ನ್ಯಾಯಾಧೀಶ ಆರ್.ಅಶೋಕ್ ಇನ್ನಿಲ್ಲ
ಮೈಸೂರು

ನ್ಯಾಯಾಧೀಶ ಆರ್.ಅಶೋಕ್ ಇನ್ನಿಲ್ಲ

August 26, 2018

ಮೈಸೂರು: ಮೈಸೂರಿನ 2ನೇ ಹೆಚ್ಚುವರಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ನ್ಯಾಯಾಧೀಶ ಆರ್.ಅಶೋಕ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಮೈಸೂರು ವಕೀಲರ ಸಂಘದ ವತಿಯಿಂದ ಮೃತರಿಗೆ ಶ್ರದ್ಧಾಂಜಲಿ ಸಭೆ ಇಂದು ಆಯೋಜಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಜಿ.ಒಂಟಿಗೋಡಿ ಮೃತರ ಬಗ್ಗೆ ಮಾತನಾಡಿದರು.

ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶೆ ಶ್ರೀಮತಿ ರಾಧಾ, 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ್, ಜೆಎಸ್‍ಎಸ್ ಕಾನೂನು ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಸುರೇಶ್, ಸರ್ಕಾರಿ ಅಭಿಯೋಜಕ ಮಹಂತಪ್ಪ, ‘ಲಾ-ಗೈಡ್’ ಕನ್ನಡ ಕಾನೂನು ಪತ್ರಿಕೆ ಸಂಪಾದಕ ಹಾಗೂ ಹಿರಿಯ ವಕೀಲ ಹೆಚ್.ಎನ್. ವೆಂಕಟೇಶ್, ಹಿರಿಯ ವಕೀಲರುಗಳಾದ ಗಿರಿಜೇಶ್, ಕೆ.ಪಿ.ಕುಮಾರಸ್ವಾಮಿ, ಗಿರೀಶ್, ಶಿವಣ್ಣೇಗೌಡ ಮುಂತಾದವರು ಸಂತಾಪ ಸೂಚಿಸಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ರಾಣಿಪೇಟೆಯಲ್ಲಿ ನಡೆಯಿತು.

Translate »