ಕೊಡಗಿನ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು: ಸರ್ಕಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ
ಕೊಡಗು, ಮೈಸೂರು

ಕೊಡಗಿನ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು: ಸರ್ಕಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ

August 20, 2018

ಮಡಿಕೇರಿ: ಅತಿವೃಷ್ಟಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದ್ದರೂ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಮಂದಗತಿಯ ಧೋರಣೆಯನ್ನು ಅನುಸರಿ ಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಮಳೆಯ ಪ್ರಮಾಣ ಇಳಿಮುಖಗೊಂಡ ಬಳಿಕ ಸಂತ್ರಸ್ತರ ಬದುಕನ್ನು ಹಸನುಗೊಳಿ ಸುವ ಶಾಶ್ವತ ಪರಿಹಾರ ಕಾರ್ಯಗಳಿಗೆ ಸರಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ. ಅತಿವೃಷ್ಟಿ ಪೀಡಿತ ಸುಂಟಿ ಕೊಪ್ಪ ವಿಭಾಗಗಳಿಗೆ ಭೇಟಿ ನೀಡಿ ಮಡಿಕೇರಿಗೆ ಆಗಮಿಸಿದ ಯಡಿಯೂರಪ್ಪ ಅವರು, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಗಳಿಂದ ಮಳೆಹಾನಿಯ ಬಗ್ಗೆ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಪುನರ್ವಸತಿ ಕೇಂದ್ರಗಳಲ್ಲಿ ಉಟ್ಟ ಬಟ್ಟೆಯಲ್ಲೆ ಮನೆ ತೊರೆದು ಬಂದ ನಿರಾಶ್ರಿತರಿಗೆ ಮಳೆ ಕಳೆದ ಕೂಡಲೆ ‘ತಾತ್ಕಾಲಿಕ’ ನೆಲೆಯನ್ನು ಒದಗಿಸಬೇಕು. ತಿಂಗಳ ಬಳಿಕ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾ ಗಬೇಕಾಗಿದೆ ಎಂದು ತಿಳಿಸಿದರು.

ಪುನರ್ವಸತಿ ಕೇಂದ್ರÀ್ರಗಳಿಗೆ ತೆರಳಿದ ಸ್ಥಳ ಗಳಲ್ಲಿ ಅಲ್ಲಿನ ಸಂತ್ರಸ್ತರು, ತಮ್ಮ ಸಂಕಷ್ಟ ಗಳಿಗೆ ಸರ್ಕಾರ ಧಾವಿಸಿ ರಕ್ಷಣೆಯನ್ನು ಒದಗಿ ಸಿಲ್ಲ ಎನ್ನುವ ಅಸಮಾಧಾನವನ್ನು ಹೊಂದಿ ರುವುದಾಗಿ ತಿಳಿಸಿದ ಯಡಿಯೂರಪ್ಪ, ಸಂತ್ರಸ್ತರಿಗೆ ಅತಿವೃಷ್ಟಿಯ ಪರಿಸ್ಥತಿ ತಿಳಿ ಗೊಂಡ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ನೆಲೆ ಒದಗಿಸಬೇಕಾಗಿದೆ ಯೆಂದು ತಿಳಿಸಿ, ತಿಂಗಳ ಒಳಗಾಗಿ ಸಂತ್ರಸ್ತ ರಿಗೆ ಮನೆಗಳನ್ನು ನಿರ್ಮಿಸಿಕೊಡುವುದಕ್ಕೆ ಪೂರಕವಾದ ಜಾಗವನ್ನು ಗುರುತಿಸುವ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭ ಸೂಚನೆಯನ್ನು ನೀಡಿದರು.
ಮುಂಗಾರಿನ ಆರ್ಭಟದಿಂದ ಕೊಡಗು ನಲುಗಿದ್ದು, ಇಲ್ಲಿ ಸಂತ್ರಸ್ತರಿಗೆ ನೆರವು ನೀಡಲು ದಾನಿಗಳ ಯಾವುದೇ ಕೊರತೆ ಇಲ್ಲ.

