ಮೈಸೂರು

ತಿ.ನರಸೀಪುರ: 22 ಮಂದಿ ನಾಮಪತ್ರ
ಮೈಸೂರು

ತಿ.ನರಸೀಪುರ: 22 ಮಂದಿ ನಾಮಪತ್ರ

August 17, 2018

ತಿ.ನರಸೀಪುರ:  ಪುರಸಭೆ ಚುನಾವಣೆ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿಯಿರುವ ಹಿನ್ನೆಲೆ ಯಲ್ಲಿ ಗುರುವಾರ 22 ಮಂದಿ ತಾಲೂಕು ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು. ಪ.ಪಂಗಡ ಮೀಸಲಾಗಿರುವ 2ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟು, ಎಸ್ಸಿ ಮಹಿಳೆ ಮೀಸಲಾಗಿರುವ ಮೂರನೇ ವಾರ್ಡಿಗೆ ಶಿಲ್ಪಾ, ಪ.ಜಾತಿಗೆ ಮೀಸಲಾಗಿರುವ ನಾಲ್ಕನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಎನ್.ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಯಾಗಿ ಕೆ.ಎಸ್.ವಿಜಯಕುಮಾರ, ಸಾಮಾನ್ಯ ಕ್ಷೇತ್ರ ಐದನೇ ವಾರ್ಡಿಗೆ ಪಕ್ಷೇತರರಾಗಿ ಎಸ್.ಪುರುಷೋತ್ತಮ, ಸತ್ಯನಾರಾಯಣ, ರಾಚೇಗೌಡ, ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದರು. ಪ.ಜಾತಿ ಮಹಿಳೆಗೆ…

ಸಹೋದರರ ಜಗಳ: ಒರ್ವನ ಕೊಲೆಯಲ್ಲಿ ಅಂತ್ಯ
ಮೈಸೂರು

ಸಹೋದರರ ಜಗಳ: ಒರ್ವನ ಕೊಲೆಯಲ್ಲಿ ಅಂತ್ಯ

August 17, 2018

ತಿ.ನರಸೀಪುರ:  ಆಸ್ತಿ ವಿವಾದ ಹಾಗೂ ಅನೈತಿಕ ಸಂಬಂಧ ವಿಚಾರವಾಗಿ ಸಹೋದರರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಒಡಹುಟ್ಟಿ ದವನನ್ನೇ ಕುಡುಗೋಲಿನಿಂದ ಬಡಿದು ಕೊಲೆ ಮಾಡಿ, ಪರಾರಿಯಾಗಿರುವ ಘಟನೆ ತಾಲೂಕು ವಾಟಾಳು ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ. ತಾಲೂಕಿನ ವಾಟಾಳು ಗ್ರಾಮದ ನಂಜಯ್ಯ ಎಂಬುವರ ಪುತ್ರ ರಾಚಯ್ಯ(45) ಕೊಲೆಯಾದ ದುರ್ದೈವಿ. ಸಹೋದರರನ್ನೇ ಕೊಲೆಗೈದ ಸಿದ್ದಮಾದ ಘಟನೆಯ ನಂತರ ತಲೆ ಮರೆಸಿಕೊಂಡಿ ದ್ದಾನೆ. ತಂದೆ ನಂಜಯ್ಯ ಮನೆ ಪಾಲು ಕೊಡಲಿಲ್ಲ. ಪತ್ನಿಯ ಅನೈತಿಕ ಸಂಬಂಧವನ್ನು ಬಹಿರಂಗಗೊಳಿಸಿದ್ದಕ್ಕೆ ಹಿರಿಯ…

ಮತ್ತೆ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ: ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಸಾಧ್ಯತೆ
ಮೈಸೂರು

ಮತ್ತೆ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ: ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಸಾಧ್ಯತೆ

August 17, 2018

ನಂಜನಗೂಡು: ವೈನಾಡು ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಕಬಿನಿ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ಕಬಿನಿ ಜಲಾಶಯದಿಂದ 55.000 ಕ್ಯುಸೆಕ್ಸ್ ನೀರನ್ನು ಹೊರಬಿಟ್ಟಿರುವ ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇತ್ತೀಚೆಗೆ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿ ಮೈಸೂರು -ನಂಜನ ಗೂಡು ರಸ್ತೆಗೆ ನೀರು ಹರಿದ ಪರಿಣಾಮ ಮೂರು ದಿನಗಳ…

ಮೈಸೂರು ಪಾಲಿಕೆ ಚುನಾವಣೆ : ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಾ ವಾರ್ಡ್ ಗೆಲುವಿನ ಟಾರ್ಗೆಟ್-20
ಮೈಸೂರು

ಮೈಸೂರು ಪಾಲಿಕೆ ಚುನಾವಣೆ : ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಎಲ್ಲಾ ವಾರ್ಡ್ ಗೆಲುವಿನ ಟಾರ್ಗೆಟ್-20

