ಮೈಸೂರು

ತಿಂಗಳ ಹಿಂದೆ ಸಂಭವಿಸಿದ ಭೂಕಂಪನವೇ ಕೊಡಗಿನ ಭೂಕುಸಿತಕ್ಕೆ ಕಾರಣವಿರಬಹುದು
ಮೈಸೂರು

ತಿಂಗಳ ಹಿಂದೆ ಸಂಭವಿಸಿದ ಭೂಕಂಪನವೇ ಕೊಡಗಿನ ಭೂಕುಸಿತಕ್ಕೆ ಕಾರಣವಿರಬಹುದು

August 22, 2018

ಸುಂಟಿಕೊಪ್ಪ:  ಮಳೆಯಿಂದ ಕೊಡಗಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭೂಕುಸಿತವಾಗಲು ತಿಂಗಳ ಹಿಂದೆ ಸಂಭವಿಸಿದ್ದ ಲಘು ಭೂಕಂಪನವೇ ಕಾರಣವಾಗಿರಬಹುದು ಎಂದು ಸಂಸದ ಪ್ರತಾಪ್‍ಸಿಂಹ ಅಭಿಪ್ರಾಯಿಸಿದ್ದಾರೆ. ಮಾದಾಪುರ ಸೇರಿದಂತೆ ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಾಚರಣೆ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿನ ಒಟ್ಟು ನಾಲ್ಕು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ನಷ್ಟವಾಗಿದೆ. ಸುಮಾರು 2 ಸಾವಿರ ಎಕರೆಗಿಂತ ಹೆಚ್ಚು ಭೂಮಿ ಕುಸಿದಿದೆ. 5 ಸಾವಿರಕ್ಕಿಂತ ಹೆಚ್ಚು ಮನೆಗಳು ನೆಲ ಸಮವಾಗಿವೆ….

ಕಾವೇರಿ ದಂಡೆಯ ನಿವಾಸಿಗಳ ದುಗುಡ
ಮೈಸೂರು

ಕಾವೇರಿ ದಂಡೆಯ ನಿವಾಸಿಗಳ ದುಗುಡ

August 22, 2018

ಸಿದ್ದಾಪುರ: ಸಿದ್ದಾಪುರ ಭಾಗದಲ್ಲಿ ಭೂ ಕುಸಿತ ಹೆಚ್ಚಾಗಿ ಸಂಭವಿಸಿಲ್ಲವಾದರೂ ಕಾವೇರಿ ನೀರಿನ ಪ್ರವಾಹಕ್ಕೆ ಜಲಾವೃತ ಗೊಂಡು ಹಲವಾರು ಮನೆಗಳು ಹಾನಿಗೊಳಗಾಗಿವೆ. ಇದೀಗ ನೀರಿನ ಮಟ್ಟ ಇಳಿಕೆಯಾಗಿದ್ದರೂ ತಾವು ಕಾವೇರಿ ನದಿ ದಡದಲ್ಲಿ ವಾಸಿಸಲು ನಿವಾಸಿಗಳು ಹಿಂಜರಿಯುತ್ತಿದ್ದಾರೆ. ಈ ಭಾಗದ ಕರಡಿಗೋಡು, ಬೆಟ್ಟದ ಕಾಡು, ಕುಂಬಾರಗುಂಡಿ, ಗುಹ್ಯ ಮತ್ತು ಕೂಡುಗದ್ದೆ ಪ್ರದೇಶದ ಹಲವಾರು ಮನೆಗಳು ಜಲಾವೃತಗೊಂಡಿದ್ದವು. ಗ್ರಾಮಗಳು ಸಂಪರ್ಕ ರಸ್ತೆಗಳನ್ನು ಕಳೆದುಕೊಂಡಿದ್ದವು. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಅಲ್ಲಿನ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಕೆಲವು…

