ಮೈಸೂರು

ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಚಿಂತನೆ
ಮೈಸೂರು

ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಚಿಂತನೆ

October 25, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಿಂತನೆ ನಡೆಸಿದೆ. ಮೈಸೂರಿನ ಹಂಚ್ಯಾ-ಸಾತಗಳ್ಳಿ ಬಳಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಕಾಲೇಜು ಹಿಂಭಾಗ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು 20 ಎಕರೆ ಭೂಮಿ ಗುರ್ತಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ (ವಿಶ್ವದರ್ಜೆ) ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತಮಗೆ ಭೂಮಿ ಮಂಜೂರು ಮಾಡುವಂತೆ ಕ್ರಿಕೆಟ್ ಅಸೋಸಿಯೇಷನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವನ್ನು ಕೋರಿಕೊಂಡಿತ್ತು. ಸಂಘದ ಪ್ರಸ್ತಾವನೆ ಪರಿಶೀಲಿಸಿದ ಮುಡಾ ಅಧಿಕಾರಿಗಳು ಪ್ರಾಧಿಕಾರದ ಸಭೆ…

ನಿಯಮ ಉಲ್ಲಂಘಿಸಿದ 486 ಸಿಎ ನಿವೇಶನ ಸಂಬಂಧ ಮುಡಾ ಶೀಘ್ರ ಮಹತ್ವದ ನಿರ್ಧಾರ
ಮೈಸೂರು

ನಿಯಮ ಉಲ್ಲಂಘಿಸಿದ 486 ಸಿಎ ನಿವೇಶನ ಸಂಬಂಧ ಮುಡಾ ಶೀಘ್ರ ಮಹತ್ವದ ನಿರ್ಧಾರ

October 25, 2018

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಾಗರಿಕರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಖಾಸಗಿ ಸಂಘ-ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ 486 ಸಿಎ ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ. ನಗರ ಅಭಿವೃದ್ಧಿ ವಿಸ್ವಸ್ಥ ಮಂಡಳಿ (ಸಿಐಟಿಬಿ) ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವಾಗಿ ಪರಿವರ್ತನೆಯಾದ ನಂತರ ಈವರೆಗೆ ಒಟ್ಟು 638 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ದುರದೃಷ್ಟ ಸಂಗತಿಯೆಂದರೆ 638ರ ಪೈಕಿ 486 ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಮುಡಾ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಮೈಸೂರು ನಗರದ ವಿವಿಧ ಬಡಾವಣೆ ಹಾಗೂ…

ಏಕದಿನ ಪಂದ್ಯಗಳಲ್ಲಿ ಅತೀ ವೇಗದಲ್ಲಿ 10,000 ರನ್ ಪೂರೈಸಿದ ವಿರಾಟ್ ಕೊಹ್ಲಿ
ಮೈಸೂರು

ಏಕದಿನ ಪಂದ್ಯಗಳಲ್ಲಿ ಅತೀ ವೇಗದಲ್ಲಿ 10,000 ರನ್ ಪೂರೈಸಿದ ವಿರಾಟ್ ಕೊಹ್ಲಿ

October 25, 2018

ವಿಶಾಖಪಟ್ಟಣ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್‍ನಲ್ಲಿ 10,000 ರನ್ ಪೂರೈಸಿದ್ದಾರೆ. ಈ ಮೂಲಕ ಇಂತಹ ಸಾಧನೆ ಮಾಡಿದ ಭಾರತದ ಐದನೇ ಹಾಗೂ ವಿಶ್ವದ 13ನೇ ಆಟಗಾರ ಎನಿಸಿದ್ದಾರೆ. ಕೊಹ್ಲಿ 205 ಇನ್ನಿಂಗ್ಸ್‍ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಆ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತೀ ವೇಗವಾಗಿ 10,000 ರನ್ ಪೂರೈಸಿದ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ವಿಶೇಷವೆಂದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 10,000…

