ಉಕ್ಕಿನ ಮನುಷ್ಯ ಪಟೇಲರ ಮೈಸೂರು ಭೇಟಿ ಮೆಲುಕು ಹಾಕಿದ ನಿವೃತ್ತ ಉನ್ನತ ಶಿಕ್ಷಣಾಧಿಕಾರಿ
ಮೈಸೂರು

ಉಕ್ಕಿನ ಮನುಷ್ಯ ಪಟೇಲರ ಮೈಸೂರು ಭೇಟಿ ಮೆಲುಕು ಹಾಕಿದ ನಿವೃತ್ತ ಉನ್ನತ ಶಿಕ್ಷಣಾಧಿಕಾರಿ

November 1, 2018

ಮೈಸೂರು: ಗುಜರಾತ್‍ನ ಕೆವಾಡಿಯಾ ಗ್ರಾಮದಲ್ಲಿರುವ ಸರ್ದಾರ್ ಸರೋವರದ ಅಣೆಕಟ್ಟೆಯ ಬಳಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆ ಲೋಕಾರ್ಪಣೆಯಾಗಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ, 1948ರಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿನ ತಮ್ಮ ಅನುಭವವನ್ನು ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕರೊಬ್ಬರು `ಮೈಸೂರು ಮಿತ್ರ’ನೊಂದಿಗೆ ಹಂಚಿಕೊಂಡಿದ್ದಾರೆ.

ಮೈಸೂರಿನ ಕುವೆಂಪುನಗರದ ಪಂಚಮಂತ್ರ ರಸ್ತೆಯ ನಿವಾಸಿ, ಶಿಕ್ಷಣ ಇಲಾಖೆಯ ನಿವೃತ್ತ ಸಹನಿರ್ದೇಶಕ ಪ್ರೊ.ಕೆ.ಜಿ.ಸತ್ಯನಾರಾಯಣ (91), 1948ರಲ್ಲಿ ಮೈಸೂರಿನ ಪುರಭವ ನದ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಂದಿನ ಗೃಹಮಂತ್ರಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರೊಂದಿಗಿನ ಒಂದು ಗಂಟೆ ಅವಧಿಯ ಅನುಭವವನ್ನು ಅವರು ವಿವರಿಸಿದ್ದಾರೆ.

ಜ್ವರದಿಂದ ಬಳಲಿದ್ದ ಪಟೇಲರು: ಮೈಸೂ ರಿನ ಟೌನ್‍ಹಾಲ್ ಆವರಣದಲ್ಲಿ ಸಭೆ ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಸಾಕಷ್ಟು ಜನರು ಆಗಮಿಸಿದ್ದರು. ನೆಲಮಟ್ಟದಿಂದ ಆರೇಳು ಅಡಿ ಎತ್ತರದ ವೇದಿಕೆ ನಿರ್ಮಿಸಲಾಗಿತ್ತು. ಭಾಷಣ ಮಾಡಲು ಆಗಮಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವೇದಿಕೆ ಏರಲು ಅವರಿಗೆ ಸಾಧ್ಯವಾಗಲಿಲ್ಲ. ಇದನ್ನು ಗಮನಿ ಸಿದ್ದ ನಾನು, ಸ್ಕೌಟ್ಸ್ ಸ್ನೇಹಿತ ಸೂರ್ಯ ನಾರಾಯಣ ಅವರ ಸಹಾಯ ಪಡೆದು ಪಟೇಲರನ್ನು ವೇದಿಕೆಯ ಮೇಲೆ ಎತ್ತಿ ಕೊಂಡು ಹೋಗಿದ್ದೆ. ನನಗಾಗ 20 ವರ್ಷ ಎಂದು ಪ್ರೊ.ಕೆ.ಜಿ.ಸತ್ಯನಾರಾಯಣ ಇತಿ ಹಾಸ ಮೆಲುಕು ಹಾಕಿದರು.

