ಮೈಸೂರು: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ 2018ರ ಮೈಸೂರು ದಸರಾ ಮಹೋತ್ಸವದ ಲಾಂಛನದಲ್ಲಿ ಬದಲಾವಣೆ ಇಲ್ಲ ಎಂದು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಅಂಬಾರಿ ಹೊತ್ತ ಆನೆಯ ಚಿತ್ರವುಳ್ಳ ದಸರಾ ಮಹೋತ್ಸವದ ಲಾಂಛನವನ್ನು ಕಳೆದ ಬಾರಿಯ ಮಹೋತ್ಸವ ಸಂದರ್ಭ ಶಾಶ್ವತ ಲೋಗೋವನ್ನಾಗಿ ರೂಪಿಸಿ, ಅಂತಿಮಗೊಳಿಸಲಾಗಿದೆ. ಆ ಲೋಗೋ ನೋಡಿದ ತಕ್ಷಣ ಜನರಲ್ಲಿ ಮೈಸೂರು ದಸರಾ ಪರಿಕಲ್ಪನೆ ಮೂಡಬೇಕೆಂಬುದೇ ಅದರ ಉದ್ದೇಶ ಎಂದು ತಿಳಿಸಿದರು. ಪ್ರತಿ ವರ್ಷ ಲೋಗೋ ಬದಲಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು,…
ನಂದಮೂರಿ ಹರಿಕೃಷ್ಣ ದುರ್ಮರಣ
August 30, 2018ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರ, ಚಿತ್ರನಟ ನಂದಮೂರಿ ಹರಿಕೃಷ್ಣ ಅವರು ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದ ಭೀಕರ ಅಪ ಘಾತದಲ್ಲಿ ಮೃತಪಟ್ಟಿದ್ದಾರೆ. ಹರಿಕೃಷ್ಣ ಅವರು ತಮ್ಮ ಅಭಿ ಮಾನಿಯ ಪುತ್ರನ ವಿವಾಹಕ್ಕೆ ಹೋಗಲು ಇಂದು ಬೆಳಿಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್‍ನಿಂದ ನಲ್ಲೂರು ಜಿಲ್ಲೆಗೆ ಕಾರಿನಲ್ಲಿ ಹೊರಟಿದ್ದರು. 61 ವರ್ಷ ವಯಸ್ಸಿನ ಅವರು, ಸ್ವತಃ ತಾವೇ ಕಾರು ಚಾಲನೆ ಮಾಡುತ್ತಿದ್ದರು. ಕಾರು ರಾಷ್ಟ್ರೀಯ ಹೆದ್ದಾರಿ-65ರ ನಲ್ಕೊಂಡಾ ಜಿಲ್ಲೆ ಅನ್ನೇಪರ್ಟಿ…
ಗ್ರಾಪಂ ಸದಸ್ಯನ ಬರ್ಬರ ಹತ್ಯೆ
August 30, 2018ಹುಣಸೂರು: ಹಾಡ ಹಗಲೇ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಣಸೂರು ತಾಲೂಕು ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿ ಇಂದು ಬೆಳಿಗ್ಗೆ ನಡೆದಿದ್ದು, ವಿವಾಹಿತ ಯುವತಿ ನಾಪತ್ತೆ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಲೂಕಿನ ಕರಿಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಕುಟ್ಟವಾಡಿ ಗ್ರಾಮದ ನಾಗರಾಜು (35) ಹತ್ಯೆಗೀಡಾದವರಾ ಗಿದ್ದು, ಇವರು ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿ ಶಾಮಿಯಾನ ಅಂಗಡಿ ನಡೆಸುತ್ತಿದ್ದರು. ಇಂದು ಬೆಳಿಗ್ಗೆ 11 ಗಂಟೆ ಸುಮಾರಿನಲ್ಲಿ ನಾಗರಾಜು ತನ್ನ…
ಕೊಡಗಲ್ಲಿ 2 ಬಾರಿ ಲಘು ಭೂಕಂಪ: ಭೂಕಂಪನ ಮಾಪನದಲ್ಲಿ ದಾಖಲು
