ಮೈಸೂರು: ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡಿಕೊಂಡು ಮೈಸೂರು ವಿಶ್ವವಿದ್ಯಾನಿಲಯದ ಘನತೆಗೆ ಧಕ್ಕೆ ಬರುವಂತೆ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡುವ ಅತಿಥಿ ಉಪನ್ಯಾಸಕರನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರನ್ನು ಯಾವುದೇ ಮುಲಾಜಿಲ್ಲದೇ ಮನೆಗೆ ಕಳುಹಿಸಲಾಗುವುದು ಎಂದು ಮೈಸೂರು ವಿವಿ ಕುಲ ಸಚಿವ (ಆಡಳಿತ) ಪ್ರೊ. ಆರ್.ರಾಜಣ್ಣ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ….
ಧರ್ಮ, ಜಾತಿ ರಾಜಕಾರಣಕ್ಕೆ ಸೀಮಿತವಾದ ಕೇಂದ್ರ ಸರ್ಕಾರ
October 10, 2018ತಿ.ನರಸೀಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷಗಳ ಆಡಳಿತಾವಧಿ ಯನ್ನು ಧರ್ಮ ಮತ್ತು ಜಾತಿಯ ಹೆಸರಿ ನಲ್ಲಿ ರಾಜಕಾರಣಕ್ಕೆ ಬಳಕೆ ಮಾಡಿ ಕೊಂಡು ಅಭಿವೃದ್ಧಿ ಮತ್ತು ಬಡವರನ್ನು ಸಂಪೂರ್ಣವಾಗಿ ಮರೆತಿದೆ ಎಂದು ಬಹುಜನ ಸಮಾಜ ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಬಹುಜನ ಸಮಾಜ ಪಕ್ಷದ ಕಛೇರಿಯಲ್ಲಿ ಮಂಗಳವಾರ ನಡೆದ ಬಿಎಸ್ಪಿ ಸಂಸ್ಥಾಪಕ ಕಾನ್ಷಿರಾಂ ಅವರ ಪರಿನಿಬ್ಬಾಣ ದಿನಾಚರಣೆಯಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿ, ನಾಲ್ಕುಮುಕ್ಕಾಲು ವರ್ಷದ ಆಡಳಿತವನ್ನು ಪೂರ್ಣಗೊಳಿಸಿ…
ಸಾರ್ವಜನಿಕರೊಂದಿಗೆ ಪೊಲೀಸರ ಸಾಮರಸ್ಯ ಅಗತ್ಯ
October 10, 2018ಹುಣಸೂರು: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸಾರ್ವಜನಿಕ ರೊಂದಿಗಿನ ಸಾಮರಸ್ಯದ ಕೊರತೆಯಿಂದಾಗಿ ಠಾಣೆಗಳಲ್ಲಿ ಜಾತಿ ವಿಂಗಡಣೆ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ದಸಂಸ ಸಂಚಾ ಲಕ ನಿಂಗರಾಜ್ ಮಲ್ಲಾಡಿ ದೂರಿದರು. ನಗರದ ಪೊಲೀಸ್ ಠಾಣೆಯಲ್ಲಿ ಏರ್ಪ ಡಿಸಿದ್ದ ಎಸ್‍ಸಿ, ಎಸ್‍ಟಿ ಹಿತರಕ್ಷಣಾ ಸಭೆ ಯಲ್ಲಿ ಮಾತನಾಡಿದ ಅವರು, ಕಷ್ಟ, ನೋವು, ದೌರ್ಜನ್ಯಗಳಂತಹ ಘಟನೆ ಯಿಂದ ನೊಂದು ನ್ಯಾಯಕ್ಕಾಗಿ ಬರುವ ಅಸಹಾಯಕರಿಗೆ ಠಾಣೆಗಳನ್ನು ಜಾತಿ ವೈಷಮ್ಯ ಬಿತ್ತಲಾಗುತ್ತಿದೆ. ಇದರಿಂದ ಸಾರ್ವ ಜನಿಕರಲ್ಲಿ ಪೊಲೀಸರ ಬಗ್ಗೆ…
ರಾಜ್ಯದ ಉದ್ದೇಶಿತ ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮತ್ತೆ ಕ್ಯಾತೆ
