ಅ.10ರಿಂದ ದಸರಾ ಕ್ರೀಡಾಕೂಟ: ಖ್ಯಾತ ಅಥ್ಲೀಟ್ ಎಂ.ಆರ್.ಪೂವಮ್ಮ ಉದ್ಘಾಟನೆ
ಮೈಸೂರು

ಅ.10ರಿಂದ ದಸರಾ ಕ್ರೀಡಾಕೂಟ: ಖ್ಯಾತ ಅಥ್ಲೀಟ್ ಎಂ.ಆರ್.ಪೂವಮ್ಮ ಉದ್ಘಾಟನೆ

October 9, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.10ರಿಂದ 16ರವರೆಗೆ ಆಯೋಜಿಸಿರುವ ದಸರಾ ಕ್ರೀಡಾ ಕೂಟವನ್ನು ಖ್ಯಾತ ಅಥ್ಲೀಟ್ ಎಂ.ಆರ್. ಪೂವಮ್ಮ ಉದ್ಘಾಟಿಸಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾ ಯಕ ನಿರ್ದೇಶಕ ಕೆ.ಸುರೇಶ್ ತಿಳಿಸಿದರು.

ಚಾಮುಂಡಿವಿಹಾರ ಕ್ರೀಡಾಂಗಣದ ಸಭಾಂ ಗಣದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.10ರಂದು ಸಂಜೆ 4 ಗಂಟೆಗೆ ಖ್ಯಾತ ಅಥ್ಲೀಟ್ ಎಂ.ಆರ್.ಪೂವಮ್ಮ ಅವರು ದಸರಾ ಕ್ರೀಡಾ ಕೂಟವನ್ನು ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರೆ ಗಣ್ಯರು ಭಾಗವಹಿ ಸಲಿದ್ದಾರೆ ಎಂದರು.

ದಸರಾ ಮಹೋತ್ಸವ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ವತಿ ಯಿಂದ ಆಯೋಜಿಸಿರುವ ಕ್ರೀಡಾಕೂಟ ಗಳು ಚಾಮುಂಡಿವಿಹಾರ ಕ್ರೀಡಾಂಗಣ ಸೇರಿ ದಂತೆ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯ ಲಿದ್ದು, ಒಲಿಂಪಿಕ್ಸ್‍ನಲ್ಲಿ ಮಾನ್ಯತೆ ಪಡೆದ ಸುಮಾರು 24 ಕ್ರೀಡೆಗಳಲ್ಲಿ ರಾಜ್ಯಮಟ್ಟದ ಪ್ರತಿಷ್ಠಿತ 8 ಆಯ್ದ ತಂಡಗಳು ಭಾಗವಹಿ ಸಲಿವೆ ಎಂದು ಹೇಳಿದರು.
ದಸರಾ ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ ಮಾನ್ಯತೆ ನೀಡಬೇಕೆಂಬ ಉದ್ದೇಶದಿಂದ ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ 2018 ಎಂದು ಮಾರ್ಪಟು ಮಾಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟು ಗಳು ವಂಚಿತರಾಗುತ್ತಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‍ಬಾಲ್, ಸೈಕ್ಲಿಂಗ್, ಫುಟ್‍ಬಾಲ್, ಹ್ಯಾಂಡ್‍ಬಾಲ್, ಹಾಕಿ, ಕಬಡ್ಡಿ, ಖೋ-ಖೋ, ನೆಟ್‍ಬಾಲ್, ಟೆನ್ನಿಸ್, ವಾಲಿಬಾಲ್, ವೇಟ್‍ಲಿಫ್ಟಿಂಗ್, ಕುಸ್ತಿ ಮತ್ತು ವುಶು ಕ್ರೀಡೆಗಳಲ್ಲಿ ಮೈಸೂರು ಜಿಲ್ಲೆಯ ಪುರುಷ ಮತ್ತು ಮಹಿಳಾ ಕ್ರೀಡಾಪಟು ಗಳು ಭಾಗವಹಿಸುತ್ತಿದ್ದು, ಬಹುತೇಕ ಕ್ರೀಡಾ ಪಟುಗಳು ಗ್ರಾಮೀಣ ಪ್ರದೇಶದವರಾಗಿ ದ್ದಾರೆ ಎಂದು ತಿಳಿಸಿದರು.

