ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಿಗೆ ಆ.31ರಂದು ನಡೆ ಯಲಿರುವ ಚುನಾವಣೆಗೆ ನಾಳೆ(ಆ.29) ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ಕಣದಲ್ಲಿರುವ 393 ಅಭ್ಯರ್ಥಿಗಳು ನಂತರ ಮನೆ ಮನೆಗೆ ತೆರಳಿ ಮತಯಾಚಿಸಬಹುದು. ಇದುವರೆಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ, ತೆರೆದ ವಾಹನ ಗಳಲ್ಲಿ ರೋಡ್‍ಶೋ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಒಳಗೊಂಡಂತೆ ಕಣದಲ್ಲಿ ರುವ ಪಕ್ಷೇತರ ಅಭ್ಯರ್ಥಿಗಳು ಬುಧ ವಾರದಿಂದ ಏಕಾಂಗಿಯಾಗಿ ಮತಯಾಚಿಸ ಬೇಕಾಗಿದೆ. ಕರ್ನಾಟಕ ಪೌರ…
ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅಪಹರಣ ಪ್ರಕರಣ ನಾಲ್ವರ ಬಂಧನ
August 29, 2018ಕೆ.ಆರ್.ಪೇಟೆ: ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಸ್ಟೋರ್ ಕೀಪರ್ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಸಾಲಿಗ್ರಾಮ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕು ಶೀಳನೆರೆ ಗ್ರಾಮದವನಾಗಿ ರುವ ರೈಲ್ವೆ ಇಲಾಖೆ ಸ್ಟೋರ್ ಕೀಪರ್ ಕೆ.ಎನ್. ಯೋಗೇಂದ್ರ(30) ಮೂಲತಃ ಶೀಳನೆರೆ ಗ್ರಾಮದ ವನೇ ಆಗಿದ್ದು, ಮೈಸೂರಿನ ಕಾರ್ಖಾನೆಯೊಂದರ ನೌಕರ ಎಸ್.ಎನ್.ದೀಪು ಅಲಿಯಾಸ್ ದೀಪಕ್ (29) ಮೂಲತಃ ಕೆ.ಆರ್.ಪೇಟೆಯ ಮುಸ್ಲಿಂ ಬ್ಲಾಕ್ ನಿವಾಸಿಯಾಗಿದ್ದು, ಬೆಂಗಳೂರು ಮಾಗಡಿ ರಸ್ತೆಯ ಹೋಟೆಲ್‍ವೊಂದರಲ್ಲಿ ಕ್ಯಾಪ್ಟನ್ ಆಗಿರುವ ಎಂ.ಎನ್.ಸೋಮಶೇಖರ್ ಅಲಿಯಾಸ್…
ಮಡಿಕೇರಿ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆ
August 29, 2018ಮಡಿಕೇರಿ: ಈಗಾಗಲೇ ಪ್ರಕೃತಿ ವಿಕೋಪದ ಅನಾಹುತಗಳಿಗೆ ಸಾಕ್ಷಿಯಾಗಿ ದುಗುಡದಲ್ಲಿ ಮುಳುಗಿ ರುವ ಮಡಿಕೇರಿ ಮತ್ತು ಸುತ್ತಮುತ್ತ ಇದೀಗ ಗುಡುಗು ಸಹಿತ ಭಾರೀ ಮಳೆ ಸುರಿಯಲಾರಂಭಿಸಿದೆ. ಈಗಾಗಲೇ ಭೂ ಕುಸಿತದಿಂದ ಕಂಗಾಲಾಗಿರುವ ಮಡಿಕೇರಿ ನಗರದ ಬೆಟ್ಟ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಮಡುಗಟ್ಟಿದೆ. ನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಭೂಮಿ ಬಿರುಕು ಬಿಟ್ಟಿರುವ ಪ್ರದೇಶಗಳಿದ್ದು, ಮತ್ತಷ್ಟು ವಿಕೋಪಗಳು ಸಂಭವಿಸುವ ಲಕ್ಷಣಗಳು ಗೋಚರಿಸುತ್ತಿವೆ. ಬೆಟ್ಟಗುಡ್ಡ ಪ್ರದೇಶಗಳ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆಯೇ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಅಳಿದುಳಿದ ಮನೆಗಳು…
ತಿ.ನರಸೀಪುರದಲ್ಲಿ ಪ್ರಚಾರದ ಭರಾಟೆ ಜೋರು ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು
August 29, 2018ತಿ.ನರಸೀಪುರ: ಪುರಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪಟ್ಟಣದಾದ್ಯಂತ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು ನಡೆಸಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕರು, ಮುಖಂಡರು ವಿವಿಧೆಡೆ ಮತಯಾಚನೆ ಮಾಡಿದರು. ಪಟ್ಟಣದ ಹಳೇ ತಿರುಮಕೂಡಲಿನಿಂದ ಶಾಸಕ ಎಂ.ಅಶ್ವಿನ್‍ಕುಮಾರ್ ಚುನಾವಣಾ ಪ್ರಚಾರವನ್ನು ಆರಂಭಿಸಿ ವಾರ್ಡ್ 1ರ ಜೆಡಿಎಸ್ ಅಭ್ಯರ್ಥಿ ಸೌಮ್ಯ, 2ನೇ ವಾರ್ಡ್ ಅಭ್ಯರ್ಥಿ ಸಿದ್ದು(ಸಿಸ್ಟಮ್), ವಾರ್ಡ್ 3ರ ಅಭ್ಯರ್ಥಿ ಬಿ.ಉಮಾ, ವಾರ್ಡ್ 4ರ ಎಂ.ರಮೇಶ್, 5ನೇ ವಾರ್ಡ್ ಅಭ್ಯರ್ಥಿ ಟಿ.ಎಸ್.ಚಂದನ್ (ಹರೀಶ) ಅವರ ಪರ…
ಆ.31ಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
August 28, 2018ಆ.29ರ ಬೆಳಿಗ್ಗೆ 7 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯ ಆ.30ರಂದು ಮೈಸೂರಿನ 4 ಕೇಂದ್ರಗಳಲ್ಲಿ ಮಸ್ಟರಿಂಗ್ ಆ.31ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ಸೆ.3ರಂದು ಮಹಾರಾಣಿ ವಾಣಿಜ್ಯ ಕಾಲೇಜು ಕಟ್ಟಡದಲ್ಲಿ ಮತ ಎಣಿಕೆ ಮೈಸೂರು ನಗರದಲ್ಲಿ 815 ಮತಗಟ್ಟೆ, 7,98,673 ಮತದಾರರು ಮೈಸೂರು: ಆಗಸ್ಟ್ 31ರಂದು ನಡೆಯಲಿರುವ ಮೈಸೂರು ಮಹಾ ನಗರ ಪಾಲಿಕೆ ಚುನಾವಣೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಯಂತೆ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದು, ಅಭ್ಯರ್ಥಿಗಳ ಹೆಸರಿನ ಜೊತೆಗೆ…
ಮೈಸೂರಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು
August 28, 2018ಮೈಸೂರು: ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಮೈಸೂರಿಗೆ ಆಗಮಿಸಿದರು. ದೆಹಲಿಯಿಂದ ಇಂಡಿಯನ್ ಏರ್‍ಫೋರ್ಸ್ ವಿಶೇಷ ವಿಮಾನದಲ್ಲಿ ಆಗಮಿಸಿದ ಉಪರಾಷ್ಟ್ರಪತಿಗಳನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೇಯರ್ ಬಿ. ಭಾಗ್ಯವತಿ ಅವರು ಪುಷ್ಪಗುಚ್ಛ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಐಜಿಪಿ ಶರತ್‍ಚಂದ್ರ, ನಗರ ಪೊಲೀಸ್ ಕಮೀಷ್ನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್, ಜೆಎಸ್‍ಎಸ್ ವಿದ್ಯಾಪೀಠದ ಎಕ್ಸಿಕ್ಯೂಟಿವ್ ಸೆಕ್ರೆಟರಿ ಡಾ. ಸಿ.ಜಿ. ಬೆಟಸೂರ ಮಠ ಸೇರಿದಂತೆ ಹಲವರು…
ಕೊಡಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನೀರವ ಮೌನ
