ಮೈಸೂರು

ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ವಿರೋಧಿಸಿ ಕೆಎಸ್‍ಐಸಿ ನೌಕರರ ಪ್ರತಿಭಟನೆ
ಮೈಸೂರು

ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ವಿರೋಧಿಸಿ ಕೆಎಸ್‍ಐಸಿ ನೌಕರರ ಪ್ರತಿಭಟನೆ

August 24, 2018

ಮೈಸೂರು: ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ಅವೈಜ್ಞಾನಿಕವಾಗಿದ್ದು, ರೇಷ್ಮೆ ಸಚಿವ ಸಾ.ರಾ.ಮಹೇಶ್ ಇಂತಹ ಪ್ರಸ್ತಾಪದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಕರ್ನಾಟಕ ರೇಷ್ಮೆ ಉದ್ಯಮ ನಿಗಮದ (ಕೆಎಸ್‍ಐಸಿ) ಮೈಸೂರು ಸಿಲ್ಕ್ ಫ್ಯಾಕ್ಟರಿ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಮೈಸೂರು ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಇಂದು ಮಧ್ಯಾಹ್ನ ಊಟದ ವಿರಾಮದ ಅವಧಿಯಲ್ಲಿ ಪ್ರತಿಭಟನೆ ನಡೆಸಿದ ನೌಕರರು, ರಿಯಾಯಿತಿ ದರದಲ್ಲಿ 10,500 ಸಾವಿರ ರೇಷ್ಮೆ ಸೀರೆಯನ್ನು ಕೇವಲ 4,500 ರೂ.ಗಳಿಗೆ ಮಾರಾಟ ಮಾಡುವುದು ಅವೈಜ್ಞಾನಿಕ. ಇದು…

ಮೈಸೂರಲ್ಲಿ ಎರಡು ದಿನಗಳ  ಡಿಫೆನ್ಸ್ ಪೆನ್ಷನ್ ಅದಾಲತ್ ಆರಂಭ
ಮೈಸೂರು

ಮೈಸೂರಲ್ಲಿ ಎರಡು ದಿನಗಳ  ಡಿಫೆನ್ಸ್ ಪೆನ್ಷನ್ ಅದಾಲತ್ ಆರಂಭ

August 24, 2018

 ಕೊಡಗು ನೆರೆ ಹಾವಳಿಯಿಂದಾಗಿ ಅದಾಲತ್‍ನಿಂದ ದೂರ ಉಳಿದ ಬಹುತೇಕ ಮಾಜಿ ಸೈನಿಕರು  ಡಿಸೆಂಬರ್‍ನಲ್ಲಿ ಮತ್ತೊಂದು ಅದಾಲತ್‍ಗೆ ಚಿಂತನೆ ಮೈಸೂರು: ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಎರಡು ದಿನಗಳ 159ನೇ ಡಿಫೆನ್ಸ್ ಪೆನ್ಷನ್ ಅದಾಲತ್ ಇಂದಿನಿಂದ ಆರಂಭವಾಯಿತು. ವಾಯುದಳ, ನೌಕಾದಳ ಸೇರಿದಂತೆ ವಿವಿಧ ಸೇನೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರ ಪಿಂಚಣಿ ಸೇರಿದಂತೆ ಇನ್ನಿತರ ಸೌಲಭ್ಯಗಳ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು ಮೈಸೂರಿನಲ್ಲಿ ಎರಡು ದಿನಗಳ ಪೆನ್ಷನ್ ಅದಾಲತ್…

ಪಿಂಚಣಿಗಾಗಿ ಪರದಾಡುತ್ತಿರುವ ಯುದ್ಧದಲ್ಲಿ  ಕಾಲು ಬೆರಳು ಕಳೆದುಕೊಂಡ ಮಾಜಿ ಸೈನಿಕ ಹಿರಿಯಣ್ಣ
ಮೈಸೂರು

