19 ವಾರ್ಡ್‍ಗಳಲ್ಲಿ ಎಸ್‍ಡಿಪಿಐ ಸ್ಪರ್ಧೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ಗೆ ಸವಾಲು
ಮೈಸೂರು

19 ವಾರ್ಡ್‍ಗಳಲ್ಲಿ ಎಸ್‍ಡಿಪಿಐ ಸ್ಪರ್ಧೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ಗೆ ಸವಾಲು

August 24, 2018

ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗೆ ತುರುಸಿನ ಸ್ಪರ್ಧೆ ಒಡ್ಡಿದ್ದ ಎಸ್‍ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಆ.31ರಂದು ನಡೆಯಲಿರುವ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಪ್ರಮುಖ ಪಕ್ಷಗಳಿಗೆ ಸವಾಲು ಒಡ್ಡಿದೆ.

ಪಾಲಿಕೆಯ 65 ವಾರ್ಡ್‍ಗಳ ಪೈಕಿ ಪ್ರಮುಖ 19 ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನರಸಿಂಹರಾಜ ಕ್ಷೇತ್ರದಲ್ಲಿ 16 ಮತ್ತು ಚಾಮರಾಜ ಕ್ಷೇತ್ರದಲ್ಲಿ 3 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಕಣದಲ್ಲಿರುವ 19 ವಾರ್ಡ್‍ಗಳಲ್ಲಿ ಬಹುತೇಕ ಕಡೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಕಾಂಗ್ರೆಸ್, ಜೆಡಿಎಸ್‍ನೊಂದಿಗೆ ತ್ರಿಕೋನ ಸ್ಪರ್ಧೆ ಒಡ್ಡಲಿದೆ.

ಕಣದಲ್ಲಿರುವ ಅಭ್ಯರ್ಥಿಗಳ ವಿವರ ಕೆಳಕಂಡಂತಿದೆ: 7ನೇ ವಾರ್ಡ್- (ಮೇಟಗಳ್ಳಿ)- ಪರಮೇಶ್ವರ, 10ನೇ ವಾರ್ಡ್ (ರಾಜೀವನಗರ)- ಸೈಯ್ಯದ್ ಸನಾವುಲ್ಲಾ, 11ನೇ ವಾರ್ಡ್ (ಶಾಂತಿನಗರ)- ಎಸ್.ಸ್ಟ್ಯಾನ್ಲಿ, 12ನೇ ವಾರ್ಡ್ (ಶಾಂತಿನಗರ)- ನಜ್ರುಲ್ಲಾ, 14ನೇ ವಾರ್ಡ್ (ಸತ್ಯನಗರ)- ಮುಹೀಬ್, 15ನೇ ವಾರ್ಡ್ (ರಾಜೇಂದ್ರನಗರ)- ಕೆ.ದೀಪಕ್, 17ನೇ ವಾರ್ಡ್ (ಬನ್ನಿಮಂಟಪ)- ಸುಮಯ್ಯ ಫಿರ್ದೌಸ್, 25ನೇ ವಾರ್ಡ್ (ತಿಲಕ್‍ನಗರ)- ಮುeóÁಮಿಲ್, 26ನೇ ವಾರ್ಡ್ (ಮೀನಾ ಬಜಾರ್)- ಆಸ್ಮಾ, 27ನೇ ವಾರ್ಡ್ (ವೀರನಗೆರೆ)- ಮೊಹಮ್ಮದ್ ತೌಸಿಫ್, 28ನೇ ವಾರ್ಡ್ (ಗಾಂದಿನಗರ)- ಜಯಲಕ್ಷ್ಮಿ, 29ನೇ ವಾರ್ಡ್ (ಎನ್.ಆರ್.ಮೊಹಲ್ಲಾ)- ಮೊಹಮ್ಮದ್ ಜಹೀರ್, 30ನೇ ವಾರ್ಡ್ (ಕ್ಯಾತಮಾರನಹಳ್ಳಿ)- ಎಸ್.ಪಿ.ಹರಿಣಿ, 31ನೇ ವಾರ್ಡ್ (ಕೆ.ಎನ್.ಪುರ)- ಮತೀನ್ ಬೇಗ್, 32ನೇ ವಾರ್ಡ್ (ಗೌಸಿಯಾನಗರ)- ಆಯೆಷಾ ಸಿದ್ಧಿಖಿ, 33ನೇ ವಾರ್ಡ್ (ಅಜೀಜ್‍ಸೇಠ್‍ನಗರ)- ಹಫೀಸ್ ಮುಬಾರಕ್, 34ನೇ ವಾರ್ಡ್ (ಕಲ್ಯಾಣಗಿರಿ)- ರಫಿಯಾ ಬಾನು, 35ನೇ ವಾರ್ಡ್ (ಸಾತಗಳ್ಳಿ)- ಅಮ್ಜದ್ ಖಾನ್, 38ನೇ ವಾರ್ಡ್ (ಗಿರಿಯಾಬೋವಿಪಾಳ್ಯ)- ದೊರೆರಾಜ್ ಕಣದಲ್ಲಿರುವ ಸ್ಪರ್ಧಿಗಳಾಗಿದ್ದಾರೆ.

