ಮೈಸೂರು: ದಸರಾ ಹಿನ್ನೆಲೆಯಲ್ಲಿ 90 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಈ ಬಾರಿ ಚೀನಾ ಮಾದರಿಯ ಲ್ಯಾಂಟನ್ ಪಾರ್ಕ್ ಸಿದ್ಧಪಡಿಸಲಾಗುತ್ತಿದೆ. ಮೈಸೂರು ಪ್ರಾಂತ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಸೇರಿದಂತೆ ನಾಡಿನ ಪರಂಪರೆಯನ್ನು ತ್ರಿಡಿ ಶೋನಲ್ಲಿ ಬಿಂಬಿಸುವುದರೊಂದಿಗೆ 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಮುದ ನೀಡಲಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಲ್ಯಾಂಟನ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಮೈಸೂರಿನ ಡ್ರೀಮ್ ಪೆಟಲ್ಸ್ ಸಂಸ್ಥೆ ಲ್ಯಾಂಟನ್ ಪಾರ್ಕ್ ಸ್ಥಾಪಿಸುವ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಚೀನಾದ ಸಂಸ್ಥೆ…
ದಸರಾ ವೇಳೆ ಪುರಭವನ ಆವರಣದಲ್ಲಿ ಸಾವಿರ ವಾಹನ ನಿಲುಗಡೆ
October 9, 2018ಮೈಸೂರು: ಕಳೆದ ಬಾರಿಯಂತೆ ಈ ವರ್ಷವೂ ದಸರಾ ಮಹೋತ್ಸವದ ವೇಳೆ ಮೈಸೂರಿನ ಪುರಭವನದ ಆವರಣದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ 1000 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ನಗರಪಾಲಿಕೆ ಕಮೀಷನರ್ ಕೆ.ಹೆಚ್.ಜಗದೀಶ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಸುರೇಶ್ ಹಾಗೂ ಸಿಬ್ಬಂದಿಗಳೊಂದಿಗೆ ಇಂದು ರಾಜಮಾರ್ಗದ ಸಿವಿಲ್ ಕಾಮಗಾರಿ ಹಾಗೂ ಟೌನ್ ಹಾಲ್‍ನ ಪಾರ್ಕಿಂಗ್ ಮತ್ತು ಸ್ವಚ್ಛತಾ ಕೆಲಸಗಳನ್ನು ಪರಿಶೀಲಿಸಿದರು. ಹಾರ್ಡಿಂಜ್ ಸರ್ಕಲ್ ಮತ್ತು ಅರ ಮನೆ ಸುತ್ತಲಿನ ಕಲ್ಲಿನ ಬ್ಯಾರಿಕೇಡ್ ರಿಪೇರಿ ಹಾಗೂ…
ಅ.13ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ ಬಾರಿಯ `ಓಪನ್ ಸ್ಟ್ರೀಟ್ ಫೆಸ್ಟಿವಲ್’
October 9, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ನಡುವೆ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಕಾರ್ಯಕ್ರಮವನ್ನು ಅ.13ರಂದು ಬೆಳಿಗ್ಗೆ 8 ರಿಂದ ರಾತ್ರಿ 9.30ರವರೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಮೈಸೂರು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲು ಮುಂದಾಗಿದೆ. ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆ(ಮೈಸೂರು ನ್ಯಾಯಾಲಯ)ಯಲ್ಲಿ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಆಯೋಜಿಸಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹೊರ ರಾಜ್ಯದ ಪ್ರವಾಸಿಗರು ಮತ್ತು ಯುವ ಸಮೂಹವನ್ನು ಸೆಳೆಯುವ ದೃಷ್ಟಿಯಿಂದ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಅನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗುತ್ತಿದ್ದು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ…
