ಮೈಸೂರು

ಸಂವಿಧಾನ ಸುಟ್ಟವರ  ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಸಂವಿಧಾನ ಸುಟ್ಟವರ  ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

August 19, 2018

ಮೈಸೂರು: ನವದೆಹಲಿಯ ಜಂತರ್-ಮಂತರ್ ಮೈದಾನದಲ್ಲಿ ಭಾರತದ ಸಂವಿಧಾನದ ಪ್ರತಿಗಳನ್ನು ಸುಟ್ಟ ದುಷ್ಕರ್ಮಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಪುರಭವನದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜಂತರ್ ಮಂತರ್ ಮೈದಾನದಲ್ಲಿ ದೇಶದ ಸಂವಿಧಾನದ ಪ್ರತಿಗಳನ್ನು ಸುಟ್ಟು ಕಿಡಿಗೇಡಿಗಳು ಸಂವಿಧಾನ ಬಗ್ಗೆ ತಮ್ಮ ಅಗೌರವ ತೊರಿದ್ದಾರೆ. ಇದು ದೇಶದ್ರೋಹದ ಕೃತ್ಯವಾಗಿದ್ದು, ಇವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸೇನೆ ರಾಜ್ಯಾಧ್ಯಕ್ಷ…

ಸರ್ವೆ ನಂ.4 ಸಮಸ್ಯೆ ಬಗೆಹರಿಸಿದ್ದು ನಾನೇ :ಈ ವಿಚಾರದಲ್ಲಿ ಶಾಸಕ ಎಸ್.ಎ.ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪ
ಮೈಸೂರು

ಸರ್ವೆ ನಂ.4 ಸಮಸ್ಯೆ ಬಗೆಹರಿಸಿದ್ದು ನಾನೇ :ಈ ವಿಚಾರದಲ್ಲಿ ಶಾಸಕ ಎಸ್.ಎ.ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪ

August 19, 2018

ಮೈಸೂರು: ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಕುರುಬಾರಹಳ್ಳಿ ಸರ್ವೆ ನಂ.4ರ ವ್ಯಾಪ್ತಿಯ ಸಿದ್ದಾರ್ಥನಗರ, ಜೆ.ಸಿ.ನಗರ, ಕೆ.ಸಿ.ಲೇಔಟ್‍ನ ಸಮಸ್ಯೆಯನ್ನು ಬಗೆಹರಿಸಿದ್ದು ತಾವೇ. ಆದರೆ, ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರು ಸಮಸ್ಯೆಯನ್ನು ಬಗೆಹರಿಸಿದ್ದು ತಾವು ಎಂದು ಸುಳ್ಳು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಖರಾಬು ಎಂದು ಘೋಷಣೆಯಾಗಿದ್ದರಿಂದ ಈ ಬಡಾವಣೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಅವರ ಮನೆ ಮತ್ತು ನಿವೇಶನಗಳು ಅಸ್ತಿತ್ವ…

ಬಿಜೆಪಿಯಿಂದ ಟಿಕೆಟ್ ನೀಡಲು ಕುಂಚಟಿಗರ ಒತ್ತಾಯ
ಮೈಸೂರು

ಬಿಜೆಪಿಯಿಂದ ಟಿಕೆಟ್ ನೀಡಲು ಕುಂಚಟಿಗರ ಒತ್ತಾಯ

August 19, 2018

ಮೈಸೂರು: ತೀರಾ ಹಿಂದುಳಿದಿರುವ ಕುಂಚಿಟಿಗರ ಸಮಾಜಕ್ಕೆ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಮೈಸೂರು ಕುಂಚಿಟಿಗರ ಸಂಘವು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಎಂ.ಪಿ.ನಾಗರಾಜ ಅವರು ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸುಮಾರು 30ರಿಂದ 40 ಸಾವಿರ ಕುಂಚಿಟಿಗರಿದ್ದು, ಸಮಾಜದ ಯಾರೊಬ್ಬರೂ ಪಾಲಿಕೆ ಚುನಾವಣೆಯಲ್ಲಿ ಇದುವರೆಗೆ ಆಯ್ಕೆಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ 51ನೇ ವಾರ್ಡ್ (ಅಗ್ರಹಾರ) ಮತ್ತು 42ನೇ ವಾರ್ಡ್ (ಸರಸ್ವತಿಪುರಂ)ನಿಂದ ಆರ್.ಶಿವಕುಮಾರ್…

ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ಮೈಸೂರು

ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

August 19, 2018

ನಂಜನಗೂಡು: ಕಪಿಲಾ ನದಿಯಿಂದ ಜಲಾವೃತಗೊಂಡಿರುವ ಪ್ರವಾಹ ಪೀಡಿತ ಪ್ರದೇಶ ಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಮತ್ತು ಸಂಸದ ಆರ್.ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆಯಿಂದ ಜಲಾವೃತವಾಗಿರುವ ತೋಪಿನ ಬೀದಿ, ಹೆಜ್ಜಿಗೆ ಸೇತುವೆ, ಮಲ್ಲನಮೂಲೆ ಮಠ, ತಾಲೂಕಿನ ಬೊಕ್ಕಹಳ್ಳಿ, ಇಮ್ಮಾವು, ದೇವಾಲಯದಲ್ಲಿ ತೆರೆದಿರುವ ಗಿರಿಜಾ ಕಲ್ಯಾಣದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದ ರಾಮಯ್ಯ ಅವರು ನಾನು…

ಹುಲಿ ಸೆರೆ ಕಾರ್ಯಾಚರಣೆಗೆ ಡ್ರೋನ್ ಬಳಕೆ
ಮೈಸೂರು

ಹುಲಿ ಸೆರೆ ಕಾರ್ಯಾಚರಣೆಗೆ ಡ್ರೋನ್ ಬಳಕೆ

August 19, 2018

ಹುಣಸೂರು:  ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಬಳಿಯ ಕೆ.ಜಿ.ಹಬ್ಬನ ಕುಪ್ಪೆಯಲ್ಲಿ ಜಾನು ವಾರುಗಳನ್ನು ಬಲಿ ತೆಗೆದುಕೊಂಡು ಆತಂಕ ಹುಟ್ಟಿಸಿದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ. ಕಳೆದೊಂದು ವಾರದಿಂದೀಚೆಗೆ ಕೆ.ಜಿ. ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‍ನಲ್ಲಿ ಹುಲಿ ಕಾಣಿಸಿಕೊಂಡಿರುವುದಲ್ಲದೆ, ಈಗಾಗಲೇ ಎರಡು ಜಾನುವಾರುಗಳನ್ನು ತಿಂದು ಹಾಕಿದೆ, ಮತ್ತೆರಡು ಜಾನುವಾರು ಗಳನ್ನು ಗಾಯಗೊಳಿಸಿದೆ. ಹುಲಿ ಹಸು ವೊಂದರ ಮೇಲೆ ದಾಳಿ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ಗ್ರಾಮಸ್ಥರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ವನ್ಯಜೀವಿ…

ಕೊಡಗಿನ ನೆರೆ ಸಂತ್ರಸ್ತರಿಗೆ ಭೇರ್ಯದಲ್ಲಿ ನಿಧಿ ಸಂಗ್ರಹ
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ಭೇರ್ಯದಲ್ಲಿ ನಿಧಿ ಸಂಗ್ರಹ

August 19, 2018

ಭೇರ್ಯ:  ಕುಂಭದ್ರೋಣ ಮಹಾಮಳೆಗೆ ತತ್ತರಿಸಿರುವ ಕೊಡಗಿನ ಜನರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಜನರು ನೆರವು ನೀಡಬೇಕೆಂದು ಸಮೀಪದ ಅರಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಸ್.ಸ್ವಾಮಿ ಮನವಿ ಮಾಡಿದರು. ಅವರು ಭೇರ್ಯ ಗ್ರಾಮದ ಗಾಂಧಿವೃತ್ತದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕೊಡಗಿನ ಜನರ ಸಂಕಷ್ಟ ಪರಿಹಾರಕ್ಕೆ ಪರಿಹಾರ ನಿಧಿ ಸಂಗ್ರಹ ಮಾಡಿ ಮಾತನಾಡಿ ಸಂಕಷ್ಟ ದಲ್ಲಿರುವವರಿಗೆ ನೆರವು ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು. ವಸತಿ ಶಾಲೆಯ ಮೂವತ್ತಕ್ಕೂ ಹೆಚ್ಚು ವಿಧ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಮುಂಜನಹಳ್ಳಿ…

ಕೇರಳ ಪ್ರವಾಹ: ಸಾವಿನ ಸಂಖ್ಯೆ 324ಕ್ಕೆ ಏರಿಕೆ, ಇಂದು ಪ್ರಧಾನಿ ಮೋದಿ ಭೇಟಿ
ಮೈಸೂರು

ಕೇರಳ ಪ್ರವಾಹ: ಸಾವಿನ ಸಂಖ್ಯೆ 324ಕ್ಕೆ ಏರಿಕೆ, ಇಂದು ಪ್ರಧಾನಿ ಮೋದಿ ಭೇಟಿ

August 18, 2018

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆ ಗಳ ಅವಧಿಯಲ್ಲಿ ಮಳೆಯಿಂದಾಗಿ ಬರೊಬ್ಬರಿ 106 ಮಂದಿ ಸಾವಿಗೀಡಾ ಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 324ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರವಾಹದಿಂದ 324 ಮಂದಿ ಜೀವ ಕಳೆದುಕೊಂಡಿದ್ದು, ಸುಮಾರು 2 ಲಕ್ಷ ಮಂದಿ ಪ್ರವಾಹಸಂತ್ರಸ್ಥರ ಕ್ಯಾಂಪ್‍ಗಳಲ್ಲಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಕೇರಳ ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ ಎದುರಿಸುತ್ತಿದ್ದು, 80…

ವಾಜಪೇಯಿ ಪಂಚಭೂತಗಳಲ್ಲಿ ಲೀನ
ಮೈಸೂರು

ವಾಜಪೇಯಿ ಪಂಚಭೂತಗಳಲ್ಲಿ ಲೀನ

August 18, 2018

ನವದೆಹಲಿ: ಅಜಾತಶತ್ರು, ಧೀಮಂತ ನಾಯಕ, ಕವಿ ಹೃದಯದ ಸರಳ, ಸಜ್ಜನ ರಾಜಕಾರಣಿ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಮುನಾ ನದಿಯ ದಡ ದಲ್ಲಿ ಪಂಚಭೂತಗಳಲ್ಲಿ ಲೀನರಾದರು. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಪುರೋ ಹಿತರು ಹಾಗೂ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. 21 ಬಾರಿ ಕುಶಾಲ ತೋಪು ಸಿಡಿತ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕೀ ಜೈ ಘೋಷಣೆ…

ಮೈಸೂರು-ಊಟಿ ಹೆದ್ದಾರಿ ಬಂದ್
ಮೈಸೂರು

ಮೈಸೂರು-ಊಟಿ ಹೆದ್ದಾರಿ ಬಂದ್

August 18, 2018

ನಂಜನಗೂಡು: ಕೇರಳದ ವೈನಾಡಿನಲ್ಲಿ ಮತ್ತೇ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟ ಪರಿಣಾಮ 2ನೇ ಬಾರಿಗೆ ಮೈಸೂರು-ಊಟಿ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ ಬಂದ್ ಮಾಡಲಾಗಿದೆ. ನಂಜನಗೂಡಿನ ಮಲ್ಲನ ಮೂಲೆ ಮಠದ ಮುಂಭಾಗ ಹೆದ್ದಾರಿಯಲ್ಲಿ ಸುಮಾರು 4 ಅಡಿ ನೀರು ನಿಂತಿರುವ ಕಾರಣ ವಾಹನ ಸಂಚಾರವನ್ನು ರದ್ದುಗೊಳಿಸಿ ಮೈಸೂರಿನಿಂದ ನಂಜನಗೂಡಿಗೆ ತೆರಳುವ ವಾಹನಗಳನ್ನು ತಾಂಡವಪುರ ಮುಖಾಂತರ ಹುಳಿಮಾವು, ಹೆಜ್ಜಿಗೆ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಇದೇ…

ಭಾರೀ ಮಳೆಯಿಂದ ಕೊಡಗು, ಕೇರಳ ಕಂಗಾಲು
ಮೈಸೂರು

ಭಾರೀ ಮಳೆಯಿಂದ ಕೊಡಗು, ಕೇರಳ ಕಂಗಾಲು

August 18, 2018

ಕವಿತೆ ಮೂಲಕ ಸಹಾಯ ಹಸ್ತ ಕೋರಿದ ಬಸ್ ಚಾಲಕ ಮೈಸೂರಲ್ಲಿ ಕೇರಳ ವಿದ್ಯಾರ್ಥಿಗಳಿಂದ ನೆರವು ಯಾಚನೆ ಮೈಸೂರು:  ಮಳೆಯ ಅಬ್ಬರದಿಂದ ತತ್ತರಿಸಿರುವ ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ಚಾಚುವಂತೆ ಕೊಡಗಿನ ಬಸ್ ಚಾಲಕರೊಬ್ಬರು ನೆರವು ನೀಡುವಂತೆ ಕವಿತೆಯ ಮೂಲಕ ಮೊರೆ ಇಟ್ಟಿದ್ದರೆ, ಇತ್ತ ಮೈಸೂರು ವಿವಿಯ ಕೇರಳ ವಿದ್ಯಾರ್ಥಿಗಳು ಬೀದಿಗಿಳಿದು ನೆರವು ಯಾಚಿಸುತ್ತಿದ್ದಾರೆ. ಕೊಡಗಿನಲ್ಲಿ ಹಿಂದೆಂದೂ ಕಂಡರಿಯದ ಮಳೆ ಅನಾಹುತ ಸಂಭವಿಸಿದ್ದು, ಭೂ ಕುಸಿತ, ಉಕ್ಕಿ ಹರಿಯುತ್ತಿರುವ ನದಿಗಳು, ಸುಂಟರಗಾಳಿ, ಬಿರುಗಾಳಿಯಿಂದಾಗಿ ಜನ…

1 1,431 1,432 1,433 1,434 1,435 1,611
Translate »