August 28, 2018ಮಡಿಕೇರಿ: ಧಾರಾಕಾರ ಮಳೆ, ಭೂಕುಸಿತದಂತಹ ಭಾರೀ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯ ವಿವಿಧೆಡೆ ಶಾಲಾ-ಕಾಲೇಜುಗಳು ಆರಂಭವಾದರೂ ಒಂದು ರೀತಿಯ ನೀರವ ಮೌನ. ಜೊತೆಗೆ ಆತಂಕ. ಲವ ಲವಿಕೆಯಿಂದ ಇರಬೇಕಾದ ವಿದ್ಯಾರ್ಥಿಗಳಲ್ಲಿ ಭಯ ಹಾಗೂ ದುಃಖ ಮನೆ ಮಾಡಿದೆ. ಜಿಲ್ಲೆಯಾದ್ಯಂತ ಈಗಾಗಲೇ ಶಾಲೆಗಳು ಆರಂಭವಾಗಿ ಮೂರ್ನಾಲ್ಕು ದಿನ ಕಳೆದಿದೆ. ಕೆಲವು ಪದವಿ ಪೂರ್ವ ಕಾಲೇಜುಗಳಲ್ಲಿ ಇಂದಿನಿಂದ ತರಗತಿಗಳು ಆರಂಭವಾಗಿವೆ. ಸುಮಾರು 21 ದಿನಗಳ ಬಳಿಕ ಆರಂಭ ವಾದ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಮನೆ ಕಳೆದುಕೊಂಡ ಕುಟುಂಬದ…
ಇಂದು ಮೈಸೂರಲ್ಲಿ ಸಿಎಂ ಪ್ರವಾಸ
August 28, 2018ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ (ಮಂಗಳವಾರ) ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳು ಇಂದು ಮಧ್ಯರಾತ್ರಿಯೇ ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ಮೂಲಕ ಪ್ರಯಾಣ ಆರಂಭಿಸಿದರು. ಬೆಳಿಗ್ಗೆ 10 ಗಂಟೆಗೆ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವ ಮತ್ತು ಶ್ರೀ ಚನ್ನವೀರ ದೇಶಿಕೇಂದ್ರ ಗುರುಕುಲ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಬೆಳಿಗ್ಗೆ 11.45ಕ್ಕೆ ಶ್ರೀ ಕ್ಷೇತ್ರ ಸುತ್ತೂರಿನಿಂದ ರಸ್ತೆ ಮೂಲಕ ಮೈಸೂರಿಗೆ ಆಗಮಿಸುವರು. ಮಧ್ಯಾಹ್ನ 12.15 ಗಂಟೆಗೆ ಹೆಬ್ಬಾಳ ಇಂಡಸ್ಟ್ರೀಯಲ್…
ರಾಜ್ಯದಲ್ಲಿ ಮಳೆ ಹಾನಿಯ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ
August 28, 2018ಬೆಂಗಳೂರು: ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದ ಭಾರೀ ಮಳೆಯಿಂದ ಉಂಟಾಗಿ ರುವ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ, ಶಿವ ಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಸುಮಾರು 800 ಮನೆಗಳು…
ಕೊಡಗಿನ ನೆರೆ ಸಂತ್ರಸ್ತರಿಗೆ ಪ್ರತ್ಯೇಕ ವಸತಿ ನೀತಿ ಜಾರಿ
August 28, 2018ಬೆಂಗಳೂರು: ಮಳೆ-ನೆರೆಯಿಂದ ಸೂರು ಕಳೆದುಕೊಂಡ ಕೊಡ ಗಿನ ಸಂತ್ರಸ್ತರಿಗೆ ಶಾಶ್ವತ ವಸತಿ ಕಲ್ಪಿಸಲು ಪ್ರತ್ಯೇಕ ವಸತಿ ನೀತಿ ಜಾರಿಗೊಳಿಸಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳೆದು ಕೊಂಡ 758 ಕುಟುಂಬಗಳಿಗೆ ದೇಶದಲ್ಲೇ ಮಾದರಿಯಾದ ವಸತಿಗಳನ್ನು ನಿರ್ಮಿಸಲಾಗುವುದು ಎಂದರು. ಈಗಾಗಲೇ ಸೂರು ಕಲ್ಪಿಸುವ ಉದ್ದೇಶದಿಂದ 42 ಎಕರೆ ಭೂಮಿ ಗುರುತಿಸಲಾಗಿದೆ, ಕುಟುಂಬದ ಜನಸಂಖ್ಯೆಗೆ ಅನು ಗುಣವಾಗಿ 1-2-3 ಕೊಠಡಿಗಳ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಬಡಾವಣೆಗಳಿಗೆ ಕುಡಿಯುವ ನೀರು,…