August 30, 2018ಮಡಿಕೇರಿ: ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಅಳವಡಿಸಿರುವ ‘ಸಿಸ್ಮೋಮೀಟರ್’ ಮಾಪಕ 2 ಬಾರಿ ಭೂಮಿ ಕಂಪಿಸಿರುವ ದತ್ತಾಂಶವನ್ನು ದಾಖಲಿಸಿದೆ. ಆ.27 ಮತ್ತು 28ರಂದು ಗಾಳಿಬೀಡು, ಕಾಲೂರು, ಸಂಪಾಜೆ ಗ್ರಾಮಗಳ ವ್ಯಾಪ್ತಿಯಲ್ಲಿ ಅತೀ ಕಡಿಮೆ ತೀವ್ರತೆಯ ಕಂಪನವಾಗಿ ರುವ ಕುರಿತು ಹೈದರಾಬಾದ್‍ನಲ್ಲಿರುವ ನ್ಯಾಷನಲ್ ಜಿಯೋಲಾಜಿಕಲ್ ಫಿಸಿಕ್ಸ್ ರಿಸರ್ಚ್ ಸಂಸ್ಥೆ ದೃಢಪಡಿಸಿದೆ. ಈ ಕುರಿತು ಎನ್‍ಜಿ ಆರ್‍ಐ ಸಂಸ್ಥೆಯ ಹಿರಿಯ ಡಾ.ರಾಘವನ್ ನವೋದಯ ಶಾಲೆಯ ಪ್ರಾಂಶುಪಾಲರಿಗೂ ಮಾಹಿತಿ ನೀಡಿದ್ದಾರೆ. ಭೂಮಿಯ ಆಳದಲ್ಲಿ ಶಿಲಾಪದರ ಪಲ್ಲಟವಾದ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿರುವ ಬಗ್ಗೆ…
ಮೇಕ್ ಇನ್ ಇಂಡಿಯಾದಿಂದ ಮಾಹಿತಿ ತಂತ್ರಜ್ಞಾನ ಪ್ರಗತಿಗೆ ನಾಂದಿ ಹಾಡಿದೆ
August 30, 2018ರಾಣೆ(ಮದ್ರಾಸ್) ಉಪಾಧ್ಯಕ್ಷ(ಕಾರ್ಯಾಚರಣೆ) ಸತೀಶ್‍ಕುಮಾರ್ ಅಭಿಮತ ಇದು ತಳಮಟ್ಟದವರಿಗೆ ಉದ್ಯೋಗಾವಕಾಶವನ್ನು ಸ್ಥಾಪಿಸಿದೆ ಮೈಸೂರು: – ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನವು ಸಮಾಜದ ತಳಮಟ್ಟದವರಿಗೆ ಉದ್ಯೋಗಾವಕಾಶ ದೊರೆಯುವಂತೆ ಮಾಡಿದ್ದು, ಅದೇ ರೀತಿ ಡಿಜಿಟಲ್ ಇಂಡಿಯಾ ಮಾಹಿತಿ ತಂತ್ರಜ್ಞಾನದ ಪ್ರಗತಿಗೆ ನಾಂದಿ ಹಾಡಿದೆ ಎಂದು ರಾಣೆ (ಮದ್ರಾಸ್) ಲಿಮಿಟೆಡ್ ಕಂಪನಿಯ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಡಿ.ಸತೀಶ್ ಕುಮಾರ್ ಹೇಳಿದರು. ಮೈಸೂರು ವಿವಿಯ ಸಾಮಾಜಿಕ ಹೊರಗುಳಿವಿಕೆ ಹಾಗೂ ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ (ಸಿಎಸ್‍ಎಸ್‍ಇಐಪಿ) ವತಿಯಿಂದ ವಿವಿಯ ವಿಜ್ಞಾನ ಭವನದ…
ನೌಕರರಿಗೆ ಕಡ್ಡಾಯ ಮತದಾನಕ್ಕೆ ಅನುವು ಮಾಡಿಕೊಡಲು ಹೊಟೇಲು ಮಾಲೀಕರ ಸಂಘ ಸೂಚನೆ
August 30, 2018ಮೈಸೂರು: ನಾಳೆ (ಶುಕ್ರವಾರ) ನಡೆಯಲಿರುವ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನೌಕರರಿಗೆ ಕಡ್ಡಾಯವಾಗಿ ಮತ ಚಲಾಯಿ ಸಲು ಅನುವು ಮಾಡಿಕೊಟ್ಟು, ಮತದಾನದ ಬಗ್ಗೆ ಅರಿವು ಮೂಡಿಸಲು ಗಮ್ ಸ್ಟಿಕ್ಕರ್ ಅನ್ನು ಹೊಟೇಲುಗಳ ಮುಂದೆ ಎಲ್ಲರಿಗೂ ಕಾಣುವ ರೀತಿಯಲ್ಲಿ ಪ್ರದ ರ್ಶಿಸುವಂತೆ ಹೊಟೇಲು ಮಾಲೀಕರ ಸಂಘ ತನ್ನ ಸದಸ್ಯರಿಗೆ ತಿಳಿಸಿದೆ. ಮತದಾನ ದಿನದಂದು ಎಲ್ಲಾ ನೌಕರರಿಗೆ ಕಡ್ಡಾಯವಾಗಿ ಮತ ಚಲಾಯಿಸುವುದಕ್ಕೆ ಅನುವು ಮಾಡಿಕೊಡಲು ಸರ್ಕಾರದ ಚುನಾವಣಾ ಆಯೋಗವು ಕಾರ್ಮಿಕ ಇಲಾಖೆಯ ವತಿಯಿಂದ ಸುತ್ತೋಲೆ ಹೊರಡಿಸಿದ್ದು, ಅದನ್ನು ಎಲ್ಲಾ ಹೊಟೇಲ್ ಮಾಲೀಕರಿಗೂ…
ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಕುಮಾರಸ್ವಾಮಿ ಅವರಿಗೆ ಸೆ.1ರಂದು ಬ್ರಾಹ್ಮಣ ಮಹಾಸಭಾದಿಂದ ಗೌರವ
