ಇಂದು ಮೈಸೂರಲ್ಲಿ ಸಿಎಂ ಪ್ರವಾಸ
ಮೈಸೂರು

ಇಂದು ಮೈಸೂರಲ್ಲಿ ಸಿಎಂ ಪ್ರವಾಸ

August 28, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ (ಮಂಗಳವಾರ) ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಇದಕ್ಕಾಗಿ ಮುಖ್ಯಮಂತ್ರಿಗಳು ಇಂದು ಮಧ್ಯರಾತ್ರಿಯೇ ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ಮೂಲಕ ಪ್ರಯಾಣ ಆರಂಭಿಸಿದರು. ಬೆಳಿಗ್ಗೆ 10 ಗಂಟೆಗೆ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವ ಮತ್ತು ಶ್ರೀ ಚನ್ನವೀರ ದೇಶಿಕೇಂದ್ರ ಗುರುಕುಲ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.

ಬೆಳಿಗ್ಗೆ 11.45ಕ್ಕೆ ಶ್ರೀ ಕ್ಷೇತ್ರ ಸುತ್ತೂರಿನಿಂದ ರಸ್ತೆ ಮೂಲಕ ಮೈಸೂರಿಗೆ ಆಗಮಿಸುವರು. ಮಧ್ಯಾಹ್ನ 12.15 ಗಂಟೆಗೆ ಹೆಬ್ಬಾಳ ಇಂಡಸ್ಟ್ರೀಯಲ್ ಏರಿಯಾ ಜೆ.ಕೆ. ಟೈರ್ ಸಂಸ್ಥೆಯ ಆವರಣದಲ್ಲಿ ಹರಿಶಂಕರ್ ಸಿಂಘಾನಿಯ ಗ್ಲೋಬಲ್ ಸಂಶೋಧನೆ ಮತ್ತು ತಾಂತ್ರಿಕ ಕೇಂದ್ರ ಹಾಗೂ ಹರಿಶಂಕರ್ ಸಿಂಘಾನಿಯ ಎಲಸ್ಫೋಮರ್ ಮತ್ತು ಟೈರ್ ಸಂಶೋಧನಾ ಕೇಂದ್ರದ ‘ಬೆಳ್ಳಿ ಹಬ್ಬ’ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.30 ಗಂಟೆಗೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಡಹಬ್ಬ ಮೈಸೂರು ದಸರಾ ಆಚರಣೆ-2018 ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ ನಂತರ ಸಂಜೆ 4.45 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.

Translate »