ಜನರಲ್ಲಿ ಮನೋಸ್ಥೈರ್ಯ ತುಂಬುವ ಕಾರ್ಯ ಆರಂಭ
ಮೈಸೂರು

ಜನರಲ್ಲಿ ಮನೋಸ್ಥೈರ್ಯ ತುಂಬುವ ಕಾರ್ಯ ಆರಂಭ

August 22, 2018

ಮಡಿಕೇರಿ: ಭೂ ಕುಸಿತ ಹಾಗೂ ಪ್ರವಾಹ, ಮನೆ-ಕಾಫಿ ತೋಟಗಳು ಕೊಚ್ಚಿಕೊಂಡು ಹೋಗಿರುವ ಭಯಾನಕ ದೃಶ್ಯಗಳನ್ನು ಕಂಡು ಆಘಾತಗೊಂಡಿರುವ ನಿರಾಶ್ರಿತರಿಗೆ ಮಾನಸಿಕ ಸ್ಥೈರ್ಯ ತುಂಬಿ ಬದುಕಿನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಮಾನಸಿಕ ತಜ್ಞ ವೈದ್ಯ ಡಾ.ರೂಪೇಶ್ ಗೋಪಾಲ್ ಅವರು ಜಿಲ್ಲೆಯ ವೈದ್ಯರು, ಮಾನಸಿಕ ತಜ್ಞರು ಹಾಗೂ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಿದ್ದರು. ಡಾ.ರೂಪೇಶ್‍ಗೋಪಾಲ್ ಅವರು ಭಾರತೀಯ…

ಇನ್ನೂ 3 ತಿಂಗಳು ಪ್ರಕೃತಿ ಆತಂಕ ಮತ್ತೆ ಭವಿಷ್ಯ ನುಡಿದ ಕೋಡಿಶ್ರೀ
ಮೈಸೂರು

ಇನ್ನೂ 3 ತಿಂಗಳು ಪ್ರಕೃತಿ ಆತಂಕ ಮತ್ತೆ ಭವಿಷ್ಯ ನುಡಿದ ಕೋಡಿಶ್ರೀ

August 22, 2018

ಹಾಸನ: ಕರ್ನಾಟಕ ಮತ್ತು ಕೇರಳದಲ್ಲಿ ನೈಸರ್ಗಿಕ ವಿಕೋಪ ಕುರಿತು ಮತ್ತೊಮ್ಮೆ ಭವಿಷ್ಯ ನುಡಿದಿರುವ ಅರಸೀಕೆರೆ ತಾಲೂಕಿನ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಇನ್ನೂ 3 ತಿಂಗಳು ಪ್ರಕೃತಿ ವಿಕೋಪಗಳು ಮುಂದುವರಿ ಯಲಿವೆ ಎಂದು ತಿಳಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮಳೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಕೋಪಗಳು ಇನ್ನೂ ಮೂರು ತಿಂಗಳು ಮುಂದುವರಿಯಲಿದೆ. ಜನರಿಗೆ ಇದರಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದಿದ್ದಾರೆ. ಮುಂದಿನ ಕಾರ್ತಿಕ ಮಾಸದವರೆಗೂ ಮಳೆ ಆರ್ಭಟಿಸಲಿದೆ. ಇದರಿಂದ ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಕೋಪದಿಂದ…

ಮೈಸೂರು ಪಾಲಿಕೆ ಚುನಾವಣೆ 44 ನಾಮಪತ್ರ ತಿರಸ್ಕøತ
ಮೈಸೂರು

ಮೈಸೂರು ಪಾಲಿಕೆ ಚುನಾವಣೆ 44 ನಾಮಪತ್ರ ತಿರಸ್ಕøತ

August 22, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾ ವಣೆಗೆ ನಾಮಪತ್ರ ಸಲ್ಲಿಸಿದ್ದ 484 ಅಭ್ಯರ್ಥಿಗಳ ಪೈಕಿ 25 ಅಭ್ಯರ್ಥಿಗಳ 44 ನಾಮಪತ್ರ ತಿರಸ್ಕøತಗೊಂಡಿದ್ದು, 459 ಉಮೇದುವಾರಿಕೆ ಸಿಂಧುವಾಗಿವೆ. ಆ.13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಂದಿನಿಂದ ಕಡೇ ದಿನವಾದ ಸೋಮವಾರದವರೆಗೆ 65 ವಾರ್ಡ್‍ನಿಂದ 484 ಅಭ್ಯರ್ಥಿಗಳಿಂದ 541 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ ಕಡೇ ದಿನವಾದ ಸೋಮ ವಾರ 495 ನಾಮಪತ್ರಗಳು ಸಲ್ಲಿಕೆ ಯಾಗಿದ್ದವು. ಚುನಾವಣಾಧಿಕಾರಿಗಳು ಮಂಗಳವಾರ ನಾಮಪತ್ರಗಳ ಪರಿ ಶೀಲನೆ ನಡೆಸಿದ ವೇಳೆ ವಿವಿಧ ಕಾರಣ ಗಳಿಂದ 25…

