ಮೈಸೂರು

ನನ್ನ ಸೇವಾ ಪರತೆ ಮನಗಂಡು ಮತ ನೀಡಿ: ಮತದಾರರಲ್ಲಿ ಮೈಸೂರು ಪಾಲಿಕೆ ವಾರ್ಡ್ ನಂ.3ರ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀಧರ್ ಮನವಿ
ಮೈಸೂರು

ನನ್ನ ಸೇವಾ ಪರತೆ ಮನಗಂಡು ಮತ ನೀಡಿ: ಮತದಾರರಲ್ಲಿ ಮೈಸೂರು ಪಾಲಿಕೆ ವಾರ್ಡ್ ನಂ.3ರ ಪಕ್ಷೇತರ ಅಭ್ಯರ್ಥಿ ಕೆ.ವಿ.ಶ್ರೀಧರ್ ಮನವಿ

August 26, 2018

ಮೈಸೂರು: ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಸಾಮಾಜಿಕ ಸೇವಾ ಕಾರ್ಯ, ಅರ್ಹತೆ ನೋಡಿ 3ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾದ ನನಗೆ ವಾರ್ಡಿನ ಮತದಾರರು ಬೆಂಬಲ ನೀಡಬೇಕೆಂದು ಕೆ.ವಿ.ಶ್ರೀಧರ ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಾವು ಇದುವರೆಗೂ ಮಾಡಿರುವ ಜನಪರ, ಸೇವಾಕಾರ್ಯ ಜೊತೆಗೆ ತಮ್ಮನ್ನು ಆಯ್ಕೆ ಮಾಡಿದಲ್ಲಿ ಮಾಡುವಂತಹ ಕಾರ್ಯಗಳ ಸಂಬಂಧಿ ಹೊರತಂದಿರುವ ಕರಪತ್ರ ಹಾಗೂ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 3ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾದ ನನ್ನ ಕ್ರಮ ಸಂಖ್ಯೆ 5…

ಪ್ರೀತಿ, ಸಾಯಿ, ಡಿಜಿಎಂ ಬಡಾವಣೆ  ನಿವಾಸಿಗಳಿಗೆ ಪಾಲಿಕೆ ಚುನಾವಣೆಯಲ್ಲಿ  ಮತದಾನದ ಹಕ್ಕು: ಹೈಕೋರ್ಟ್ ಆದೇಶ
ಮೈಸೂರು

ಪ್ರೀತಿ, ಸಾಯಿ, ಡಿಜಿಎಂ ಬಡಾವಣೆ  ನಿವಾಸಿಗಳಿಗೆ ಪಾಲಿಕೆ ಚುನಾವಣೆಯಲ್ಲಿ  ಮತದಾನದ ಹಕ್ಕು: ಹೈಕೋರ್ಟ್ ಆದೇಶ

August 26, 2018

ಮೈಸೂರು: ಶ್ರೀರಾಂಪುರ ವಾರ್ಡ್ 65ರ ವ್ಯಾಪ್ತಿಯ ಪ್ರೀತಿ, ಸಾಯಿ ಹಾಗೂ ಡಿಜಿಎಂ ಬಡಾವಣೆಗಳ ನಿವಾಸಿ ಗಳಿಗೆ ಮೈಸೂರು ಮಹಾ ನಗರಪಾಲಿಕೆ ಚುನಾ ವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡು ವಂತೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭಾರತ ಆಹಾರ ನಿಗಮದ ಸದಸ್ಯ, ಪ್ರೀತಿ ಬಡಾವಣೆ ನಿವಾಸಿ ಹಾಗೂ ಕೋರ್ಟ್ ಮೊರೆ ಹೋದವರಲ್ಲಿ ಒಬ್ಬರಾದ ಜೆ.ಜಯಂತ್, ಇದು ಮುಡಾ ನಿಯಮಗಳಿಗೆ ಒಳಪಟ್ಟಿರುವ ಬಡಾವಣೆಗಳ ನಿವಾಸಿಗಳ ಹೋರಾಟಕ್ಕೆ ಸಂದ…

ನ್ಯಾಯಾಧೀಶ ಆರ್.ಅಶೋಕ್ ಇನ್ನಿಲ್ಲ
ಮೈಸೂರು

ನ್ಯಾಯಾಧೀಶ ಆರ್.ಅಶೋಕ್ ಇನ್ನಿಲ್ಲ

August 26, 2018

ಮೈಸೂರು: ಮೈಸೂರಿನ 2ನೇ ಹೆಚ್ಚುವರಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ನ್ಯಾಯಾಧೀಶ ಆರ್.ಅಶೋಕ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಮೈಸೂರು ವಕೀಲರ ಸಂಘದ ವತಿಯಿಂದ ಮೃತರಿಗೆ ಶ್ರದ್ಧಾಂಜಲಿ ಸಭೆ ಇಂದು ಆಯೋಜಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಜಿ.ಒಂಟಿಗೋಡಿ ಮೃತರ ಬಗ್ಗೆ ಮಾತನಾಡಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶೆ ಶ್ರೀಮತಿ ರಾಧಾ, 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ್, ಜೆಎಸ್‍ಎಸ್ ಕಾನೂನು ಕಾಲೇಜಿನ ಮುಖ್ಯ ಆಡಳಿತಾಧಿಕಾರಿ…

ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾ
ಮೈಸೂರು

ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾ

August 25, 2018

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ 2 ಲಕ್ಷ ರೂ.ವರೆಗಿನ ಬೆಳೆ ಹಾಗೂ ಚಾಲ್ತಿ ಸಾಲವನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದರು. ಇದರಿಂದಾಗಿ 30,163 ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗಲಿದ್ದು, 22 ಲಕ್ಷ ರೈತರು ಈ ಸಾಲ ಮನ್ನಾ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದರು. 2018-19ನೇ…

ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಹಂಗಾಮ
ಮೈಸೂರು

ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಹಂಗಾಮ

August 25, 2018

ಮೈಸೂರು: ಮೈಸೂರು ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಾಳೆಯಿಂದ(ಆ.25) ಸೆ.6ರವರೆಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿಗಳು ನಡೆಯಲಿವೆ. ನಾಳೆ(ಅ.25) ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ಪ್ಯಾಂಥರ್ಸ್-ಬಳ್ಳಾರಿ ಟಸ್ಕರ್ಸ್ ಹಾಗೂ ಸಂಜೆ 6.40ಕ್ಕೆ ಶಿವಮೊಗ್ಗ ಲಯನ್ಸ್-ಬೆಂಗಳೂರು ಬ್ಲಾಸ್ಟರ್ಸ್ ತಂಡಗಳ ನಡುವೆ ನೇರಾ ಹಣಾ-ಹಣಿ ನಡೆಯಲಿದೆ. ಈ ಕುರಿತು ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ದೊಡ್ಡಗಣೇಶ್, ಮೈಸೂರು ಕೆಪಿಎಲ್ ಆವೃತ್ತಿಗೆ ಚಾಲನೆ ನೀಡಿದರು….

ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಮೈಸೂರು

ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

August 25, 2018

ಮಡಿಕೇರಿ: ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರು ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹಾರಂಗಿಯ ಹೆಲಿಪ್ಯಾಡ್‍ನಲ್ಲಿ ಇಂದು ಬೆಳಿಗ್ಗೆ ಬಂದಿಳಿದರು. ಈ ವೇಳೆ ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಂಸದ ಪ್ರತಾಪ್ ಸಿಂಹ ಹಾಗೂ ಸೇನಾಧಿಕಾರಿಗಳು ಅವರನ್ನು ಬರಮಾಡಿಕೊಂಡರು. ಸಚಿವರು ಕುಶಾಲನಗರಕ್ಕೆ ಭೇಟಿ ನೀಡಬೇಕಿತ್ತಾದರೂ, ಅಲ್ಲಿ ಹಾರಂಗಿ ಜಲಾಶಯದಿಂದ ಹೊರ ಬಿಟ್ಟ ನೀರು ಮನೆಗಳಿಗೆ ನುಗ್ಗಿರುವುದು ಬಿಟ್ಟರೆ, ದೊಡ್ಡ ಮಟ್ಟದ ಅನಾಹುತಗಳು ಸಂಭವಿಸಿಲ್ಲ…

ಕೊಡಗಿನಲ್ಲಿ ಇಂದಿನಿಂದ ಮಳೆ
ಮೈಸೂರು

ಕೊಡಗಿನಲ್ಲಿ ಇಂದಿನಿಂದ ಮಳೆ

August 25, 2018

ಬೆಂಗಳೂರು: ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಮಳೆ ಸುರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಎಚ್ಚರಿಕೆ ನೀಡಿದೆ.ಬಂಗಾಳಕೊಲ್ಲಿ ಒಡಿಶಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಸುಮಾರು 30ರಿಂದ 35 ಮಿ.ಮೀ.ವರೆಗೂ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ 7 ದಿನಗಳ ಮಳೆ ಪ್ರಮಾಣ ಗಮನಿಸಿದರೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕ್ರಮೇಣ ಮಳೆ ಕಡಿಮೆ ಯಾಗಿದೆ….