August 15, 2018

ಮೈಸೂರು:  ಬಿಜೆಪಿ ಭದ್ರಕೋಟೆಯಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜಾತಿ ಮೀಸಲಾತಿಯ ಮೂಲಕ ಬಿಜೆಪಿಯನ್ನು ಕಟ್ಟಿ ಹಾಕಲು ಜೆಡಿಎಸ್ ಮತ್ತು ಕಾಂಗ್ರೆಸ್ ಸಂಚು ರೂಪಿಸಿದ್ದು, ಪಕ್ಷದ ಕಾರ್ಯಕರ್ತರು ಟಾರ್ಗೆಟ್-20 ಸೂತ್ರದೊಂದಿಗೆ ಅಭ್ಯರ್ಥಿಗಳ ಗೆಲುವಿಗೆ ಪಣ ತೊಡಬೇಕೆಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದ್ದಾರೆ. ಮೈಸೂರು ನಗರ ಪಾಲಿಕೆಯ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಗನ್‍ಹೌಸ್ ವೃತ್ತದ ಬಳಿ ಇರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಕೃಷ್ಣರಾಜ ಕ್ಷೇತ್ರದ ವಿವಿಧ ವಾರ್ಡ್‍ಗಳಿಂದ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ…

ಮೈಸೂರಿನ ಮೂವರು ಪೊಲೀಸರಿಗೆ ರಾಷ್ಟ್ರಪತಿ ಪದಕ
ಮೈಸೂರು

ಮೈಸೂರಿನ ಮೂವರು ಪೊಲೀಸರಿಗೆ ರಾಷ್ಟ್ರಪತಿ ಪದಕ

August 15, 2018

ಮೈಸೂರು: 72ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೊಲೀಸ್ ಸೇವೆಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳ ಪೈಕಿ ಮೈಸೂರಿನ ಮೂವರು ಪೊಲೀಸರು ಆಯ್ಕೆಯಾಗಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ 942 ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘ ನೀಯ ಸೇವಾ ಪದಕ ನೀಡಿ ಗೌರವಿಸಲಿ ದ್ದಾರೆ. ಪೊಲೀಸ್ ಶೌರ್ಯ ಪ್ರಶಸ್ತಿಗೆ 177 ಮಂದಿ. ವಿಶೇಷ ಸೇವೆಗೆ 88 ಮಂದಿ ಹಾಗೂ ಉತ್ತಮ ಸೇವೆಗೆ 675 ಪೆÇಲೀಸ್ ಸಿಬ್ಬಂದಿ…

ಹೆಚ್.ಡಿ.ಕೋಟೆ ತಾರಕ ಜಲಾಶಯ ಭರ್ತಿ
ಮೈಸೂರು

ಹೆಚ್.ಡಿ.ಕೋಟೆ ತಾರಕ ಜಲಾಶಯ ಭರ್ತಿ

August 15, 2018

ಹೆಚ್.ಡಿ.ಕೋಟೆ: ತಾಲೂಕಿ ನಾದ್ಯಂತ ತೀವ್ರ ಮಳೆಯಾಗುತ್ತಿದ್ದು ತಾರಕ ಜಲಾಶಯ ಸಂಪೂರ್ಣ ಭರ್ತಿ ಯಾಗಿದೆ ಹಾಗೂ ಜಲಾಶಯದಿಂದ 2000 ಕ್ಯುಸೆಕ್ ನೀರನ್ನು ಹೊರಬಿಡಲಾ ಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2425 ಅಡಿಯಾಗಿದ್ದು 2424.75 ಅಡಿತಲುಪಿದೆ. 2000ಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ನದಿಯಿಂದ ಹರಿದರೆ ಜಲಾಶಯ ಮುಂಭಾಗದ ಸೇತುವೆ ಮುಳುಗಡೆ ಯಾಗುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಒದಗಿಸ ಲಾಗಿದ್ದು ಬ್ಯಾರಿಕೇಡ್ ಅಳವಡಿಸಲು ತಿಳಿಸಲಾಗಿದೆ ಎಂದು ಜಲಾಶಯದ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೇತುವೆಯ ಮೇಲೆ ಓಡಾಡುವ ಸಾರ್ವ ಜನಿಕರು…

