ಮೈಸೂರು

ಹೆಚ್ಚುತ್ತಿರುವ ವಾಹನ ಶಬ್ಧ ಮಾಲಿನ್ಯ, ಬೈಕ್ ಸವಾರರ ಅಡ್ಡ ದಾರಿ: ಆಸ್ಪತ್ರೆ ರೋಗಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ
ಮೈಸೂರು

ಹೆಚ್ಚುತ್ತಿರುವ ವಾಹನ ಶಬ್ಧ ಮಾಲಿನ್ಯ, ಬೈಕ್ ಸವಾರರ ಅಡ್ಡ ದಾರಿ: ಆಸ್ಪತ್ರೆ ರೋಗಿಗಳಿಗೆ, ಸಾರ್ವಜನಿಕರಿಗೆ ಕಿರಿಕಿರಿ

August 18, 2018

ಮೈಸೂರು:  ಮೈಸೂರಿನಲ್ಲಿ ಶಬ್ಧ ಮಾಲಿನ್ಯ ಹೆಚ್ಚುತ್ತಿದ್ದು, ಅದರಲ್ಲೂ ಆಸ್ಪತ್ರೆ, ಚಿಕಿತ್ಸಾಲಯಗಳ ಬಳಿಯೇ ಹೆಚ್ಚಾಗಿ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ವಾಹನಗಳ ಕರ್ಕಶ ಹಾರನ್‍ಗಳಿಂದ ಆಸ್ಪತ್ರೆ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ದೂರುಗಳಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ವೃತ್ತದಲ್ಲಿ ಶಬ್ಧ ಮಾಲಿನ್ಯ ಹೆಚ್ಚಾಗಿದೆ. ಒಂದೆಡೆ ಸಯ್ಯಾಜಿರಾವ್ ರಸ್ತೆ, ಧನ್ವಂತರಿ ರಸ್ತೆ, ಇರ್ವಿನ್ ರಸ್ತೆಗಳ ಮಧ್ಯೆ ಇರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಯ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಶಬ್ಧ ಮಾಲಿನ್ಯದಿಂದ ಹೆಚ್ಚು ತೊಂದರೆಯಾಗುತ್ತಿದೆ. ಆಯುರ್ವೇದ ವೃತ್ತದಲ್ಲಂತೂ ವಾಹನಗಳ…

ಬಲ್ಲಾಳ್ ಸರ್ಕಲ್ ಬಳಿ ಸೆಪ್ಟೆಂಬರ್ ಮೊದಲ ವಾರ ಫುಡ್ ಜೋನ್ ಆರಂಭ
ಮೈಸೂರು

ಬಲ್ಲಾಳ್ ಸರ್ಕಲ್ ಬಳಿ ಸೆಪ್ಟೆಂಬರ್ ಮೊದಲ ವಾರ ಫುಡ್ ಜೋನ್ ಆರಂಭ

August 18, 2018

ಮೈಸೂರು: ರಸ್ತೆ ಬದಿ ಆಹಾರ ಪದಾರ್ಥ ವ್ಯಾಪಾರಿಗಳಿಗಾಗಿ ಮೈಸೂರಿನ ಬಲ್ಲಾಳ್ ಸರ್ಕಲ್ ಬಳಿ ಪಾಲಿಕೆ ನಿರ್ಮಿಸಿರುವ ಫುಡ್ ಜೋನ್ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ ಎಂದು ಪಾಲಿಕೆ ಅಪರ ಆಯುಕ್ತ ರವೀಂದ್ರ ತಿಳಿಸಿದ್ದಾರೆ. ಮೈಸೂರು ನಗರದಾದ್ಯಂತ ಬಹುತೇಕ ಎಲ್ಲಾ ರಸ್ತೆಗಳ ಫುಟ್‍ಪಾತ್‍ಗಳ ಮೇಲೆ ಪಾನಿಪೂರಿ, ಗೋಬಿ ಮಂಚೂರಿ, ಫಾಸ್ಟ್ ಫುಡ್ ಅಂಗಡಿಗಳನ್ನು ನಡೆಸುತ್ತಿದ್ದು, ತ್ಯಾಜ್ಯ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಸ್ವಚ್ಛ ನಗರಿಯಲ್ಲಿ ಅಶುಚಿತ್ವಗೊಳ್ಳುತ್ತಿದೆಯಲ್ಲದೇ, ಫುಟ್‍ಪಾತ್‍ಗೆ ಅಳವಡಿಸಿರುವ ಟೈಲ್ಸ್ ಮೇಲೆ ಎಣ್ಣೆ ಮತ್ತಿತರ ಪದಾರ್ಥಗಳು ಚೆಲ್ಲಿ ಹಾಳಾಗುತ್ತಿರುವುದು…

ಸಾರ್ವಜನಿಕರೊಂದಿಗೆ ಬಾಂಧವ್ಯ ಬೆಸೆಯಲು ಮೈಸೂರು ಸಂಚಾರ ಪೊಲೀಸರು `ನಮ್ಮ MYTRA’ `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು, ಸುಭದ್ರ ಮೈಸೂರು’ ಸಂದೇಶದ ಲಾಂಛನ ಶೀಘ್ರ ಬಿಡುಗಡೆ
ಮೈಸೂರು

ಸಾರ್ವಜನಿಕರೊಂದಿಗೆ ಬಾಂಧವ್ಯ ಬೆಸೆಯಲು ಮೈಸೂರು ಸಂಚಾರ ಪೊಲೀಸರು `ನಮ್ಮ MYTRA’ `ಒಂದಾಗಿ ಎಲ್ಲರೂ ಕಟ್ಟೋಣ ನಮ್ಮೂರು, ಸುಭದ್ರ ಮೈಸೂರು’ ಸಂದೇಶದ ಲಾಂಛನ ಶೀಘ್ರ ಬಿಡುಗಡೆ

August 18, 2018

ಮೈಸೂರು: ಕರ್ನಾಟಕ ಪೊಲೀಸರು ಜನ ಸ್ನೇಹಿಗಳಾಗುತ್ತಿದ್ದಾರೆ. ಧರಿಸುವ ಸಮವಸ್ತ್ರ, ಭಾರವಾದ ಶೂಗಳು, ಟೋಪಿ, ಹಿಡಿಯುವ ಲಾಠಿ, ಬಳಸುವ ರೈಫಲ್, ಪಿಸ್ತೂಲ್‍ಗಳಲ್ಲಿ ಬಲಾವಣೆಯಾಗದಿದ್ದರೂ, ವರುಷಗಳುರುಳಿದಂತೆ ನಡೆ, ನುಡಿ, ಭಾವನೆ, ಕಲ್ಪನೆಗಳಲ್ಲಿ ಒಂದಷ್ಟು ಪರಿವರ್ತನೆಯನ್ನು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿ ಕಾಣಬಹುದಾಗಿದೆ. ಪದವಿ, ಸ್ನಾತಕೋತ್ತರ ಪದವಿಯಂತಹ ಉನ್ನತ ಶಿಕ್ಷಣ ಪಡೆದವರೂ ಪೊಲೀಸ್ ಇಲಾಖೆಗೆ ಸೇರುತ್ತಿರುವುದು ಈ ಬಗೆಯ ಪರಿವರ್ತನೆಗೆ ಕಾರಣವಿರಬಹುದು. ಪೊಲೀಸರೆಂದರೆ ಬೆಚ್ಚಿ ಬೀಳುವ ಕಾಲವೊಂದಿತ್ತು. ಆದರೀಗ ಅವರೂ ಮನುಷ್ಯರೇ, ನಮ್ಮವರೇ ಪೊಲೀಸರು, ಅವರಿಗೂ ಹೃದಯವಿದೆ, ಭಾವನೆಗಳಿವೆ ಎಂಬುದು ಈಗ…

ಭವಿಷ್ಯದ ಅಂಬಾರಿ ಆನೆ ಭರವಸೆ ಮೂಡಿಸಿರುವ `ಧನಂಜಯ’
ಮೈಸೂರು

ಭವಿಷ್ಯದ ಅಂಬಾರಿ ಆನೆ ಭರವಸೆ ಮೂಡಿಸಿರುವ `ಧನಂಜಯ’

August 18, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ದುಬಾರೆ ಆನೆ ಶಿಬಿರದಿಂದ ಆಗಮಿಸುತ್ತಿರುವ ಧನಂಜಯ, ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿದ್ದಾನೆ. ಈ ದಸರಾ ಮಹೋತ್ಸವದಲ್ಲಿ 37 ವರ್ಷದ ಧನಂಜಯ ಹೊಸ ಅತಿಥಿ. ಸೆರೆ ಹಿಡಿದಾಗ ಪುಂಡ, ಆದರೆ ಈಗ ಫುಲ್ ಸೈಲೆಂಟ್ ಬಾಯ್. ಭವಿಷ್ಯದಲ್ಲಿ ಅಂಬಾರಿ ಪ್ರಮುಖ ಪಾತ್ರ ನಿರ್ವಹಿಸುವ ಹೊಣೆಗಾರಿಕೆಗೆ ಹೆಗಲು ಕೊಡುವ ಸಾಮಥ್ರ್ಯ ಈತನಿಗಿರುವುದನ್ನು ಮನಗಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಾರಿ ದಸರಾಕ್ಕೆ ಕರೆತರುತ್ತಿದ್ದಾರೆ. ಸೆರೆ ಸಿಕ್ಕಿದ್ದು ಎಲ್ಲಿ:…

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೈಸೂರಲ್ಲಿ ಬಿಜೆಪಿ ಭಾವಪೂರ್ಣ ನಮನ
ಮೈಸೂರು

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೈಸೂರಲ್ಲಿ ಬಿಜೆಪಿ ಭಾವಪೂರ್ಣ ನಮನ

August 18, 2018

ಮೈಸೂರು: ಅಟಲ್‍ಜೀ, ಮರಳಿ ಹುಟ್ಟಿ ಬನ್ನಿ… ಅಗಲಿದ ಮಾಜಿ ಪ್ರಧಾನಿ, ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ ಮೈಸೂರಿನ ನಜರ್‍ಬಾದ್‍ನ ವಿ.ಕೆ.ಫಂಕ್ಷನ್ ಹಾಲ್‍ನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರು ಅವರ ಗುಣಗಾನ ಮಾಡಿದರು. ಮೊದಲಿಗೆ ಎ.ಬಿ.ವಾಜಪೇಯಿ ಅವರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಎಂಎಲ್‍ಸಿ ತೋಂಟದಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಇನ್ನಿತರರು ಪುಷ್ಪಾರ್ಚನೆ ಜೊತೆಗೆ…

ನಾಳೆ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥರಿಗೆ ಸನ್ಮಾನ
ಮೈಸೂರು

ನಾಳೆ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥರಿಗೆ ಸನ್ಮಾನ

August 18, 2018

ಹಳೆ ಚಿತ್ರಗೀತೆಗಳ ಸ್ವರ ಸಂಗಮ ಸಂಗೀತ ಮೈಸೂರು:  ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಆ.19ರಂದು ಸಂಜೆ 5ಕ್ಕೆ ಹಳೇಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗದಿಂದ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹಾಗೂ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಹಳೆಯ ಚಿತ್ರಗೀತೆಗಳ ಸ್ವರ ಸಂಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ರೇವಣ್ಣ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗನ್ಮೋಹನ ಅರಮನೆಯಲ್ಲಿ ಆ.19ರಂದು ಸಂಜೆ…

ಮಹಿಳಾ ರಾಜಕಾರಣ ಕುರಿತು  ನಾಳೆ ಮೈಸೂರಲ್ಲಿ ಸಂವಾದ
ಮೈಸೂರು

ಮಹಿಳಾ ರಾಜಕಾರಣ ಕುರಿತು  ನಾಳೆ ಮೈಸೂರಲ್ಲಿ ಸಂವಾದ

August 18, 2018

ಮೈಸೂರು:  ಮೈಸೂರಿನ ಕಲಾಮಂದಿರದ ಕಿರುರಂಗಮಂದಿರ ದಲ್ಲಿ ಆ.19ರಂದು ಬೆಳಿಗ್ಗೆ 10ಕ್ಕೆ `ಮಹಿಳೆ-ರಾಜಕಾರಣ-ಹೊಸದಿಕ್ಕು’ `ಚುನಾವಣೆ: ಒಳ ಹೊರಗೆ’ ಕುರಿತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮುಖ್ಯಸ್ಥೆ ಸುಮನಾ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿ ಯಿಂದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ ವಿಚಾರ ಸಂಕಿ ರಣವನ್ನು ಅಂದು ಬೆಳಿಗ್ಗೆ 10ಕ್ಕೆ ಮೈಸೂರು ವಿವಿಯ ರಾಜ್ಯಶಾಸ್ತ್ರ…

ಮೈಸೂರು ವಿವಿ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಆರೋಪ: ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ವಿರುದ್ಧ ಕೇಸು ದಾಖಲು
ಮೈಸೂರು

ಮೈಸೂರು ವಿವಿ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಆರೋಪ: ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ವಿರುದ್ಧ ಕೇಸು ದಾಖಲು