ವೇದಿಕೆಯಲ್ಲಿ ಮೂವರೇ: ಆಗ ಟೌನ್‍ಹಾಲ್ ಸುತ್ತಮುತ್ತ ಯಾವುದೇ ಕಟ್ಟಡಗಳಿರಲಿಲ್ಲ. ಆಗಿನ ಕಾಲಕ್ಕೆ ಹೆಚ್ಚು ಎನಿಸಿದರೆ 2-3 ಸಾವಿರ ಜನರು ಪಟೇಲರ ಮಾತು ಕೇಳಲು ಬಂದಿ ದ್ದರು. ಪಟೇಲರು ಅಂದು ಅರ್ಧ ಗಂಟೆ ಭಾಷಣ ಮಾಡಿದರು. ಬ್ರಿಟಿಷರ ಕಾಲದಿಂದ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದ ವಿ.ಎಂ. ಹೆಚ್. ರಣಜೋತ್ ಸಿಂಗ್, ನಾನು ಮತ್ತು ಪಟೇಲರನ್ನು ಹೊರತುಪಡಿಸಿ ಬೇರ್ಯಾರು ವೇದಿಕೆಯಲ್ಲಿ ಇರಲಿಲ್ಲ ಎಂದು ಹೇಳಿದರು.

ರೋವರ್‍ನಿಂದ ಅವಕಾಶ ಸಿಕ್ಕಿತ್ತು: ಹಿಂದೆ ಪೊಲೀಸರ ಸಂಖ್ಯೆ ಕಡಿಮೆ ಇತ್ತು. ನಾನು, 1948ರಲ್ಲಿ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸ್ಕೌಟ್ಸ್‍ಗೆ ಸೇರಿದ್ದೆ. ಹಿರಿ ಯರ ವಿಭಾಗವಾದ ರೋವರ್ಸ್‍ನಲ್ಲಿ ವಿವಿಧ ತರಬೇತಿ ಪಡೆದಿದ್ದೆ. ಈ ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಪಾಲ್ಗೊ ಳ್ಳುವ ಕಾರ್ಯಕ್ರಮಕ್ಕೆ ರೋವರ್ಸ್ ಸೇವೆ ಕೇಳ ಲಾಗಿತ್ತು. ನನ್ನ ನಾಯಕತ್ವದಲ್ಲಿ 250 ರೋವರ್ಸ್ ಗಳ ತಂಡವನ್ನು ಕರೆದೊಯ್ದಿದ್ದೆ. ನಾನೇ ನಾಯಕನಾಗಿದ್ದರಿಂದ ವೇದಿಕೆಯ ಬಳಿ ಇದ್ದೆ. ಈ ವೇಳೆ ಪಟೇಲರು ಜ್ವರದಿಂದ ವೇದಿಕೆ ಹತ್ತಲು ಸಾಧ್ಯವಾಗದಿದ್ದಾಗ ನಾವೇ ಅವರನ್ನು ಎತ್ತಿಕೊಂಡು ವೇದಿಕೆಗೆ ಕರೆದೊಯ್ದೆವು. ರೋವರ್ಸ್ ಆಗಿದ್ದರಿಂದ ನಮಗೆ ಈ ಅವಕಾಶ ದೊರೆತಿತ್ತು ಎಂದು ಅವರು ಹೇಳಿದರು.

ನೆಹರು ಜತೆ: 1948ರಲ್ಲಿ ಮೈಸೂರು ವಿವಿಯ ಪದವೀಧರರ ದಿನಾಚರಣೆ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಜವಾಹರಲಾಲ್ ನೆಹರು ಅವರು ರಾಯಭಾರಿಯೊಬ್ಬರ ಪುತ್ರಿ ಯೊಂದಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ಜನರು ನೆಹರು ಅವರನ್ನು ಮುತ್ತಿಕೊಂಡರು. ಆಗ ನೆಹರು, ತಮ್ಮೊಂದಿಗೆ ಬಂದಿದ್ದ ರಾಯಭಾರಿಯ ಪುತ್ರಿಗಾಗಿ ಅತ್ತಿತ್ತ ನೋಡಿದರು. ಜನರ ನಡುವೆಯೇ ನಾನು ನೆಹರು ಅವರ ಬೆನ್ನು ತಟ್ಟಿ, ಮೈಸೂರಿನಲ್ಲಿ ಅವರಿಗಿರುವ ಅಭಿಮಾನಿಗಳನ್ನು ತೋರಿಸಿದ್ದೆ ಎಂದು ಸತ್ಯನಾರಾಯಣ ನೆನಪಿಸಿಕೊಂಡರು.

