ಮೈಸೂರಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು
ಮೈಸೂರು

ಮೈಸೂರಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು

August 28, 2018

ಮೈಸೂರು: ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಮೈಸೂರಿಗೆ ಆಗಮಿಸಿದರು. ದೆಹಲಿಯಿಂದ ಇಂಡಿಯನ್ ಏರ್‍ಫೋರ್ಸ್ ವಿಶೇಷ ವಿಮಾನದಲ್ಲಿ ಆಗಮಿಸಿದ ಉಪರಾಷ್ಟ್ರಪತಿಗಳನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೇಯರ್ ಬಿ. ಭಾಗ್ಯವತಿ ಅವರು ಪುಷ್ಪಗುಚ್ಛ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಐಜಿಪಿ ಶರತ್‍ಚಂದ್ರ, ನಗರ ಪೊಲೀಸ್ ಕಮೀಷ್ನರ್ ಡಾ. ಎ. ಸುಬ್ರಹ್ಮಣ್ಯೇಶ್ವರರಾವ್, ಜೆಎಸ್‍ಎಸ್ ವಿದ್ಯಾಪೀಠದ ಎಕ್ಸಿಕ್ಯೂಟಿವ್ ಸೆಕ್ರೆಟರಿ ಡಾ. ಸಿ.ಜಿ. ಬೆಟಸೂರ ಮಠ ಸೇರಿದಂತೆ ಹಲವರು ವೆಂಕಯ್ಯ ನಾಯ್ಡು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ರಾತ್ರಿ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ಉಪರಾಷ್ಟ್ರಪತಿಗಳು, ನಾಳೆ (ಆ. 28) ಸುತ್ತೂರಿನಲ್ಲಿ ನಡೆಯಲಿರುವ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 103ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 12 ಗಂಟೆಗೆ ಮೈಸೂರು ಮಂಡಕಳ್ಳಿ ವಿಮಾನದಿಂದ ಹೈದರಾಬಾದಿನ ಬೇಗುಂಪೇಟೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವರು.

Translate »