ಮೈಸೂರು

ಪ್ರವಾಹದಿಂದ ಮೈಸೂರು ಜಿಲ್ಲೆಯಲ್ಲಿ 1800 ಎಕರೆ ಬೆಳೆ ನಷ್ಟ
ಮೈಸೂರು

ಪ್ರವಾಹದಿಂದ ಮೈಸೂರು ಜಿಲ್ಲೆಯಲ್ಲಿ 1800 ಎಕರೆ ಬೆಳೆ ನಷ್ಟ

August 27, 2018

ಮೈಸೂರು: ಅತಿವೃಷ್ಟಿಯಿಂದುಂಟಾದ ಪ್ರವಾಹದಿಂದಾಗಿ ಮೈಸೂರು ಜಿಲ್ಲೆಯಲ್ಲಿ ಸುಮಾರು 1,800 ಎಕರೆ ಪ್ರದೇಶದ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ. ಪ್ರಕೃತಿ ವಿಕೋಪ ನಿರ್ವಹಣೆ ಸಂಬಂಧ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನೆರೆ ಹಾವಳಿಯಿಂದ ಉಂಟಾಗಿರುವ ನಷ್ಟ ಭರಿಸುವುದು, ನಿರಾಶ್ರಿತರಿಗೆ ಪುನರ್ವಸತಿ, ಹಾನಿಯಾಗಿರುವ ರಸ್ತೆ ಸೇತುವೆ, ಸರ್ಕಾರಿ ಮತ್ತು ಖಾಸಗಿ ಕಟ್ಟಡ, ವಿದ್ಯುತ್ ಕಂಬ ಸೇರಿದಂತೆ ಇನ್ನಿತರ…

ಬಹು ಬೆಳೆ ಪದ್ಧತಿಯಿಂದ ರೈತರಿಗೆ ಹೆಚ್ಚಿನ ಆದಾಯ ಪ್ರಗತಿ ಪರ ಕೃಷಿಕರಾದ ಕವಿತಾ ಮಿಶ್ರಾ ಅಭಿಮತ
ಮೈಸೂರು

ಬಹು ಬೆಳೆ ಪದ್ಧತಿಯಿಂದ ರೈತರಿಗೆ ಹೆಚ್ಚಿನ ಆದಾಯ ಪ್ರಗತಿ ಪರ ಕೃಷಿಕರಾದ ಕವಿತಾ ಮಿಶ್ರಾ ಅಭಿಮತ

August 27, 2018

ಮೈಸೂರು: ಕೃಷಿಯಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡರೆ, ಸರ್ಕಾರಕ್ಕೆ ರೈತ ಸಮುದಾಯವೇ ಸಾಲ ನೀಡಬಹುದು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ರೈತಮಿತ್ರ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ಲಿಮಿಟೆಡ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಒಂಟಿ ಬೆಳೆ ಪದ್ಧತಿಗಿಂತ ಬಹುಬೆಳೆ ಪದ್ಧತಿಗೆ ಆದ್ಯತೆ ನೀಡಿದರೆ, ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು. ಪ್ರಸ್ತುತ ಗ್ರಾಮೀಣ ಪ್ರದೇಶದ ನಮ್ಮ ಯುವ ಜನರು ನಗರ ಪ್ರದೇಶಗಳಿಗೆ…

ಮೈಸೂರು ನಗರಪಾಲಿಕೆ ಕಾಂಗ್ರೆಸ್ ತೆಕ್ಕೆಗೆ: ಮಾಜಿ  ಸಿಎಂ ಸಿದ್ದರಾಮಯ್ಯ ವಿಶ್ವಾಸ
ಮೈಸೂರು

ಮೈಸೂರು ನಗರಪಾಲಿಕೆ ಕಾಂಗ್ರೆಸ್ ತೆಕ್ಕೆಗೆ: ಮಾಜಿ  ಸಿಎಂ ಸಿದ್ದರಾಮಯ್ಯ ವಿಶ್ವಾಸ

August 27, 2018

ಮೈಸೂರು: ಹಲವು ಜನಪ್ರಿಯ ಯೋಜನೆಗಳನ್ನು ಈ ಹಿಂದೆ ನಮ್ಮ ಸರ್ಕಾರ ಅನುಷ್ಟಾನಗೊಳಿಸಿದ್ದರೂ ಬಿಜೆಪಿ ಮಾಡಿದ ಸುಳ್ಳು ಅಪಪ್ರಚಾರದಿಂದ ನಮಗೆ ಹಿನ್ನೆಡೆಯಾಯಿತು. ಆದರೆ ಮೈಸೂರು ನಗರಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹೆಚ್ಚಿನ ಸ್ಥಾನ ಲಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ 5 ವರ್ಷಗಳ ಕಾಲ ಆಡಳಿತ ನಡೆಸಿದ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು…