ಆಹಾರ ವ್ಯವಸ್ಥೆ: ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಅ.9ರ ರಾತ್ರಿಯಿಂದ 17ರ ಬೆಳಗಿನವರೆಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ಊಟೋ ಪಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕ್ರೀಡಾಪಟುಗಳಿಗೆ ಶ್ರೀ ನಂಜರಾಜ ಬಹ ದ್ದೂರ್ ಛತ್ರದಲ್ಲಿ ಆಹಾರ ಸರಬರಾಜು ಮಾಡಲು ಆದೇಶ ನೀಡಲಾಗಿದೆ. ಊಟದ ಸಮಯದಲ್ಲಿ ಶುದ್ದ ಕುಡಿಯುವ ನೀರು ಹಾಗೂ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಕ್ರೀಡಾಂಗಣ ಸಿದ್ಧತೆ: ಕ್ರೀಡಾಕೂಟವನ್ನು ಸಂಘಟಿಸಲು ಚಾಮುಂಡಿ ವಿಹಾರ ಕ್ರೀಡಾಂ ಗಣ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಟೆನ್ನಿಸ್ ಕ್ಲಬ್, ಸಂತ ಫಿಲೋ ಮಿನಾ ಕಾಲೇಜು, ಎನ್‍ಐಇ ಕಾಲೇಜು, ಜೆಸಿಇ ಕಾಲೇಜು, ಡಿ.ದೇವರಾಜ ಅರಸು ಕುಸ್ತಿ ಅಖಾಡ ಈ ಸ್ಥಳಗಳಲ್ಲಿ ಎಲ್ಲಾ ಕ್ರೀಡಾ ಮೈದಾನಗಳ/ಅಂಕಣಗಳ ಪೂರ್ವಾ ಭಾವಿ ಸಿದ್ದತೆಗಳನ್ನು ಕೈಗೊಳ್ಳಲಾಗಿರುತ್ತದೆ.
ಶುದ್ಧ ಕುಡಿಯುವ ನೀರು: ಕ್ರೀಡಾಕೂಟ ನಡೆಯುವ ಎಲ್ಲಾ ಅಂಕಣಗಳಲ್ಲಿ ಊಟ ಮತ್ತು ವಸತಿ ಸ್ಥಳಗಳಲ್ಲಿ ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರಿಗೆ ವ್ಯವಸ್ಥೆ: ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಊಟೋಪಚಾರದ ಸ್ಥಳ, ವಸತಿ ಸ್ಥಳ ದಿಂದ ಕ್ರೀಡಾಂಗಣಕ್ಕೆ ಹೋಗಿ ಬರಲು 50 ಮಿನಿ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ವೈದ್ಯಕೀಯ ವ್ಯವಸ್ಥೆ: ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಸ್ಪರ್ಧಾ ಸಮಯದಲ್ಲಿ ಉಂಟಾಗುವ ಅವಘಡ ಗಳಿಗೆ ತುರ್ತು ಚಿಕಿತ್ಸೆಗಾಗಿ ಔಷಧಿಗಳು, ಪ್ರಥಮ ಚಿಕಿತ್ಸಾ ಘಟಕ, ಆ್ಯಂಬುಲೆನ್ಸ್ ಜೊತೆಗೆ ವೈದ್ಯರು ಮತ್ತು ಸಹಾಯಕರುಗಳ ಸೇವೆ ಯನ್ನು ಒದಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೆ.ಆರ್.ಆಸ್ಪತ್ರೆ ಮತ್ತು ಜೆಎಸ್‍ಎಸ್ ಆಸ್ಪತ್ರೆಗೆ ಪತ್ರ ಬರೆದಿದ್ದು, ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ 24×7 ಮೆಡಿಕಲ್ ಸೆಂಟರ್ ತೆರೆಯಲು ಕ್ರಮಕೈಗೊಳ್ಳಲಾಗಿದೆ.
ಕ್ರೀಡಾ ಸಮವಸ್ತ್ರ: ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಟೀಶರ್ಟ್. ಪ್ಯಾಂಟ್. ಶೂ, ಸಾಕ್ಸ್‍ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ವಿಜೇತ ಕ್ರೀಡಾ ಪಟುಗಳಿಗೆ ಮಾನ್ಯತಾ ಪ್ರಮಾಣಪತ್ರ, ಮೆಡಲ್ಸ್, ಟ್ರೋಫಿಯನ್ನು ನೀಡಲಾಗು ವುದು ಜತೆಗೆ ಈ ಬಾರಿ ವಿಜೇತರಾದವ ರಿಗೆ ನೀಡುವ ನಗದು ಬಹುಮಾನವನ್ನು ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಸ್ಪರ್ಧೆಗಳು ನಡೆಯುವ ಸ್ಥಳ