ಪಿಂಚಣಿಗಾಗಿ ಪರದಾಡುತ್ತಿರುವ ಯುದ್ಧದಲ್ಲಿ  ಕಾಲು ಬೆರಳು ಕಳೆದುಕೊಂಡ ಮಾಜಿ ಸೈನಿಕ ಹಿರಿಯಣ್ಣ

August 24, 2018

ಮೈಸೂರು: ತಮ್ಮ ಕುಟುಂಬ, ಸಂಬಂಧಿಕರಿಂದ ದೂರ ಉಳಿದು ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಗಾಗಿ ಗಡಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಹಲವು ಮಾಜಿ ಸೈನಿಕರು ನಿವೃತ್ತಿ ನಂತರದ ಸೌಲಭ್ಯಗಳಿಗಾಗಿ ಇನ್ನೂ ಪರದಾಡುತ್ತಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಇಂದಿನಿಂದ ಆರಂಭವಾಗಿರುವ ಎರಡು ದಿನಗಳ ಡಿಫೆನ್ಸ್ ಪೆನ್ಷನ್ ಅದಾಲತ್‍ಗೆ ಮೈಸೂರು ಮತ್ತು ಸುತ್ತಮುತ್ತಲಿಂದ ಹಲವು ಸಮಸ್ಯೆಗಳನ್ನೊತ್ತು ನೂರಾರು ಮಾಜಿ ಸೈನಿಕರು ಬಂದಿದ್ದರು. ಆ ಪೈಕಿ ತೀವ್ರ ಕ್ಲಿಷ್ಟಕರ ತೊಂದರೆಯಿಂದ ಮುಕ್ತಿ ಪಡೆಯಲು ಆಗಮಿಸಿದ್ದ ಕೆಲವೇ ಮಾಜಿ ಸೈನಿಕರು ಮಾಧ್ಯಮದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ….

13 ವಾರ್ಡ್‍ಗಳಲ್ಲಿ ಬಿಎಸ್‍ಪಿ ಅಭ್ಯರ್ಥಿಗಳ ಸ್ಪರ್ಧೆ
ಮೈಸೂರು

13 ವಾರ್ಡ್‍ಗಳಲ್ಲಿ ಬಿಎಸ್‍ಪಿ ಅಭ್ಯರ್ಥಿಗಳ ಸ್ಪರ್ಧೆ

August 24, 2018

ಮೈಸೂರು:  ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿ, ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿರುವ ಬಹುಜನ ಸಮಾಜಪಕ್ಷ (ಬಿಎಸ್‍ಪಿ), ಇದೀಗ ಮೈಸೂರು ಮಹಾನಗರಪಾಲಿಕೆ ಚುನಾವಣೆಯತ್ತ ದೃಷ್ಟಿ ಹರಿಸಿದ್ದು, ಪ್ರಮುಖ ಪಕ್ಷಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಸಿದ್ಧವಾಗಿದೆ. ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಒಟ್ಟು 13 ವಾರ್ಡ್‍ಗಳಲ್ಲಿ ಬಿಎಸ್‍ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 8, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 2 ಹಾಗೂ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಣದಲ್ಲಿರುವ ವಾರ್ಡ್‍ವಾರು ಅಭ್ಯರ್ಥಿಗಳ ವಿವರ ಕೆಳಕಂಡಂತಿದೆ….

ವಾರ್ಡ್ ನಂ.55ರಲ್ಲಿ ಬಿಜೆಪಿಗೆ ಬಂಡಾಯ ಬಿಸಿ
ಮೈಸೂರು

ವಾರ್ಡ್ ನಂ.55ರಲ್ಲಿ ಬಿಜೆಪಿಗೆ ಬಂಡಾಯ ಬಿಸಿ

August 24, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ಕಾವು ರಂಗೇರುತ್ತಿದ್ದು, ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ 55ನೇ ವಾರ್ಡಿನಲ್ಲಿ ಬಿಜೆಪಿಗೆ ಬಂಡಾಯದ ಬೀಸಿ ತಲೆ ನೋವಾಗಿ ಪರಿಣಮಿಸಿದೆ. 55ನೇ ವಾರ್ಡಿನ (ಚಾಮುಂಡಿಪುರಂ) ಬಿಜೆಪಿ ಆಕಾಂಕ್ಷಿಯಾಗಿದ್ದ ಮ.ವಿ.ರಾಮ್‍ಪ್ರಸಾದ್ ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕಡೇ ದಿನವಾದ ಇಂದು ಕಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದ ಪಕ್ಷದ ವರಿಷ್ಠರಿಗೆ ನಿರಾಸೆ ಮೂಡಿಸಿದ್ದಾರೆ. ವಾರ್ಡಿನ ಜನತೆ ಹಾಗೂ ಹಿತೈಷಿಗಳ ಒತ್ತಡಕ್ಕೆ ಮಣಿದು ಸ್ವತಂತ್ರವಾಗಿ…