ಕೊಡಗು ನೆರೆಪೀಡಿತ ಸಂತ್ರಸ್ತರ ನೆರವಿಗೆ 100 ಬಯೋ ಟಾಯ್ಲೆಟ್‍ನೊಂದಿಗೆ ಧಾವಿಸಿದ : 300 ಮಂದಿ ಬಿಬಿಎಂಪಿ ಪೌರಕಾರ್ಮಿಕರು
ಮೈಸೂರು

ಕೊಡಗು ನೆರೆಪೀಡಿತ ಸಂತ್ರಸ್ತರ ನೆರವಿಗೆ 100 ಬಯೋ ಟಾಯ್ಲೆಟ್‍ನೊಂದಿಗೆ ಧಾವಿಸಿದ : 300 ಮಂದಿ ಬಿಬಿಎಂಪಿ ಪೌರಕಾರ್ಮಿಕರು

August 21, 2018

ಮೈಸೂರು: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ದಯನೀಯ ಸ್ಥಿತಿಯಲ್ಲಿರುವ ಸಂತ್ರಸ್ತರ ನೆರವಿಗೆ ಬೆಂಗಳೂರಿನ ಪೌರಕಾರ್ಮಿಕರು ಕೈಜೋಡಿಸಿದ್ದಾರೆ. ಒಟ್ಟು 300 ಮಂದಿ ಪೌರಕಾರ್ಮಿಕರು ಹಾಗೂ ನಾಲ್ವರು ಆರೋಗ್ಯಾಧಿಕಾರಿಗಳು 6 ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬೆಂಗಳೂರಿನಿಂದ ಮಡಿಕೇರಿ ತಲುಪಿದ್ದು, ಸೈನಿಕರು, ಪೊಲೀ ಸರು, ಅಗ್ನಿಶಾಮಕದಳದೊಂದಿಗೆ ಸಂತ್ರ ಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಭಾನುವಾರ 150 ಮಂದಿ ಬೆಂಗಳೂರಿನಿಂದ ಹೊರಟು ರಾತ್ರಿ ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿ ಸೋಮವಾರ ಬೆಳಿಗ್ಗೆ ಮಡಿಕೇರಿ ತಲುಪಿದರೆ, ಉಳಿದ 150 ಮಂದಿಯ ಮತ್ತೊಂದು…

ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ ಮೃತದೇಹಕ್ಕಾಗಿ ಮುಂದುವರೆದ ಶೋಧ
ಮೈಸೂರು

ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ ಮೃತದೇಹಕ್ಕಾಗಿ ಮುಂದುವರೆದ ಶೋಧ

August 21, 2018

ಮೈಸೂರು: ಗೆಳೆಯರೊಂದಿಗೆ ಈಜಲು ಹೋಗಿ ಬಾಲಕನೋರ್ವ ಪಂಪ್‍ಹೌಸ್ ಸಮೀಪದ ವರುಣಾ ನಾಲೆಯಲ್ಲಿ ನೀರು ಪಾಲಾಗಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಮೇಟಗಳ್ಳಿ ನಿವಾಸಿ ಸುಧಾಕರ್ ಶೆಟ್ಟಿ ಅವರ ಮಗ ಗಗನ್(16) ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ. ಮೇಟಗಳ್ಳಿಯ ಕುವೆಂಪು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಗಗನ್ ಶನಿವಾರ ಶಾಲೆ ಬಿಟ್ಟ ನಂತರ ಮನೆಗೆ ಹಿಂದಿರುಗಿ ವಾಲಿಬಾಲ್ ಆಟ ಆಡುತ್ತೇನೆಂದು ಹೇಳಿ ಸಹೋದರ ಸುಜನ ಹಾಗೂ ಇತರ 5 ಮಂದಿ ಗೆಳೆಯರೊಂದಿಗೆ ಹೊರಗೆ ಹೋಗಿದ್ದ. ಸ್ಕೂಟರ್‍ಗಳಲ್ಲಿ ಕೆಆರ್‍ಎಸ್…