ಆರ್ಚರಿ: ಸೆ.13 ಮತ್ತು 14- ಮೈವಿವಿ ಕ್ರಿಕೆಟ್ ಮೈದಾನ. ಅಥ್ಲೆಟಿಕ್ಸ್: 14ರಿಂದ 16- ಚಾಮುಂಡಿವಿಹಾರ ಅಥ್ಲೆಟಿಕ್ಸ್ ಕ್ರೀಡಾಂಗಣ. ಬ್ಯಾಡ್ಮಿಂಟನ್(ಷಟಲ್): 11ರಿಂದ 13- ಮಾನಸಗಂಗೋತ್ರಿಯ ಮಾನಸ ಒಳಾಂಗಣ ಕ್ರೀಡಾಂಗಣ. ಬ್ಯಾಸ್ಕೆಟ್‍ಬಾಲ್: 14ರಿಂದ 16-ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ. ಬಾಕ್ಸಿಂಗ್: 11ರಿಂದ 14-ಚಾಮುಂಡಿ ವಿಹಾರ ಬ್ಯಾಸ್ಕೆಟ್‍ಬಾಲ್ ಹೊರಾಂಗಣ ಅಂಕಣ. ಸೈಕ್ಲಿಂಗ್: 15 ಮತ್ತು 16-ವರುಣಾ ಗ್ರಾಮ. ಫುಟ್‍ಬಾಲ್: 10ರಿಂದ 16-ಮೈವಿವಿ ಫುಟ್‍ಬಾಲ್ ಮೈದಾನ.

ಫೆನ್ಸಿಂಗ್: 10 ಮತ್ತು 11-ಸಂತ ಫಿಲೋಮಿನಾ ಒಳಾಂಗಣ ಕ್ರೀಡಾಂಗಣ. ಜಿಮ್ನಾಸ್ಟಿಕ್ಸ್: 10ರಿಂದ 13-ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣ. ಹ್ಯಾಂಡ್‍ಬಾಲ್: 11ರಿಂದ 14-ಜೆಸಿಇ ಇಂಜಿನಿಯರಿಂಗ್ ಕಾಲೇಜು ಮೈದಾನ. ಹಾಕಿ: 12ರಿಂದ 16-ಚಾಮುಂಡಿ ವಿಹಾರ ಹಾಕಿ ಕ್ರೀಡಾಂಗಣ. ಜೂಡೋ: 14ರಿಂದ 16-ಮೈವಿವಿ ಒಳಾಂಗಣ ಕ್ರೀಡಾಂ ಗಣ. ಕಬಡ್ಡಿ: 10ರಿಂದ 12-ಚಾಮುಂಡಿವಿಹಾರ ಹೊರಾಂಗಣ ಕ್ರೀಡಾಂಗಣ. ಖೋ-ಖೋ: 10ರಿಂದ 13-ಚಾಮುಂಡಿವಿಹಾರ ಹೊರಾಂಗಣ ಕ್ರೀಡಾಂಗಣ. ನೆಟ್‍ಬಾಲ್: 13ರಿಂದ 16-ಚಾಮುಂಡಿವಿಹಾರ ಹೊರಾಂಗಣ ಕ್ರೀಡಾಂಗಣ.