ನನಗೆ ಜನರ ಆಶೀರ್ವಾದವಿದೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ
ಮೈಸೂರು

ನನಗೆ ಜನರ ಆಶೀರ್ವಾದವಿದೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ

August 25, 2018

ಹೊಳೆನರಸೀಪುರ: ಜನರ ಆಶೀರ್ವಾದವಿದೆ, ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಾಲೂಕಿನ ಹಾಡ್ಯ ಗ್ರಾಮದಲ್ಲಿ ಜರುಗಿದ ಈಶ್ವರ ಹಾಗೂ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾವು ರಾಜಕೀಯ ದಲ್ಲಿ ಎಂದು ಹೆದರಿ ಓಡಿ ಹೋಗುವುದಿಲ್ಲ. ರಾಜಕೀಯ ನಿಂತ ನೀರಲ್ಲ. ಕಾಲಚಕ್ರ ಸದಾ ಚಲಿಸುತ್ತಿರುತ್ತದೆ. ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಸಹಜವಾಗಿ ಬದಲಾವಣೆಯಾಗುತ್ತದೆ. ಜನರ ಆಶೀರ್ವಾದವಿದೆ, ಮತ್ತೊಮ್ಮೆ ನಾನು ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂದು ಭವಿಷ್ಯ ನುಡಿದರು. ನನ್ನ ಸರ್ಕಾರದ ಅವಧಿಯಲ್ಲಿ…

ಕರ್ನಾಟಕ ಮುಕ್ತ ವಿವಿ 17 ತಾಂತ್ರಿಕೇತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಎರಡ್ಮೂರು ದಿನಗಳಲ್ಲಿ ಚಾಲನೆ
ಮೈಸೂರು

ಕರ್ನಾಟಕ ಮುಕ್ತ ವಿವಿ 17 ತಾಂತ್ರಿಕೇತರ ಕೋರ್ಸುಗಳ ಪ್ರವೇಶಾತಿ ಪ್ರಕ್ರಿಯೆಗೆ ಎರಡ್ಮೂರು ದಿನಗಳಲ್ಲಿ ಚಾಲನೆ

August 25, 2018

ಮೈಸೂರು: ಯುಜಿಸಿ ಮಾನ್ಯತೆ ರದ್ದುಗೊಳಿಸಿದ್ದ ಕಾರಣ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಶೈಕ್ಷಣಿಕ ಚಟುವಟಿಕೆಗಳು ಕಡೆಗೂ ಮತ್ತೆ ಆರಂಭವಾಗಿವೆ. ಯುಜಿಸಿಯು 2018-19ನೇ ಶೈಕ್ಷಣಿಕ ಸಾಲಿನಿಂದ 2022-23ರವರೆಗೆ ಕರ್ನಾಟಕ ರಾಜ್ಯದೊಳಗೆ ತಾಂತ್ರಿಕೇತರ (Non- Technical) ಕೋರ್ಸುಗಳನ್ನು ನಡೆಸಲು ಮುಕ್ತ ವಿಶ್ವವಿದ್ಯಾನಿಲಯಕ್ಕೆ ಹಸಿರು ನಿಶಾನೆ ನೀಡಿರುವುದರಿಂದ ಎರಡ್ಮೂರು ದಿನಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಅಡಳಿತ ಕಚೇರಿ…

ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಬಡ ರೋಗಿಗಳ ಪರದಾಟ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಬಡ ರೋಗಿಗಳ ಪರದಾಟ

August 25, 2018

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಕಿಡ್ನಿ ರೋಗಿಗಳ ವಿಭಾಗದ ಡಯಾಲಿಸಿಸ್ ಯಂತ್ರಗಳು ಕೆಟ್ಟು, ರೋಗಿಗಳು ಪರದಾಡುವಂತಾಗಿದೆ. ಕೆ.ಆರ್.ಆಸ್ಪತ್ರೆ ಕಿಡ್ನಿ(ಮೂತ್ರಪಿಂಡ) ವಿಭಾಗದಲ್ಲಿ 9 ಡಯಾಲಿಸಿಸ್ ಯಂತ್ರಗಳಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಮೂಲಕ ಚೈತನ್ಯ ತುಂಬಲಾಗುತ್ತಿತ್ತು. ಈ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯಿದ್ದ ಕಟ್ಟಡದಲ್ಲಿಯೇ ಕಿಡ್ನಿ ವಿಭಾಗವಿದ್ದು, ಡಯಾಲಿಸಿಸ್ ಸೇರಿದಂತೆ ಇನ್ನಿತರ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಖಾಸಗಿ ಆಸ್ಪತ್ರೆ ಹಾಗೂ ಡಯಾಲಿಸಿಸ್ ಕೇಂದ್ರಗಳಲ್ಲಿ ಶುಲ್ಕ…

1 1,422 1,423 1,424 1,425 1,426 1,611
Translate »