ಮೈಸೂರು

ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ
ಮೈಸೂರು

ಇಂದಿನಿಂದ ಮೈಸೂರಲ್ಲಿ ಕೆಪಿಎಲ್ ಪಂದ್ಯಾವಳಿ

August 25, 2018

 ಗಂಗೋತ್ರಿ ಶ್ರೀಕಂಠದತ್ತ ನರಸಿಂಹರಾಜ ಸ್ಟೇಡಿಯಂನಲ್ಲಿ ಪಂದ್ಯ  ಹುಬ್ಬಳ್ಳಿ ಪಂದ್ಯಗಳು ಸೇರಿ ಒಟ್ಟು 16 ಪಂದ್ಯಗಳು ಮೈಸೂರಲ್ಲಿ ಮೈಸೂರು: ಕೆಪಿಎಲ್ ಪಂದ್ಯಾವಳಿಯ ಫೈನಲ್ ಹಾಗೂ ಸೆಮಿ ಫೈನಲ್ ಸೇರಿದಂತೆ 16 ಪಂದ್ಯಗಳು ಮೈಸೂರಿನ ಮಾನಸಗಂಗೋತ್ರಿಯ ಶ್ರೀ ಕಂಠದತ್ತನರಸಿಂಹ ರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಮೈದಾನದಲ್ಲಿ 10 ಸಾವಿರ ಆಸನದ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಕಾರ್ಬನ್ ಸ್ಮಾರ್ಟ್‍ಫೋನ್ ಕೆಪಿಎಲ್ ಪಂದ್ಯಾವಳಿಯ ಏಳನೇ ಆವೃತ್ತಿಯ ಮೊದಲ ಪಂದ್ಯ ನಾಳೆ(ಆ.25) ಮಧ್ಯಾಹ್ನ 2ಗಂಟೆಗೆ ಬೆಳಗಾವಿ ಫ್ಯಾಂಥರ್ಸ್ ಹಾಗೂ ಬಳ್ಳಾರಿ…

ಮೈಸೂರು ನಗರ ಪಾಲಿಕೆಗೆ ಐವರು ಪೌರಕಾರ್ಮಿಕರ ಸ್ಪರ್ಧೆ
ಮೈಸೂರು

ಮೈಸೂರು ನಗರ ಪಾಲಿಕೆಗೆ ಐವರು ಪೌರಕಾರ್ಮಿಕರ ಸ್ಪರ್ಧೆ

August 25, 2018

ಮೈಸೂರು: ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎಂಬ ಗಾದೆ ಮಾತಿನಂತೆ ನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಪೌರಕಾರ್ಮಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುತ್ತೇವೆಂದು, ಸಾಂಸ್ಕೃತಿಕ ನಗರಿ ಮೈಸೂರು ದೇಶದಲ್ಲೇ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಪಡೆಯಲು ಹಗಲಿರುಳು ದುಡಿದಿದ್ದ ಪೌರಕಾರ್ಮಿಕರು ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 5 ವಾರ್ಡ್‍ಗಳಿಂದ ಸ್ಪರ್ಧೆ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ-32 (ಗೌಸಿಯಾ ನಗರ ಎ ಬ್ಲಾಕ್)ನಿಂದ ಬಿಜೆಪಿ ಅಭ್ಯರ್ಥಿಯಾಗಿ ಆರ್.ಪೂಜಾ, ವಾರ್ಡ್ ನಂ-39 (ಗಾಯತ್ರಿಪುರಂ 1ನೇ ಹಂತ)…

ಮೈಸೂರು ನಗರಪಾಲಿಕೆ ಚುನಾವಣೆ; ಕನಿಷ್ಟ 33 ಸ್ಥಾನ ಗೆಲ್ಲಲೇಬೇಕು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ
ಮೈಸೂರು

ಮೈಸೂರು ನಗರಪಾಲಿಕೆ ಚುನಾವಣೆ; ಕನಿಷ್ಟ 33 ಸ್ಥಾನ ಗೆಲ್ಲಲೇಬೇಕು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ

August 25, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ 65 ವಾರ್ಡ್‍ಗಳ ಪೈಕಿ ಕನಿಷ್ಟ 33 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಗುರಿ ನಿಗದಿ ಮಾಡಿದರು. ಮೈಸೂರಿನ ರೈಲು ನಿಲ್ದಾಣದ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಮೈಸೂರು ನಗರಪಾಲಿಕೆ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಪಕ್ಷದ ಅಭ್ಯರ್ಥಿಗಳ ಸಭೆಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಿಗದಿತ ಗುರಿಯನ್ನು ಸಾಧಿಸಲು ಎಲ್ಲರೂ ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕು. ಟಿಕೆಟ್ ಸಿಗದೆ ಅನ್ಯಾಯಕ್ಕೆ…

ಕಾಂಗ್ರೆಸ್‌ಗೆ ಮತ ಹಾಕಿ ನೆಹರು ವಂಶಸ್ಥರೊಂದಿಗೆ  ಫೋಟೋ ತೆಗೆಸಿಕೊಂಡಿದ್ದೆ ಮುಸ್ಲಿಂರಿಗೆ ಸಿಕ್ಕ ಭಾಗ್ಯ
ಮೈಸೂರು

ಕಾಂಗ್ರೆಸ್‌ಗೆ ಮತ ಹಾಕಿ ನೆಹರು ವಂಶಸ್ಥರೊಂದಿಗೆ  ಫೋಟೋ ತೆಗೆಸಿಕೊಂಡಿದ್ದೆ ಮುಸ್ಲಿಂರಿಗೆ ಸಿಕ್ಕ ಭಾಗ್ಯ

August 25, 2018

ಮೈಸೂರು:  ಕಳೆದ 70 ವರ್ಷ ಗಳಿಂದ ಕಾಂಗ್ರೆಸ್‌ಗೆ ಮತ ನೀಡಿ, ನೆಹರು ವಂಶಸ್ಥರ ಜೊತೆ ಫೋಟೋ ತೆಗೆಸಿಕೊಂಡಿದ್ದೇ ಮುಸ್ಲಿಂ ಸಮುದಾಯದವರಿಗೆ ಬಂದ ಭಾಗ್ಯ. ಇದನ್ನು ಬಿಟ್ಟರೆ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಆ ಪಕ್ಷ ಯಾವುದೇ ಅನುಕೂಲ ಮಾಡಿಕೊಡಲಿಲ್ಲ ಎಂದು ಎಐಎಂಐಎಂ ಅಧ್ಯಕ್ಷರೂ ಆದ ಸಂಸದ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಮೈಸೂರು ಬನ್ನಿಮಂಟಪ ಹುಡ್ಕೋ ಬಡಾ ವಣೆಯ ಮುಖ್ಯರಸ್ತೆಯಲ್ಲಿ ಮೈಸೂರು ನಗರ ಪಾಲಿಕೆ ವಾರ್ಡ್ ನಂ.8ರ ಎಐಎಂಐಎಂ ಪಕ್ಷದ ಅಭ್ಯರ್ಥಿಯಾಗಿರುವ ರಫತುಲ್ಲಾ ಖಾನ್…

ಬಟ್ಟೆ ವ್ಯಾಪಾರಿ ಮನೆ ಬೀಗ ಮುರಿದು: 18 ಲಕ್ಷ ರೂ. ಮೌಲ್ಯದ ಆಭರಣ ನಗದು ಲೂಟಿ
ಮೈಸೂರು

ಬಟ್ಟೆ ವ್ಯಾಪಾರಿ ಮನೆ ಬೀಗ ಮುರಿದು: 18 ಲಕ್ಷ ರೂ. ಮೌಲ್ಯದ ಆಭರಣ ನಗದು ಲೂಟಿ

August 25, 2018

ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಗುರುವಾರ ಘಟನೆ ಮೈಸೂರು: -ಮನೆ ಬೀಗ ಮುರಿದು ನಗದು ಸೇರಿ ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಲೂಟಿ ಮಾಡಿರುವ ಘಟನೆ ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಗುರುವಾರ ಸಂಭವಿಸಿದೆ. ಲಷ್ಕರ್ ಮೊಹಲ್ಲಾದ ಹಳ್ಳದಕೇರಿ ಬಸ್ ತಂಗುದಾಣದ ಹಿಂಭಾಗದಲ್ಲಿರುವ ಬಟ್ಟೆ ವ್ಯಾಪಾರಿ ಅಶೋಕ್‍ಕುಮಾರ್ ಮನೆಯಲ್ಲಿ ಖದೀಮರು ದಾಳಿ ನಡೆಸಿ, 390 ಗ್ರಾಂ ಚಿನ್ನಾಭರಣಗಳು, 500 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 7000 ರೂ. ನಗದನ್ನು ದೋಚಿದ್ದಾರೆ. ಮನೆ ಸಮೀಪವೇ ಲಷ್ಕರ್…