ಈಜು: 13ರಿಂದ 15-ಚಾಮುಂಡಿವಿಹಾರ ಈಜುಕೊಳ. ಟೆಕ್ವಾಂಡೋ: 10ರಿಂದ 12-ಮೈವಿವಿ ಒಳಾಂಗಣ ಕ್ರೀಡಾಂಗಣ. ಟೇಬಲ್ ಟೆನ್ನಿಸ್: ಜೆಸಿಇ ಇಂಜಿನಿಯ ರಿಂಗ್ ಟಿಟಿ ಹಾಲ್. ಟೆನ್ನಿಸ್: 9 ರಿಂದ 12-ಮೈಸೂರು ಟೆನ್ನಿಸ್ ಕ್ಲಬ್, ಚಾಮ ರಾಜಪುರಂ. ವಾಲಿಬಾಲ್: 10ರಿಂದ 12-ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂ ಗಣ. ವೈಟ್‍ಲಿಫ್ಟಿಂಗ್: 10ರಿಂದ 12-ಎನ್‍ಐಇ ಕಾಲೇಜು ಒಳಾಂಗಣ ಕ್ರೀಡಾಂಗಣ. ಕುಸ್ತಿ: 12ರಿಂದ 15-ಡಿ.ದೇವರಾಜ ಅರಸು ಕುಸ್ತಿ ಅಖಾಡ, ವಸ್ತು ಪ್ರದರ್ಶನ ಆವರಣ. ವುಶು: 13ರಿಂದ 16-ಎನ್‍ಐಇ ಕಾಲೇಜು ಒಳಾಂಗಣ ಮೈದಾನ.

