ಮೈಸೂರು

ನಾಳೆಯಿಂದ ಮೈಸೂರಲ್ಲಿ ‘ಮೈ ರಿಯಾಲ್ಟಿ-2018’ ಸ್ಥಿರಾಸ್ತಿ ಸಂಬಂಧಿತ ಪ್ರದರ್ಶನ
ಮೈಸೂರು

ನಾಳೆಯಿಂದ ಮೈಸೂರಲ್ಲಿ ‘ಮೈ ರಿಯಾಲ್ಟಿ-2018’ ಸ್ಥಿರಾಸ್ತಿ ಸಂಬಂಧಿತ ಪ್ರದರ್ಶನ

August 23, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಶಾಖೆ, ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ (ಕ್ರೆಡಾಯ್) ಮೈಸೂರು ಶಾಖೆ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ಆ.24ರಿಂದ 26ರವರೆಗೆ `ಮೈ ರಿಯಾಲ್ಟಿ-2018’ ಶೀರ್ಷಿಕೆಯಡಿ ಸ್ಥಿರಾಸ್ತಿ ಸಂಬಂಧಿತ ಬೃಹತ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬಿಎಐ ಮೈಸೂರು ಶಾಖೆಯ ಕಾರ್ಯದರ್ಶಿ ಕೆ.ಅಜಿತ್ ನಾರಾಯಣ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯ ಮಾಲ್ ಆಫ್…

ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಕೊಡುಗು ಜಿಲ್ಲಾ ಸಂತ್ರಸ್ತರಿಗೆ  ಪಾದಯಾತ್ರೆ ಮೂಲಕ ನಿಧಿ ಸಂಗ್ರಹಣೆ
ಮೈಸೂರು

ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಕೊಡುಗು ಜಿಲ್ಲಾ ಸಂತ್ರಸ್ತರಿಗೆ  ಪಾದಯಾತ್ರೆ ಮೂಲಕ ನಿಧಿ ಸಂಗ್ರಹಣೆ

August 23, 2018

ನಂಜನಗೂಡು: ತಾಲೂಕು ಬಿ.ಜೆ.ಪಿ ವತಿಯಿಂದ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಕೊಡಗಿನ ನೆರೆಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ನಗರದ ಪ್ರಮುಖ ಬಡಾ ವಣೆಗಳಲ್ಲಿ ಪಾದಯಾತ್ರೆ ಮೂಲಕ ನಿಧಿ ಸಂಗ್ರಹಿಸಿದರು. ಅಂಗಡಿಗಳು, ಹೊಟೆಲ್, ಚಿತ್ರಮಂದಿರಗಳಲ್ಲಿ ನೆರವು ಸಂಗ್ರಹಿಸ ಲಾಯಿತು. ನಂತರ ಶಾಸಕರು ಮಾತನಾಡಿ, ಕೊಡುಗು ಜಿಲ್ಲೆಯಲ್ಲಿ ಮಳೆಯಿಂದ ಆಸ್ತಿ-ಪಾಸ್ತಿ, ಪ್ರಾಣಹಾನಿಯಾಗಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯಾದ್ಯಂತ ನೆರವು ಬರುತ್ತಿದ್ದು, ನಂಜನಗೂಡು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಾಳೆಯೂ ಪಾದಯಾತ್ರೆಯೊಂದಿಗೆ ನಿಧಿ ಸಂಗ್ರಹಿಸ ಲಾಗುವುದು. ನಮ್ಮ…

ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ರಸ್ತೆ ತಡೆ
ಮೈಸೂರು

ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ರಸ್ತೆ ತಡೆ

August 23, 2018

ಕೆ.ಆರ್.ನಗರ:  ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿ ಧಾನ ಸುಟ್ಟ ಕೃತ್ಯವನ್ನು ಖಂಡಿಸಿ ಪಟ್ಟಣದ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ರಾದ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಪಟ್ಟಣದ ಅಂಬೇ ಡ್ಕರ್ ವೃತ್ತದ ಬಳಿ ಸಮಾವೇಶಗೊಂಡು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇ ಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪ್ರತಿಭಟನೆ ಆರಂಭಿಸಿದರು. ಈ ದೇಶಕ್ಕೆ ಸಂವಿಧಾನ ನೀಡುವುದ ರೊಂದಿಗೆ ಕಾಯಕ ಸಮಾಜಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ವರು ಅಂಬೇಡ್ಕರ್….

ರಾಜ್ಯ ಕಂಡ ಅಪರೂಪದ ರಾಜಕಾರಣಿ ದೇವರಾಜ ಅರಸರ ಸ್ಮರಣೆಯಲ್ಲಿ ಶ್ಲಾಘನೆ
ಮೈಸೂರು

ರಾಜ್ಯ ಕಂಡ ಅಪರೂಪದ ರಾಜಕಾರಣಿ ದೇವರಾಜ ಅರಸರ ಸ್ಮರಣೆಯಲ್ಲಿ ಶ್ಲಾಘನೆ

August 23, 2018

ಹೆಚ್.ಡಿ.ಕೋಟೆ:  ಸಾಮಾಜಿಕ ಬದಲಾವಣೆ ಹರಿಕಾರರಾಗಿ ಮತ್ತು ಸಮಾಜ ಸುಧಾರಣೆಗಾಗಿ ಶ್ರಮಿಸಿದ್ಧ ರಾಜ್ಯ ಕಂಡ ಅಪರೂಪದ ರಾಜಕಾರಣಿ ದೇವರಾಜ ಅರಸ್ ರವರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣ ದಲ್ಲಿ ನಡೆದ ಅರಸುರವರ ಸ್ಮರಣೆ ಕಾರ್ಯ ಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಎಲ್ಲಾ ಬಡವರು, ಶೋಷಿತರು, ಹಿಂದು ಳಿದ ವರ್ಗದವರನ್ನು ಮೇಲೆತ್ತಲು ಎಲ್.ಜಿ. ಹಾವನೂರು ಆಯೋಗ ರಚನೆ ಮಾಡಿದ್ದರು. ಅವರು ಕೊಟ್ಟ ವರದಿ ಆಧಾರದ ಮೇಲೆ ಅವರಿಗೆ ಮೀಸಲು…

ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅಭಿಮತ
ಮೈಸೂರು

ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅಭಿಮತ

August 23, 2018

ತಿ.ನರಸೀಪುರ: ಸಮಾಜವನ್ನು ಸನ್ಮಾರ್ಗದತ್ತ ಕೊಂಡೊ ಯ್ಯುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚು ಇದೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞೆ ಹಾಗೂ ಜಿಆರ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕಿ ಡಾ. ಗೀತಾ ರಾಮಾನುಜಂ ಹೇಳಿದರು. ಪಟ್ಟಣದ ಪಿಆರ್‍ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾಪದ್ಮ ಸಭಾಂಗಣ ದಲ್ಲಿ ನಡೆದ ಬಿಎಚ್‍ಎಸ್ ಗ್ರಾಮೀಣ ಶಿಕ್ಷಣ ಪ್ರೌಢಶಾಲೆ, ಪಿಯುಸಿ, ಪದವಿ ಹಾಗೂ ಕೈಗಾರಿಕಾ ತರಬೇತಿ ಕೇಂದ್ರ ಪ್ರಥಮ ವರ್ಷದ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು ಜಾತೀಯತೆ ಸೇರಿದಂತೆ ವಿವಿಧ…

ಹಣ ಹೂಡುವ ಬಗ್ಗೆ ಇಂದು ಅರಿವು ಕಾರ್ಯಕ್ರಮ
ಮೈಸೂರು

ಹಣ ಹೂಡುವ ಬಗ್ಗೆ ಇಂದು ಅರಿವು ಕಾರ್ಯಕ್ರಮ

August 23, 2018

ಮೈಸೂರು: ಎಸ್‍ಡಿಎಂ-ಐಎಂಡಿ, ಎನ್‍ಎಸ್‍ಇ ಮತ್ತು ಎನ್‍ಎಸ್‍ಡಿಎಲ್ ಸಂಯುಕ್ತಾಶ್ರಯದಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಆ.23ರಂದು ಆಯೋಜಿಸಲಾಗಿದೆ ಎಂದು ಎಸ್‍ಡಿಎಂ-ಐಎಂಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಶ್ರೀರಾಮ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಎಸ್‍ಡಿಎಂ-ಐಎಂಡಿ ಸಂಸ್ಥೆ ಅಂದು ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದೆ. ಬಂಡವಾಳ ಹೂಡಿಕೆಯ ವಿವಿಧ ಆಯಾಮಗಳ ಕುರಿತು ಚರ್ಚೆ, ಸಂವಾದ ನಡೆಯಲಿದ್ದು, ಇಂಟಿಗ್ರೇಟೆಡ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಎಜಿಎಂ ಚೇತನ್ ಆನಂದ್ ಹಾಗೂ ಎನ್‍ಎಸ್‍ಐ,…

ವಿಶ್ವ ಛಾಯಾಗ್ರಾಹಣ ದಿನಾಚರಣೆ
ಮೈಸೂರು

ವಿಶ್ವ ಛಾಯಾಗ್ರಾಹಣ ದಿನಾಚರಣೆ

August 23, 2018

ಮೈಸೂರು: ಛಾಯಾಗ್ರಾಹಣ ಕ್ಷೇತ್ರದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಉನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಛಾಯಾಗ್ರಾಹಕರು ತಮ್ಮ ಕೌಶಲ್ಯ ಮೆರೆಯಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಸಲಹೆ ನೀಡಿದರು. ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 179ನೇ ವಿಶ್ವಛಾಯಾಗ್ರಹಣ ದಿನಾಚರಣೆ ಹಾಗೂ ಫೋಟೋಗ್ರಫಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 1960ರಲ್ಲಿ ನಾನು ಛಾಯಾಗ್ರಾಹಣ ಆರಂಭಿಸಿದೆ. ಆಗ ಇಂದಿನಷ್ಟು ತಂತ್ರಜ್ಞಾನ ಮುಂದುವರೆದಿರಲಿಲ್ಲ. ಛಾಯಾಗ್ರಾಹಕರು ಇಂತಹ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ…

