ಮೈಸೂರು

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ
ಮೈಸೂರು

ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಹಣ ವಸೂಲಿ

August 14, 2018

ಮೈಸೂರು:  ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದ್ದ ಗುಂಪೊಂದು, ಪೊಲೀಸರು ಬೆನ್ನತ್ತಿರುವುದನ್ನು ಅರಿತು, ಮೇಲುಕೋಟೆ ಬಳಿ ಬಿಟ್ಟು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್.ಡಿ.ಕೋಟೆ ತಾಲೂಕು, ಹೊಮ್ಮರಗಳ್ಳಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿ ಲೋಕೇಶ್ ಅಲಿಯಾಸ್ ಲೋಕಿ (42) ಅಪಹರಣಕ್ಕೊಳಗಾಗಿ, ಸದ್ಯ ದುಷ್ಕರ್ಮಿಗಳಿಂದ ಪಾರಾಗಿ ಬಂದಿದ್ದಾರೆ. ಅಪಹರಣಕಾರರು ಥಳಿಸಿದ್ದ ರಿಂದ ನಿತ್ರಾಣರಾಗಿರುವ ಲೋಕೇಶ್ ಅವರನ್ನು ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಹರಿಸಿದ್ದು ಹೀಗಂತೆ: ಹೊಮ್ಮರ ಗಳ್ಳಿಯಿಂದ ಆ.11ರಂದು ಅಪಹರಿಸಿದ್ದ ಲೋಕೇಶ್ ಅವರನ್ನು ಭಾನುವಾರ ರಾತ್ರಿ ಮಂಡ್ಯ ಜಿಲ್ಲೆ,…

ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧೆ
ಮೈಸೂರು, ಹಾಸನ

ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧೆ

August 14, 2018

ಹಾಸನ:  `ನಾನು ಪ್ರಧಾನಿ ಅಭ್ಯರ್ಥಿಯಲ್ಲ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ಹಾಸನದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ(ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ, ಸಚಿವ ಹೆಚ್.ಡಿ. ರೇವಣ್ಣರ ಮಗ)ರನ್ನು ಕಣಕ್ಕಿಳಿಸಲಿದ್ದೇವೆ. ಈ ಹಿಂದೆಯೇ…

ತಗ್ಗಿದ ಕಪಿಲೆ ಪ್ರವಾಹ: ಮೈಸೂರು-ಊಟಿ ಹೆದ್ದಾರಿ ಸದ್ಯ ಸಂಚಾರಕ್ಕೆ ಮುಕ್ತ
ಮೈಸೂರು

ತಗ್ಗಿದ ಕಪಿಲೆ ಪ್ರವಾಹ: ಮೈಸೂರು-ಊಟಿ ಹೆದ್ದಾರಿ ಸದ್ಯ ಸಂಚಾರಕ್ಕೆ ಮುಕ್ತ

August 14, 2018

ಮೈಸೂರು:  ಕಪಿಲಾ ನದಿ ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರ ಮೈಸೂರು-ಊಟಿ ಹೆದ್ದಾರಿ ಸೋಮ ವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಕೇರಳದ ವೈನಾಡಿನಲ್ಲಿ ಮುಂಗಾರು ಮಳೆ ಹೆಚ್ಚಾಗಿದ್ದರಿಂದ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾ ಗುತ್ತಿತ್ತು. ಇದರ ಪರಿಣಾಮ ಕಪಿಲಾ ನದಿ ಅಪಾಯದ ಮಟ್ಟ ತಲುಪಿ, ಕಳೆದ ಶುಕ್ರ ವಾರ ಮೈಸೂರು- ಊಟಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ಮಲ್ಲನಮೂಲೆ ಮಠ ಹಾಗೂ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ಪ್ರಸನ್ನ…

ಮಹಿಳೆಯರು ಸ್ವಯಂ ಉದ್ಯೋಗದ  ಮೂಲಕ ಆದಾಯ ಗಳಿಸಲು ಸಲಹೆ
ಮೈಸೂರು

ಮಹಿಳೆಯರು ಸ್ವಯಂ ಉದ್ಯೋಗದ  ಮೂಲಕ ಆದಾಯ ಗಳಿಸಲು ಸಲಹೆ

August 14, 2018

ಮೈಸೂರು:  ಎಲ್ಲರಿಗೂ ಸರ್ಕಾರಿ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಮೂಲಕ ಆದಾಯ ಗಳಿಸುವತ್ತ ಗಮನ ಹರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ರಾಧ ಸಲಹೆ ನೀಡಿದರು. ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಎಸ್.ಎಸ್. ಟ್ರಸ್ಟ್ ಮತ್ತು ಮೈಸೂರು ಜಿಲ್ಲಾ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಹಿಳೆಯರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ…

