ತಿ.ನರಸೀಪುರ: 22 ಮಂದಿ ನಾಮಪತ್ರ
ಮೈಸೂರು

ತಿ.ನರಸೀಪುರ: 22 ಮಂದಿ ನಾಮಪತ್ರ

August 17, 2018

ತಿ.ನರಸೀಪುರ:  ಪುರಸಭೆ ಚುನಾವಣೆ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿಯಿರುವ ಹಿನ್ನೆಲೆ ಯಲ್ಲಿ ಗುರುವಾರ 22 ಮಂದಿ ತಾಲೂಕು ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.

ಪ.ಪಂಗಡ ಮೀಸಲಾಗಿರುವ 2ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟು, ಎಸ್ಸಿ ಮಹಿಳೆ ಮೀಸಲಾಗಿರುವ ಮೂರನೇ ವಾರ್ಡಿಗೆ ಶಿಲ್ಪಾ, ಪ.ಜಾತಿಗೆ ಮೀಸಲಾಗಿರುವ ನಾಲ್ಕನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಎನ್.ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಯಾಗಿ ಕೆ.ಎಸ್.ವಿಜಯಕುಮಾರ, ಸಾಮಾನ್ಯ ಕ್ಷೇತ್ರ ಐದನೇ ವಾರ್ಡಿಗೆ ಪಕ್ಷೇತರರಾಗಿ ಎಸ್.ಪುರುಷೋತ್ತಮ, ಸತ್ಯನಾರಾಯಣ, ರಾಚೇಗೌಡ, ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದರು. ಪ.ಜಾತಿ ಮಹಿಳೆಗೆ ಮೀಸಲಾಗಿರುವ ಆರನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಗಿರಿಜಮ್ಮ, ಸಾಮಾನ್ಯ ಕ್ಷೇತ್ರ ಏಳನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ.ಪುಟ್ಟರಾಜು, ಬಿಜೆಪಿ ಅಭ್ಯರ್ಥಿಯಾಗಿ ಆರ್.ಮಣಿಕಂಠ ರಾಜ್, ಪಕ್ಷೇತರರಾಗಿ ಎಸ್.ಲಕ್ಷ್ಮೀ, ಅಗಸ್ತೇಗೌಡ, ಎಸ್.ವಿನೋದ, ತುಂಬಲ ಪ್ರಕಾಶ್, ನಾಗಮ್ಮ, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಎಂಟನೇ ವಾರ್ಡಿಗೆ ಪಕ್ಷೇತರರಾಗಿ ಹೆಚ್.ಗೀತಾ, ವಾಣಿ, ಸಾಮಾನ್ಯವಾಗಿರುವ ಒಂಬತ್ತನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೀರಭದ್ರಪ್ಪ, ಪಕ್ಷೇತರರಾಗಿ ಜಯಶಂಕರ್, ಡಿ.ರಾಮಕೃಷ್ಣ, ಸಾಮಾನ್ಯ ಮಹಿಳೆ ಮೀಸಲು ವಾರ್ಡ್ ಹನ್ನೇರಡರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೀತಾ ಹಾಗೂ ಪ.ಜಾತಿ ಮೀಸಲು ವಾರ್ಡ್ ಹದಿನಾಲ್ಕಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಮಹದೇವಸ್ವಾಮಿ ನಾಮ ಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿಗಳಾಗಿ ತಹಶೀ ಲ್ದಾರ್ ಕೆ.ರಾಜು, ಜಿ.ಪಂ ಕುಡಿಯುವ ನೀರು ಉಪ ವಿಭಾಗದ ಎಇಇ ಎಜಾಜ್ ಅಹ್ಮದ್ ಸಿದ್ಧಿಖಿ, ಸಹಾಯಕ ಚುನಾವಣಾ ಧಿಕಾರಿಗಳಾಗಿ ಆರ್.ಶಿವಣ್ಣ, ಚಂದ್ರಶೇಖರ್ ಹಾಗೂ ಶಿರಸ್ತೇದಾರ್ ಪ್ರಭುರಾಜ್ ಕಾರ್ಯನಿರ್ವಹಿಸಿದರು.

Translate »