ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡವರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಗುರುವಾರದಿಂದ ಮೈಸೂರು ನಗರದಾದ್ಯಂತ ಎಲ್ಲಾ 5 ಸಂಚಾರ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಪಾರ್ಕಿಂಗ್ ಸ್ಥಳಗಳಲ್ಲಿ ಉಪಕರಣದ ಮೂಲಕ ವಾಹನಗಳ ಬಾಕಿ ಉಳಿದಿರುವ ದಂಡ ತಿಳಿದುಕೊಂಡು ಮಾಲೀಕರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ಸ್ಥಳದಲ್ಲಿ ದಂಡ ಪಾವತಿಸದಿದ್ದಲ್ಲಿ ಅಥವಾ ಮಾಲೀಕರು ಬಾರದಿದ್ದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚಲಿಸುತ್ತಿರುವ ವಾಹನಗಳನ್ನು ತಡೆದು…
ಅರ್ಥಪೂರ್ಣ ವಾಲ್ಮೀಕಿ ಜಯಂತಿ ಆಚರಣೆ
October 6, 2018ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ಅ. 24ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆ ಯಲ್ಲಿ ಅವರು ಮಾತನಾಡಿದರು. ಜಯಂತಿ ಆಚರಣೆ ಮಾಡವಲ್ಲಿ ಸಾರ್ವ ಜನಿಕರು, ಪ್ರಗತಿಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಹಕಾರ ಮುಖ್ಯವಾಗಿದೆ ಎಂದ ಅವರು, ಕೆಲವು ಅಧಿಕಾರಿಗಳು ಮಹನೀಯರ ಜಯಂತಿ ಕಾರ್ಯ ಕ್ರಮಗಳಿಗೆ ಗೈರು ಹಾಜರಾಗುತ್ತಿರುವುದು ಕಂಡು ಬಂದಿದೆ….
ನಾಳೆ `ಖಗೋಳ ವಿಜ್ಞಾನ: ಮಾಹಿತಿ ಕೋಶ’ ಬಿಡುಗಡೆ
October 6, 2018ಮೈಸೂರು: ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್ ಅವರ `ಖಗೋಳ ವಿಜ್ಞಾನ: ಮಾಹಿತಿ ಕೋಶ’ ಪುಸ್ತಕ ಅ.7ರಂದು ಬಿಡುಗಡೆಯಾಗಲಿದೆ. ಮೈಸೂರಿನ ತಳುಕಿನ ವೆಂಕ ಣ್ಣಯ್ಯ ಸ್ಮಾರಕ ಗ್ರಂಥಮಾಲೆ ಹಾಗೂ ವೆಂಕಟ ಗಿರಿ ಪ್ರಕಾಶನದ ಸಹಯೋಗದಲ್ಲಿ ಅಂದು ಬೆಳಿಗ್ಗೆ 11ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯ ಲಿರುವ ಕಾರ್ಯಕ್ರಮದಲ್ಲಿ, ಕುವೆಂಪು ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟ ರಾಮಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ಸಂಶೋ ಧನಾ ಲಯದ ನಿವೃತ್ತ ನಿರ್ದೇಶಕ, ಸಿಎಸ್‍ಐಆರ್…
ಆನ್‍ಲೈನ್ ಔಷಧಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನೋಟೀಸ್