ಶಿಕ್ಷಕ ವೃತ್ತಿಯಿಂದ: ಪ್ರೊ.ಕೆ.ಜಿ.ಸತ್ಯ ನಾರಾ ಯಣ ಅವರು 1948ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ದೊಡ್ಡ ಮೇಟಿ ಕುರ್ಕೆ ಗ್ರಾಮದ ಜಿಲ್ಲಾ ಬೋರ್ಡ್ ಹೈಸ್ಕೂಲ್‍ನಲ್ಲಿ ಸಹಶಿಕ್ಷಕನಾಗಿ ಸೇವೆ ಆರಂಭಿಸಿದರು. 1955ರಲ್ಲಿ ಅರಕಲಗೂಡು ತಾಲೂಕಿನ ಬಸವಪಟ್ಟ ಣದ ಪ್ರೌಢಶಾಲೆಗೆ ಮುಖ್ಯಶಿಕ್ಷಕನಾಗಿ ಬಡ್ತಿ ಹೊಂದಿದರು. 1972ರಿಂದ 1979ರವರೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಗರವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿ ದರು. 1979ರಿಂದ 1982ರವರೆಗೆ ಮೈಸೂರು ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ, 1982-83ರ ಅವಧಿಯಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ, ನಂತರ ಚಿತ್ರ ದುರ್ಗದಲ್ಲಿ ಡಿಡಿಪಿಐ ಆಗಿ ಸೇವೆ ಸಲ್ಲಿಸಿ 1983ರ ಮೇ 31ರಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದರು.

ಪರಿಚಯ: ಹಾಸನ ಜಿಲ್ಲೆಯ ಅರಕಲ ಗೂಡು ತಾಲೂಕಿನ ಕೊಣನೂರು ಗ್ರಾಮದ ನಂಜಮ್ಮ ಹಾಗೂ ಕೆ.ಆರ್.ಗೋಪಾ ಲಯ್ಯ ದಂಪತಿ ಪುತ್ರರಾಗಿ 1928ರ ಮೇ 9ರಂದು ಕೆ.ಜಿ.ಸತ್ಯನಾರಾಯಣ ಜನಿಸಿದ್ದು, ಪ್ರಾಥ ಮಿಕ ಶಿಕ್ಷಣವನ್ನು ಕೊಣನೂರಿನಲ್ಲಿ, ಪ್ರೌಢ ಶಿಕ್ಷಣವನ್ನು ಮೈಸೂರಿನ ಡಿ.ಬನುಮಯ್ಯ ಶಿಕ್ಷಣ ಸಂಸ್ಥೆಯಲ್ಲಿ, ಇಂಟರ್ ಮಿಡಿಯೆಟ್ ಶಿಕ್ಷಣವನ್ನು ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, 1947-48ನೇ ಸಾಲಿ ನಲ್ಲಿ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾರೆ. 1952ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಕಾಲೇಜಿನಲ್ಲಿ ಬ್ಯಾಚಲರ್ ಆಫ್ ಟೀಚಿಂಗ್(ಬಿಟಿ) ಪದವಿ,  1956ರಲ್ಲಿ ಮಧ್ಯಪ್ರದೇಶದ ನಾಗ್ಪುರ ವಿವಿ ಯಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ, 1960ರಲ್ಲಿ ಧಾರವಾಡದ ಕರ್ನಾ ಟಕ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಎಜುಕೇಷನ್ ಸ್ನಾತ ಕೋತ್ತರ ಪದವಿ ಯನ್ನು ಪಡೆದು, 1966-67ನೇ ಸಾಲಿನಲ್ಲಿ ಅಮೆರಿಕಾದ ಹೆಸರಾಂತ ಬ್ರಿಸ್ಟಲ್ ವಿಶ್ವವಿದ್ಯಾ ನಿಲಯದಲ್ಲಿ ಸರ್ಕಾರದ ಶಿಷ್ಯವೇತನ ಪಡೆದು ಶಿಕ್ಷಣದಲ್ಲಿ ಅಡ್ವಾನ್ಸ್ ಪಿಜಿ ಪದವಿಯನ್ನು ಪಡೆದಿದ್ದಾರೆ.

Translate »