ನಂದಮೂರಿ ಹರಿಕೃಷ್ಣ ದುರ್ಮರಣ
ಮೈಸೂರು

ನಂದಮೂರಿ ಹರಿಕೃಷ್ಣ ದುರ್ಮರಣ

August 30, 2018

ಹೈದರಾಬಾದ್:  ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರ, ಚಿತ್ರನಟ ನಂದಮೂರಿ ಹರಿಕೃಷ್ಣ ಅವರು ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದ ಭೀಕರ ಅಪ ಘಾತದಲ್ಲಿ ಮೃತಪಟ್ಟಿದ್ದಾರೆ.

ಹರಿಕೃಷ್ಣ ಅವರು ತಮ್ಮ ಅಭಿ ಮಾನಿಯ ಪುತ್ರನ ವಿವಾಹಕ್ಕೆ ಹೋಗಲು ಇಂದು ಬೆಳಿಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್‍ನಿಂದ ನಲ್ಲೂರು ಜಿಲ್ಲೆಗೆ ಕಾರಿನಲ್ಲಿ ಹೊರಟಿದ್ದರು. 61 ವರ್ಷ ವಯಸ್ಸಿನ ಅವರು, ಸ್ವತಃ ತಾವೇ ಕಾರು ಚಾಲನೆ ಮಾಡುತ್ತಿದ್ದರು. ಕಾರು ರಾಷ್ಟ್ರೀಯ ಹೆದ್ದಾರಿ-65ರ ನಲ್ಕೊಂಡಾ ಜಿಲ್ಲೆ ಅನ್ನೇಪರ್ಟಿ ಬಳಿಯ ನಾರ್ಕಾಟ್ ಪಲ್ಲಿ ಬಳಿ ಅತೀ ವೇಗವಾಗಿ ತೆರಳುತ್ತಿ ದ್ದಾಗ ಹಿಂಬದಿ ಸೀಟ್‍ನಲ್ಲಿದ್ದ ನೀರಿನ ಬಾಟಲಿಯನ್ನು ಹರಿಕೃಷ್ಣ ತೆಗೆದು ಕೊಳ್ಳಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು ಸುಮಾರು 15 ಅಡಿ ಎತ್ತರಕ್ಕೆ ಚಿಮ್ಮಿ, ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತ ದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಹರಿ ಕೃಷ್ಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯ ಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ಹರಿಕೃಷ್ಣ ಅವರು ಚಾಲನೆ ಮಾಡುತ್ತಿದ್ದ ಕಾರು ಅಪಘಾತದ ವೇಳೆ 160 ಕಿ.ಮೀ.ವೇಗದಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಕಾರು ಎತ್ತರಕ್ಕೆ ಚಿಮ್ಮಿ ಕೆಳಗೆ ಬೀಳುತ್ತಿದ್ದ ವೇಳೆ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಚಾಲಕ ಅದನ್ನು ಗಮನಿಸಿ ತನ್ನ ಕಾರನ್ನು ಎಡ ಬದಿಗೆ ತಿರುಗಿಸಿದ ಪರಿಣಾಮ ಹರಿಕೃಷ್ಣ ಅವರ ಕಾರು ಈ ಕಾರಿನ ಬಲ ಭಾಗದ ಬಾನೆಟ್ ಮೇಲೆ ಬಿತ್ತು ಎಂದು ಹೇಳಲಾಗಿದೆ. ಈ ಕಾರಿನಲ್ಲಿದ್ದ ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹರಿಕೃಷ್ಣ ಕಾರಿನಲ್ಲಿದ್ದ ಅವರ ಸ್ನೇಹಿತ
ಶಿವಾಜಿ ಮತ್ತು 13 ವರ್ಷದ ಬಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಿಕೃಷ್ಣ ಕುಟುಂಬ ದವರು ಫ್ಯಾನ್ಸಿ ನಂಬರ್ ಪ್ರಿಯರಾಗಿದ್ದು, ಹರಿಕೃಷ್ಣ ಅಪಘಾತ ಕ್ಕೀಡಾಗಿದ್ದ ಕಾರಿನ ಸಂಖ್ಯೆ ಎಪಿ 28-ಬಿಡಬ್ಲ್ಯೂ 2323 ಆಗಿದ್ದರೆ, ಈ ಹಿಂದೆ ಅಪಘಾತದಲ್ಲಿ ಮೃತಪಟ್ಟ ಅವರ ಪುತ್ರ ಜಾನಕಿ ರಾಂ ಚಲಿಸುತ್ತಿದ್ದ ಕಾರಿನ ಸಂಖ್ಯೆ ಎಪಿ 29 ಬಿಡಿ 2323 ಆಗಿತ್ತು.

ಹರಿಕೃಷ್ಣ ಅವರ ಭಾವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲುಗು ಚಿತ್ರರಂಗದ ಗಣ್ಯರು ಮೃತ ಹರಿಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಹೈದರಾ ಬಾದ್‍ನಲ್ಲಿರುವ ಹರಿಕೃಷ್ಣ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಮೊಯಿನಾ ಬಾದ್ ನಲ್ಲಿರುವ ಅವರ ತೋಟದಲ್ಲಿ ನಾಳೆ (ಆ.30) ಸಂಜೆ 4 ಗಂಟೆಗೆ ಅವರ ಪುತ್ರನ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸ ಲಾಗುವುದು ಎಂದು ಹೇಳಲಾಗಿದೆ.

Translate »