ಹಿಂದುಳಿದ ವರ್ಗಕ್ಕೆ ಮೀಸಲಾತಿಗೆ ಶತಮಾನ: ಮೈಸೂರಲ್ಲಿ ಸಂಭ್ರಮ
ಮೈಸೂರು

ಹಿಂದುಳಿದ ವರ್ಗಕ್ಕೆ ಮೀಸಲಾತಿಗೆ ಶತಮಾನ: ಮೈಸೂರಲ್ಲಿ ಸಂಭ್ರಮ

August 24, 2018

ಮೈಸೂರು: ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಅಂದಿನ ಮೈಸೂರು ಸಂಸ್ಥಾನವು ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶೇ.96ರಷ್ಟು ಮೀಸಲಾತಿ ಕಲ್ಪಿಸಿ ಇಂದಿಗೆ ಶತಮಾನದ ಸಂಭ್ರಮ. ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದೇಶದಂತೆ ಮಿಲ್ಲರ್ ಆಯೋಗ ರಚನೆಯಾಗಿ ಹಿಂದುಳಿದ ವರ್ಗಗಳು ಹಾಗೂ ದಲಿತರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆಯುವಂತಾಯಿತು. ಇಂತಹ ಮಹತ್ವದ ಮೀಸಲಾತಿ ವ್ಯವಸ್ಥೆಗೆ ಇಂದು ಶತಮಾನ ತುಂಬಿದ್ದು, ಇದನ್ನು `ಆಗಸ್ಟ್ ಕ್ರಾಂತಿ’ ಎಂದು ಮೈಸೂರು ನಗರದಲ್ಲಿ ಗುರುವಾರ ಸ್ಮರಣೆ ಮಾಡಲಾಯಿತು. ಸಮಾಜವಾದಿ ಪಕ್ಷದ ಮೈಸೂರು…

ಇಂದು ಮೈಸೂರಿಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಮೈಸೂರು

ಇಂದು ಮೈಸೂರಿಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ

August 24, 2018

ಮೈಸೂರು: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರೂ ಆದ ಅಸಾದುದ್ದೀನ್ ಓವೈಸಿ ಆ.24(ನಾಳೆ) ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರು ಮಹಾನಗರ ಪಾಲಿಕೆಗೆ ಆ.31ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ಅವರು ಮೈಸೂರಿಗೆ ನಾಳೆ ಆಗಮಿಸುತ್ತಿದ್ದು, ಬನ್ನಿಮಂಟಪ ವಾರ್ಡ್ ನಂ.8ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದು, ಬೆಂಗಳೂರು-ಮೈಸೂರು ರಸ್ತೆಯ ಟಿಪ್ಪು ಮಸೀದಿ ಹತ್ತಿರ ಬನ್ನಿಮಂಟಪದ ಹುಡ್ಕೊ ಮುಖ್ಯ ರಸ್ತೆಯಲ್ಲಿ ರಾತ್ರಿ 7 ಗಂಟೆ ನಂತರ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪಾಲಿಕೆ ಒಂದನೇ ವಾರ್ಡ್‍ನ ಸ್ವತಂತ್ರ ಅಭ್ಯರ್ಥಿ ತನುಜಾ, 42ನೇ ವಾರ್ಡ್‍ನ ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್‍ಗೆ ಮೈಗ್ರಾಪ ಬೆಂಬಲ
ಮೈಸೂರು

ಪಾಲಿಕೆ ಒಂದನೇ ವಾರ್ಡ್‍ನ ಸ್ವತಂತ್ರ ಅಭ್ಯರ್ಥಿ ತನುಜಾ, 42ನೇ ವಾರ್ಡ್‍ನ ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್‍ಗೆ ಮೈಗ್ರಾಪ ಬೆಂಬಲ