October 9, 2018ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತಮಿಳುನಾಡು ಕಾವೇರಿ ವಿಷಯವನ್ನು ಮುಂದಿಟ್ಟುಕೊಂಡು ಮತ್ತೆ ರಾಜಕೀಯ ಆಟ ಆರಂಭಿಸಿದೆ. ರಾಜ್ಯದ ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಅನುಮತಿ ನೀಡಲು ಮುಂದಾದ ಬೆನ್ನಲ್ಲೇ ತಮಿಳು ನಾಡು ಸರ್ಕಾರ ಕ್ಯಾತೆ ತೆಗೆದಿದೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಯೋಜನೆಗೆ ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಯೋಜನೆಗೆ ಅನುಮತಿ ಪಡೆಯುವ ಸಲುವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯ ಮಂತ್ರಿ…
ನಾಳೆ ಮೈಸೂರು ದಸರಾಕ್ಕೆ ಚಾಲನೆ
October 9, 2018ಮೈಸೂರು: ಅಕ್ಟೋಬರ್ 10ರಿಂದ 2018ರ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದೆ. ಬುಧವಾರ ಬೆಳಿಗ್ಗೆ 7.05ರಿಂದ 7.35 ಗಂಟೆಯೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಅವರು ನಾಡ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಅಧ್ಯಕ್ಷತೆ ವಹಿಸಲಿರುವ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿರುವರು. ಸಚಿವರಾದ…
ಮೈಸೂರು ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ ಮುಂದುವರಿಕೆ
October 9, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸ ಬೇಕೆಂಬುದು ಸೇರಿದಂತೆ ಇನ್ನಿತರೆ ಪ್ರಮುಖ ಬೇಡಿಕೆಯೊಂದಿಗೆ ಪಾಲಿಕೆಯ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನವಾದ ಸೋಮವಾರವೂ ಮುಂದುವರೆಯಿತು. ಮೈಸೂರು ಮಹಾನಗರ ಪಾಲಿಕೆ ಮುಖ್ಯ ದ್ವಾರದ ಬಳಿ ಪಾಲಿಕೆ ಪೌರಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಇಂದು ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಹಾಗೂ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರೂ ಆದ ಕೆ.ಶಿವರಾಂ, ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ಗಾಂಧಿ ನಗರದ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ,…
ಖಾಸಗಿ ಬಸ್ ಡಿಕ್ಕಿ: ಸಾಕಾನೆ ‘ರಂಗ’ ದುರ್ಮರಣ
October 9, 2018ಕೇರಳದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಭವಿಷ್ಯದ ಮೈಸೂರು ದಸರಾ ಅಂಬಾರಿ ಆನೆ ಆಕರ್ಷಣೆ ಹೊಂದಿದ್ದ ಸಾಕಾನೆ ರಂಗ ಇಂದು ಮುಂಜಾನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ದುರ್ಮರಣಕ್ಕೀಡಾಗಿದ್ದಾನೆ. ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಲ್ಪಕ ಟ್ರಾನ್ಸ್‍ಪೋರ್ಟ್‍ಗೆ ಸೇರಿದ ಖಾಸಗಿ ಬಸ್(ಕೆಎ01, ಎಇ7579) ಡಿಕ್ಕಿ ಹೊಡೆದ ರಭಸಕ್ಕೆ ಸಾಕಾನೆ ರಂಗನ ಬೆನ್ನು ಮೂಳೆ ಮುರಿದಿದೆ. ಬಸ್‍ನ ಒಂದು ಭಾಗವೂ ಜಖಂ ಆಗಿದೆ. ಬೆನ್ನು ಮೂಳೆ ಮುರಿತದಿಂದ…