ನೆರೆ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಗತ್ಯ ಸಾಮಗ್ರಿ ವಿತರಣೆ
ಮೈಸೂರು

ನೆರೆ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಗತ್ಯ ಸಾಮಗ್ರಿ ವಿತರಣೆ

August 23, 2018

ಮೈಸೂರು: ಕೊಡಗು ಜಿಲ್ಲೆಯ ಮುರುಘಾ ಮಠದ ಶಾಖಾ ಮಠಗಳಾದ ಬೇಳೂರು ಮಠ, ಮಾದಾಪುರ ಮಠ ಹಾಗೂ ಅಬ್ಬಿ ಮಠದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಅಗತ್ಯ ಸಾಮಾಗ್ರಿಗಳನ್ನು ನೀಡಲಾಗುವುದು ಎಂದು ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹದೇವಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾ ಪದಾಧಿಕಾರಿಗಳು ಹಾಗೂ ಸದಸ್ಯರು ರಾಜ್ಯಾದ್ಯಂತ ತಮ್ಮ ಮಿತ್ರರಿಂದ ನೆರೆ ಸಂತ್ರಸ್ತರಿಗಾಗಿ ಸಹಾಯಧನ 5 ಲಕ್ಷ ರೂ. ಸಂಗ್ರಹಿಸಿದ್ದು, ಇದರಲ್ಲಿ ಅಗತ್ಯ ಸಾಮಾಗ್ರಿ ಗಳನ್ನು…

ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ: ಡಾ. ಕಸ್ತೂರಿರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ
ಮೈಸೂರು

ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ: ಡಾ. ಕಸ್ತೂರಿರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

August 22, 2018

ಬೆಂಗಳೂರು:  ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ವಿಜ್ಞಾನಿ ಡಾ. ಕಸ್ತೂರಿರಂಗನ್ ಸಮಿತಿ ನೀಡಿದ್ದ ವರದಿ ಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಇದರೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕಳೆದ 5 ವರ್ಷಗಳಿಂದ ನಡೆಯುತ್ತಿದ್ದ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಸಮರಕ್ಕೆ ತೆರೆ ಬಿದ್ದಂತಾಗಿದೆ. ರಾಜ್ಯ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್ ದವೆ, ಈ ತಿಂಗಳ 17ರಂದು ಕೇಂದ್ರಕ್ಕೆ ಪತ್ರ ಬರೆದಿದ್ದು, ಡಾ.ಕಸ್ತೂರಿರಂಗನ್ ವರದಿ ಅನುಷ್ಠಾನ ಸಾಧ್ಯವಿಲ್ಲ, ಪಶ್ಚಿಮ ಘಟ್ಟ ಸಂರಕ್ಷಣೆಗೆ ರಾಜ್ಯ ಸರ್ಕಾರ…

ಪರಿಹಾರ ನಿಧಿಗೆ ಚೆಕ್, ಡಿಡಿ ಮಾತ್ರ ನೀಡಿ: ಸಿಎಂ
ಮೈಸೂರು

ಪರಿಹಾರ ನಿಧಿಗೆ ಚೆಕ್, ಡಿಡಿ ಮಾತ್ರ ನೀಡಿ: ಸಿಎಂ

August 22, 2018

ಬೆಂಗಳೂರು: ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗಾಗಿ ನೀಡುವ ದೇಣಿಗೆಯನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಹೆಸರಿನಡಿಯಲ್ಲೇ ನೀಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ. ಪರಿಹಾರವನ್ನು ಹಣದ ರೂಪದಲ್ಲಿ ನೀಡಿದರೆ ದುರುಪಯೋಗ ಆಗುವ ಸಾಧ್ಯತೆ ಇದೆ. ಆದ್ದರಿಂದ ಚೆಕ್ ಹಾಗೂ ಡಿಡಿ ಮೂಲಕವಷ್ಟೇ ಪರಿ ಹಾರ ಮೊತ್ತ ತಲುಪಿಸಿ. ಯಾವುದೇ ಸಂದರ್ಭದಲ್ಲೂ ನೀವು ನೀಡುವ ಚೆಕ್‍ಗಳನ್ನು ನಮ್ಮ ಕಾರ್ಯಾಲಯ ಪಡೆದುಕೊಳ್ಳಲಿದೆ ಹಾಗೂ ಈ ಹಣ ಎಲ್ಲಿಯೂ ದುರುಪಯೋಗ ಆಗದಂತೆ ಭರವಸೆ ಇತ್ತಿದ್ದಾರೆ.

1 1,427 1,428 1,429 1,430 1,431 1,611
Translate »