ ನೀರಾವರಿ ನಿಗಮದ ಆಡಳಿತಾಧಿಕಾರಿ ರವಿಕುಮಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ…
ನ.11ರವರೆಗೆ `ಬಿಗ್‍ಬಜಾರ್ ಧನೋತ್ಸವ’ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ
November 1, 2018ಮೈಸೂರು: ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಬಿಗ್‍ಬಜಾರ್ ಶಾಪಿಂಗ್ ಮಾಲ್‍ನಲ್ಲಿ ಅ.31ರಿಂದ ನ.11ರವರೆಗೆ ಹಮ್ಮಿಕೊಂಡಿರುವ `ಬಿಗ್‍ಬಜಾರ್ ಧನೋತ್ಸವ’ದಲ್ಲಿ ಗ್ರಾಹಕರಿಗೆ ಭಾರೀ ರಿಯಾಯಿತಿ ಜೊತೆಗೆ ಬೆಳ್ಳಿ ನಾಣ್ಯಗಳ ವಿಶೇಷ ಕೊಡುಗೆ ಇರುತ್ತದೆ ಎಂದು ಬಿಗ್‍ಬಜಾರ್‍ನ ಸ್ಟೋರ್ ಮ್ಯಾನೇಜರ್ ರವಿಚಂದ್ರನ್ ತಿಳಿಸಿದರು. ಬಿಗ್‍ಬಜಾರ್ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10,000 ಮೇಲ್ಪಟ್ಟು ಖರೀದಿಸಿದವರಿಗೆ 10 ಗ್ರಾಂ ಬೆಳ್ಳಿ ನಾಣ್ಯ, 20,000 ಮೇಲ್ಪಟ್ಟು ಖರೀದಿಸಿದರೆ 30 ಗ್ರಾಂ ಬೆಳ್ಳಿ ನಾಣ್ಯ, 4,000 ಮತ್ತು ಅದಕ್ಕಿಂತ ಹೆಚ್ಚು ವ್ಯವಹಾರ ಮಾಡಿದ ಎಸ್‍ಬಿಐ ಡೆಬಿಟ್…
ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ, ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನ ಆಚರಣೆ
November 1, 2018ಮೈಸೂರು: ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 34ನೇ ಪುಣ್ಯ ಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸರ್ದಾರ್ ಪಾಟೇಲ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಸಿ.ಹೆಚ್.ವಿಜಯಶಂಕರ್, ಅವರು, ಇಂದಿರಾಗಾಂಧಿ ಅವರದ್ದು ಸರಳ ವ್ಯಕ್ತಿತ್ವವಾಗಿತ್ತು. ಆದಿವಾಸಿ, ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಏಳಿಗೆಗೆ ನಾನು…
ಕಾರಿನ ಗಾಜು ಒಡೆದು 2.9 ಲಕ್ಷ ರೂ. ಹಣ ಕಳವು
November 1, 2018ಮೈಸೂರು: ಕಾರಿನ ಗಾಜು ಒಡೆದು ಉದ್ಯಮಿಯೊಬ್ಬರ 2.9 ಲಕ್ಷ ರೂ. ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ವಿವಿ ಮೊಹಲ್ಲಾದ ಹೆಚ್‍ಡಿಎಫ್‍ಸಿ ಬ್ಯಾಂಕ್ ಎದುರು ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಗೋಕುಲಂ 3ನೇ ಹಂತದ ನಿವಾಸಿ ನಾರಾಯಣ ಅವರ ಮಗ ಶೇಖರ್ ಹಣ ಕಳೆದುಕೊಂಡವರು. ಕೆ.ಆರ್. ನಗರದಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿರುವ ಅವರು, ಇಂದು ಮಧ್ಯಾಹ್ನ 1.30 ಗಂಟೆ ವೇಳೆಗೆ ಗೋಕುಲಂನ ವಿಜಯಾ ಬ್ಯಾಂಕ್ ಶಾಖೆಯಲ್ಲಿ 4 ಲಕ್ಷ ರೂ. ಹಣ ಡ್ರಾ ಮಾಡಿ ಮಾರುತಿ…
ನಾಳೆಯಿಂದ ಮೈಸೂರು ಫ್ಯಾಷನ್ ವೀಕ್ ಸೀಸನ್-5
