ಮಳೆ ಸಂತ್ರಸ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 2 ತಿಂಗಳ ಸಂಬಳ
ಮೈಸೂರು

ಮಳೆ ಸಂತ್ರಸ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 2 ತಿಂಗಳ ಸಂಬಳ

August 20, 2018

ಮೈಸೂರು: ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ನಿರಾಶ್ರಿತರಾದವರಿಗೆ ತಮ್ಮ 2 ತಿಂಗಳ ಸಂಬಳ ನೀಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ.

ಮೈಸೂರಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿ, ಈ ವಿಷಯ ತಿಳಿಸಿದರು. ಕೇರಳ ನಿರಾಶ್ರಿತರಿಗೆ 1 ತಿಂಗಳ ಸಂಬಳ ಹಾಗೂ ಕೊಡಗು ಜಿಲ್ಲೆಯ ನಿರಾಶ್ರಿತ ರಿಗೆ 1 ತಿಂಗಳ ಸಂಬಳ ನೀಡುವುದಾಗಿ ಘೋಷಿಸಿದರು. ಪ್ರವಾಹ ನಿರಾಶ್ರಿತರಿಗೆ ಆಹಾರ, ಸಾಮಗ್ರಿಗಳ ಜೊತೆಗೆ ಹಣಕಾಸಿನ ನೆರವು ನೀಡಿದರೆ ತುಂಬ ಅನುಕೂಲವಾಗ ಲಿದೆ ಎಂದರು. ಮಳೆಯಿಂದ ತತ್ತರಿಸಿರುವ ಜಿಲ್ಲೆಗಳಿಗೆ ಎಲ್ಲರೂ ನೆರವಾಗಬೇಕು ಎಂದ ಅವರು, ರಾಜ್ಯದ ಮುಖ್ಯಮಂತ್ರಿಗಳ ನಿಧಿಗೆ ಧನ ಸಹಾಯ ನೀಡುವಂತೆ ಜನರಲ್ಲಿ ಮನವಿ ಮಾಡಿದರು. ತಮ್ಮ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಇಂತಹ ಮಳೆಯ ಅನಾಹುತ ನೋಡಿದ್ದಾಗಿ ಅವರು ತಿಳಿಸಿದರು.

Translate »