ರಾಜ್ಯದ ಉದ್ದೇಶಿತ ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮತ್ತೆ ಕ್ಯಾತೆ
ಮೈಸೂರು

ರಾಜ್ಯದ ಉದ್ದೇಶಿತ ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ಮತ್ತೆ ಕ್ಯಾತೆ

October 9, 2018

ಬೆಂಗಳೂರು:  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತಮಿಳುನಾಡು ಕಾವೇರಿ ವಿಷಯವನ್ನು ಮುಂದಿಟ್ಟುಕೊಂಡು ಮತ್ತೆ ರಾಜಕೀಯ ಆಟ ಆರಂಭಿಸಿದೆ. ರಾಜ್ಯದ ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಅನುಮತಿ ನೀಡಲು ಮುಂದಾದ ಬೆನ್ನಲ್ಲೇ ತಮಿಳು ನಾಡು ಸರ್ಕಾರ ಕ್ಯಾತೆ ತೆಗೆದಿದೆ.

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಯೋಜನೆಗೆ ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಯೋಜನೆಗೆ ಅನುಮತಿ ಪಡೆಯುವ ಸಲುವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ರೇವಣ್ಣ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಕರ್ನಾಟಕ ಸರ್ಕಾರಕ್ಕೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಚಿವ ಗಡ್ಕರಿ ಭರವಸೆ ನೀಡಿದ್ದರು. ಮೇಕೆದಾಟು ಯೋಜನೆ ಅನುಷ್ಠಾನ ಕೈಗೊಳ್ಳುವ ರೂಪ ಪಡೆಯುತ್ತಿದ್ದಂತೆ ಪಳನಿಸ್ವಾಮಿ,
ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗದೇ ನೇರವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಈ ಯೋಜನೆಗೆ ಅನುಮತಿ ನೀಡಿದಲ್ಲಿ ತಮಿಳು ನಾಡಿನ ರೈತರ ಹಿತಾಸಕ್ತಿಗೆ ಧಕ್ಕೆಯಾಗಿ ರುತ್ತದೆ ಎಂದಿದ್ದಾರೆ. ತಕ್ಷಣವೇ ಜಲ ಸಂಪನ್ಮೂಲ ಇಲಾಖೆಗೆ, ಅನುಮತಿ ನೀಡ ದಿರುವಂತೆ ಆದೇಶ ಮಾಡಬೇಕೆಂದು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯವರ ಮನವಿ ಸ್ವೀಕರಿಸಿದರಾದರೂ, ಪ್ರಧಾನಿಯ ವರು ಯಾವುದೇ ಭರವಸೆ ನೀಡಿಲ್ಲ.

ಈ ಹಿಂದೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದ ಪಳನಿಸ್ವಾಮಿ ಅವರು ಇಂದು ದಿಢೀರನೇ ಪ್ರಧಾನಿ ಭೇಟಿಯಾಗಿ ಮಾತು ಕತೆ ನಡೆಸಿದರು. ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ಕಾವೇರಿಯ ಹೆಚ್ಚುವರಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಕ್ರಿಯಾ ಯೋಜನೆ ರೂಪಿಸಿ, ಸಂಪುಟದ ಒಪ್ಪಿಗೆ ಪಡೆದು, ಅನುಮತಿಗಾಗಿ ಕೇಂದ್ರಕ್ಕೆ ಪತ್ರ ಬರೆದಿದೆ. ಅಷ್ಟೇ ಅಲ್ಲ, ತಮ್ಮ ಆಡಳಿ ತಾವಧಿಯಲ್ಲಿ ಯೋಜನೆಗೆ ಕಾರ್ಯ ಚಾಲನೆ ನೀಡಬೇಕೆಂದು ದೇವೇಗೌಡರ ಕುಟುಂಬ ಅಂಕಿ ಅಂಶಗಳ ಸಮೇತ ಜಲಸಂಪನ್ಮೂಲ ಸಚಿವ ಗಡ್ಕರಿ ಅವರನ್ನು ಮನವೊಲಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಇವರ ನೆರವಿಗೆ ಪ್ರಸಕ್ತ ಸಾಲಿನಲ್ಲಿ ಕಾವೇರಿ ನದಿ ಪಾತ್ರಕ್ಕೆ ಹೆಚ್ಚು ನೀರು ಬಂದು ತಮಿಳುನಾಡು, ತಮಗೆ ಬೇಕಾದಷ್ಟು ನೀರು ಸಂಗ್ರಹಿಸಿ, ಉಳಿದ 207 ಟಿಎಂಸಿ ನೀರನ್ನು ಇದುವರೆಗೂ ಸಮುದ್ರಕ್ಕೆ ಹರಿಸಿದೆ.

ಈ ಅಂಕಿ ಅಂಶಗಳೇ ಗಡ್ಕರಿ ಅವರಿಗೆ ಮನದಟ್ಟಾಗಿ ಉಭಯ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದರು. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತನ್ನ ರಾಜಕೀಯ ಪ್ರಭಾವ ಬೀರುವ ತಮಿಳುನಾಡು ಪಕ್ಷಗಳು ಇಂದು ಕೂಡ ಅದೇ ದಾಳವನ್ನು ಮುಂದೊಡ್ಡಿ ಕರ್ನಾಟಕದ ಕನಸ್ಸನ್ನು ನುಚ್ಚು ನೂರು ಮಾಡುವ ಪ್ರಯತ್ನಕ್ಕೆ ಮುಂದಾಗಿದೆ.

Translate »