August 30, 2018ಮೈಸೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಾರಣರಾದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವರನ್ನು ಸೆಪ್ಟೆಂಬರ್ 1ರಂದು ಮಧ್ಯಾಹ್ನ 3.30 ಗಂಟೆಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಸನ್ಮಾ ನಿಸಲಾಗುವುದು ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ನಟರಾಜ್ ಜೋಯಿಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ…
ಸೆ.8, 9ರಂದು ಮೈಸೂರಲ್ಲಿ ರಾಜ್ಯಮಟ್ಟದ ಮೌಂಟೆನ್ ಸೈಕ್ಲಿಂಗ್ ಚಾಂಪಿಯನ್‍ಶಿಪ್
August 30, 2018ಸೆ.2ರಂದು ಜಿಲ್ಲಾ ಮಟ್ಟದ ಆಯ್ಕೆಯ ಸೈಕ್ಲಿಂಗ್ ಪಂದ್ಯಾವಳಿ ಮೈಸೂರು: ಮೈಸೂರು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಸೆ.8 ಮತ್ತು 9ರಂದು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ 14ನೇ ರಾಜ್ಯಮಟ್ಟದ ಮೌಂಟೆನ್ ಬೈಕ್ (ಸೈಕ್ಲಿಂಗ್) ಚಾಂಪಿಯನ್‍ಶಿಪ್- 2018-19 ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‍ನ ಮುಖ್ಯಸ್ಥ ನಾಗರಾಜ್ ವೇಣು ಗೋಪಾಲ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಈ ಸೈಕ್ಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 250ಕ್ಕೂ ಹೆಚ್ಚು…
ಗೂಗಲ್ ಗುರುವಿನ ಸ್ಥಾನ ತುಂಬದು
August 29, 2018ಮೈಸೂರು: ವಿಶ್ವಕ್ಕೇ ಮಾದರಿಯಾಗಿದ್ದ ಗುರುಕುಲ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಮರು ಸ್ಥಾಪಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲೆ, ಸುತ್ತೂರು ಶ್ರೀಕ್ಷೇತ್ರ ದಲ್ಲಿ ಇಂದು ಆಯೋಜಿಸಿದ್ದ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋ ತ್ಸವ ಹಾಗೂ ಶ್ರೀ ಚೆನ್ನವೀರ ದೇಶಿಕೇಂದ್ರ ಗುರುಕುಲ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಗುರು ಕುಲ ಮಾದರಿ ಶಿಕ್ಷಣ ಹಾಸುಹೊಕ್ಕಾಗಿತ್ತು….
ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಈ ಬಾರಿ ಮೈಸೂರು ದಸರಾಗೆ ಚಾಲನೆ
August 29, 2018ಮೈಸೂರು: ಈ ಬಾರಿ ಪ್ರವಾಸೋದ್ಯಮ ಕೇಂದ್ರಿತ, ಸಾಂಪ್ರದಾಯಿಕ ದಸರಾ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಸಾಮಾಜಿಕ ಕಳಕಳಿ ಹೊಂದಿರುವ ಲೇಖಕಿ, ಶಿಕ್ಷಣ ತಜ್ಞೆ ಹಾಗೂ ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರನ್ನು ಆಹ್ವಾನಿಸಲಾಗುವುದು ಎಂದರು. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಗಳವಾರ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2018ರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಿಂದ ಕೊಡಗು ಜಿಲ್ಲೆಯಲ್ಲಿ ಅನಾಹುತ ಸಂಭವಿಸಿ,…