ಮೈಸೂರು ಮಹಾನಗರ ಪಾಲಿಕೆ ಚುನಾವಣೆ; ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ಚುನಾವಣೆ; ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

August 25, 2018

ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ, 24ಘಿ7 ಶುದ್ಧ ಕುಡಿಯುವ ನೀರು ಪೂರೈಕೆ ಭರವಸೆ * ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನಗರ ಬಸ್ ನಿಲ್ದಾಣ ಸ್ಥಳಾಂತರ * ಬನ್ನಿಮಂಟಪ ಬಸ್ ಡಿಪೋಗೆ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರ * ದಸರಾ ರೀತಿ ಶಾಶ್ವತ ದೀಪಾಲಂಕಾರಕ್ಕೆ ಯೋಜನೆ ಮೈಸೂರು: ಮೈಸೂರು ಮಹಾ ನಗರಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಲೇಬೇಕು ಎಂಬ ಗುರಿಯೊಂದಿಗೆ ಅಖಾಡಕ್ಕಿಳಿದಿರುವ ಕಾಂಗ್ರೆಸ್, ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಮೈಸೂರಿನ ಅಭಿವೃದ್ಧಿ ಕುರಿತಂತೆ ಅನೇಕ ಭರವಸೆಗಳನ್ನು ನೀಡಿದೆ. ನಗರ…

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ
ಮೈಸೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಕೊನೆಗೂ ಇಲ್ಲದ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ

August 25, 2018

ಮೈಸೂರು: ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ದೊರೆಯುತ್ತದೆ ಎಂಬ ಮಹತ್ತರ ಆಸೆಯೊಂದಿಗೆ ಬಾರಿ ನಿರೀಕ್ಷೆಯಲ್ಲಿದ್ದ ಮೈಸೂರಿನ ಜನತೆಗೆ ನಿರಾಸೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಕೆಎಸ್‍ಐಸಿಯ ಮಳಿಗೆಗೆ ಬಂದ ಮಹಿಳೆಯರು ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಸಿಗದ ಪರಿಣಾಮ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ಸಾದರು. ಪ್ರತಿಷ್ಠಿತ ಸಂಸ್ಥೆಯಾದ ಕೆಎಸ್‍ಐಸಿ ಸಂಸ್ಥೆಯ ವತಿಯಿಂದ ತಯಾರಾಗುವ `ಮೈಸೂರು ರೇಷ್ಮೆ’ ಸೀರೆಗೆ ಭಾರೀ ಬೇಡಿಕೆಯಿದೆ. ಅಪ್ಪಟ ರೇಷ್ಮೆಯಿಂದ ತಯಾರಿಸುವುದರಿಂದ ಬೆಲೆಯೂ…

ಪಕ್ಷೇತರ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಈಡೇರಿಸಲು ವಿಫಲನಾದರೆ ಅಂದೇ ರಾಜೀನಾಮೆ: ಯೋಗಾನಂದ
ಮೈಸೂರು

ಪಕ್ಷೇತರ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಈಡೇರಿಸಲು ವಿಫಲನಾದರೆ ಅಂದೇ ರಾಜೀನಾಮೆ: ಯೋಗಾನಂದ

August 25, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆ 58ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಯೋಗಾನಂದ ತಾವು ಗೆಲುವು ಸಾಧಿಸಿದರೆ ವಾರ್ಡ್‍ಗೆ ಏನೇನು ಮಾಡಲು ಸಾಧ್ಯ ಎಂಬ ಬಗ್ಗೆ ಪ್ರಣಾಳಿಕೆ ಮೂಲಕ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆಯ ವಿವರಗಳನ್ನು ನೀಡಿದ ಅವರು, ವಾರ್ಡ್‍ನ ಅಭಿವೃದ್ಧಿಗೆ ಖರ್ಚಾಗುವ ಮೊತ್ತದ ವಿವರಗಳನ್ನು ನೇರವಾಗಿ ವಾರ್ಡ್‍ನ ಸಾರ್ವಜನಿಕರೆಲ್ಲರಿಗೂ ತಿಳಿಯುವ ಹಾಗೆ ಮಾಡುವುದು. ತಮ್ಮ ಕಚೇರಿಯಲ್ಲಿ ಸಾರ್ವಜನಿಕರು ನೀಡುವ ದೂರುಗಳಿಗೆ 10-15 ದಿನಗಳಲ್ಲಿ ಪರಿಹಾರ ನೀಡುವುದು. ಜನರಿಂದಲೇ ವಾರ್ಡ್ ಅಭಿವೃದ್ಧಿ ಕುರಿತು…