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾಗೆ ರಜೆ
ಮೈಸೂರು

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾಗೆ ರಜೆ

October 25, 2018

ನವದೆಹಲಿ: ಸಿಬಿಐ ನಿರ್ದೇ ಶಕ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರಿಗೆ ರಜೆ ನೀಡಿರುವುದನ್ನು ಕೇಂದ್ರ ಸರ್ಕಾರ ಬುಧವಾರ ಸಮರ್ಥಿಸಿಕೊಂಡಿದೆ. ಈ ಕುರಿತಂತೆ ರಾಜಧಾನಿ ದೆಹಲಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರುವ ಜೇಟ್ಲಿಯವರು, ಸಿಬಿಐ ನಿರ್ದೇ ಶಕ ಹಾಗೂ ವಿಶೇಷ ನಿರ್ದೇಶಕರು ಆರೋಪಗಳನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಹಿರಿಯ ಅಧಿಕಾರಿಗಳೇ ಆರೋಪ-ಪ್ರತ್ಯಾ ರೋಪಗಳಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ಅಧಿಕಾರಿಗಳು ಆರೋಪ ಹೊತ್ತಿ ರುವಾಗ ಪ್ರಕರಣದ ತನಿಖೆ ನಡೆಸುವವರಾದರೂ ಯಾರು? ಈ ಕಾರಣದಿಂದಲೇ ಸಿಬಿಐ ಸಮಗ್ರತೆಯನ್ನು ಕಾಪಾಡುವ…

ಮೈಸೂರು ವಿವಿ, ಮುಕ್ತ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ
ಮೈಸೂರು

ಮೈಸೂರು ವಿವಿ, ಮುಕ್ತ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ

October 25, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರವೇ ಕ್ರಮ ವಹಿಸುವುದಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡ ಳಿತದ ವತಿಯಿಂದ ಬುಧವಾರ ಹಮ್ಮಿ ಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ನಿಮ್ಮ ಬೇಡಿಕೆಯಂತೆ ಅಧ್ಯಯನ ಪೀಠ ಸ್ಥಾಪನೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಮೈಸೂರಿನ ಮಿನಿವಿಧಾನಸೌಧದ ಬಳಿ ವಾಲ್ಮೀಕಿ…

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ
ಮೈಸೂರು

ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ

October 25, 2018

ಮೈಸೂರು:  ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ತಮ್ಮ ರಾಜೀನಾಮೆ ವದಂತಿಗೆ ಅಡಗೂರು ವಿಶ್ವನಾಥ್ ಬುಧವಾರ ಮೈಸೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳಿಗೆ ನೀಡಿದ ಸ್ಪಷ್ಟನೆ ಇದು. ವೈಯಕ್ತಿಕ ಕಾರಣಕ್ಕೆ ಯಾರಾದರೂ ರಾಜೀನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಪಕ್ಷದಲ್ಲಿ ತಾವು ಉತ್ತಮವಾಗಿದ್ದು, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು. ನಾನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಆ ವೇಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನನ್ನೊಂದಿಗೆ ಮಾತನಾಡಿದ್ದಾರೆ. ವೈದ್ಯರೊಂದಿಗೂ ಚರ್ಚಿಸಿದ್ದಾರೆ….

ರಾಜ್ಯದ 19 ವಿವಿಗಳ ಪೂರ್ಣ ಮಾಹಿತಿ ಒಂದೇ ಮಳಿಗೆಯಲ್ಲಿ ಲಭ್ಯ
ಮೈಸೂರು

ರಾಜ್ಯದ 19 ವಿವಿಗಳ ಪೂರ್ಣ ಮಾಹಿತಿ ಒಂದೇ ಮಳಿಗೆಯಲ್ಲಿ ಲಭ್ಯ

October 25, 2018

ಮೈಸೂರು: ಒಂದೇ ಸೂರಿನಲ್ಲಿ ರಾಜ್ಯದಲ್ಲಿರುವ 19 ವಿಶ್ವ ವಿದ್ಯಾನಿಲಯಗಳ ಶೈಕ್ಷಣಿಕ ಸಾಧನೆಯನ್ನು ಅನಾವರಣಗೊಳಿಸುವ ಬೃಹತ್ ಮಳಿಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧವಾಗುತ್ತಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ವಸ್ತು ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮೊದಲ ಬಾರಿ ಸರ್ಕಾರ ಅಧೀನದಲ್ಲಿರುವ 19 ವಿಶ್ವ ವಿದ್ಯಾನಿಲಯಗಳನ್ನು ಒಂದೆಡೆ ಆಯಾಯ ವಿವಿಗಳ ವಿಶೇಷತೆಗಳನ್ನು ಸಾರ್ವಜನಿಕರ ಮುಂದಿಡುವ ಪ್ರಯತ್ನ ಮಾಡಲಾಗುತ್ತದೆ. 120×80 ಅಡಿ ವಿಸ್ತೀರ್ಣದಲ್ಲಿ ಶಿಕ್ಷಣದ ಹುಟ್ಟಿನಿಂದ ಇಲ್ಲಿಯವರೆಗೆ ಸಾಗಿಬಂದ ದಾರಿಯನ್ನು 22 ಮಳಿಗೆಗಳ ಮುಖಾಂ ತರ…

