ದೇಶದ ಉದ್ಧಾರಕ್ಕೆ ಜಾತಿ ಪೆಡಂಭೂತ ತೊಲಗಬೇಕು
ಮೈಸೂರು

ದೇಶದ ಉದ್ಧಾರಕ್ಕೆ ಜಾತಿ ಪೆಡಂಭೂತ ತೊಲಗಬೇಕು

August 17, 2018

ಕೆ.ಆರ್.ನಗರ: ಸಾವಿರಾರು ಮಹನೀಯರು ಮತ್ತು ಹೋರಾಟಗಾರರ ಪ್ರಾಣ ತ್ಯಾಗದಿಂದ ದೊರೆತಿರುವ ಸ್ವಾತಂತ್ರ್ಯ ವನ್ನು ನಾವು ಜೋಪಾನ ಮಾಡಿಕೊಂಡು ಅದನ್ನು ಮುಂದಿನ ಪಿಳಿಗೆಯವರು ಅನುಭವಿ ಸುವಂತೆ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದ ಆವರಣದಲ್ಲಿ ತಾಲೂಕು ನಾಡಹಬ್ಬಗಳ ಸಮಿತಿಯ ವತಿಯಿಂದ ನಡೆದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನತೆ ಸದಾ ಹೋರಾಟಗಾರರು ಮತ್ತು ಸಮಾಜದ ಏಳಿಗೆಗೆ ಜೀವನವನ್ನು ಮುಡುಪಾಗಿಟ್ಟವರನ್ನು ನೆನೆಯಬೇಕು ಎಂದರು.

ದೇಶ ಉದ್ದಾರವಾಗಬೇಕಾದರೆ ಜಾತಿ ಎಂಬ ಪೆಡಂಭೂತ ಮೊದಲು ತೊಲಗಬೇಕು. ಸಮಾನತೆ ಮತ್ತು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಕಂಕಣ ಬದ್ದರಾಗಿ ಕೆಲಸ ಮಾಡಿ ಎಂದು ಹೇಳಿದ ಕೆ.ಆರ್.ಲಕ್ಕೇಗೌಡ, ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದು 1857ರಲ್ಲಿ ನಡೆದ ಸಿಪಾಯಿ ದಂಗೆ ಎಂದು ನೆನಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಂ.ನಿಖಿತಾ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯ ಕ್ರಮಗಳು ನೆರೆದಿದ್ದವರ ಮನ ಸೂರೆಗೊಂಡವು.

ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಎಸ್‍ಬಿಐ ವತಿಯಿಂದ ನಗದು ಪುರಸ್ಕಾರ ನೀಡಿ, ಗೌರವಿಸಿ ಸ್ವಾತಂತ್ರ್ಯ ಹೋರಾಟಗಾರ ರಾದ ಕೆ.ಆರ್.ಲಕ್ಕೇಗೌಡ ಮತ್ತು ನಂಜುಂಡಯ್ಯ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಪುರಸಭಾ ಅಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ಉಪಾಧ್ಯಕ್ಷೆ ಪಾರ್ವತಿ ನಾಗರಾಜು, ಸದಸ್ಯೆ ಗೀತಾಮಹೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಯದುಗಿರೀಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಮೋಹನ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾದ ಮಂಜುನಾಥ್, ಟಿ.ಡಿ.ಪ್ರಸಾದ್, ರಮೇಶ್, ಬಿಇಓ ಎಂ.ರಾಜು, ಸಹಾಯಕ ಕೃಷಿ ನಿರ್ದೇಶಕ ರಂಗರಾಜನ್, ತಾಲೂಕು ಆರೋಗ್ಯಾಧಿಕಾರಿ ಡಾ.ಜೆ.ಶ್ರೀನಿವಾಸ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಸಿ.ಚಂದ್ರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಬಿಸಿಎಂ ಅಧಿಕಾರಿ ಮಹೇಶ್ ಮತ್ತಿತರರು ಇದ್ದರು.

Translate »