ಈಗಾಗಲೆ ಅಗತ್ಯ ಮೀರಿ ಹೊರ ಜಿಲ್ಲೆಗಳಿಂದ ಆಹಾರ ಸಾಮಗ್ರಿಗಳನ್ನು ಮನ ಬಂದಂತೆ ಕಳುಹಿಸಲಾಗುತ್ತಿದೆ. ಇದನ್ನು ಸಮಪರ್ಕವಾಗಿ ವಿತರಿಸಲೂ ಸಾಧ್ಯವಿಲ್ಲ ವಾಗಿದ್ದು, ಬೇಡಿಕೆಗೆ ತಕ್ಕಂತೆ ಮಾತ್ರ ಆಹಾರವನ್ನು ಕಳುಹಿಸುವಂತೆ ನಾಡಿನ ಜನತೆಯಲ್ಲಿ ಮನವಿ ಮಾಡಿದ ಯಡಿ ಯೂರÀಪ್ಪ ಅವರು, ಅಳತೆ ಮೀರಿ ಕಳುಹಿ ಸುವ ಚಪಾತಿ, ಬ್ರೆಡ್ ಮೊದಲಾದ ಸಾಮಗ್ರಿ ಗಳು ಬಳಕೆಗೆ ಬಾರದೆ ಹಾಳಾಗಿ ಹೋಗುವ ಸಾಧ್ಯತೆಗಳೆ ಅಧಿಕವೆಂದು ತಿಳಿಸಿದರು.

ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರಮುಖ ವಾಣಿಜ್ಯಕ ಕೃಷಿ ಕಾಫಿ, ಏಲಕ್ಕಿ ಸೇರಿದಂತೆ ವಿವಿಧ ಕೃಷಿ ಬೆಳೆÀಗಳಿಗೆ ಅಪಾರ ಹಾನಿ ಸಂಭವಿಸಿದ್ದು, ಈ ಬಗ್ಗೆ ವಿಸ್ತøತ ವರದಿ ಯನ್ನು ತಯಾರಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಅಗತ್ಯ ಪರಿಹಾರ ವನ್ನು ಒದಗಿಸುವ ಕಾರ್ಯ ನಡೆಯ ಬೇಕೆಂದು ಯಡಿಯೂರಪ್ಪ ತಿಳಿಸಿದರು.

ಈಗಾಗಲೆ ಜಿಲ್ಲೆಯ ಹಲವೆಡೆಗಳಲ್ಲಿ ಭಾರೀ ಮಳೆ ಮತ್ತು ಭೂ ಕುಸಿತದಂತಹ ಘಟನೆ ಗಳಿಂದ ಸಹಸ್ರಾರು ಮಂದಿ ಮನೆಗಳನ್ನು ತೊರೆದು ಉಟ್ಟ ಬಟ್ಟೆಯಲ್ಲೆ ತಮ್ಮ ಮನೆ ಯನ್ನು ತೊರೆಯುತ್ತಿದ್ದಾರೆ. ಇಂತಹ ಪರಿ ಸ್ಥಿತಿಯ ದುರುಪಯೋಗ ಪಡೆದು ಕಳ್ಳತನ ಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಆದ್ಯ ಗಮನ ಹರಿಸಿ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಶೋಭಾ ಅಸಮಾಧಾನ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಭಾರೀ ಪ್ರಮಾಣದಲ್ಲಿ ನಡೆದಿದ್ದರೂ, ಮುಖ್ಯಮಂತ್ರಿಗಳು ಲೆಕ್ಕಕ್ಕೆ ಎಂಬಂತೆ ಬಂದು ತೆರಳಿದ್ದಾರೆದಂದು ಬೇಸರ ವ್ಯಕ್ತಪಡಿಸಿ, ಸಂತ್ರಸ್ತÀರ ಸಂಕಷ್ಟ ಗಳಿಗೆ ಸರ್ಕಾರ ಸೂಕ್ತ ಸ್ಪಂದನ ನೀಡಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ತೆರೆಯಲಾಗಿರುವ ಪುನರ್ವ ಸತಿ ಕೇಂದ್ರÀ್ರಗಳಲ್ಲಿ ಸಂತ್ರಸ್ತರಿಗೆ ಅಗತ್ಯ ಊಟದ ವ್ಯವಸ್ಥೆಯನ್ನು ಒದಗಿಸಲು ಅಡುಗೆ ಯವರನ್ನು ನಿಯುಕ್ತಿಗೊಳಿಸುವುದರತ್ತ ಜಿಲ್ಲಾಡಳಿತ ಗಮನ ಹರಿಸುವುದರೊಂದಿಗೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು, ಮಹಿಳೆಯರಿಗೆ ಅಗತ್ಯ ಶೌಚಾಲಯದ ವ್ಯವಸ್ಥೆ ಯನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಎಂಎಲ್‍ಸಿ ಸುನಿಲ್ ಸುಬ್ರಮಣಿ, ಎಂಪಿ ಪ್ರತಾಪ ಸಿಂಹ, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ರಾಜ್ಯ ಕಾರ್ಯದರ್ಶಿ ಅಂಬು ದಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Translate »