ಮೈಸೂರು

ನಿವೇಶನ ಕೊಡುವುದಾಗಿ ಹಣ ಪಡೆದು ವಂಚನೆ: 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮೈಸೂರು

ನಿವೇಶನ ಕೊಡುವುದಾಗಿ ಹಣ ಪಡೆದು ವಂಚನೆ: 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

August 27, 2018

ಮೈಸೂರು: ರಿಯಾಯಿತಿ ಮತ್ತು ಸುಲಭ ಕಂತಿನಲ್ಲಿ ವಿವಿಧ ಬಡಾವಣೆಗಳಲ್ಲಿ ನಿವೇಶನ ಕೊಡುವುದಾಗಿ ಕೋಟ್ಯಾಂತರ ರೂ. ವಂಚಿಸಿ 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ರಾಜೀವ ನಗರದಲ್ಲಿ ಮೈಸೂರು ಹೋಂ ಡೆವಲಪರ್ಸ್ ಎಂಬ ಕಂಪನಿ ನಡೆಸುತ್ತಿದ್ದ ಸಯ್ಯದ್ ನಿಜಾಂ ಅಲಿ ಎಂಬಾತನೇ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಇದೀಗ ಸೆರೆ ಸಿಕ್ಕವ ನಾಗಿದ್ದಾನೆ. ಆರೋಪಿ ಸಯ್ಯದ್ ನಿಜಾಂ ಅಲಿ ಮೈಸೂರು ತಾಲೂಕು, ಕಸಬಾ ಹೋಬಳಿ ಹಾಗೂ ಲಿಂಗಾಂಬುಧಿ ಗ್ರಾಮ, ರಾಜಾಜಿನಗರ ಬಡಾವಣೆ, ಆರ್.ಆರ್. ನಗರದಲ್ಲಿ ರಿಯಾಯಿತಿ…

ಕೊಡಗಿನ ಭೂ ಕುಸಿತ ಪ್ರದೇಶಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ
ಮೈಸೂರು

ಕೊಡಗಿನ ಭೂ ಕುಸಿತ ಪ್ರದೇಶಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ

August 27, 2018

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುವುದು ಪ್ರವಾಸಿಗರ ಜೀವ ಹಾನಿಗೆ ಕಾರಣವಾಗಬಹುದೆಂದು ಪರಿಗಣಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿ ರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ, ಭೂ ಕುಸಿತ ಮತ್ತು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದ್ದು, ಅಪಾಯದ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿನ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ…

ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ: ಶೀಘ್ರದಲ್ಲಿಯೇ ಕಾನೂನು ಜಾರಿ
ಮೈಸೂರು

ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ: ಶೀಘ್ರದಲ್ಲಿಯೇ ಕಾನೂನು ಜಾರಿ

August 27, 2018

ಬೆಂಗಳೂರು: ರಾಜ್ಯದಲ್ಲಿನ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುತ್ತಿದೆ. ವಾಣಿಜ್ಯ ಸಂಸ್ಥೆಗಳು ಮತ್ತು ಇತರ ಸಾರ್ವಜನಿಕ ಘಟಕಗಳ ಹೆಸರು ಕನ್ನಡದಲ್ಲಿಯೇ ಇರಬೇಕು ಎಂಬ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಾಮಾಲಾ ನೇತೃತ್ವದ ಸಮಿತಿ ಕರಡು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಇಂತಹದೊಂದು ಕಾನೂನು ರೂಪಿಸಲಾಗುತ್ತಿದೆ. ಆರಂಭದಲ್ಲಿ ಈ ಕಾರ್ಯ ಕೈಗೊಳ್ಳಲು ಯಾವುದೇ ಇಲಾಖೆ ಸಿದ್ಧವಿರಲಿಲ್ಲ. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರಡು…

ರಫೆಲ್ ಹಗರಣದ ಮೂಲಕ ದೇಶದ ಭದ್ರತಾ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ
ಮೈಸೂರು

ರಫೆಲ್ ಹಗರಣದ ಮೂಲಕ ದೇಶದ ಭದ್ರತಾ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ

August 27, 2018

ಮೈಸೂರು: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಅಸ್ತಿತ್ವಕ್ಕಾಗಿ ರಕ್ಷಣಾ ವ್ಯವಸ್ಥೆಯ ಇತಿಹಾಸದಲ್ಲಿ ರಫೆಲ್‍ನಂತಹ ದೊಡ್ಡ ಹಗರಣ ನಡೆಸುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಸಡಿಲಗೊಳಿಸುವ ಹುನ್ನಾರ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಪಲ್ಲಂ ರಾಜು ಆರೋಪಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಒಪ್ಪಂದವನ್ನು ಗಾಳಿಗೆ ತೂರಿ ಇದೀಗ 40 ಸಾವಿರ ಕೋಟಿ ರೂ.ಗಳ ಹಗರಣ ನಡೆಸುವುದರೊಂದಿಗೆ ಗೌಪ್ಯವಾಗಿಡಬೇಕಾದ ಭದ್ರತಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗಳಿಗೆ…

ಮಾಧ್ಯಮಗಳು ಕ್ಷುಲ್ಲಕ ವಿಚಾರಕ್ಕೆ ಆದ್ಯತೆ ನೀಡಿದರೆ  ಸಮಾಜಕ್ಕೆ ಯಾವುದೇ ಉಪಯೋಗವಾಗಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತ
ಮೈಸೂರು

ಮಾಧ್ಯಮಗಳು ಕ್ಷುಲ್ಲಕ ವಿಚಾರಕ್ಕೆ ಆದ್ಯತೆ ನೀಡಿದರೆ  ಸಮಾಜಕ್ಕೆ ಯಾವುದೇ ಉಪಯೋಗವಾಗಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತ

August 27, 2018

ಮೈಸೂರು:  ಮಾದ್ಯಮಗಳು ಕ್ಷುಲ್ಲಕ ವಿಚಾರಗಳಿಗೆ ಹೆಚ್ಚಿನ ಆಧ್ಯತೆ ನೀಡದೆ ಸಾಮಾಜಿಕ ಕಳಕಳಿಯುಳ್ಳ ವಿಷಯಕ್ಕೆ ಹೆಚ್ಚು ಒತ್ತು ನೀಡಿದರೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಸಭಾಂಗಣಕ್ಕೆ ಭಾನುವಾರ ರಾಜಶೇಖರ ಕೋಟಿ ಸಭಾಂಗಣ ಎಂದು ನಾಮಕರಣ ಮಾಡಿ ಫಲಕವನ್ನು ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, ಪತ್ರಕರ್ತರು ಪತ್ರಿಕಾ ಧರ್ಮವನ್ನು ಎತ್ತಿಹಿಡಿಯಬೇಕು. ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು, ಯಾವುದನ್ನು ವೈಭವೀಕರಿಸಬಾರದು ಎನ್ನುವುದನ್ನು ನಿರ್ಧರಿಸಬೇಕು. ಇತ್ತೀಚಿನ ದಿನಗಳಲ್ಲಿ ಕ್ಷುಲಕ ವಿಚಾರಕ್ಕೆ ಹೆಚ್ಚು…

ಕಲಾವಿದರ ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿಕೆರೆಯ ಸೌಂದರ್ಯದ ಸೊಬಗು
ಮೈಸೂರು

ಕಲಾವಿದರ ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿಕೆರೆಯ ಸೌಂದರ್ಯದ ಸೊಬಗು

