ಕೊಡಗಲ್ಲಿ 2 ಬಾರಿ ಲಘು ಭೂಕಂಪ: ಭೂಕಂಪನ ಮಾಪನದಲ್ಲಿ ದಾಖಲು
ಮೈಸೂರು

ಕೊಡಗಲ್ಲಿ 2 ಬಾರಿ ಲಘು ಭೂಕಂಪ: ಭೂಕಂಪನ ಮಾಪನದಲ್ಲಿ ದಾಖಲು

August 30, 2018

ಮಡಿಕೇರಿ: ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಅಳವಡಿಸಿರುವ ‘ಸಿಸ್ಮೋಮೀಟರ್’ ಮಾಪಕ 2 ಬಾರಿ ಭೂಮಿ ಕಂಪಿಸಿರುವ ದತ್ತಾಂಶವನ್ನು ದಾಖಲಿಸಿದೆ.

ಆ.27 ಮತ್ತು 28ರಂದು ಗಾಳಿಬೀಡು, ಕಾಲೂರು, ಸಂಪಾಜೆ ಗ್ರಾಮಗಳ ವ್ಯಾಪ್ತಿಯಲ್ಲಿ ಅತೀ ಕಡಿಮೆ ತೀವ್ರತೆಯ ಕಂಪನವಾಗಿ ರುವ ಕುರಿತು ಹೈದರಾಬಾದ್‍ನಲ್ಲಿರುವ ನ್ಯಾಷನಲ್ ಜಿಯೋಲಾಜಿಕಲ್ ಫಿಸಿಕ್ಸ್ ರಿಸರ್ಚ್ ಸಂಸ್ಥೆ ದೃಢಪಡಿಸಿದೆ. ಈ ಕುರಿತು ಎನ್‍ಜಿ ಆರ್‍ಐ ಸಂಸ್ಥೆಯ ಹಿರಿಯ ಡಾ.ರಾಘವನ್ ನವೋದಯ ಶಾಲೆಯ ಪ್ರಾಂಶುಪಾಲರಿಗೂ ಮಾಹಿತಿ ನೀಡಿದ್ದಾರೆ. ಭೂಮಿಯ ಆಳದಲ್ಲಿ ಶಿಲಾಪದರ ಪಲ್ಲಟವಾದ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿರುವ ಬಗ್ಗೆ ನವೋದಯ ಶಾಲೆಯ ಪಾಂಶುಪಾಲರಾದ ಐಸಾಕ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »