ಮೈಸೂರು

ಕೊಡಗಿನಲ್ಲಿ ಮಳೆಯ ಅವಾಂತರ: ಗಜಪಯಣದ ಮೇಲೆ ಕರಿನೆರಳು
ಮೈಸೂರು

ಕೊಡಗಿನಲ್ಲಿ ಮಳೆಯ ಅವಾಂತರ: ಗಜಪಯಣದ ಮೇಲೆ ಕರಿನೆರಳು

August 20, 2018

ಮೈಸೂರು: ನೆರೆ ಜಿಲ್ಲೆ ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಹಾಗೂ ಭೂ ಕುಸಿತದಿಂದ ಉಂಟಾಗಿರುವ ಅನಾಹುತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಗಜ ಪಯಣದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಸರಳ ಕಾರ್ಯಕ್ರಮದ ಮೂಲಕ ಆನೆಗಳನ್ನು ಕರೆತರುವಂತೆ ಅಥವಾ ಕಾರ್ಯಕ್ರಮದ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ. ಪ್ರತಿ ವರ್ಷದಂತೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನು ಹುಣಸೂರು ತಾಲೂಕಿನ ವೀರನಹೊಸಳ್ಳಿ ಹಾಡಿಯ ಆಶ್ರಮ ಶಾಲೆಯ ಆವರಣದಿಂದ ಅದ್ಧೂರಿ ಕಾರ್ಯಕ್ರಮದ ಮೂಲಕ ಗಜಪಡೆಯನ್ನು ಜಿಲ್ಲಾಡಳಿತ…

2ನೇ ದಿನವೂ ಕೊಡಗಲ್ಲಿ ವೈಮಾನಿಕ  ಸಮೀಕ್ಷೆ ನಡೆಸಿದ ಸಿಎಂ ಕುಮಾರಸ್ವಾಮಿ
ಮೈಸೂರು

2ನೇ ದಿನವೂ ಕೊಡಗಲ್ಲಿ ವೈಮಾನಿಕ  ಸಮೀಕ್ಷೆ ನಡೆಸಿದ ಸಿಎಂ ಕುಮಾರಸ್ವಾಮಿ

August 20, 2018

ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ, ಸಂತ್ರಸ್ತರಿಗೆ ಅಭಯ ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 2ನೇ ದಿನವಾದ ಇಂದೂ ಸಹ ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು. ನಂತರ ಮಡಿಕೇರಿ-ಮಂಗಳೂರು ರಸ್ತೆ ಕುಸಿದಿರುವ ಪ್ರದೇಶವನ್ನು ವೀಕ್ಷಿಸಿದರು. ಮಡಿಕೇರಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಗುಡ್ಡ ಕುಸಿದು ಅಂಗಡಿ ಗಳು ನೆಲಸಮವಾಗಿರುವುದನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಅಲ್ಲಿ ಹೊಸದಾಗಿ ಅಂಗಡಿ ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಂದೂ ಕೂಡ ನಿರಾಶ್ರಿತರ ಶಿಬಿರಗಳಿಗೆ ಭೇಟಿ…

ಮಳೆ ಸಂತ್ರಸ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 2 ತಿಂಗಳ ಸಂಬಳ
ಮೈಸೂರು

ಮಳೆ ಸಂತ್ರಸ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 2 ತಿಂಗಳ ಸಂಬಳ

August 20, 2018

ಮೈಸೂರು: ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನಿರಾಶ್ರಿತರಾದವರಿಗೆ ತಮ್ಮ 2 ತಿಂಗಳ ಸಂಬಳ ನೀಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ. ಮೈಸೂರಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿ, ಈ ವಿಷಯ ತಿಳಿಸಿದರು. ಕೇರಳ ನಿರಾಶ್ರಿತರಿಗೆ 1 ತಿಂಗಳ ಸಂಬಳ ಹಾಗೂ ಕೊಡಗು ಜಿಲ್ಲೆಯ ನಿರಾಶ್ರಿತ ರಿಗೆ 1 ತಿಂಗಳ ಸಂಬಳ ನೀಡುವುದಾಗಿ ಘೋಷಿಸಿದರು. ಪ್ರವಾಹ ನಿರಾಶ್ರಿತರಿಗೆ ಆಹಾರ, ಸಾಮಗ್ರಿಗಳ ಜೊತೆಗೆ ಹಣಕಾಸಿನ ನೆರವು ನೀಡಿದರೆ ತುಂಬ ಅನುಕೂಲವಾಗ ಲಿದೆ ಎಂದರು….

ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಪಕ್ಷ ನಾಯಕ ಯಡಿಯೂರಪ್ಪ ಭೇಟಿ
ಕೊಡಗು, ಮೈಸೂರು

ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಪಕ್ಷ ನಾಯಕ ಯಡಿಯೂರಪ್ಪ ಭೇಟಿ

August 20, 2018

ಕುಶಾಲನಗರ: ನೆರೆಪ್ರವಾಹದಿಂದ ಮುಳು ಗಡೆಯಾಗಿರುವ ವಸತಿ ಪ್ರದೇಶಗಳಿಗೆ ಭಾನುವಾರ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಗಳಿಗೆ ಅಧಿಕಾರಿಗಳು ಹಾಗೂ ಪಕ್ಷದ ಇತರೆ ನಾಯಕ ರೊಂದಿಗೆ ಭೇಟಿ ನೀಡಿದ್ದ ಯಡಿಯೂರಪ್ಪ, ನೆರೆಪ್ರವಾಹ ದಿಂದ ಉಂಟಾಗಿರುವ ಅಪಾರ ಆಸ್ತಿಪಾಸ್ತಿ ಹಾನಿ ಬಗ್ಗೆ, ಪರಿಹಾರ ಕ್ರಮಗಳು, ಸಂತ್ರಸ್ತರ ಆಶ್ರಯ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕೊಡವ ಸಮಾಜ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ…

ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ
ಕೊಡಗು, ಮೈಸೂರು

ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ

August 20, 2018

ಮನೆ ಕುಸಿಯಿತು… ಜಮೀನು ಕೊಚ್ಚಿ ಹೋಯಿತು… ಕಾಡು-ಗುಡ್ಡಗಳಲ್ಲಿ ನಡೆದೇ ಬಂದೆವು ಮೈಸೂರು: ಮಹಾಮಾರಿ ಮಳೆಯಿಂದಾಗಿ ದಕ್ಷಿಣ ಕಾಶ್ಮೀರ ಕೊಡಗಿನ ಚಿತ್ರಣ ಭಾಗಶಃ ಬದಲಾಗಿ ಹೋಗಿದೆ. ನಿಸರ್ಗದ ಮಡಿಲಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದ ಜನರ ಬದುಕು ಅಕ್ಷರಶಃ ನೆರೆಯಲ್ಲೇ ಕೊಚ್ಚಿ ಹೋಗಿದೆ. ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರ ದಲ್ಲಿ ಆಶ್ರಯ ಪಡೆದಿದ್ದಾರೆ. ನೂರಾರು ಮಂದಿ, ಮಳೆಯ ಆರ್ಭಟದ ನಡುವೆ ಯೇ ಹತ್ತಾರು ಕಿಮೀ ನಡೆದುಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ. ಹೀಗೆ ಬದುಕುಳಿದ ಕುಟುಂಬಗಳು ಬೇರೆ ಊರುಗಳಲ್ಲಿರುವ…

ಕೊಡಗಿನ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು: ಸರ್ಕಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ
ಕೊಡಗು, ಮೈಸೂರು

ಕೊಡಗಿನ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು: ಸರ್ಕಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ

August 20, 2018

ಮಡಿಕೇರಿ: ಅತಿವೃಷ್ಟಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದ್ದರೂ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಮಂದಗತಿಯ ಧೋರಣೆಯನ್ನು ಅನುಸರಿ ಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಮಳೆಯ ಪ್ರಮಾಣ ಇಳಿಮುಖಗೊಂಡ ಬಳಿಕ ಸಂತ್ರಸ್ತರ ಬದುಕನ್ನು ಹಸನುಗೊಳಿ ಸುವ ಶಾಶ್ವತ ಪರಿಹಾರ ಕಾರ್ಯಗಳಿಗೆ ಸರಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ. ಅತಿವೃಷ್ಟಿ ಪೀಡಿತ ಸುಂಟಿ ಕೊಪ್ಪ ವಿಭಾಗಗಳಿಗೆ ಭೇಟಿ ನೀಡಿ ಮಡಿಕೇರಿಗೆ ಆಗಮಿಸಿದ ಯಡಿಯೂರಪ್ಪ ಅವರು, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಳಿಂದ ಮಳೆಹಾನಿಯ ಬಗ್ಗೆ…

ಕೇರಳ ಪ್ರವಾಹ: ಸ್ವಲ್ಪ ಮಟ್ಟಿಗೆ ತಗ್ಗಿದ ಮಳೆ, ರಕ್ಷಣಾ ಕಾರ್ಯಾಚರಣೆ ಬಿರುಸು
ಮೈಸೂರು

ಕೇರಳ ಪ್ರವಾಹ: ಸ್ವಲ್ಪ ಮಟ್ಟಿಗೆ ತಗ್ಗಿದ ಮಳೆ, ರಕ್ಷಣಾ ಕಾರ್ಯಾಚರಣೆ ಬಿರುಸು

August 20, 2018

ಕೇರಳ: ಶತಮಾನದಲ್ಲಿಯೇ ಅತ್ಯಂತ ಭೀಕರ ಪ್ರವಾಹದ ಹೊಡೆತಕ್ಕೆ ತುತ್ತಾಗಿರುವ ನೆರೆಯ ಕೇರಳದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಮಳೆ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 8 ಜಿಲ್ಲೆಗಳಲ್ಲಿ 58 ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಡಿಜಿ ತಿಳಿಸಿದ್ದಾರೆ. ಈ ತಂಡಗಳು ರಸ್ತೆ ತೆರವು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚು ಹಾನಿಗೊಂಡಿರುವ ಪ್ರದೇಶಗಳಿಗೆ ಎನ್‍ಡಿಆರ್‍ಎಫ್ ತುಕಡಿಗಳನ್ನು ಸ್ಥಳಾಂತರಿ ಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಇಂದು ಬೆಳಿಗ್ಗೆ ಪಾಲ್ಕಾಡ್ ಜಿಲ್ಲೆಯಲ್ಲಿ…

ಕೇಂದ್ರದಿಂದ 100 ಕೋಟಿ ಬಿಡುಗಡೆ, ಇನ್ನಷ್ಟು ಅನುದಾನಕ್ಕೆ ಪ್ರಯತ್ನ ಮಾಜಿ ಸಿಎಂ ಯಡಿಯೂರಪ್ಪ
ಮೈಸೂರು

ಕೇಂದ್ರದಿಂದ 100 ಕೋಟಿ ಬಿಡುಗಡೆ, ಇನ್ನಷ್ಟು ಅನುದಾನಕ್ಕೆ ಪ್ರಯತ್ನ ಮಾಜಿ ಸಿಎಂ ಯಡಿಯೂರಪ್ಪ

August 20, 2018

ಮೈಸೂರು:  ಮಳೆಯಿಂದಾಗಿ ರುವ ಹಾನಿ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನಷ್ಟು ಅನು ದಾನ ಬಿಡುಗಡೆ ಮಾಡುವಂತೆ ತಾವು ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಹಾಗೂ ಇತರೆ ಜಿಲ್ಲೆಗಳಲ್ಲಿ ಮಳೆಯಿಂದಾಗಿರುವ ಹಾನಿ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರ ಇನ್ನಷ್ಟು ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಮಳೆ ಸಂತ್ರಸ್ಥರಿಗೆ…

ಮೈಸೂರು ನಗರ ಪಾಲಿಕೆ ಚುನಾವಣೆ: ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ
ಮೈಸೂರು

ಮೈಸೂರು ನಗರ ಪಾಲಿಕೆ ಚುನಾವಣೆ: ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ

August 20, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ(ಆ.20) ಕಡೇ ದಿನವಾಗಿದ್ದು, ಮೂರು ಪಕ್ಷಗಳಲ್ಲೂ ಅಂತಿಮ ಗಳಿಗೆಯಲ್ಲಿ ಅಭ್ಯರ್ಥಿಗಳಿಗೆ `ಬಿ’ ಫಾರಂ ವಿತರಿಸುವ ಕಸರತ್ತು ನಡೆದಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸುವಲ್ಲಿ ಒಂದಷ್ಟು ಗೊಂದಲವಾಗಿದ್ದು, ನಾಲ್ಕೈದು ವಾರ್ಡ್‍ಗಳಲ್ಲಿ ಟಿಕೆಟ್‍ಗಾಗಿ ಜಟಾಪಟಿ ನಡೆಯುತ್ತಿದೆ. ಒಂದೆರಡು ವಾರ್ಡ್‍ಗಳ ಸಂಭಾವ್ಯ ಅಭ್ಯರ್ಥಿಗಳೇ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಇಂದಿನ (ಆ.19) `ಮೈಸೂರು ಮಿತ್ರ’ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಬಹುತೇಕ ಸಂಭಾವ್ಯ ಅಭ್ಯರ್ಥಿಗಳೇ ಅಧಿಕೃತವಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಗೊಂದಲವಿರುವ ವಾರ್ಡ್‍ಗಳಿಂದ…

ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ-70 ಅಭಿನಂದನಾ ಸಮಾರಂಭ: ಪ್ರಕಾಶನ ವೀರ ಡಿ.ಎನ್.ಲೋಕಪ್ಪ
ಮೈಸೂರು

ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ-70 ಅಭಿನಂದನಾ ಸಮಾರಂಭ: ಪ್ರಕಾಶನ ವೀರ ಡಿ.ಎನ್.ಲೋಕಪ್ಪ

August 20, 2018

ವಿಮರ್ಶಕ ಡಾ.ಎನ್.ಎಸ್.ತಾರಾನಾಥ್ ಬಣ್ಣನೆ ಮೈಸೂರು:  ಕಳೆದ ಮೂರೂವರೆ ದಶಕಗಳಿಂದ ಕನ್ನಡದ ಹಿರಿಯ ಲೇಖಕರಿಂದ ಇತ್ತೀಚಿನ ಯುವ ಲೇಖಕರವರೆಗೆ 1100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಮೈಸೂರಿನ ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಅವರು 70ನೇ ವಸಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಡಿ.ಎನ್.ಲೋಕಪ್ಪ ಅಭಿನಂದನಾ ಸಮಿತಿ ಆಶ್ರಯದಲ್ಲಿ ಅವರ ಗೆಳೆಯರು, ಅಭಿಮಾನಿಗಳು ಭಾನುವಾರ ಮೈಸೂರಿನಲ್ಲಿ ಆತ್ಮೀಯವಾಗಿ ಅಭಿನಂದಿಸಿದರು. ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಿರಿಗೆರೆ ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತ್ತೂರು ಶ್ರೀ ಶಿವರಾತ್ರಿ…

1 1,429 1,430 1,431 1,432 1,433 1,611
Translate »