ಇಂದು ಮಧ್ಯರಾತ್ರಿ ಮೈಸೂರಲ್ಲಿ ಬಿಜೆಪಿ ಯುವ  ಮೋರ್ಚಾದಿಂದ ‘ಮಿಡ್‍ನೈಟ್ ಫ್ರೀಡಂ ರನ್’
ಮೈಸೂರು

ಇಂದು ಮಧ್ಯರಾತ್ರಿ ಮೈಸೂರಲ್ಲಿ ಬಿಜೆಪಿ ಯುವ  ಮೋರ್ಚಾದಿಂದ ‘ಮಿಡ್‍ನೈಟ್ ಫ್ರೀಡಂ ರನ್’

August 14, 2018

ಮೈಸೂರು:  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ವತಿಯಿಂದ ಆ.14ರ ಮಧ್ಯರಾತ್ರಿ ಮೈಸೂರು ನಗರದಲ್ಲಿ ‘ಮಿಡ್‍ನೈಟ್ ಫ್ರೀಡಂ ರನ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ರಾಜ್ಯಾಧ್ಯಕ್ಷರೂ ಆದ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರಾಷ್ಟ್ರಧ್ವಜದ ಧ್ವಜಾರೋಹಣ ನೆರವೇರಿಸಲಾಗುವುದು. ಬಳಿಕ ಇಲ್ಲಿಂದ ಮಿಡ್ ನೈಟ್ ಫ್ರೀಡಂ…

ಮನೆಗೊಂದು ಮರ, ಊರಿಗೊಂದು ತೋಪು…
ಮೈಸೂರು

ಮನೆಗೊಂದು ಮರ, ಊರಿಗೊಂದು ತೋಪು…

August 14, 2018

ಮೈಸೂರು:  ರಾಜ್ಯ ಸರ್ಕಾರದ `ಹಸಿರು ಕರ್ನಾಟಕ’ ಯೋಜನೆಯಡಿ `ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ವನ’ ಧ್ಯೇಯ ವಾಕ್ಯದಡಿ ಆ.15ರಿಂದ 18ರವರೆಗೆ ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ವೆಂಕಟೇಸನ್, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ದ್ವಜಾರೋಹಣದ ನಂತರ ಉನ್ನತ ಶಿಕ್ಷಣ ಸಚಿವರೂ ಆದ…

ಇಬ್ಬರು ಖದೀಮರು ಕದ್ದಿದ್ದು ಬರೋಬರಿ 40 ಬೈಕ್‍ಗಳು! ಇವುಗಳ ಮೌಲ್ಯ 16 ಲಕ್ಷ ರೂ.
ಮೈಸೂರು

ಇಬ್ಬರು ಖದೀಮರು ಕದ್ದಿದ್ದು ಬರೋಬರಿ 40 ಬೈಕ್‍ಗಳು! ಇವುಗಳ ಮೌಲ್ಯ 16 ಲಕ್ಷ ರೂ.

August 14, 2018

ಮೈಸೂರು: ವಿವಿಧ ಠಾಣಾ ವ್ಯಾಪ್ತಿಯಲ್ಲಿ 16 ಲಕ್ಷ ರೂ., ಮೌಲ್ಯದ 40 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೂರ್ಗಳ್ಳಿ ಗ್ರಾಮದ ಶ್ರೀನಿವಾಸ ಅಲಿಯಾಸ್ ಸೀನಿ ಅಲಿಯಾಸ್ ಬಂಕ್(30), ಈತ ಮೂಲತಃ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಹೋಬಳಿಯ ಕಂಚಿನಕೆರೆ ಗ್ರಾಮ ನಿವಾಸಿ. ಕೂರ್ಗಳ್ಳಿಯ ದಿನೇಶ ಅಲಿಯಾಸ್ ದಿನಿ ಅಲಿಯಾಸ್ ಗೆಂಡೆ(25), ಈತ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಮಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇದೀಗ ಇವರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ….

