ಸಹೋದರರ ಜಗಳ: ಒರ್ವನ ಕೊಲೆಯಲ್ಲಿ ಅಂತ್ಯ
ಮೈಸೂರು

ಸಹೋದರರ ಜಗಳ: ಒರ್ವನ ಕೊಲೆಯಲ್ಲಿ ಅಂತ್ಯ

August 17, 2018

ತಿ.ನರಸೀಪುರ:  ಆಸ್ತಿ ವಿವಾದ ಹಾಗೂ ಅನೈತಿಕ ಸಂಬಂಧ ವಿಚಾರವಾಗಿ ಸಹೋದರರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಒಡಹುಟ್ಟಿ ದವನನ್ನೇ ಕುಡುಗೋಲಿನಿಂದ ಬಡಿದು ಕೊಲೆ ಮಾಡಿ, ಪರಾರಿಯಾಗಿರುವ ಘಟನೆ ತಾಲೂಕು ವಾಟಾಳು ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ.

ತಾಲೂಕಿನ ವಾಟಾಳು ಗ್ರಾಮದ ನಂಜಯ್ಯ ಎಂಬುವರ ಪುತ್ರ ರಾಚಯ್ಯ(45) ಕೊಲೆಯಾದ ದುರ್ದೈವಿ. ಸಹೋದರರನ್ನೇ ಕೊಲೆಗೈದ ಸಿದ್ದಮಾದ ಘಟನೆಯ ನಂತರ ತಲೆ ಮರೆಸಿಕೊಂಡಿ ದ್ದಾನೆ. ತಂದೆ ನಂಜಯ್ಯ ಮನೆ ಪಾಲು ಕೊಡಲಿಲ್ಲ. ಪತ್ನಿಯ ಅನೈತಿಕ ಸಂಬಂಧವನ್ನು ಬಹಿರಂಗಗೊಳಿಸಿದ್ದಕ್ಕೆ ಹಿರಿಯ ಮಗನಾಗ ಸಿದ್ದಮಾದ ಮೃತ ಸೋದರ ರಾಚಯ್ಯನೊಂದಿಗೆ ಆಗಾಗ ಜಗಳ ನಡೆಯುತ್ತಿದ್ದುದೆ ಕೊಲೆಗೆ ಕಾರಣ ಎನ್ನಲಾಗಿದೆ. ಗ್ರಾಮದ ವಾಸವಿರುವ ಬೀದಿಯಲ್ಲಿ ಬುಧವಾರ ಸಂಜೆ ಗಲಾಟೆ ಆರಂಭಿಸಿದ ಸಿದ್ದಮಾದ ರಾಚಯ್ಯನೊಂದಿಗೆ ಕುಸ್ತಿಗೆ ಬಿದ್ದಿದ್ದಾನೆ. ಕುಟುಂಬದ ಸದಸ್ಯರು ಸಮಾಧಾನಪಡಿಸಿದರೂ ಸುಮ್ಮನಿರದೆ ಎಲ್ಲರೂ ಮನೆಗೆ ತೆರಳುವ ಹೊತ್ತಿನಲ್ಲಿ ಕುಡುಗೋಲು ಹಿಡಿದು ಬಂದು ಸಹೋದರನನ್ನು ಬಿಗಿದಿಡಿದು ಈ ಕೃತ್ಯವೆಸಗಿ ದ್ದಾನ್ನಲಾಗಿದೆ. ಸಿದ್ದಮಾದ ಬೀಸಿದ ಕುಡುಗೊಲು ಕುತ್ತಿಗೆಗೆ ತಾಗಿದ್ದರಿಂದ ರಕ್ತಸ್ರಾವವಾಗಿದೆ. ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾಚಯ್ಯ ಮೃತಪಟ್ಟರೆನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಿಎಸ್‍ಐ ಎನ್.ಆನಂದ್ ಅವರು ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Translate »