ಹಣ ಹೂಡುವ ಬಗ್ಗೆ ಇಂದು ಅರಿವು ಕಾರ್ಯಕ್ರಮ
ಮೈಸೂರು

ಹಣ ಹೂಡುವ ಬಗ್ಗೆ ಇಂದು ಅರಿವು ಕಾರ್ಯಕ್ರಮ

August 23, 2018

ಮೈಸೂರು: ಎಸ್‍ಡಿಎಂ-ಐಎಂಡಿ, ಎನ್‍ಎಸ್‍ಇ ಮತ್ತು ಎನ್‍ಎಸ್‍ಡಿಎಲ್ ಸಂಯುಕ್ತಾಶ್ರಯದಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಆ.23ರಂದು ಆಯೋಜಿಸಲಾಗಿದೆ ಎಂದು ಎಸ್‍ಡಿಎಂ-ಐಎಂಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಶ್ರೀರಾಮ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಎಸ್‍ಡಿಎಂ-ಐಎಂಡಿ ಸಂಸ್ಥೆ ಅಂದು ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದೆ. ಬಂಡವಾಳ ಹೂಡಿಕೆಯ ವಿವಿಧ ಆಯಾಮಗಳ ಕುರಿತು ಚರ್ಚೆ, ಸಂವಾದ ನಡೆಯಲಿದ್ದು, ಇಂಟಿಗ್ರೇಟೆಡ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಎಜಿಎಂ ಚೇತನ್ ಆನಂದ್ ಹಾಗೂ ಎನ್‍ಎಸ್‍ಐ, ಎನ್‍ಎಸ್‍ಡಿಎಲ್‍ನ ಅಧಿಕಾರಿಗಳು ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ.ಸಂ. 9902025624 ಅನ್ನು ಸಂಪರ್ಕಿಸಬಹುದು ಎಂದರು. ಕಾಲೇಜಿನ ಗ್ರಂಥಪಾಲಕ ಡಾ.ಸುನೀಲ್ ಗೋಷ್ಠಿಯಲ್ಲಿದ್ದರು.

Translate »