ಹಿರೋಶಿಮಾ, ನಾಗಾಸಾಕಿ ದಿನ ಆಚರಣೆ
ಮೈಸೂರು

ಹಿರೋಶಿಮಾ, ನಾಗಾಸಾಕಿ ದಿನ ಆಚರಣೆ

August 14, 2018

ಮೈಸೂರು:  ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿ ರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ದಿನವನ್ನು (ಆ್ಯಂಟಿ ನ್ಯೂಕ್ಲಿಯರ್ ಡೇ) ನೆನೆದು ಇತ್ತೀಚೆಗೆ ಸಂತಾಪ ಸೂಚಿಸಲಾಯಿತು. ಬಳಿಕ ಪ್ರಾಂಶುಪಾಲ ಶ್ರೀಧರ್ ಮಾತನಾಡಿ, ಜುಲೈ 25, 1945ರಂದು ಅಮೆರಿಕಾ ಮತ್ತು ಯುರೋಪಿಯನ್ ದೇಶಗಳು ಜಪಾನಿನ ಮೇಲೆ ಅಣ್ವಸ್ತ್ರವನ್ನು ಪ್ರಯೋಗ ಮಾಡಲು ನಿರ್ಧರಿಸಿದವು. ಜಪಾನಿನ ಪ್ರಮುಖ ಸ್ಥಳವಾದ ಹಿರೋಶಿಮಾ ಮೇಲೆ ದಿನಾಂಕ ಆಗಸ್ಟ್ 8, 1945 ರಂದು ಲಿಟಲ್ ಬಾಯ್ (ಯುರೇ ನಿಯಂ ಯುಕ್ತ) ಅಣುಬಾಂಬ್ ಅನ್ನು…

ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ
ಮೈಸೂರು

ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ

August 14, 2018

ಮೈಸೂರು: ಸಂತ ಜೋಸೆಫ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ಸಾತಗಳ್ಳಿಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ ನಡೆಯಿತು. ವಿದ್ಯಾರ್ಥಿ ಅಧ್ಯಕ್ಷತೆ ವಹಿಸಿದ್ದ ಎಂಡಿಇಎಸ್‍ನ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕ ಸ್ವಾಮಿ ವಿಜಯ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳು ತ್ಯಾಗ, ಸೇವೆ, ಮಾನವೀಯತೆ ಮೈಗೂಡಿಸಿ ಕೊಳ್ಳಬೇಕೆಂದು ಕರೆ ಕೊಟ್ಟರು. ಸಂತ ಜೋಸೆಫ್ ಹಾಗೂ ಮಥಿಯಾಸ್ ಸಂಸ್ಥೆಗಳ ಉಸ್ತುವಾರಿ ಸ್ವಾಮಿ ಪ್ರವೀಣ್ ಕುಮಾರ್, ಸಂತ ಜೋಸೆಫ್ ಕಾಲೇಜುಗಳ ಸಿಇಓ ಸಿ.ಮಣಿಮ್ಯಾಥ್ಯು, ಪದವಿ ಕಾಲೇಜಿನ ಪ್ರಾಂಶುಪಾಲ…

ಭಾರತ ಕಮ್ಯುನಿಸ್ಟ್ ಪಕ್ಷದ  ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ಭಾರತ ಕಮ್ಯುನಿಸ್ಟ್ ಪಕ್ಷದ  ಕಾರ್ಯಕರ್ತರ ಪ್ರತಿಭಟನೆ

August 14, 2018

ಮೈಸೂರು:  ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ಸೋಮವಾರ ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಮೋದಿ ಆಡಳಿತ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಜೀವನಾಶ್ಯಕ ವಸ್ತುಗಳ ಬೆಲೆ ಏರಿಕೆ ತಡೆಯಲು ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದುಡಿಯುವ ಕೈಗಳಿಗೆ ಅಗತ್ಯ ಉದ್ಯೋಗ ನೀಡುವ ನೀತಿ ಜಾರಿಗೊಳಿಸಬೇಕು. ರೈತರ…

1 1,434 1,435 1,436 1,437 1,438 1,611
Translate »