ಕೊಲ್ಲಿ ಸೇತುವೆ ಜಲಾವೃತ: ರಸ್ತೆ ಸಂಚಾರ ಸ್ಥಗಿತ
ಮೈಸೂರು

ಕೊಲ್ಲಿ ಸೇತುವೆ ಜಲಾವೃತ: ರಸ್ತೆ ಸಂಚಾರ ಸ್ಥಗಿತ

August 15, 2018

ಬೈಲಕುಪ್ಪೆ:  ಧಾರಾಕಾರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಪ್ಪದಿಂದ ಗೋಲ್ಡನ್ ಟೆಂಪಲ್‍ಗೆ ಹೋಗುವ ಮಾರ್ಗ ಮಧ್ಯೆ ರಸ್ತೆಯ ಕೊಲ್ಲಿ ಸೇತುವೆ ತುಂಬಿ ಜಲಾವೃತಗೊಂಡಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದಿಂದ ಗೋಲ್ಡನ್ ಟೆಂಪಲ್‍ಗೆ ಹೋಗುವ ರಸ್ತೆ ಮಾರ್ಗದ ಮಧ್ಯೆಭಾಗದಲ್ಲಿರುವ ಕೊಲ್ಲಿ ಸೇತುವೆ ಜಲಾವೃತದಿಂದ ಮುಚ್ಚಿ ಹೋಗಿದ್ದು, ಗಿರಗೂರು, ದೊಡ್ಡಹೊಸೂರು, ಚಿಕ್ಕ ಹೊಸೂರು, ದೊಡ್ಡಹರವೆ, ರಾಣಿ ಗೇಟ್, ಮಾರ್ಗ ಸಂಪೂರ್ಣ ಬಂದ್ ಆಗಿದೆ ಹಾಗೂ ಗಿರಗೂರು ಶಾಲೆಗೆ ತೆರಳಿದ್ದ ಶಾಲೆಯ ಮಕ್ಕಳು ಮನೆಗೆ ಹಿಂತಿರುಗಿಬರುವುದನ್ನು ಪೋಷಕರು ಕಾತುರದಿಂದ…

ಕೋಮುವಾದಿಗಳ ಅಧಿಕಾರದಿಂದ ದೂರವಿಡಬೇಕು
ಮೈಸೂರು

ಕೋಮುವಾದಿಗಳ ಅಧಿಕಾರದಿಂದ ದೂರವಿಡಬೇಕು

August 15, 2018

ತಿ.ನರಸೀಪುರ:  ಸಂವಿಧಾನವನ್ನೇ ಸುಟ್ಟು ಹಾಕುವಂತಹ ಕೃತ್ಯಕ್ಕೆ ಕೈ ಹಾಕಿರುವ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು. ಬಹಿ ರಂಗವಾಗಿ ದೇಶದ ಸಂವಿಧಾನ ಸುಟ್ಟು ಹಾಕಿದ ಕೋಮುವಾದಿಗಳ ವಿರುದ್ಧ ಪ್ರಜಾ ಪ್ರಭುತ್ವವಾದಿಗಳು ಸಂಘಟಿತ ಹೋರಾಟ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ಪುರಸಭೆ ಚುನಾವಣೆಯ ಪೂರ್ವ ಭಾವಿಯಾಗಿ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಆಕಾಂಕ್ಷಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಸಂವಿಧಾನದ ರಕ್ಷಣೆಯಾಗದಿದ್ದರೆ ದೇಶದ ರಕ್ಷಣೆ ಯಾಗಲು ಸಾಧ್ಯವಿಲ್ಲ. ಸಂವಿಧಾನ ರಕ್ಷಣೆಗೆ,…

ಕೃಷಿ ಸಾಲ ಪಡೆಯದ 28 ಲಕ್ಷ ರೈತರಿಗೆ ಬೆಳೆ ಸಾಲ
ಮೈಸೂರು

ಕೃಷಿ ಸಾಲ ಪಡೆಯದ 28 ಲಕ್ಷ ರೈತರಿಗೆ ಬೆಳೆ ಸಾಲ

August 14, 2018

ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ವಿವರಣೆ 22 ಲಕ್ಷ ರೈತರು ಸಹಕಾರಿ ಬ್ಯಾಂಕ್, 28 ಲಕ್ಷ ಮಂದಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ ಬೆಂಗಳೂರು: ಇದುವರೆಗೂ ಕೃಷಿ ಸಾಲ ಪಡೆಯಲು ವಿಫಲರಾಗಿರುವ 28 ಲಕ್ಷ ರೈತ ಕುಟುಂಬಗಳಿಗೆ ಬೆಳೆ ಸಾಲ ನೀಡುವುದಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ಇಂದಿಲ್ಲಿ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ 78 ಲಕ್ಷ ರೈತ ಕುಟುಂಬಗಳಿದ್ದು, ಅದರಲ್ಲಿ 22 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಲ್ಲಿ, 28 ಲಕ್ಷ ಕುಟುಂಬಗಳು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ…

ಮೈಸೂರು-ಕೊಡಗು ಲೋಕಸಭಾ ಟಿಕೆಟ್ ನನಗೇ ಸಿಗಲಿದೆ
ಮೈಸೂರು

ಮೈಸೂರು-ಕೊಡಗು ಲೋಕಸಭಾ ಟಿಕೆಟ್ ನನಗೇ ಸಿಗಲಿದೆ

August 14, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ನನಗೇ ದೊರೆಯಲಿದ್ದು, ಜನತೆಯ ಶ್ರೀರಕ್ಷೆಯಿಂದ ಪುನರಾಯ್ಕೆಯಾಗುವ ವಿಶ್ವಾಸವನ್ನು ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ನನ್ನ ಮೇಲಿದ್ದು, ಮತ್ತೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಲಭ್ಯವಾಗಲಿದೆ. ಜೊತೆಗೆ ಕ್ಷೇತ್ರದ ಜನತೆಯ ಶ್ರೀರಕ್ಷೆಯೂ ನನ್ನ ಮೇಲಿದ್ದು, ಪುನರಾಯ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ…

1 1,433 1,434 1,435 1,436 1,437 1,611
Translate »