ಅಂಗನವಾಡಿ ಕಾರ್ಯಕರ್ತೆಯರಿಂದ ಕೊಡಗಿನ ನಿರಾಶ್ರಿತರಿಗೆ ನೆರವು
ಮೈಸೂರು

ಅಂಗನವಾಡಿ ಕಾರ್ಯಕರ್ತೆಯರಿಂದ ಕೊಡಗಿನ ನಿರಾಶ್ರಿತರಿಗೆ ನೆರವು

August 27, 2018

ಮೈಸೂರು:  ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬದುಕನ್ನೇ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಬಡವ-ಬಲ್ಲಿದ ಎನ್ನದೆ ಎಲ್ಲರೂ ಕೈಜೋಡಿಸುತ್ತಿದ್ದಾರೆ. ಮೈಸೂರಿನ ಪುರಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ನೆರವು ಸಂಗ್ರಹ ಕೇಂದ್ರಕ್ಕೂ ಸಹೃದಯಿಗಳು ಅಗತ್ಯ ವಸ್ತುಗಳನ್ನು ತಂದು ನೀಡುತ್ತಿದ್ದಾರೆ. ಹಾಗೆಯೇ ಪಿರಿಯಾಪಟ್ಟಣ ತಾಲೂಕಿನ ಅನೇಕ ಅಂಗನವಾಡಿ ಕಾರ್ಯಕರ್ತರು ಹಾಗೂ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರು ಸುಮಾರು 20 ಸಾವಿರ ರೂ.ಗಳನ್ನು ಒಟ್ಟುಗೂಡಿಸಿ, ಅದರಲ್ಲಿ 40 ಬ್ಲಾಂಕೆಟ್‍ಗಳನ್ನು ಖರೀದಿಸಿ, ನೆರವು ಸಂಗ್ರಹ ಕೇಂದ್ರಕ್ಕೆ ನೀಡಿದ್ದಾರೆ. ತಮ್ಮ ಅತ್ಯಲ್ಪ ವೇತನದಲ್ಲಿ ಕುಟುಂಬ ನಿರ್ವಹಿಸುವುದೇ…

ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್, ಬಿಜಾಪುರ್ ಬುಲ್ಸ್‍ಗೆ ಜಯ
ಮೈಸೂರು

ಕೆಪಿಎಲ್: ಹುಬ್ಬಳ್ಳಿ ಟೈಗರ್ಸ್, ಬಿಜಾಪುರ್ ಬುಲ್ಸ್‍ಗೆ ಜಯ

August 27, 2018

ಮೈಸೂರು:  ಪಂದ್ಯದ ಕೊನೆವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ವಿರುದ್ಧ 3 ರನ್‍ಗಳ ರೋಚಕ ಜಯ ಸಾಧಿಸಿದೆ. ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು. ಹುಬ್ಬಳ್ಳಿ ಪರ ಇನ್ನಿಂಗ್ಸ್ ಆರಂಭಿಸಿದ ಮೊಹಮ್ಮದ್ ತಾಹ ಹಾಗೂ ಕ್ರಾಂತಿ ಕುಮಾರ್ ತಂಡಕ್ಕೆ…

ಬೀದಿ ಬದಿ ವ್ಯಾಪಾರಿಗಳಿಗೆ  ಮೊಬೈಲ್ ಬ್ಯಾಂಕಿಂಗ್
ಮೈಸೂರು

ಬೀದಿ ಬದಿ ವ್ಯಾಪಾರಿಗಳಿಗೆ  ಮೊಬೈಲ್ ಬ್ಯಾಂಕಿಂಗ್

August 26, 2018

ಬೆಂಗಳೂರು: ಮೀಟರ್ ಬಡ್ಡಿಗೆ ಕಡಿವಾಣ ಹಾಕಿರುವ ಬೆನ್ನಲ್ಲೇ ದೈನಂದಿನ ಬದುಕಿಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಅನು ಕೂಲ ಮಾಡಿ ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊಬೈಲ್ ಬ್ಯಾಂಕಿಂಗ್ ಆರಂಭಿಸುತ್ತಿದೆ. ಎಟಿಎಂಗಳಿಗೆ ಹಣ ತುಂಬುವ ವಾಹನಗಳ ಮಾದರಿಯಲ್ಲೇ ಅತೀ ಭದ್ರತೆಯಿಂದ ಕೂಡಿದ ವಾಹನಗಳ ಮೂಲಕ ದಿನನಿತ್ಯ ನಿಗದಿತ ಸ್ಥಳಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ನೆರವು ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ಋಣಮುಕ್ತ ಅಧಿನಿಯಮ 2018 ಅನ್ನು ಜಾರಿಗೆ ತರುವುದರಿಂದ ವಾರ್ಷಿಕ 1,20,000 ರೂ….