ಆ.29ರಿಂದ ಮೈಸೂರು ರೇಸುಗಳು ಆರಂಭ
ಮೈಸೂರು

ಆ.29ರಿಂದ ಮೈಸೂರು ರೇಸುಗಳು ಆರಂಭ

August 21, 2018

ಮೈಸೂರು: ಆಗಸ್ಟ್ 29ರಿಂದ ಅಕ್ಟೋಬರ್ 21ರವರೆಗೆ ಮೈಸೂರು ರೇಸುಗಳು-2018 ನಡೆಯಲಿವೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕ್ಲಬ್(ಒಖಅ) ಲಿಮಿಟೆಡ್‍ನಲ್ಲಿ ಇಂದು ಎಂಆರ್‍ಸಿ ಅಧ್ಯಕ್ಷ ಜಿ.ವೆಂಕಟೇಶ ಸುದ್ದಿಗೋಷ್ಠಿಯಲ್ಲಿ ರೇಸುಗಳ ಮಾಹಿತಿ ನೀಡಿದರು. ಆಗಸ್ಟ್ 30ರಂದು 4 ವರ್ಷ ಮತ್ತು ಮೇಲ್ಪಟ್ಟ ಕುದುರೆಗಳಿಗಾಗಿ ಕೃಷ್ಣರಾಜ ಒಡೆಯರ್ ಮೆಮೋರಿಯಲ್ ಟ್ರೋಫಿ(ಗ್ರೇಡ್-3) ಪಂದ್ಯ, ಸೆಪ್ಟೆಂಬರ್ 3ರಂದು ದಿ ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ 1000 ಗಿನ್ನೀಸ್ ಪಂದ್ಯ, ಸೆಪ್ಟೆಂಬರ್ 13ರಂದು ದಿ ಮಹರಾಜಾಸ್ ಕಪ್, ಸೆಪ್ಟೆಂಬರ್ 27ರಂದು ಜಯಚಾಮರಾಜ…

ಸೇನೆಗೇ ಸವಾಲಾದ ಸೈನಿಕರ ನಾಡು
ಕೊಡಗು, ಮೈಸೂರು

ಸೇನೆಗೇ ಸವಾಲಾದ ಸೈನಿಕರ ನಾಡು

August 20, 2018

ಮಡಿಕೇರಿ: ಭಾರತೀಯ ಸೇನೆಗೆ ಹಲವಾರು ಸೈನಿಕರು ಹಾಗೂ ಸೇನಾಧಿಕಾರಿಗಳನ್ನು ಕೊಡುಗೆ ನೀಡಿದ ಸೈನಿಕರ ನಾಡು ಕೊಡಗು ಇದೀಗ ಸೇನೆಗೇ ಸವಾಲಾಗಿ ಪರಿಣಮಿಸಿದೆ. ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ವೇರ್ಪಟ್ಟು ಮನೆ ಹಾಗೂ ಗುಡ್ಡಗಳು ಕುಸಿದ ಪರಿಣಾಮ ಪ್ರಾಣ ಉಳಿಸಿಕೊಳ್ಳಲು ಬೆಟ್ಟವೇರಿ ಕಳೆದ 4 ದಿನಗಳಿಂದ ಕುಳಿತು ರಕ್ಷಣೆಗಾಗಿ ಅಂಗಲಾಚುತ್ತಿರುವ ಜನರ ರಕ್ಷಿಸಲು ಕೊಡಗಿಗೆ ಬಂದಿರುವ ಸೇನಾ ಪಡೆಗೆ ಇಲ್ಲಿನ ಭೌಗೋಳಿಕ ಪರಿಸ್ಥಿತಿ ತಿಳಿಯದೇ ಭಾರೀ ಸವಾಲು ಎದುರಾಗಿದೆ. ಇಂದೂ ಕೂಡ ಮಳೆ ಸುರಿದ ಪರಿಣಾಮ ಉಂಟಾದ…

ಸಂತ್ರಸ್ತರಿಗೆ ವಸತಿ ಕಲ್ಪಿಸಲು  ಜಾಗ ಗುರುತಿಸಲು ಸಿಎಂ ಸೂಚನೆ
ಮೈಸೂರು

ಸಂತ್ರಸ್ತರಿಗೆ ವಸತಿ ಕಲ್ಪಿಸಲು  ಜಾಗ ಗುರುತಿಸಲು ಸಿಎಂ ಸೂಚನೆ

August 20, 2018

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯ ವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯ ಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿ ಮಾತನಾಡಿದರು. ಸಂತ್ರಸ್ತ ರಿಗೆ ನೆಲೆ ಕಲ್ಪಿಸುವುದರ ಜೊತೆಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿ ಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ…

1 1,428 1,429 1,430 1,431 1,432 1,611
Translate »