ಇಂದು ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಇಂದು ಬಹಿರಂಗ ಪ್ರಚಾರಕ್ಕೆ ತೆರೆ

August 29, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಿಗೆ ಆ.31ರಂದು ನಡೆ ಯಲಿರುವ ಚುನಾವಣೆಗೆ ನಾಳೆ(ಆ.29) ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ಕಣದಲ್ಲಿರುವ 393 ಅಭ್ಯರ್ಥಿಗಳು ನಂತರ ಮನೆ ಮನೆಗೆ ತೆರಳಿ ಮತಯಾಚಿಸಬಹುದು.

ಇದುವರೆಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ, ತೆರೆದ ವಾಹನ ಗಳಲ್ಲಿ ರೋಡ್‍ಶೋ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ನಡೆಸುತ್ತಿದ್ದ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಒಳಗೊಂಡಂತೆ ಕಣದಲ್ಲಿ ರುವ ಪಕ್ಷೇತರ ಅಭ್ಯರ್ಥಿಗಳು ಬುಧ ವಾರದಿಂದ ಏಕಾಂಗಿಯಾಗಿ ಮತಯಾಚಿಸ ಬೇಕಾಗಿದೆ. ಕರ್ನಾಟಕ ಪೌರ ನಿಗಮ ಗಳ ಅಧಿನಿಯಮ 1976ರ ಪ್ರಕರಣ 41ರಂತೆ ಮತದಾನ ಆರಂಭಕ್ಕೆ 48 ಗಂಟೆ ಮುನ್ನ ಬಹಿರಂಗ ಪ್ರಚಾರ ನಿರ್ಬಂಧಿಸ ಲಾಗಿದ್ದು, ಈ ಸಂಬಂಧ ಚುನಾವಣಾ ಆಯೋಗ ಬೆಂಬಲಿಗರೊಂದಿಗೆ ಪಾದ ಯಾತ್ರೆ ನಡೆಸುವುದು, ಸಭೆ, ಸಮಾ ರಂಭ ನಡೆಸುವುದು, ಅಥವಾ ಹೊರಗಿನ ವ್ಯಕ್ತಿಗಳೊಂದಿಗೆ ಮತ ಯಾಚಿಸುವು ದನ್ನು ನಿಷೇಧಿಸಲಾಗಿದೆ.

ಇದುವರೆಗೆ ವಾಹನಗಳಲ್ಲಿ ಧ್ವನಿ ವರ್ಧಕದ ಮೂಲಕ ಮತದಾರರನ್ನು ಸೆಳೆಯಲು ಭಾರೀ ಸದ್ದು ಮಾಡಿ ಕಿರಿಕಿರಿ ಯನ್ನುಂಟು ಮಾಡುತ್ತಿದ್ದ ಅಭ್ಯರ್ಥಿಗಳ ಸದ್ದಿಗೆ ನಾಳೆ ಬೆಳಗಿನಿಂದ ಬ್ರೇಕ್ ಬೀಳ ಲಿದೆ. ಅಲ್ಲದೆ ಪಟಾಕಿ ಸಿಡಿ ಸುವುದು, ಆರ್ಭಟಿಸುವ ಸಂಗೀತ ಮೊಳಗಿಸುವುದು, ಡೊಳ್ಳು, ನಗಾರಿಯೊಂದಿಗೆ ಮೆರವಣಿಗೆ ನಡೆಸುವುದಕ್ಕೆ ಅವಕಾಶ ಇಲ್ಲದೆ ಇರು ವುದರಿಂದ ನಾಗರಿಕರು ನಿಟ್ಟುಸಿರು ಬಿಡು ವಂತಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ಕೈಗೊಳ್ಳುವುದಾಗಿ ಚುನಾವಣಾಧಿಕಾರಿಗಳು ಎಚ್ಚರಿಸಿದ್ದಾರೆ. ಮೈಸೂರು ನಗರ ಪಾಲಿಕೆಯ 65 ವಾರ್ಡ್‍ಗಳಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಬಿರುಸಿನ ಪ್ರಚಾರ ನಡೆಸಿದ್ದರು. ಮೂರು ಪಕ್ಷಗಳು ಈ ಬಾರಿ ಸ್ವತಂತ್ರವಾಗಿ ಪಾಲಿಕೆಯ ಗದ್ದುಗೆ ಹಿಡಿಯಬೇಕೆಂಬ ಪಣ ತೊಟ್ಟಿದ್ದು, ಮೂರು ಪಕ್ಷಗಳ ಹಿರಿಯ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಆದರೆ ನಾಳೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಪ್ರಚಾರದ ಕಾವು ಇಳಿಮುಖವಾಗಲಿದೆ. ಕಳೆದ ಒಂದು ವಾರದಿಂದ ಅಬ್ಬರದ ಪ್ರಚಾರದಿಂದ ಕಂಗೆಟ್ಟಿದ್ದ ಸ್ಥಳೀಯರಿಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿರುವುದು ಸಮಾಧಾನ ತಂದಿದೆ.

Translate »