ಆ.28ರಂದು ಮೈಸೂರಲ್ಲಿ ದಸರಾ ಉನ್ನತ ಸಭೆ
ಮೈಸೂರು

ಆ.28ರಂದು ಮೈಸೂರಲ್ಲಿ ದಸರಾ ಉನ್ನತ ಸಭೆ

August 26, 2018

ಮೈಸೂರು: ಆಗಸ್ಟ್ 28ರಂದು ಮಧ್ಯಾಹ್ನ 3.30 ಗಂಟೆಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2018ರ ಬರುವ ಮೈಸೂರು ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ. ದಸರಾ ಉನ್ನತ ಸಮಿತಿ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ, ಸಚಿವರಾದ ಸಾ.ರಾ.ಮಹೇಶ, ಎನ್.ಮಹೇಶ, ಡಿ.ಸಿ.ತಮ್ಮಣ್ಣ, ಸಂಸದರಾದ ಪ್ರತಾಪ್‍ಸಿಂಹ,…

ಇದ್ದುದೆಲ್ಲವ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕೊಡಗಿನ ಈ ಕುಟುಂಬದ ಸ್ಥಿತಿಯಂತೂ ಕರುಣಾಜನಕ…
ಮೈಸೂರು

ಇದ್ದುದೆಲ್ಲವ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಕೊಡಗಿನ ಈ ಕುಟುಂಬದ ಸ್ಥಿತಿಯಂತೂ ಕರುಣಾಜನಕ…

August 26, 2018

ಮೈಸೂರು: ಕೊಡಗಿನಲ್ಲಿ ತಿಂಗಳು ಗಟ್ಟಲೆ ಸುರಿದ ಮಳೆ, ಅದರಿಂದ ಉಂಟಾದ ಪ್ರವಾಹ, ಇದರಿಂದ ಕುಸಿದು ಬಿದ್ದ ಸಾವಿರಾರು ಎಕರೆ ಬೆಟ್ಟ-ಗುಡ್ಡ, ಸಾವಿರಾರು ಮಂದಿಯ ಸ್ವಾಭಿಮಾನದ ಬದುಕನ್ನು ನುಚ್ಚು ನೂರು ಮಾಡಿದೆ. ಕಷ್ಟ ಎಂದವರಿಗೆ ಕೈ ಎತ್ತಿ ಕೊಡುತ್ತಿದ್ದವರು ಮುಂದಿನ ದಾರಿ ಕಾಣದೆ ಕಂಗಾಲಾಗಿ ಕುಳಿತಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅಕ್ಷರಶಃ ಬೀದಿಗೆ ಬಿದ್ದಿರುವ ತುಂಬು ಕುಟುಂಬವೊಂದರ ದುಸ್ಥಿತಿ ನೋಡಿದರೆ ಕಲ್ಲು ಹೃದಯಿಗಳಲ್ಲೂ ಮರುಕ ಮಡುಗಟ್ಟುತ್ತದೆ. ಮಡಿಕೇರಿ ಸಮೀಪದ ಮಕ್ಕಂದೂರು ಬಳಿಯ ಮೇಘತಾಳು ಗ್ರಾಮದ ತಂಬುಕುತ್ತಿರ ಕುಟುಂಬ,…

ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ: ಹೆಚ್‍ಡಿಕೆ
ಮೈಸೂರು

ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ: ಹೆಚ್‍ಡಿಕೆ

August 26, 2018

ಬೆಂಗಳೂರು:  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಹಾಸನ ಜಿಲ್ಲೆಯಲ್ಲಿ ನೀಡಿದ ಹೇಳಿಕೆ ಬೆನ್ನಲ್ಲೇ ಕುಮಾರಸ್ವಾಮಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಸಂದೇಶ ರವಾನೆ ಮಾಡಿದಂತಿದೆ. ಶ್ರೀರಾಮ 14 ವರ್ಷಗಳ ವನವಾಸ ಅನುಭವಿಸಿದಂತೆ ನಾನು 12 ವರ್ಷಗಳ ಕಾಲ ಕಷ್ಟನಷ್ಟಗಳನ್ನು ಕಂಡಿದ್ದೇನೆ. ಮೈತ್ರಿ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಲು ಬಂದಿದ್ದೇನೆ….

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದಾದರೆ ಸಂತೋಷ:  ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್
ಮೈಸೂರು

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದಾದರೆ ಸಂತೋಷ: ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್

August 26, 2018

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಾರೂ ತುಳಿದಿಲ್ಲ. ಅವರ ನಡವಳಿಕೆಯಿಂದ ಅವರನ್ನು ಅವರೇ ತುಳಿದುಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಶಾಸಕ ಎ.ಹೆಚ್.ವಿಶ್ವನಾಥ್ ಹೇಳಿದರು. ಸಿದ್ದರಾಮಯ್ಯನವರಿಗೆ ಮತ್ತೇ ಮುಖ್ಯ ಮಂತ್ರಿ ಆಗುವ ಆಸೆ ಇದೆ. ಅದು ತಪ್ಪೇ ನಲ್ಲ. ಅವರು ಮತ್ತೆ ಮುಖ್ಯಮಂತ್ರಿ ಆಗೋದಾದರೆ ಸಂತೋಷ ಎಂದರು. ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದಕ್ಕೆ ವಿಶ್ವನಾಥ್ ಅಸಮಾಧಾನ ವ್ಯಕ್ತ ಪಡಿಸಿದರು. ಸಾ.ರಾ.ಮಹೇಶ್ ನಮ್ಮ…

1 1,420 1,421 1,422 1,423 1,424 1,611
Translate »