August 27, 2018

ಮೈಸೂರು:  ಕಲಾವಿದರ ಕಣ್ಣಲ್ಲಿ ಸೆರೆಯಾದ ಮೈಸೂರಿನ ಕುಕ್ಕರಹಳ್ಳಿಯ ಪ್ರಾಕೃತಿಕ ಸೌಂದರ್ಯದ ರಮಣೀಯ ದೃಶ್ಯಾವಳಿಗಳು ಆ ಕಲಾವಿದರ ಕುಂಚದಲ್ಲಿ ಪ್ರತಿಬಿಂಬವಾಗಿ ಮನಸೂರೆಗೊಂಡವು. ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ (ಕಾವಾ), ವೈಲ್ಡ್ ಮೈಸೂರು ಜಂಟಿ ಆಶ್ರಯದಲ್ಲಿ ಕುಕ್ಕರಹಳ್ಳಿಕೆರೆಯ ಮುಖ್ಯದ್ವಾರದ (ರೈಲ್ವೆ ಹಳಿ ಬಳಿಯ ದ್ವಾರ) ಬಳಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕೆರೆ ಆವರಣದ ಚಿತ್ರರಚನಾ ಕಾರ್ಯಕ್ರಮದಲ್ಲಿ ಕಾವಾದ ಮೊದಲ ವರ್ಷದ ವಿದ್ಯಾರ್ಥಿಗಳು ಕೆರೆಯ ವೈವಿಧ್ಯಮಯ ನೋಟವನ್ನು ತಮ್ಮ ಕಲಾತ್ಮಕ ಲೋಕದಲ್ಲಿ ಕಟ್ಟಿಕೊಟ್ಟರು. ಶತಮಾನಕ್ಕೂ ಹಳೆಯದಾದ ಕುಕ್ಕರಹಳ್ಳಿಕೆರೆಯು ಜಲಚರ ಜೀವ ಸಂಕುಲ…

ಬಹುತೇಕ ವಾರ್ಡ್‍ನಲ್ಲಿ  ಹಳಬರ ಜಿದ್ದಾಜಿದ್ದಿ
ಮೈಸೂರು

ಬಹುತೇಕ ವಾರ್ಡ್‍ನಲ್ಲಿ  ಹಳಬರ ಜಿದ್ದಾಜಿದ್ದಿ

August 27, 2018

ಮೈಸೂರು:  ಹಾಲಿ ಕಾರ್ಪೊರೇಟರ್‍ಗಳ ಜಿದ್ದಾಜಿದ್ದಿಗೆ ಮೈಸೂರಿನ 2 ವಾರ್ಡ್‍ಗಳು ಅಖಾಡವಾಗಿವೆ. ನಗರದ 6ನೇ ವಾರ್ಡ್ ಗೋಕುಲಂ ನಲ್ಲಿ ಮೂವರು ಹಾಲಿ ಶಾಸಕರು ಸ್ಪರ್ಧೆಗಿಳಿದಿದ್ದಾರೆ. ಟಿ.ಗಿರೀಶ್‍ಪ್ರಸಾದ್ ಬಿಜೆಪಿ ಯಿಂದ, ಎಸ್‍ಬಿಎಂ ಮಂಜು ಜೆಡಿಎಸ್‍ನಿಂದ ಕಣಕ್ಕಿಳಿದಿದ್ದು, ಬಿಜೆಪಿ ಟಿಕೆಟ್ ಕೈತಪ್ಪಿದ ಎಸ್.ಬಾಲಸುಬ್ರಹ್ಮಣ್ಯ(ಸ್ನೇಕ್ ಶ್ಯಾಮ್) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ದಿನೇಶ್ ಹಾಗೂ ಮತ್ತೋರ್ವ ಪಕ್ಷೇತರ ಜೀವನ್ ಪ್ರಕಾಶ್ ಕಣದಲ್ಲಿದ್ದಾರೆ. ಇನ್ನು 51ನೇ ವಾರ್ಡ್ ಅಗ್ರಹಾರದಲ್ಲಿ ಇಬ್ಬರು ಹಾಲಿ ಕಾರ್ಪೊರೇಟರ್‍ಗಳು ಎದು ರಾಗಿದ್ದಾರೆ. ಬಿಜೆಪಿಯ ಬಿ.ವಿ.ಮಂಜುನಾಥ್ ಇದೇ ವಾರ್ಡ್‍ನಲ್ಲಿ…

ಮೈಸೂರು ಪಾಲಿಕೆ ಚುನಾವಣೆ: ಮತದಾರನ ಮನವೊಲಿಕೆಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಜಿಟಿಡಿ ಸಲಹೆ
ಮೈಸೂರು