August 18, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರು, ಸಂಶೋಧನಾ ವಿದ್ಯಾರ್ಥಿ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿನಿಲಯದಲ್ಲಿ ಅನಧಿಕೃತವಾಗಿ ವಾಸವಿರುವ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ, ಮೈಸೂರು ವಿವಿ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಲ್ಲದೆ ಸಂಸ್ಥೆ ವಿರುದ್ಧ ವಿದ್ಯಾರ್ಥಿಗಳನ್ನು ಪ್ರಚೋದಿಸಿ, ಕ್ಯಾಂಪಸ್‍ನಲ್ಲಿ ಉನ್ನತ ಅಧಿಕಾರಿಗಳಿಗೆ ಘೇರಾವ್ ಹಾಕಿಸುವುದು ಹಾಗೂ ಮುಷ್ಕರ ಮಾಡಿಸುತ್ತಿದ್ದಾರೆ ಎಂದು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಪ್ರವೀಣ್,…

25 ವರ್ಷಗಳ ನಿರಂತರ ಹೋರಾಟದ ಪ್ರತಿಫಲ ಭೂಮಿ ಒಡೆಯರಾದ ಆದಿವಾಸಿಗಳು !
ಮೈಸೂರು

25 ವರ್ಷಗಳ ನಿರಂತರ ಹೋರಾಟದ ಪ್ರತಿಫಲ ಭೂಮಿ ಒಡೆಯರಾದ ಆದಿವಾಸಿಗಳು !

August 17, 2018

ಹುಣಸೂರು:  ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ 266 ಕುಟುಂಬಗಳಿಗೆ ಒಟ್ಟು 1800 ಎಕರೆ ಕೃಷಿ ಭೂಮಿಯ ಹಕ್ಕು ಪತ್ರವನ್ನು ನೀಡುವ ಮೂಲಕ 25 ವರ್ಷಗಳ ನಿರಂತರ ಹೋರಾಟ ನಡೆಸುತ್ತಿದ್ದ ಗಿರಿಜನರಿಗೆ ಪ್ರತಿಫಲ ದೊರೆತಂತಾಗಿದೆ. ತಾಲೂಕಿನ ನಾಗಪುರ ಗಿರಿಜನ ಪುನ ರ್ವಸತಿ ಕೇಂದ್ರದ ಆಶ್ರಮ ಶಾಲೆಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಎ.ಹೆಚ್.ವಿಶ್ವನಾಥ್ ಗಿರಿಜನರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿ, ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಉಳು ವವನೇ ಭೂ ಒಡೆಯ ಕಾಯ್ದೆ ಜಾರಿಗೊಳಿಸಿ ತಳ ವರ್ಗದವರಿಗೆ…

ದೇಶದ ಉದ್ಧಾರಕ್ಕೆ ಜಾತಿ ಪೆಡಂಭೂತ ತೊಲಗಬೇಕು
ಮೈಸೂರು

ದೇಶದ ಉದ್ಧಾರಕ್ಕೆ ಜಾತಿ ಪೆಡಂಭೂತ ತೊಲಗಬೇಕು

August 17, 2018

ಕೆ.ಆರ್.ನಗರ: ಸಾವಿರಾರು ಮಹನೀಯರು ಮತ್ತು ಹೋರಾಟಗಾರರ ಪ್ರಾಣ ತ್ಯಾಗದಿಂದ ದೊರೆತಿರುವ ಸ್ವಾತಂತ್ರ್ಯ ವನ್ನು ನಾವು ಜೋಪಾನ ಮಾಡಿಕೊಂಡು ಅದನ್ನು ಮುಂದಿನ ಪಿಳಿಗೆಯವರು ಅನುಭವಿ ಸುವಂತೆ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ ಹೇಳಿದರು. ಪಟ್ಟಣದ ಬಯಲು ರಂಗ ಮಂದಿರದ ಆವರಣದಲ್ಲಿ ತಾಲೂಕು ನಾಡಹಬ್ಬಗಳ ಸಮಿತಿಯ ವತಿಯಿಂದ ನಡೆದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನತೆ ಸದಾ ಹೋರಾಟಗಾರರು ಮತ್ತು ಸಮಾಜದ ಏಳಿಗೆಗೆ ಜೀವನವನ್ನು ಮುಡುಪಾಗಿಟ್ಟವರನ್ನು ನೆನೆಯಬೇಕು ಎಂದರು. ದೇಶ ಉದ್ದಾರವಾಗಬೇಕಾದರೆ ಜಾತಿ ಎಂಬ ಪೆಡಂಭೂತ…

1 1,432 1,433 1,434 1,435 1,436 1,611
Translate »