August 24, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ 1ನೇ ವಾರ್ಡ್‍ನ ಸ್ವತಂತ್ರ ಅಭ್ಯರ್ಥಿ ಟಿ.ಸಿ.ತನುಜಾ ಹಾಗೂ 42ನೇ ವಾರ್ಡ್‍ನ ಸ್ವರಾಜ್ ಇಂಡಿಯಾ ಅಭ್ಯರ್ಥಿ ಅಭಿರುಚಿ ಗಣೇಶ್ ಅವರಿಗೆ ಮೈಸೂರು ಗ್ರಾಹಕರ ಪರಿಷತ್ (ಮೈಗ್ರಾಪ) ಬೆಂಬಲ ಸೂಚಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಗ್ರಾಪ ಅಧ್ಯಕ್ಷ ಎಸ್.ಡಿ.ಸಾಹುಕಾರ್, ಮೈಸೂರು ನಗರದ ಆಡಳಿತ ಯಂತ್ರವಾದ ಪಾಲಿಕೆಯಲ್ಲಿ ಒಳ್ಳೆಯ ಆಡಳಿತ ಕಾಣಬೇಕಾದರೆ ಪ್ರಾಮಾಣಿಕ ಅಭ್ಯರ್ಥಿಗಳು ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮೈಗ್ರಾಪ ರೂಪಿಸಿದ್ದ ನಾಗರಿಕ ಪ್ರಣಾಳಿಕೆಗೆ…

19 ವಾರ್ಡ್‍ಗಳಲ್ಲಿ ಎಸ್‍ಡಿಪಿಐ ಸ್ಪರ್ಧೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ಗೆ ಸವಾಲು
ಮೈಸೂರು

19 ವಾರ್ಡ್‍ಗಳಲ್ಲಿ ಎಸ್‍ಡಿಪಿಐ ಸ್ಪರ್ಧೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ಗೆ ಸವಾಲು

August 24, 2018

ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗೆ ತುರುಸಿನ ಸ್ಪರ್ಧೆ ಒಡ್ಡಿದ್ದ ಎಸ್‍ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಆ.31ರಂದು ನಡೆಯಲಿರುವ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪ್ರಮುಖ ಪಕ್ಷಗಳಿಗೆ ಸವಾಲು ಒಡ್ಡಿದೆ. ಪಾಲಿಕೆಯ 65 ವಾರ್ಡ್‍ಗಳ ಪೈಕಿ ಪ್ರಮುಖ 19 ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನರಸಿಂಹರಾಜ ಕ್ಷೇತ್ರದಲ್ಲಿ 16 ಮತ್ತು ಚಾಮರಾಜ ಕ್ಷೇತ್ರದಲ್ಲಿ 3 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಕಣದಲ್ಲಿರುವ 19 ವಾರ್ಡ್‍ಗಳಲ್ಲಿ ಬಹುತೇಕ ಕಡೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನೂ…

ಕಾಂಗ್ರೆಸ್‍ನವರಿಂದ ಕೋಮು ಸೌಹಾರ್ದತೆ ಕದಡುವ ಯತ್ನ: ಬಿ.ಪಿ.ಮಂಜುನಾಥ್
ಮೈಸೂರು

ಕಾಂಗ್ರೆಸ್‍ನವರಿಂದ ಕೋಮು ಸೌಹಾರ್ದತೆ ಕದಡುವ ಯತ್ನ: ಬಿ.ಪಿ.ಮಂಜುನಾಥ್

August 24, 2018

ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಎನ್‍ಆರ್ ಕ್ಷೇತ್ರದ ವಾರ್ಡ್‍ಗಳಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‍ನವರು ಕೋಮು ಸೌಹಾರ್ದತೆಕ್ಕೆ ಧಕ್ಕೆ ತರಲು ಮುಂದಾಗಿದ್ದು, ವಾರ್ಡ್ 16ರ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಆರೀಫ್ ಹುಸೇನ್ ಪ್ರಚಾರದ ವೇಳೆ ಕೋಮು ಸೌಹಾರ್ದತೆಯನ್ನು ಕದಡುವಂತಹ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೀಫ್ ಹುಸೇನ್ ಅವರು ಪ್ರಚಾರದ ವೇಳೆ ಕೋಮು ಸಾಮರಸ್ಯ ಹಾಳು ಮಾಡುವಂತೆ ವರ್ತಿಸಿದ್ದಾರೆ. 16ನೇ…

1 1,425 1,426 1,427 1,428 1,429 1,611
Translate »