ಮೈಸೂರು ಪಾಲಿಕೆ ಚುನಾವಣೆ: ಮತದಾರನ ಮನವೊಲಿಕೆಗೆ ಜೆಡಿಎಸ್ ಅಭ್ಯರ್ಥಿಗಳಿಗೆ ಜಿಟಿಡಿ ಸಲಹೆ

August 27, 2018

ಮೈಸೂರು:  ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಮೈಸೂರಿನ ಮೂರೂ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ಚುನಾವಣಾ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಸಿ, ಅಗತ್ಯ ಸಲಹೆ ನೀಡಿದರು. ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಮೈಸೂರು ವಿವಿ ವಿಶ್ರಾಂತ ಕುಲಪತಿ, ಜೆಡಿಎಸ್ ಮುಖಂಡ ಪ್ರೊ.ಕೆ.ಎಸ್. ರಂಗಪ್ಪ ನಿವಾಸದಲ್ಲಿ ಚಾಮರಾಜ ಕ್ಷೇತ್ರ ಹಾಗೂ ಖಾಸಗಿ ಹೋಟೆಲ್‍ಗಳಲ್ಲಿ ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಸಿದ ಜಿಟಿಡಿ, ಪಕ್ಷದ ಎಲ್ಲಾ ಅಭ್ಯರ್ಥಿಗಳು ಪ್ರತಿ ಮನೆಗೆ…

ಪ್ರೊ.ಜೆ.ಎ.ಕೆ.ತರೀನ್‍ರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್’ ಪುಸ್ತಕ ಬಿಡುಗಡೆ
ಮೈಸೂರು

ಪ್ರೊ.ಜೆ.ಎ.ಕೆ.ತರೀನ್‍ರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್’ ಪುಸ್ತಕ ಬಿಡುಗಡೆ

August 27, 2018

ಮೈಸೂರು: ಕಾಶ್ಮೀರ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಜೆ.ಎ.ಕೆ.ತರೀನ್ ಅವರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್: ಆ್ಯನ್ ಆಟೋಬಯಾಗ್ರಫಿ’ ಪುಸ್ತಕವನ್ನು `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಭಾನುವಾರ ಮೈಸೂರಿನ ಸರಸ್ವತಿಪುರಂ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಮೈಸೂರು ಲಿಟರರಿ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಅವರು, ತರೀನ್ ಅವರ `ರೈಸ್ ಆಫ್ ಎ ಬೇರ್‍ಫುಟ್ ಬಾಯ್: ಆ್ಯನ್ ಆಟೋಬಯಾಗ್ರಫಿ’ ಪುಸ್ತಕವು, ವಿಶ್ವವಿದ್ಯಾನಿಲಯದ…

ಆಕಾಶವಾಣಿಯಲ್ಲಿ `ರಂಗ ಬಾನುಲಿ’ ಬಿತ್ತರ
ಮೈಸೂರು

ಆಕಾಶವಾಣಿಯಲ್ಲಿ `ರಂಗ ಬಾನುಲಿ’ ಬಿತ್ತರ

August 27, 2018

ನಾಳೆ ರಂಗಾಯಣದ ಶ್ರೀರಂಗದಲ್ಲಿ ಕಾರ್ಯಕ್ರಮ ಉದ್ಘಾಟನೆ ಮೈಸೂರು: ಆಕಾಶವಾಣಿ ಮೈಸೂರು ಹಾಗೂ ರಂಗಾಯಣದ ಜಂಟಿ ಆಶ್ರಯದಲ್ಲಿ `ರಂಗ ಬಾನುಲಿ’ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು. ರಂಗಾಯಣದ ಆವರಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳ ಕೊನೆ ಮಂಗಳವಾರ ಸಂಜೆ 6.30ಕ್ಕೆ ಆಕಾಶವಾಣಿ ನಿರ್ಮಿಸಿರುವ ನಾಟಕಗಳನ್ನು ರಂಗಾಯಣದ ಶ್ರೀರಂಗಮಂದಿರದಲ್ಲಿ ಬಿತ್ತರಿಸಲಾಗುವುದು. ಅರ್ಧ ಗಂಟೆ ಅವಧಿಯ ನಾಟಕ ಕೇಳಿಸಿದ ಬಳಿಕ ಬಿತ್ತರಗೊಂಡ ನಾಟಕಕ್ಕೆ ಸಂಬಂಧಿಸಿದಂತೆ ಸಭಿಕರೊಂದಿಗೆ ಅರ್ಧ ಗಂಟೆ ಕಾಲ…

1 1,419 1,420 1,421 1,422 1,423 1,611
Translate »