ತಿ.ನರಸೀಪುರ ಪುರಸಭಾ ಚುನಾವಣಾ ಅಂತಿಮ ಕಣದಲ್ಲಿ 133 ಅಭ್ಯರ್ಥಿಗಳು
ಮೈಸೂರು

ತಿ.ನರಸೀಪುರ ಪುರಸಭಾ ಚುನಾವಣಾ ಅಂತಿಮ ಕಣದಲ್ಲಿ 133 ಅಭ್ಯರ್ಥಿಗಳು

August 25, 2018

ತಿ.ನರಸೀಪುರ: – ಇಲ್ಲಿನ ಪುರಸಭಾ ಚುನಾವಣೆಗೆ 23 ವಾರ್ಡ್ ಗಳಿಂದ 133 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಗುರುವಾರ ಕಡೆಯ ದಿನವಾಗಿತ್ತು. ಒಟ್ಟು 15 ಮಂದಿ ನಾಮಪತ್ರ ವಾಪಸು ಪಡೆದರು. ವಾರ್ಡ್ 2ರಿಂದ ಗಣೇಶ್ ಕುಮಾರ್, ಸಿ.ನಟರಾಜು, ಜೆ.ಪಲ್ಲವಿ, ಎಸ್.ರಾಜೇಶ್, ವಾರ್ಡ್ 4ರಿಂದ ಬಿ.ಎಂ.ದಿವಾಕರ, 5ರಿಂದ ಮಂಜುನಾಥ್, ಸತ್ಯನಾರಾಯಣ, 7ರಿಂದ ಕೆಂಚಪ್ಪ, 10 ರಿಂದ ಪಾರ್ವತಮ್ಮ, ಶೃತಿ 13ರಿಂದ ಹೆಚ್.ಸಿ.ಅರುಣ್‍ಕುಮಾರ್, 16ರಿಂದ ಎನ್.ಹರೀಶ್(ಜೆಡಿಎಸ್), 19ರಿಂದ ಪಾರ್ವತಿ, 23ರಿಂದ ಬಿ. ರಾಜು ಮತ್ತು ನಂಜುಂಡಸ್ವಾಮಿ ನಾಮಪತ್ರ…

ವಿಶ್ವಭ್ರಾತೃತ್ವ, ಸಮಾನತೆಯ ಬಿಂಬ ವಚನ ಸಾಹಿತ್ಯ
ಮೈಸೂರು

ವಿಶ್ವಭ್ರಾತೃತ್ವ, ಸಮಾನತೆಯ ಬಿಂಬ ವಚನ ಸಾಹಿತ್ಯ

August 25, 2018

ನಂಜನಗೂಡು:  ವಚನ ಸಾಹಿತ್ಯ ವಿಶ್ವಭ್ರಾತೃತ್ವ ಮತ್ತು ಸಮಾನತೆ ಯನ್ನು ಬಿಂಬಿಸುತ್ತದೆ ಎಂದು ಜೆಎಸ್‍ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮ ಸುಂದರ್ ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ನಂಜನಗೂಡಿನ ಜೆಎಸ್‍ಎಸ್ ಪ್ರೌಢಶಾಲೆ ಯಲ್ಲಿ ಆಯೋಜಿಸಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರ ಣರು ಎಲ್ಲಾ ಜನರನ್ನು ಒಂದೆಡೆ ಸೇರಿಸಿ ಅವರಲ್ಲಿದ್ದ ಪ್ರತಿಭೆಯನ್ನು ಅನುಭವ ಮಂಟಪದ ಮುಖಾಂತರ ಹೊರ ತಂದರು. ಸಮ ಹಾಗೂ ಶರಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶರಣರ ವಚನಗಳ ಆಶಯ ಎಲ್ಲರಿಗೂ ಅರ್ಥ…

1 1,423 1,424 1,425 1,426 1,427 1,611
Translate »