ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಹಂಗಾಮ
ಮೈಸೂರು

ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಹಂಗಾಮ

August 25, 2018

ಮೈಸೂರು: ಮೈಸೂರು ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಾಳೆಯಿಂದ(ಆ.25) ಸೆ.6ರವರೆಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿಗಳು ನಡೆಯಲಿವೆ.

ನಾಳೆ(ಅ.25) ಮಧ್ಯಾಹ್ನ 2 ಗಂಟೆಗೆ ಬೆಳಗಾವಿ ಪ್ಯಾಂಥರ್ಸ್-ಬಳ್ಳಾರಿ ಟಸ್ಕರ್ಸ್ ಹಾಗೂ ಸಂಜೆ 6.40ಕ್ಕೆ ಶಿವಮೊಗ್ಗ ಲಯನ್ಸ್-ಬೆಂಗಳೂರು ಬ್ಲಾಸ್ಟರ್ಸ್ ತಂಡಗಳ ನಡುವೆ ನೇರಾ ಹಣಾ-ಹಣಿ ನಡೆಯಲಿದೆ. ಈ ಕುರಿತು ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ದೊಡ್ಡಗಣೇಶ್, ಮೈಸೂರು ಕೆಪಿಎಲ್ ಆವೃತ್ತಿಗೆ ಚಾಲನೆ ನೀಡಿದರು.

ಇದೇ ವೇಳೆ ಕೆಪಿಎಲ್ ಪಂದ್ಯಾವಳಿಯ ಟ್ರೋಫಿಯನ್ನು ಅನಾವರಣಗೊಳಿಸಲಾ ತು. ನಂತರ ದೊಡ್ಡ ಗಣೇಶ್ ಮಾತನಾಡಿ, ನಾವು ಕ್ರಿಕೆಟ್ ಆಡುತ್ತಿದ್ದ ವೇಳೆ ಇಂತಹ ಸೌಲಭ್ಯಗಳು ಇರಲಿಲ್ಲ. ಇದ್ದಿ ರೆ ಇಂದೂ ಕ್ರಿಕೆಟ್ ಆಡುತ್ತಿದ್ದವೇನೋ?. ಕಾರಣ, 27-28ನೇ ವಯಸ್ಸಿಗೆ ಕ್ರಿಕೆಟ್ ಬದುಕು ಮುಗಿದು ಹೋಗುತ್ತಿತ್ತು. ಆದರೆ ಈಗ ಕೆಪಿಎಲ್ ಮೂಲಕ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ವಾಪಸ್ ಮರಳಲು ಅವಕಾಶವಿದ್ದು, ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು. ಕೆಪಿಎಲ್‍ನಲ್ಲಿ ಆಡಿದವರು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬೈ ಮತ್ತು ಚೆನ್ನೈನಲ್ಲಿ ನಡೆಯುತ್ತಿರುವ ಪ್ರಿಮಿಯರ್ ಲೀಗ್ ಪಂದ್ಯಾವಳಿಗಳಿಗಿಂತ ನಮ್ಮ ಕೆಪಿಎಲ್ ಶ್ರೇಷ್ಠತೆ ಹೊಂದಿದೆ ಎಂದ ಅವರು, ಮೈಸೂರಿನಲ್ಲಿ ಕ್ರಿಕೆಟ್ ಆಡುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಪಿಎಲ್ ಬ್ರ್ಯಾಂಡ್ ಅಂಬಾಸಿಡರ್ ಆದ ನಟಿ ರಾಗಿಣಿ ದ್ವಿವೇದಿ ಮಾತನಾಡಿ, ಮೈಸೂರು ನನಗೆ 2ನೇ ತವರಾಗಿದೆ. ಚಿತ್ರೀಕರಣದ ವೇಳೆ ಹಲವು ಬಾರಿ ಮೈಸೂರಿಗೆ ಬಂದಿದ್ದೇನೆ. ಆದರೆ, ಇಲ್ಲಿ ಕೆಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಇಂದು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ ಎಂದರು.

ಕೆಎಸ್‍ಸಿಎ ವಕ್ತಾರ ವಿನಯ್ ಮೃತ್ಯುಂಜಯ, ಕೆಎಸ್‍ಸಿಎ ಮೈಸೂರು ವಲಯ ಅಧ್ಯಕ್ಷ ಸುಧಾಕರ್ ರೈ, ವಲಯ ಸಂಯೋಜಕ ಬಾಲಚಂದರ್, ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ, ಕೆಪಿಎಲ್ ತಂಡಗಳ ನಾಯಕರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕೆಪಿಎಲ್ ಪಂದ್ಯ ಗಳು ಸ್ಟಾರ್‍ಸ್ಪೋಟ್ರ್ಸ್ 2, ಸ್ಟಾರ್ ಸ್ಪೋಟ್ರ್ಸ್ ಹೆಚ್‍ಡಿ ಮತ್ತು ಹಾಟ್‍ಸ್ಟಾರ್‍ನಲ್ಲಿ ನೇರ ಪ್ರಸಾರವಾಗಲಿವೆ.

Translate »