ಹರಕೆ ಸೀರೆಯಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ 1 ಕೋಟಿ ರೂ. ಆದಾಯ
ಮೈಸೂರು

ಹರಕೆ ಸೀರೆಯಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ 1 ಕೋಟಿ ರೂ. ಆದಾಯ

October 25, 2018

ಮೈಸೂರು: ಭಕ್ತಾದಿಗಳು ಸಮರ್ಪಿಸಿದ ಹರಕೆ ಸೀರೆಗಳ ಮಾರಾಟದಿಂದ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಒಂದು ವರ್ಷದಲ್ಲಿ ಸುಮಾರು 80 ಲಕ್ಷದಿಂದ 1 ಕೋಟಿ ರೂ. ವರೆಗೆ ಆದಾಯ ಬರುತ್ತದೆ. ವಿಶೇಷ ದಿನಗಳೂ ಸೇರಿದಂತೆ ವರ್ಷವಿಡೀ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು `ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ರೇಷ್ಮೆ, ಕಾಟನ್ ಸೇರಿದಂತೆ 300 ರೂ.ನಿಂದ 10,000 ರೂ.ಗಳ ಬೆಲೆಯ ಸೀರೆಗಳನ್ನು ಹರಕೆಯಾಗಿ ಸಮರ್ಪಿಸಿ ರಶೀದಿ ಪಡೆಯುತ್ತಾರೆ. ಭಕ್ತಾದಿಗಳಿಂದ ಬಂದ ಹರಕೆ ಸೀರೆಗಳನ್ನು ತಾಯಿಗೆ ಸ್ಪರ್ಶ ಮಾಡಿದ ನಂತರ ದೇವಸ್ಥಾನದಲ್ಲೇ ಇರುವ…

ಮೈಸೂರಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ  72ನೇ ವರ್ಷದ ಮೈಸೂರು ಚಲೋ ಚಳವಳಿ ನೆನಪು
ಮೈಸೂರು

ಮೈಸೂರಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ  72ನೇ ವರ್ಷದ ಮೈಸೂರು ಚಲೋ ಚಳವಳಿ ನೆನಪು

October 25, 2018

ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಸುಬ್ಬರಾಯನ ಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಬುಧವಾರ ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ 72ನೇ ವರ್ಷದ ಮೈಸೂರು ಚಲೋ ಚಳವಳಿ ನೆನಪು ಕಾರ್ಯಕ್ರಮ ನಡೆಸಲಾಯಿತು. ಮೊದಲಿಗೆ ಉದ್ಯಾನದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಳಿಕ ತ್ರಿವರ್ಣ ಧ್ವಜ ಹಾರಿಸಲಾಯಿತು. ನಂತರ ಚಾಮರಾಜ ಜೋಡಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತದವರೆಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ರಾಮಸ್ವಾಮಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾತಂತ್ರ್ಯ…

ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ
ಮೈಸೂರು

ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ

October 25, 2018

ಮೈಸೂರು: ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಇದೀಗ ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ನಿರ್ಮಿಸಲಾಗಿದ್ದು, ಪ್ರವಾಸಿಗರು ಒಂದೇ ಟಿಕೆಟ್ ಖರೀದಿಸಿ, ಮೈಗಾಲಯ ಮತ್ತು ಕಾರಂಜಿ ಕೆರೆಯನ್ನು ವೀಕ್ಷಿಸಬಹುದಾಗಿದೆ. ಮೈಸೂರು ಮೃಗಾಲಯ ಪ್ರಾಧಿಕಾರ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಕೆಳ ಸೇತುವೆಯೊಂದರ ಸಂಪರ್ಕ ಕಲ್ಪಿಸಿದೆ. 150 ಮೀಟರ್ ಉದ್ದದ ಈ ಕೆಳ ಸೇತುವೆ ಮೂಲಕ ಮೃಗಾಲಯದಿಂದ ಕಾರಂಜಿ ಕೆರೆಗೆ ಅಥವಾ ಕಾರಂಜಿ ಕೆರೆಯಿಂದ ಮೃಗಾಲಯಕ್ಕೆ ಭೇಟಿ ನೀಡಬಹುದಾಗಿದೆ. ಅರಣ್ಯ ಸಚಿವ…

1 1,313 1,314 1,315 1,316 1,317 1,611
Translate »