October 6, 2018ಮೈಸೂರು: ಆನ್‍ಲೈನ್ ಮೂಲಕ ಔಷಧಿ ವಿವರ ಪ್ರಸಾರ ಹಾಗೂ ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂಬ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿಯ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಸೇರಿದಂತೆ ಸಂಬಂಧ ಪಟ್ಟವರಿಗೆ ನೊಟೀಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ವಿಬಾಹು ಬಕ್ರು ಅವರ ಏಕಸದಸ್ಯ ಪೀಠ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಘಟನೆ, ಆಹಾರ ಮತ್ತು ಔಷಧಿಗಳ ಆಯುಕ್ತರಿಗೆ ನೊಟೀಸ್ ಜಾರಿ ಮಾಡಿದೆ. ಆನ್‍ಲೈನ್ ಮೂಲಕ ಔಷಧಿಗಳ ವಿವರ ಪ್ರಸಾರ ಹಾಗೂ ಮಾರಾಟಕ್ಕೆ ಯಾವುದೇ…
ನಂಜನಗೂಡಿನಲ್ಲಿ ಬೃಹತ್ ಉದ್ಯೋಗ ಮೇಳ ಇಂದು
October 6, 2018ನಂಜನಗೂಡು: ನಗರದ ವಿದ್ಯಾವರ್ಧಕ ಮೈದಾನದಲ್ಲಿ ನಾಳೆ(ಶನಿವಾರ) ಬೆಳಿಗ್ಗೆ 10 ಗಂಟೆಗೆ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಸಂಸದ ಆರ್.ಧ್ರುವನಾರಾಯಣ್ ಸಿದ್ಧತೆ ಪರಿಶೀಲಿಸಿದರು. ಉದ್ಯೋಗ ಮೇಳಕ್ಕೆ ಸಜ್ಜಾದ ವೇದಿಕೆ ಮತ್ತು ಕೈಗಾರಿಕಾ ಕೇಂದ್ರಗಳ ಸಂದರ್ಶನದ ಕೌಂಟರ್‍ಗಳನ್ನು ಪರಿಶೀಲಿಸಿ, ಆಹಾರ ವಿತರಣೆಯ ವಿಭಾಗವನ್ನು ವಿಕ್ಷೀಸಿ ಬರುವ ನಿರುದ್ಯೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಇದ್ದರು
ಹುಣಸೂರು ಡಿ.ದೇವರಾಜ ಅರಸ್ ಕಾಲೇಜಲ್ಲಿ ಗಾಂಧೀಜಿ 150ನೇ ಜನ್ಮ ದಿನಾಚರಣೆ
October 6, 2018ಹುಣಸೂರು: ಹುಣಸೂರಿನ ಡಿ ಡಿ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾ ಚರಣೆಯನ್ನು ‘ಬಾ ಬಾಪೂ’ ಶೀರ್ಷಿಕೆ ಅಡಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾ ಗಿದ್ದ ಶ್ರೀನಟರಾಜ ಮಹಿಳಾ ವಸತಿ ಪ್ರಥಮದರ್ಜೆ ಕಾಲೇಜಿನ ಉಪಪ್ರಾಂಶು ಪಾಲರಾದ ಪ್ರಸಾದಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಸಮಕಾಲೀನ ಸಂದರ್ಭದಲ್ಲಿ ಗಾಂಧಿ ಎಷ್ಟು ಪ್ರಸ್ತುತü ಎಂಬುದನ್ನು ವರ್ತಮಾನದ ವಿದ್ಯಮಾನ ಗಳ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಪರಿಚ ಯಿಸಿದರು. ಗಾಂಧಿಯವರ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಪಡೆಯಬೇಕಾದ…
ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವು
October 6, 2018ಮೈಸೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ್ದು, ಈ ಸಂಬಂಧ ಕಟ್ಟಡದ ಮಾಲೀಕ ಹಾಗೂ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ. ನಂಜನಗೂಡು ತಾಲೂಕು, ಹುಲ್ಲಹಳ್ಳಿ ಸಮೀಪದ ಚಿಲಕಹಳ್ಳಿ ಗ್ರಾಮದ ಕೃಷ್ಣಮೂರ್ತಿ(28) ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಕಾರ್ಮಿಕ. ಮೈಸೂರಿನ ಬೋಟಿ ಬಜಾರ್ ರಸ್ತೆ, ಮನ್ನಾರ್ಸ್ ಮಾರ್ಕೆಟ್ ಹಿಂಭಾಗ ನಿರ್ಮಾಣ ಹಂತದ ಕಟ್ಟಡದ 3ನೇ ಮಹಡಿಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಯಲ್ಲಿ…