ಪಾಪ, ನಮ್ಮ ‘ರೌಡಿ ರಂಗ’ನಿಗೆ ಇಂತಹ ಸಾವು ಬರಬಾರದಿತ್ತು…
October 9, 2018ಮೈಸೂರು: ರೌಡಿಸಂ ಬಿಟ್ಟು ಸಹಜ ಜೀವನಕ್ಕೆ ಮರಳಿದ ರೌಡಿಗಳು ದಾರುಣವಾಗಿ ಹತ್ಯೆಯಾಗಿ ಮರುಕ ಉಂಟುಮಾಡುವಂತಹ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಅದೇ ರೀತಿ ತನ್ನ ರೌಡಿಸಂ ಬಿಟ್ಟು ಶಾಂತ ಸ್ವರೂಪನಾಗಿ ಅಡ್ಡಾಡುತ್ತಿದ್ದ ಸಾಕಾನೆ ರಂಗ ಇಂದು ಮುಂಜಾನೆ ಖಾಸಗಿ ಬಸ್ ಡಿಕ್ಕಿಯಿಂದ ಸಾವಿಗೀಡಾಗಿ, ಎಲ್ಲರೂ ಮರುಕ ಪಡುವಂತೆ ಮಾಡಿದ್ದಾನೆ. ಈತ ಎರಡು ವರ್ಷಗಳ ಹಿಂದೆ ಸಾವನದುರ್ಗ ಅರಣ್ಯದಲ್ಲಿ ಸೆರೆಯಾಗುವ ಮುನ್ನ ‘ರೌಡಿ ರಂಗ’ ಎಂದೇ ಕರೆಯಲ್ಪಡುತ್ತಿದ್ದ. ರಾಮನಗರ, ಆನೆಕಲ್, ಬನ್ನೇರುಘಟ್ಟ ಅರಣ್ಯಗಳಲ್ಲಿ ತನಗೆ ಯಾರೂ ಸರಿಸಾಟಿ ಇಲ್ಲವೆಂಬಂತೆ ಸ್ವಚ್ಛಂದವಾಗಿ…
ಅ.10ರಿಂದ ದಸರಾ ಕ್ರೀಡಾಕೂಟ: ಖ್ಯಾತ ಅಥ್ಲೀಟ್ ಎಂ.ಆರ್.ಪೂವಮ್ಮ ಉದ್ಘಾಟನೆ
October 9, 2018ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.10ರಿಂದ 16ರವರೆಗೆ ಆಯೋಜಿಸಿರುವ ದಸರಾ ಕ್ರೀಡಾ ಕೂಟವನ್ನು ಖ್ಯಾತ ಅಥ್ಲೀಟ್ ಎಂ.ಆರ್. ಪೂವಮ್ಮ ಉದ್ಘಾಟಿಸಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾ ಯಕ ನಿರ್ದೇಶಕ ಕೆ.ಸುರೇಶ್ ತಿಳಿಸಿದರು. ಚಾಮುಂಡಿವಿಹಾರ ಕ್ರೀಡಾಂಗಣದ ಸಭಾಂ ಗಣದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10ರಂದು ಸಂಜೆ 4 ಗಂಟೆಗೆ ಖ್ಯಾತ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು ದಸರಾ ಕ್ರೀಡಾ ಕೂಟವನ್ನು ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ…
ಜಂಬೂ ಸವಾರಿಯಲ್ಲಿ ಸಾಗಲಿವೆ 40ಕ್ಕೂ ಅಧಿಕ ಸ್ತಬ್ಧಚಿತ್ರಗಳು
October 9, 2018ಮೈಸೂರು: ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ, ನಾಡಿನ ಪರಂಪರೆ, ಸಂಸ್ಕೃತಿ, ಗತ ವೈಭವದ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಸಜ್ಜುಗೊಳ್ಳುತ್ತಿವೆ. ನಾಡಿನ ಕಲೆ, ವಾಸ್ತು ಶಿಲ್ಪ, ಸಂಸ್ಕೃತಿ, ಪ್ರವಾಸೋದ್ಯಮ, ಜಾನಪದ ಹಿನ್ನೆಲೆ, ಹಬ್ಬಗಳ ಆಚರಣೆ, ಸಾಧಕರ ಯಶೋಗಾಥೆಯಂತಹ ಧಾರ್ಮಿಕ ಹಾಗೂ ಐತಿ ಹಾಸಿಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವು ದರ ಜೊತೆಗೆ, ಅಂತರ್ಜಲ ರಕ್ಷಣೆ, ಮತದಾನ ಜಾಗೃತಿ, ಕಾನೂನು ಅರಿವು, ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸುವ 40ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು…
‘ವಿಶ್ವ ಮಾನ್ಯ’ವಾದ ಮೈಸೂರು ಆಕಾಶವಾಣಿ ಎಫ್‍ಎಂ 100.6
October 9, 2018ಮೈಸೂರು: ಆಕಾಶವಾಣಿ ಮೈಸೂರು ಎಫ್‍ಎಂ 100.6 ಮೈಸೂರು, ಮಂಡ್ಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ಈ ಧ್ವನಿ ಇದೀಗ ವಿಶ್ವ ಮಾನ್ಯವಾಗಿದೆ. ಪ್ರಪಂಚದ ಮೂಲೆ ಮೂಲೆಯಲ್ಲೂ ಈ ಧ್ವನಿಯನ್ನು ಆಲಿಸುವ ಅವಕಾಶ ಹೊರನಾಡ ಕನ್ನಡಿಗರು, ವಿದೇಶದಲ್ಲಿ ನೆಲೆ ಸಿರುವ ಕನ್ನಡಿಗರಿಗೂ ದೊರೆಯಲಿದೆ. ದೇಶದ ಮೊದಲ ಆಕಾಶವಾಣಿ ಎನಿಸಿ ರುವ ಮೈಸೂರು ಬಾನುಲಿ ಹಲವು ಪ್ರಥಮ ಗಳ ಕೇಂದ್ರವೂ ಹೌದು. ದಿನದ 24 ಗಂಟೆ ಆಕಾಶವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಆಲಿಸಬಹುದಾದ ಅವಕಾಶ ಹೊರನಾಡ ಕನ್ನಡಿಗರು, ವಿದೇಶದಲ್ಲಿ…