ಪುರುಷ-ಮಹಿಳೆಯರ ವಸತಿ ವ್ಯವಸ್ಥೆ ಇಂತಿದೆ
ಕ್ರೀಡಾ ವಿಭಾಗ: ಆರ್ಚರಿ: ಪುರುಷರಿಗೆ-ದರ್ಶನ್ ಪ್ಯಾಲೇಸ್, ಮಹಿಳೆಯರಿಗೆ-ಬಿಎಸ್‍ಎನ್‍ಎಲ್. ಅಥ್ಲೆಟಿಕ್ಸ್: ಪುರುಷರು-ಹೊಟೇಲ್ ಲೂಸಿಯಾ, ಮಹಿಳೆಯರಿಗೆ ಸಮರ್ಥ ಹೋಟೆಲ್/ ಎಸ್.ಕೆ.ಕಾಂಟಿನೆಂಟಲ್. ಬ್ಯಾಡ್ಮಿಂಟನ್(ಷಟಲ್): ಪುರುಷರು-ವೈಶಾಕ್ ಇನ್, ಮಹಿಳೆಯರು-ಹೋಟೆಲ್ ಲೂಸಿಯಾ, ಬ್ಯಾಸ್ಕೆಟ್ ಬಾಲ್: ಪುರುಷರು- ಅಯೋಧ್ಯ ಲಾಡ್ಜ್, ಮಹಿಳೆಯರು-ಇಂಟರ್ ನ್ಯಾಷನಲ್ ಯೂತ್‍ಹಾಸ್ಟೆಲ್. ಬಾಕ್ಸಿಂಗ್: ಪುರುಷರು-ಗಾರ್ಡನ್ ಸಿಟಿ, ಮಹಿಳೆಯರು-ಹೋಟೆಲ್ ಲೂಸಿಯಾ. ಸೈಕ್ಲಿಂಗ್: ಪುರು ಷರು- ಹೋಟೆಲ್ ಗೋಕುಲ್, ಮಹಿಳೆಯರು-ಬಿಎಸ್ ಎನ್‍ಎಲ್. ಫುಟ್‍ಬಾಲ್: ಪುರುಷರು-ವೈಶಾಕ್ ಇಂಟರ್‍ನ್ಯಾಷ ನಲ್, ಮಹಿಳೆಯರು-ಬಿಎಸ್‍ಎನ್‍ಎಲ್. ಫೆನ್ಸಿಂಗ್: ಪುರುಷರು -ದರ್ಶನ್ ಪ್ಯಾಲೇಸ್ ಮತ್ತು ದಶರತ್ ಹೋಟೆಲ್, ಮಹಿಳೆ ಯರು-ಹೊಟೇಲ್ ಲೂಸಿಯಾ. ಜಿಮ್ನಾಸ್ಟಿಕ್ಸ್: ಪುರುಷರು-ಇಂಟರ್‍ನ್ಯಾಷನಲ್ ಯೂತ್‍ಹಾಸ್ಟೆಲ್, ಮಹಿಳೆಯರು-ಗೋಕುಲ್ ಲಾಡ್ಜ್. ಹ್ಯಾಂಡ್‍ಬಾಲ್: ಪುರುಷರು-ವೈಶಾಕ್ ಇನ್, ಮಹಿಳೆ ಯರು-ಬಿಎಸ್‍ಎನ್‍ಎಲ್. ಹಾಕಿ: ಪುರುಷರು-ಹೊಟೇಲ್ ನೀಲಗಿರೀಸ್, ಮಹಿಳೆಯರು-ಎಸ್.ಕೆ.ರೆಸಿಡೆನ್ಸಿ. ಜೂಡೋ: ಪುರು ಷರು-ಗಾರ್ಡನ್ ಪೀಟರ್ಸ್ ಫಾರಂ, ಮಹಿಳೆಯರು-ಬಿಎಸ್ ಎನ್‍ಎಲ್. ಕಬಡ್ಡಿ: ಪುರುಷರು-ಬಾಂಬೆ ಟಿಫಾನಿಸ್, ಮಹಿಳೆ ಯರು-ಬಿಎಸ್‍ಎನ್‍ಎಲ್. ಖೋ-ಖೋ: ಪುರುಷರು-ಗಾರ್ಡನ್ ಸಿಟಿ, ಮಹಿಳೆಯರು-ಬಿಎಸ್‍ಎನ್‍ಎಲ್. ನೆಟ್ ಬಾಲ್: ಪುರುಷರು-ಗಾರ್ಡನ್ ಪೀಟರ್ಸ್ ಫಾರಂ, ಮಹಿಳೆ ಯರು-ಬಿಎಸ್‍ಎನ್‍ಎಲ್. ಈಜು: ಪುರುಷರು-ಹೊಟೇಲ್ ನೈದಿಲೆ, ಮಹಿಳೆಯರು-ಎಸ್.ಕೆ.ಎಲಿಗೆನ್ಸ್. ಟೆಕ್ವಾಂಡೋ: ಪುರು ಷರು-ಹೊಟೇಲ್ ದಿವಾನ್ಸ್, ಮಹಿಳೆಯರು- ಎಸ್.ಕೆ.ಕಂಟಿ ನೆಂಟಲ್. ಟೇಬಲ್ ಟೆನ್ನಿಸ್: ಪುರುಷರು-ಅಜಂತಾ ಪ್ಯಾಲೇಸ್, ಮಹಿಳೆಯರು-ದಶರಥ್ ಹೊಟೇಲ್/ಹೊಟೇಲ್ ಉಮಾ ಶಂಕರ್. ಟೆನ್ನಿಸ್: ಪುರುಷರು-ದರ್ಶನ್ ಪ್ಯಾಲೇಸ್, ಮಹಿಳೆ ಯರು-ಹೊಟೇಲ್ ಲೂಸಿಯಾ. ವಾಲಿಬಾಲ್: ಪುರುಷರು-ಅಯೋಧ್ಯ ಲಾಡ್ಜ್, ಮಹಿಳೆಯರು-ಅಜಂತಾ ಹೊಟೇಲ್/ಸಮವಸ್ತ್ರ ಹೊಟೇಲ್. ವೈಟ್‍ಲಿಫ್ಟಿಂಗ್: ಪುರುಷರು-ಮೂನ್ ಲೈಟ್ ರೆಸಿಡೆನ್ಸಿ, ಮಹಿಳೆಯರು-ಹೊಟೇಲ್ ಸೌಪರ್ಣಿಕ/ ಲೂಸಿಯಾ. ಕುಸ್ತಿ: ಪುರುಷರು-ದಿ ಪ್ರಸಿಡೆನ್ಸಿ, ಮಹಿಳೆಯರು-ಹೊಟೇಲ್ ಗೆಸ್ಟ್ ಇನ್. ವುಶು: ಪುರುಷರು-ಹೊಟೇಲ್ ಸೌಪರ್ಣಿಕ, ಮಹಿಳೆಯರು-ಸೌಪರ್ಣಿಕ/ಮೂನ್ ಲೈಟ್ ಹೊಟೇಲ್‍ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

Translate »