November 1, 2018ಮೈಸೂರು: ಮೈಸೂ ರಿನ ನಜರ್‍ಬಾದ್‍ನ ಮಹಾ ರಾಣ ಪ್ರತಾಪ್ ರಸ್ತೆಯಲ್ಲಿ ರುವ `ದಿ ವಿಂಡ್ ಫ್ಲವರ್ ರೆಸಾಟ್ರ್ಸ್’ ಮತ್ತು ಸ್ಪಾದಲ್ಲಿ ದಕ್ಷಿಣ ಭಾರತದಲ್ಲಿಯೇ ಖ್ಯಾತಿ ಗಳಿಸಿರುವ ಅತೀ ಆಕ ರ್ಷಕವಾದ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ ಅನ್ನು ನ.2ರಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ. ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಈ ಕಾರ್ಯಕ್ರಮವನ್ನು ಆಯೋ ಜಿಸಿದ್ದು, ಫ್ಯಾಷನ್ ಉದ್ಯಮದ ಅಪಾರ ಬೆಂಬಲ ಗಳಿಸಿದೆ. ಅಲ್ಲದೆ, ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡುವಲ್ಲಿ ಅಪಾರ…
ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣ: ಸುಪ್ರೀಂಕೋರ್ಟ್‍ಗೆ ಕೇಂದ್ರ ಪ್ರಮಾಣ ಪತ್ರ
October 31, 2018ಬೆಂಗಳೂರು: ಬಂಡೀಪುರ-ತಲಚೇರಿ ನಡುವಿನ ಅಭಯಾರಣ್ಯದ ಹಾಲಿ ರಸ್ತೆ ತೆರವುಗೊಳಿಸಿ, ಕಾಡು ಬೆಳೆಸುವುದಾಗಿ ಕೇಂದ್ರ ಪರಿಸರ ಇಲಾಖೆ ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿದೆ. ರಸ್ತೆ ತೆರವಿನ ನಂತರ ಪ್ರಯಾಣಿಕರ ಅನುಕೂಲಕ್ಕಾಗಿ 47 ಕಿಲೋ ಮೀಟರ್ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ನಿರ್ಮಿಸುವುದಾಗಿ ಹೇಳಿದೆ. ಕರ್ನಾಟಕ ಸರ್ಕಾರ ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮಾಡಿರುವುದನ್ನು ವಿರೋಧಿಸಿ ಕೇರಳ ಸರ್ಕಾರ ಮತ್ತು ಅಲ್ಲಿನ ಸಾರಿಗೆ ಸಂಘ ಗಳು ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿದ್ದವು. ವಿಚಾರಣೆ ವೇಳೆ ಕೇಂದ್ರ ಮಧ್ಯೆ ಪ್ರವೇಶಿಸಿ,…
ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: ದಸರಾ ಆನೆ ಗೋಪಾಲಸ್ವಾಮಿ ಅಸ್ವಸ್ಥ
October 31, 2018ಹುಣಸೂರು: ಮತ್ತಿಗೋಡು ಶಿಬಿರದ ಆನೆ ರಂಗ ಅಲಿಯಾಸ್ ರೌಡಿ ರಂಗ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ದುರಂತ ಜನಮಾನಸದಿಂದ ಮಾಸುವ ಮುನ್ನವೇ ದಸರಾ ಆನೆ ಗೋಪಾಲಸ್ವಾಮಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದೆ ಎಂದು ವರದಿಯಾಗಿದೆ. ಗೋಪಾಲಸ್ವಾಮಿಯನ್ನು ಹಾಸನಕ್ಕೆ ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಗಿಸುತ್ತಿದ್ದ ವೇಳೆ ಆನೆ ಇದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಆನೆಯ ಮೇಲೆ ಬಿದ್ದು, ವಿದ್ಯುತ್ ತಂತಿ ತಾಗಿ ಗೋಪಾಲಸ್ವಾಮಿ ಅಸ್ವಸ್ಥಗೊಂಡು ಸಾವು- ಬದುಕಿನ ಹೋರಾಟ ನಡೆಸುತ್ತಿದ್ದಾನೆ ಎಂದು…