ಮನೆಗಳ್ಳನಿಂದ 6 ಲಕ್ಷ ರೂ. ಚಿನ್ನಾಭರಣ ವಶಕ್ಕೆ
October 6, 2018ಮೈಸೂರು: ಮನೆಯೊಂದರಲ್ಲಿ 6 ಲಕ್ಷ ರೂ., ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಖದೀಮನನ್ನು ಸಿಸಿಬಿ ಪೊಲೀಸರು ಬಂಧಿಸಿ, ಈತನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ನಿವಾಸಿ ಎಲ್.ವೆಂಕಟೇಶ್ ಅಲಿಯಾಸ್ ಲಾಂಗ್ ವೆಂಕಟೇಶ(50) ಬಂಧಿತ ವ್ಯಕ್ತಿ. ಅ.4 ರಂದು ಮಹದೇಶ್ವರ ಬೆಟ್ಟದಲ್ಲಿ ಆರೋಪಿ ವೆಂಕಟೇಶ್‍ನನ್ನು ಬಂಧಿಸಿ, ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಮಂಡಿಮೊಹಲ್ಲಾದ ಮನೆಯೊಂದರಲ್ಲಿ 6 ಲಕ್ಷ ರೂ. ಮೌಲ್ಯದ ಬೆಲೆಬಾಳುವ ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ…
ಅಕ್ರಮ ರೀಫಿಲ್ಲಿಂಗ್:7 ಸಿಲಿಂಡರ್ ವಶಕ್ಕೆ
October 6, 2018ಮೈಸೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಈತನಿಂದ 7 ಗ್ಯಾಸ್ ಸಿಲಿಂಡರ್‍ಗಳು, 3,410 ರೂ.,ನಗದು ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೌಸಿಯಾನಗರದ ಸಮೀರ್(28) ಬಂಧಿತ ಆರೋಪಿ. ಈತ ಮಹಮದೀಯ ರಸ್ತೆಯಲ್ಲಿರುವ ಅರಬ್‍ಜಾನ್ ಮಾಲೀಕತ್ವದ ಶೆಡ್‍ನಲ್ಲಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆಯಲ್ಲಿ ತೊಡಗಿದ್ದ. ಅ.4 ರಂದು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಗ್ಯಾಸ್ ರೀಫಿಲ್ಲಿಂಗ್ ಮಾಡಲು ಉಪಯೋಗಿಸುತ್ತಿದ್ದ 7 ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌವ್ ಹಾಗೂ…
33 ಮೊಬೈಲ್ ಕಳವು ಮಾಡಿದ್ದ ಖದೀಮನ ಬಂಧನ
October 6, 2018ಮೈಸೂರು: ಪ್ರತಿಷ್ಠಿತ ಓಪೋ ಮೊಬೈಲ್ ಕಂಪನಿಯ 4.40 ಲಕ್ಷ ರೂ. ಮೌಲ್ಯದ 33 ಮೊಬೈಲ್‍ಗಳನ್ನು ಕಳವು ಮಾಡಿದ್ದ ಖದೀಮನನ್ನು ಎನ್.ಆರ್.ಠಾಣಾ ಪೊಲೀಸರು ಗುರುವಾರ ಬಂಧಿಸಿದ್ಧಾರೆ. ಎನ್.ಆರ್.ಮೊಹಲ್ಲಾದ ಎ.ಜಿ.ಬ್ಲಾಕ್‍ನ ನಿವಾಸಿ ಪುನೀತ್‍ಸಿಂಗ್(23) ಬಂಧಿತ ವ್ಯಕ್ತಿ. ಜೂನ್ 8 ರಂದು ದೀಪೇಶ್‍ಕುಮಾರ್ ಎಂಬುವವರು ಮೈಸೂರಿನ ಮೊಬೈಲ್ ಅಂಗಡಿಗಳಿಗೆ ವಿತರಣೆ ಮಾಡಲು ಪಾಂಡವಪುರದಿಂದ ಮೈಸೂರಿಗೆ ಓಪೋ ಕಂಪನಿಯ ಒಟ್ಟು 33 ಮೊಬೈಲ್‍ಗಳಿದ್ದ 2 ಬಾಕ್ಸ್‍ಗಳನ್ನು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಕಳುಹಿಸಿದ್ದರು. ಆದರೆ, ಪುನೀತ್‍ಸಿಂಗ್ ಈ ಬಾಕ್ಸ್‍ಗಳನ್ನು ತಮ್ಮದೆಂದು ಬಸ್ ಚಾಲಕನ ಬಳಿ ಸುಳ್ಳು…