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸದ ಮೋದಿ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ
October 9, 2018ಮೈಸೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಸಲಾಗುತ್ತಿದ್ದು, ಸಾಮಾನ್ಯ ಜನರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿ ನರೇಂದ್ರ ಮೋದಿ ಯವರ ಭಾವಚಿತ್ರದ ಎದುರು `ಎಳ್ಳು ನೀರು’ ಬಿಡುವ ಅಣಕು ಪ್ರದರ್ಶನದ ಮೂಲಕ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಖಂಡಿಸಲಾಯಿತು. ಮೈಸೂರಿನ ಚಿಕ್ಕಗಡಿಯಾರದ ಆವ ರಣದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕದ ವತಿಯಿಂದ ಸೋಮ ವಾರ ಹಮ್ಮಿಕೊಂಡಿದ್ದ ಅಣಕು ಪ್ರದ ರ್ಶನ ಪ್ರತಿಭಟನೆಯಲ್ಲಿ ಮೋದಿ ಆಡಳಿತದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು….
ಮೈಸೂರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀದೇವಿ ನವರಾತ್ರಿ ಕಾರ್ಯಕ್ರಮ
October 9, 2018ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ನಾದ ಮಂಟಪ ದಲ್ಲಿ ಶ್ರೀದೇವಿ ನವರಾತ್ರಿ ಉತ್ಸವಗಳು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ದತ್ತ ವಿಜಯಾ ನಂದ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಅ.10ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿದೆ. ಅ.10 ರಿಂದ 20ರವರೆಗೆ ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಗೆ ಶ್ರೀದೇವಿ ಪಲ್ಲಕ್ಕಿ ಉತ್ಸವ, ಕುಮಾರಿ ಪೂಜೆ, ಶ್ರೀಚಕ್ರ ಪೂಜೆ, ನವಾವರಣ ಪೂಜೆ, ಸಂಗೀತ/ಭಜನೆ, ಮಧ್ಯಾಹ್ನ 12 ಗಂಟೆಗೆ ಅನ್ನಾರ್ಚನೆ, ದೇವಿ ಪೂಜೆ, ಹೋಮ ಪೂರ್ಣಾಹುತಿ, ಸಾಯಂಕಾಲ 4 ಗಂಟೆಗೆ ಮಹಾ…
ವಿವಿಧ ವಿನ್ಯಾಸದ ಗಣೇಶ ಮಹೋತ್ಸವ
October 9, 2018ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರ, ವಾರ್ಡ್ ನಂ.51ರ ಕೆಂಪನಂಜಾಂಬ ಅಗ್ರ ಹಾರದ(ಲಕ್ಷ್ಮಿ ಟಾಕೀಸ್ ಎದುರು ರಸ್ತೆ) ಕೆ.ಆರ್.ಮೊಹಲ್ಲಾ, ಮೈಸೂರು. ಇಲ್ಲಿ ಶ್ರೀ ವಿನಾಯಕ ಯುವಕರ ಭಕ್ತ ಮಂಡಳಿ ವತಿ ಯಿಂದ ಕಳೆದ 34 ವರ್ಷಗಳಿಂದಲೂ ಅದ್ಧೂರಿಯಾಗಿ ವಿವಿಧ ವಿನ್ಯಾಸದ ಗಣೇಶ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷವೂ ಕೂಡ ಕೈಲಾಸ ಪರ್ವತ ವನ್ನು ಹೋಲುವ ರೀತಿಯಲ್ಲಿ ಎಲ್ಲಾ ದೇವಾನು ದೇವತೆಗಳಾದ ಶಿವ, ಪಾರ್ವತಿ, ಆಂಜನೇಯ, ಅನಂತಪದ್ಮನಾಭ, ಗರುಡ ಮತ್ತು ನಾಡ ದೇವತೆ ಶ್ರೀ ಚಾಮುಂಡೇಶ್ವರಿ…