ರಾಜಸ್ಥಾನ ಬಿಜೆಪಿ ಕೈ ತಪ್ಪುವ ಸಾಧ್ಯತೆ
October 9, 2018ನವದೆಹಲಿ: ಮುಂಬರುವ ಪಂಚರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಗೆ ಶಾಕ್ ಕಾದಿದೆ ಎಂದು ಟೈಮ್ಸ್‍ನೌ ವಾರ್ ರೂಂ ಸ್ಟ್ರಾಟರ್ಜಿಸ್ ಸಮೀಕ್ಷೆ ಹೇಳಿದೆ. ತಾನು ಅಧಿಕಾರದ ಲ್ಲಿರುವ ರಾಜಸ್ಥಾನ ಕೈ ಬಿಡಲಿದೆ ಎಂಬ ಆತಂಕ ಬಿಜೆಪಿಯಲ್ಲಿ ಶುರುವಾಗಿದೆ. ರಾಜಸ್ಥಾನ ವಿಧಾನಸಭೆಯ 200 ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ 75 ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 115 ಸ್ಥಾನ ಪಡೆಯಲಿದೆ. ಇತರರು 10ರಲ್ಲಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ 2013ರಲ್ಲಿ 163 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ವಸುಂಧರಾ ರಾಜೇ…
ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ ದಸರಾ ಫಲಪುಷ್ಪ ಪ್ರದರ್ಶನ
October 9, 2018ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಜರ್‍ಬಾದ್‍ನ ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ 21ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಾವರಿ ಅಲಂಕಾರಿಕ ಹೂವಿನ ಗಿಡಗಳ ಮಧ್ಯ ದಲ್ಲಿ ಹೂವಿನಿಂದಲೇ ತಯಾರಿಸುವ ದೆಹಲಿಯ ಲೋಟಸ್ ಟೆಂಪಲ್, ಅಶೋಕ ಸ್ತಂಭ, ಪೆಂಗ್ವಿನ್,ಫಿರಂಗಿ, ಅಮರ್ ಜವಾನ್ ಸ್ತಂಭ ಸೇರಿದಂತೆ ವಿವಿಧ 13 ಆಕೃತಿಗಳು ಪ್ರವಾಸಿಗರ ಮನ ಸೆಳೆಯಲು ಸಜ್ಜಾಗಿವೆ ಎಂದು ಮೈಸೂರು ಜಿಪಂ ಸಿಇಓ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷರಾದ ಕೆ.ಜ್ಯೋತಿ ತಿಳಿಸಿದರು. ನಜರ್‌ಬಾದಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ…
ಮೈಸೂರಲ್ಲಿ ಕಣ್ಮನ ಸೆಳೆಯುತ್ತಿದೆ ಬೆಳಕಿನ ವೈಭವ
October 9, 2018ಮೈಸೂರು: ದಸರಾ ವಿದ್ಯುತ್ ದೀಪಾ ಲಂಕಾರ ಅದುವೇ ಬೆಳಕಿನ ಚಿತ್ತಾರ… ಕವಿದ ಕತ್ತಲ ಹಿನ್ನೆಲೆಯಲ್ಲಿ ನಾನಾ ಬಗೆಯಲ್ಲಿ ಬೆಳಕು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ತರಲಿದೆ. ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೆ, ಇಡೀ ನಗರವೇ ಕತ್ತಲಾಗುತ್ತಿದ್ದಂತೆ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಬೆಳಕಿನ ವೈಯ್ಯಾರವನ್ನೇ ಕಣ್ಣಿಗೆ ಕಟ್ಟಲಿದೆ. ಈಗಾಗಲೇ ದಸರಾ ಮಹೋತ್ಸವಕ್ಕೆ ನಗರ ಸಜ್ಜಾಗಿದ್ದು, ವಿದ್ಯುತ್ ದೀಪಗಳ ಬಗೆಬಗೆಯ ಬಣ್ಣದ ಬೆಳಕು ಕತ್ತಲಾ ಗುತ್ತಿದ್ದಂತೆ ಮನತಣಿಸಲು ಶುರುವಾಗಿದೆ. ದಸರಾ…