ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕಳವಳ ಬಿ.ಎಂ.ರಾಮಚಂದ್ರ ಅಭಿನಂದನಾ ಸಮಾರಂಭ ಮೈಸೂರು: ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿರವರ ಸ್ಮಾರ್ಟ್‍ಸಿಟಿಗಳು ಭಾರತವನ್ನು ಆಕ್ರಮಿಸಿಕೊಂಡು ಎಲ್ಲೆಡೆ ಹಿಂದಿಯೇ ಎಲ್ಲರ ಭಾಷೆಯಾಗುವ ಅಪಾಯವಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ಕಳವಳ ವ್ಯಕ್ತಪಡಿಸಿದರು. ಕಲಾಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಬಿ.ಎಂ.ರಾಮಚಂದ್ರ ಅಭಿನಂದನಾ ಬಳಗ ಶನಿವಾರ ಆಯೋಜಿಸಿದ್ದ ಅಭಿನಂದನೆ ಹಾಗೂ `ಬಣ್ಣದವಾಡಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏಕ ಭಾಷೆಯೆಂದರೆ ಹಿಟ್ಲರ್ ಭಾಷೆ, ಏಕದೈವ ಎಂದರೆ ಹಿಟ್ಲರ್ ದೈವ, ಏಕಮತ…
54ನೇ ವಾರ್ಡ್‍ನಲ್ಲಿ ಶಾಸಕ ರಾಮದಾಸ್ ಪಾದಯಾತ್ರೆ: ಬೆಟ್ಟದ ಪಾದದ ಬಳಿ ಅನಧಿಕೃತ ಶೆಡ್ ತೆರವಿಗೆ ಸೂಚನೆ
July 29, 2018ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಶನಿವಾರ, 54ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿ, ಸಾರ್ವಜನಿಕ ಕುಂದು-ಕೊರತೆ ಪರಿಶೀಲಿಸಿದರು. ಚಾಮುಂಡಿ ಬೆಟ್ಟದ ಪಾದದಿಂದ ಪಾದಯಾತ್ರೆ ಆರಂಭಿಸಿದ ಅವರು, ಅಲ್ಲಿ ಅಕ್ರಮವಾಗಿ ಶೆಡ್ ಹಾಕಿಕೊಂಡು ವಾಹನ ನಿಲುಗಡೆಗೆ ಬಾಡಿಗೆ ನೀಡಿದ್ದಾರೆಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದು, ಕೂಡಲೇ ಅನಧಿಕೃತ ಶೆಡ್ ತೆರವುಗೊಳಿಸಿ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಶೌಚಾಲಯ ನಿರ್ಮಾಣ ಮಾಡಿಸಬೇಕು. ಮಳೆ ನೀರು ಚರಂಡಿಯನ್ನು ಮುಚ್ಚಿ, ಅದರ ಮೇಲೆಯೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಮುಡಾ…
ಚಂದ್ರಗ್ರಹಣ ಹಿನ್ನೆಲೆ: ದೋಷಮುಕ್ತಿಗೆ ಮೈಸೂರಲ್ಲಿ ಹೋಮ, ಶಾಂತಿ ಪೂಜೆ
July 29, 2018ಮೈಸೂರು: ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಶನಿವಾರ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕೆಲವು ದೇವಾಲಯಗಳಲ್ಲಿ ಭಕ್ತರು ಸಾಮೂಹಿಕ ಹೋಮ, ಹವನ ಹಾಗೂ ಶಾಂತಿ ಪೂಜೆಯಲ್ಲಿ ಪಾಲ್ಗೊಂಡರು. ಶತಮಾನದ ಕೇತುಗ್ರಸ್ಥ ರಕ್ತ ಚಂದ್ರ ಗ್ರಹಣದ ದೃಶ್ಯವನ್ನು ಕಳೆದ ರಾತ್ರಿ ಕಣ್ತುಂಬಿಕೊಡಿದ್ದ ಜನ, ಇಂದು ಬೆಳಿಗ್ಗೆ ದೇವಾಲಯಗಳ ಮೊರೆ ಹೋದರು. ಬಹುತೇಕ ದೇವಾಲಯಗಳಲ್ಲಿ ಗ್ರಹಣ ನಂತರ ಮುಂಜಾನೆಯಿಂದಲೇ ಶುದ್ಧಿಗೊಳಿಸಲಾಗಿತ್ತು. ದೇವರಿಗೆ ವಿವಿಧ ಅಭಿಷೇಕ, ಅರ್ಚನೆ ನೆರವೇರಿಸಿ ಮಹಾಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ…
ಜು.29ರಂದು ಸುಯೋಗ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್‍ನ ಉದ್ಘಾಟನಾ ಸಮಾರಂಭ
July 29, 2018ಮೈಸೂರು: ಸುಯೋಗ ಆಸ್ಪತ್ರೆ ವತಿಯಿಂದ ಮಧುಮೇಹಿ ರೋಗಿಗಳಿಗಾಗಿ ಆರಂಭಿಸಿರುವ ‘ಸುಯೋಗ ಡಯಾ ಬಿಟಿಕ್ಸ್ ಹೆಲ್ತ್ ಕ್ಲಬ್’ನ ಉದ್ಘಾಟನಾ ಸಮಾರಂಭ ಹಾಗೂ ಸಕ್ಕರೆ ಕಾಯಿಲೆ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಜು.29ರಂದು ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಕ್ಲಬ್ ಅನ್ನು ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಲಿದ್ದು, ಸಕ್ಕರೆ ಕಾಯಿಲೆಯ ಹಿರಿಯ…
ಮಹಾರಾಜ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
July 29, 2018ಮೈಸೂರು: ಆರೋಗ್ಯ ಮತ್ತು ಓದಿನ ಕಡೆ ಗಮನ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ರಾಜಣ್ಣ ಕರೆ ನೀಡಿದರು. ಮಹಾರಾಜ ಕಾಲೇಜಿನ ಹೊಸ ಕಟ್ಟಡ ದಲ್ಲಿ ಶನಿವಾರ ಐಕ್ಯುಎಸಿ, ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ಮತ್ತು ಡಿಆರ್‍ಎಂ ಮಲ್ಟಿ ಸ್ಪೆಷಾ ಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿ ಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ `ಆಂದೋಲನ’ ಸಂಸ್ಥಾಪಕ ಸಂಪಾದಕ ರಾಜ ಶೇಖರ ಕೋಟಿ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈಗ ಚಿಕ್ಕ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಮತ್ತಿತರ…
ಚಾಮುಂಡೇಶ್ವರಿ ಕ್ಷೇತ್ರದ ಪಾಲಿಕೆ ವ್ಯಾಪ್ತಿ 2 ಕೋಟಿಯ ವಿವಿಧ ಕಾಮಗಾರಿಗೆ ಸಚಿವ ಜಿಟಿಡಿ ಚಾಲನೆ
July 29, 2018ಮೈಸೂರು: ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಾಜು 2 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಚಾಲನೆ ನೀಡಿದರು. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-3ರ ವ್ಯಾಪ್ತಿಯ ವಾರ್ಡ್ ನಂ.24, 22 ಹಾಗೂ 16ರಲ್ಲಿ ಪಾಲಿಕೆ ಉಸ್ತುವಾರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೈಗೆತ್ತಿಕೊಂಡಿರುವ ಉದ್ಯಾನವನ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜಿ.ಟಿ.ದೇವೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಬೋಗಾದಿ 2ನೇ ಹಂತದಲ್ಲಿರುವ ವಿದ್ಯಾಗಣಪತಿ ದೇವಸ್ಥಾನದಲ್ಲಿ…
ಹೈಟೆನ್ಷನ್ ಲೈನ್ ಕೆಳಗೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹ ಚಾಲನೆ
July 29, 2018ಮೈಸೂರು: ಮೈಸೂರಿನ ಶಾರದಾದೇವಿನಗರ ವೃತ್ತದ ಬಳಿಯಿಂದ ಬೋಗಾದಿ ಗದ್ದಿಗೆ ರಸ್ತೆಯವರೆಗೆ ಹಾದು ಹೋಗಿರುವ ಹೈಟೆನ್ಷನ್ ಲೈನ್‍ನಡಿಯ ಉದ್ಯಾನವನವನ್ನು ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಚಿವ ಜಿ.ಟಿ.ದೇವೇಗೌಡರು ಹಾಗೂ ಸಂಸದ ಪ್ರತಾಪ್ ಸಿಂಹ ಶನಿವಾರ ಚಾಲನೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ ಸಂಖ್ಯೆ 24 ಹಾಗೂ 22ರ ವ್ಯಾಪ್ತಿಯಲ್ಲಿ ಈ ಹೈಟೆನ್ಷನ್ ಲೈನ್ ಪಾರ್ಕ್ ಹಾದು ಹೋಗಿದ್ದು, ಶಾರದಾದೇವಿನಗರದ ವೃತ್ತದ ಬಳಿ ಸಚಿವರು ಗುದ್ದಲಿ ನೆರವೇರಿಸಿದರು. ಕೇಂದ್ರ…
ಕಾವ್ಯವೇ ಒಂದು ಬಗೆಯ ಚಿಕಿತ್ಸೆ: ಹಿರಿಯ ಸಾಹಿತಿ ಸಿಪಿಕೆ ಅಭಿಮತ
July 29, 2018ಮೈಸೂರು: ಕಾವ್ಯ ಒಂದು ಬಗೆಯ ಚಿಕಿತ್ಸೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಅಭಿಪ್ರಾಯಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಕಾವಲು ಪಡೆ ಸಾಂಸ್ಕೃತಿಕ ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಕವಿ ಕೆ.ಎಸ್.ಪ್ರದೀಪ್ ಕುಮಾರ್ ಅವರ `ಪಯಣ’ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರದೀಪ್ ಕುಮಾರ್, ಮಾನಸಿಕ ಆಘಾತದಿಂದ ಹೊರಬರಲು ಕಾವ್ಯ ರಚನೆ ಮಾರ್ಗ ಹಿಡಿದಿದ್ದಾರೆ. ನನ್ನನ್ನೂ ಒಳಗೊಂಡಂತೆ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾದವರೇ ಆಗಿದ್ದಾರೆ. ಈ ಬಗ್ಗೆ…
ಗಾನಭಾರತಿ ರಂಗಮಂದಿರದ ಗ್ಯಾಲರಿ ಆಸನಗಳ ಉದ್ಘಾಟನೆ
July 29, 2018ಮೈಸೂರು: ಕುವೆಂಪುನಗರ ಗಾನಭಾರತಿ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿರುವ ರಂಗಮಂದಿರದ ಗ್ಯಾಲರಿ ಆಸನಗಳ ಉದ್ಘಾಟನೆ ಮತ್ತು ವೆಬ್‍ಸೈಟ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಗಾನಭಾರತಿ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ರಮಾಬಾಯಿ ಗೋವಿಂದರಾವ್ ರಂಗಮಂದಿರದ ಗ್ಯಾಲರಿ ಆಸನಗಳನ್ನು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹಾಗೂ ಗಾನಭಾರತಿಯ ನೂತನ ವೆಬ್‍ಸೈಟ್ ಅನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು. ನಂತರ ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ಸಂಗೀತ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳು ಒಂದು ವರ್ಗ, ಜಾತಿಗೆ ಮಾತ್ರ ಸೀಮಿತ…
ನಾಳೆ ರಾಕೇಶ್ ಸಿದ್ದರಾಮಯ್ಯ ಪುಣ್ಯ ಸ್ಮರಣೆ ಅಂಗವಾಗಿ ವಿಚಾರ ಸಂಕಿರಣ
July 29, 2018ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ರಾಕೇಶ್ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಂಸ್ಥೆ ಜಂಟಿ ಆಶ್ರಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಅವರ 2ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ `ಸಾಮಾಜಿಕ ನ್ಯಾಯದ ಸೋಲು-ಗೆಲುವು’ ಕುರಿತು ಜು.30ರಂದು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿಚಾರ ಸಂಕಿರಣ…