10 ಸ್ಥಾನ ಗೆಲ್ಲುವ ವಿಶ್ವಾಸ: ಅಬ್ದುಲ್ ಮಜೀದ್
ಕಳೆದ ಬಾರಿ ಪಾ;ಲಿಕೆಯಲ್ಲಿ ಎಸ್‍ಡಿಪಿಐನ ಮೂವರು ಸದಸ್ಯರಿದ್ದರು. ಈ ಬಾರಿ 19 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದು, ಕನಿಷ್ಟ 10 ಸ್ಥಾನಗಳನ್ನಾದರೂ ಗೆಲ್ಲುವ ಗುರಿ ಹೊಂದಿರುವುದಾಗಿ ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಸಭಾ ಚುನಾವಣೆಯ ಎನ್.ಆರ್.ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಮೈಸೂರಿನ ಪ್ರಮುಖ ಎನ್.ಆರ್.ಕ್ಷೇತ್ರದ ಅಭಿವೃದ್ಧಿ ಶೂನ್ಯ. ಪಾಲಿಕೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಹೊಂದಾಣಿಕೆ ರಾಜಕಾರಣದಿಂದ ಭ್ರಷ್ಟಾಚಾರ ತುಂಬಿಹೋಗಿತ್ತು. ಇದರಿಂದಾಗಿ ಯಾವುದೇ ವಾರ್ಡ್‍ಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಸ್‍ಡಿಪಿಐ ಪ್ರಮುಖ ವಾರ್ಡ್‍ಗಳಲ್ಲಿ ಸ್ಪರ್ಧಿಸಿ, ಮೂರೂ ಪ್ರಮುಖ ಪಕ್ಷಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ ಎಂದರು.
ಚಾಮರಾಜನಗರ ಮತ್ತು ಮಡಿಕೇರಿ ನಗರಸಭೆಗಳಲ್ಲಿ ನಮ್ಮ ಪಕ್ಷದ ಸದಸ್ಯರು ಅಲ್ಲಿನ ಭ್ರಷ್ಟಾಚಾರದ ವಿರುದ್ಧ ಧನಿ ಎತ್ತಿ, ಉತ್ತಮ ಕೆಲಸ ಮಾಡಿದೆ. ಅದೇ ರೀತಿ ಪಾಲಿಕೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮ್ಮ ಪಕ್ಷವನ್ನು ಸಜ್ಜುಗೊಳಿಸಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋಲು ಕಂಡಿದ್ದರ ಬಗ್ಗೆ ಮತದಾರರಿಗೆ ಸಹಾನುಭೂತಿ ಇದ್ದು, ಅದು ನಮ್ಮ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿದೆ. ಕನಿಷ್ಟ 10 ಸ್ಥಾನಗಳಲ್ಲಿ ಜಯಗಳಿಸಲಿದ್ದೇವೆ ಎಂಬ ವಿಶ್ವಾಸವಿದೆ ಎಂದು ಅಬ್ದುಲ್ ಮಜೀದ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »