ಮೈಸೂರು

ಇಂದು ಸ್ವಕುಳಸಾಳಿ ಸಮಾಜದ ಸಮಾವೇಶ
ಮೈಸೂರು

ಇಂದು ಸ್ವಕುಳಸಾಳಿ ಸಮಾಜದ ಸಮಾವೇಶ

July 29, 2018

ಮೈಸೂರು: ಮೈಸೂರಿನ ಸ್ವಕುಳಸಾಳಿ ಸಮಾಜದ (ನೇಕಾರ) ವತಿಯಿಂದ ನಾಳೆ (ಭಾನುವಾರ) ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜದ ಸಂಘಟನಾ ಸಮಾವೇಶ ಹಾಗೂ ರಾಜ್ಯ ಪದಾಧಿಕಾರಿಗಳ ವಾರ್ಷಿಕ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಸಮಾಜದ ಸಂಚಾಲಕ ಸುಬ್ರಹ್ಮಣ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಶ್ರೀ ಗೀತಾ ಮಂದಿರದಲ್ಲಿ ಸಮಾವೇಶ ಹಾಗೂ ಸಭೆ ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ಮೇಯರ್ ಬಿ.ಭಾಗ್ಯವತಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು….

ಸಿಟಿ ಬಸ್ಸಿನಿಂದ ಬಿದ್ದು  ಗಾಯಗೊಂಡಿದ್ದ ವ್ಯಕ್ತಿ ಸಾವು
ಮೈಸೂರು

ಸಿಟಿ ಬಸ್ಸಿನಿಂದ ಬಿದ್ದು  ಗಾಯಗೊಂಡಿದ್ದ ವ್ಯಕ್ತಿ ಸಾವು

July 29, 2018

ಮೈಸೂರು: ನಗರ ಸಾರಿಗೆ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಶುಕ್ರವಾರ ರಾತ್ರಿ ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೈಸೂರು ತಾಲೂಕು ಹೊಸಹುಂಡಿ ಗ್ರಾಮದ ನಿವಾಸಿ ತಿಮ್ಮೇಗೌಡ (48) ಸಾವನ್ನಪ್ಪಿದವರು. ಜುಲೈ 25ರಂದು ಹೊಸಹುಂಡಿ ಗ್ರಾಮದ ಬಳಿ ಬಸ್ಸಿನಿಂದ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಿ ನಂತರ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಿಮ್ಮೇಗೌಡರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಜಯಪ್ರಕಾಶ್ ತಿಳಿಸಿದ್ದಾರೆ.

ಇಂಡುವಾಳು ಒಳ ಚರಂಡಿ ಕಾಮಗಾರಿಗೆ ಚಾಲನೆ ಶಾಸಕ ಡಾ.ಯತೀಂದ್ರ ರಿಂದ ಭೂಮಿ ಪೂಜೆ
ಮೈಸೂರು

ಇಂಡುವಾಳು ಒಳ ಚರಂಡಿ ಕಾಮಗಾರಿಗೆ ಚಾಲನೆ ಶಾಸಕ ಡಾ.ಯತೀಂದ್ರ ರಿಂದ ಭೂಮಿ ಪೂಜೆ

July 29, 2018

ತಿ.ನರಸೀಪುರ: ಇಂಡವಾಳು ಗ್ರಾಮದ ನೂತನ ದಸಂಸ ಬಡಾವಣೆಗೆ ನಗರ ಪ್ರದೇಶಗಳ ಮಾದರಿಯಲ್ಲಿ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶಕ್ಕೂ ಒಳಚರಂಡಿ ಸೌಲಭ್ಯವನ್ನು ವಿಸ್ತರಣೆ ಮಾಡಲಾಗಿದೆ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಹೇಳಿದರು. ತಾಲೂಕಿನ ಇಂಡವಾಳು ಗ್ರಾಮದಲ್ಲಿರುವ ದಸಂಸ ಬಡಾವಣೆಯಲ್ಲಿ 67 ಲಕ್ಷ ರೂ.ಗಳ ವೆಚ್ಚದಲ್ಲಿ ಒಳಚರಂಡಿ ಹಾಗೂ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಳ್ಳಿಗಳಿಗೆ ಸಿಮೆಂಟ್ ರಸ್ತೆಯ ಜೊತೆಗೆ ಒಳಚಂಡಿಯ ಸೌಲಭ್ಯವನ್ನು…

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಘಟಿತರಾಗಲು ಕರೆ: ನರಸೀಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಘಟಿತರಾಗಲು ಕರೆ: ನರಸೀಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

July 29, 2018

ತಿ.ನರಸೀಪುರ: ಮುಂಬರುವ ಲೋಕಸಭಾ ಚುನಾವಣೆ ಗೆಲುವಿಗೆ ಮುನ್ನುಡಿಯಾಗಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಹಾಗೂ ಮುಖಂಡರು ಸಂಘಟಿತರಾಗಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಹೇಳಿದರು. ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಡೆದ ಪುರಸಭೆ ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಸಂಘಟಿತರಾಗದೆ ಯಾವುದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮುಖಂಡರೆಲ್ಲರೂ ಒಗ್ಗೂಡಿ, ಗೆಲ್ಲುವಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ತಿ.ನರಸೀಪುರ ಪುರಸಭೆಯಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲು ಸಾಧ್ಯವಿದೆ…

ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಸಲಹೆ
ಮೈಸೂರು

ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಸಲಹೆ

July 28, 2018

ತಿ.ನರಸೀಪುರ: ಮಹನೀಯರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗಳಿಗೆ ಅರ್ಥ ಸಿಗಲಿದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ನಯನ ಕ್ಷತ್ರೀಯ ಸಂಘದ ವತಿಯಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದರು. 12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿ ಯಾಗಿದ್ದ ಹಡಪದ ಅಪ್ಪಣ್ಣ ಜಾತಿ ಭೇದ ಮರೆತು ಕೆಲಸ ಮಾಡುವ ಮುಖಾಂತರ ಸರ್ವರಿಗೂ ಸಮಪಾಲು,…

ಸಭೆಯಲ್ಲಿ ಶಾಸಕರಿಂದ ಅಧಿಕಾರಿಗೆ ತರಾಟೆ
ಮೈಸೂರು

ಸಭೆಯಲ್ಲಿ ಶಾಸಕರಿಂದ ಅಧಿಕಾರಿಗೆ ತರಾಟೆ

July 28, 2018

ನಂಜನಗೂಡು: ನಗರದ ಗೋದಾಮಿನಿಂದ ನಾಪತ್ತೆಯಾಗಿರುವ ಸುಮಾರು 40 ಲಕ್ಷ ರೂ. ಮೌಲ್ಯದ ಪಡಿತರ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಒದಗಿಸದ ಆಹಾರ ಇಲಾಖೆ ಅಧಿಕಾರಿಯನ್ನು ಶಾಸಕ ಬಿ.ಹರ್ಷ ವರ್ಧನ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 1165 ಕ್ವಿಂಟಾಲ್ ಅಕ್ಕಿ, 198 ಕ್ವಿಂಟಾಲ್ ಗೋಧಿ, 38…

ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರ
ಮೈಸೂರು

ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರ

July 28, 2018

ಹುಣಸೂರು: ಬಸವಣ್ಣ ನವರ ಕಾಲದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಹಡಪದ ಅಪ್ಪಣ್ಣ ಬೆಡಗಿನ ಬಂಡಾಯ ವಚನಕಾರರಾಗಿದ್ದು, ಇವರ ವಚನದಲ್ಲಿ ತೀರ ಸರಳತೆ ಮತ್ತು ಗಂಭೀರತೆ ಎದ್ದು ಕಾಣುತದೆ ಎಂದು ಸಾಹಿತಿ ಮಾಧು ಪ್ರಸಾದ್ ತಿಳಿಸಿದರು. ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಸವಿತಾ ಸಮಾಜ ಏರ್ಪಡಿಸಿದ್ದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರ ರಾಗಿ ಮಾತನಾಡಿದ ಅವರು, ವಚನ ಸಾಹಿತ್ಯ ದಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಚನಗಳಿದ್ದು, ಅದರಲ್ಲಿ ಅಪ್ಪಣ್ಣ ನವರ 200ಕ್ಕೂ ಹೆಚ್ಚು ವಚನಗಳು ಸೇರಿವೆ…

ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಣಿಕೆ: ಇಬ್ಬರ ಬಂಧನ
ಮೈಸೂರು

ಗೂಡ್ಸ್ ವಾಹನದಲ್ಲಿ ಜಾನುವಾರು ಸಾಗಾಣಿಕೆ: ಇಬ್ಬರ ಬಂಧನ

July 28, 2018

ಬೆಟ್ಟದಪುರ:  ಕಸಾಯಿ ಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ಜಪ್ತಿ ಮಾಡಿರುವ ಬೆಟ್ಟದಪುರ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಗೂಡ್ಸ್ ವಾಹನ (ಕೆಎ12, ಬಿ.5894) ವೊಂದರಲ್ಲಿ ಒಂದು ಹಸು, ಒಂದು ಕರು ಹಾಗೂ ಒಂದು ಎಮ್ಮೆಯನ್ನು ರವಿ ಹಾಗೂ ಸಾದ್ದಿಕ್ ಖಾನ್ ಎಂಬುವರು ಗುರುವಾರ ಮಧ್ಯಾಹ್ನ 2 ಗಂಟೆಯಲ್ಲಿ ಕಣಗಾಲು ಬಳಿ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇಲೆ ಪಿಎಸ್‍ಐಗಳಾದ ಚಿಕ್ಕಸ್ವಾಮಿ, ಜಗದೀಶ್ ಹಾಗೂ ಸಿಬ್ಬಂದಿಗಳಾದ ಮಧು ಕುಮಾರ್, ಭಾಸ್ಕರ್, ಮಂಜು ಮತ್ತು ಸ್ವಾಮಿ ಅವರು ಕಾರ್ಯಾಚರಣೆ…

ಸುತ್ತೂರು ಶಾಲೆಯಲ್ಲಿ ಶೂ ವಿತರಣೆ
ಮೈಸೂರು

ಸುತ್ತೂರು ಶಾಲೆಯಲ್ಲಿ ಶೂ ವಿತರಣೆ

July 28, 2018

ಸುತ್ತೂರು: ನಂಜನಗೂಡು ತಾಲೂಕು ಸುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೂಗಳನ್ನು ಗ್ರಾ.ಪಂ ಅಧ್ಯಕ್ಷ ಪಿ.ಸೋಮಣ್ಣ ವಿತರಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಹೆಚ್ಚಿನ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಅತಿಥಿ ಶಿಕ್ಷಕರಾಗಿ ಬರುವವರಿಗೆ ಗ್ರಾ.ಪಂ ವತಿಯಿಂದಲೇ ವೇತನ ನೀಡಲಾಗುವುದು. ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವವರು ತಮ್ಮನ್ನು ಸಂಪರ್ಕಿಸಬೇಕೆಂದು ತಿಳಿಸಿದರು. ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕಲಾವತಿ, ಮುಖ್ಯ ಶಿಕ್ಷಕಿ ವರಲಕ್ಷ್ಮಿ, ಸಹ ಶಿಕ್ಷಕರುಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವೀಣಾ, ಗ್ರಾಮಸ್ಥರು…

ಲೋಕಸಭಾ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು

ಲೋಕಸಭಾ ಚುನಾವಣೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ

July 27, 2018

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತಗೊಂಡಿದ್ದು, ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿಯಲಿವೆ. ಒಪ್ಪಂದದಂತೆ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರ ಗಳ ಪೈಕಿ ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದೆ. ಉಳಿದ 10 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲಿದ್ದು, ಜೆಡಿಎಸ್ ಇದರಲ್ಲಿ ಒಂದು ಕ್ಷೇತ್ರವನ್ನು ತನ್ನ ಮೈತ್ರಿ ಪಕ್ಷವಾದ ಬಿಎಸ್‍ಪಿಗೆ ನೀಡಲಿದೆ. ಜೆಡಿಎಸ್ ತನ್ನ ಪ್ರಭಾವ ಇರುವ ಹಳೇ ಮೈಸೂರು ಭಾಗದಲ್ಲೇ ಹೆಚ್ಚಿನ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ….

1 1,463 1,464 1,465 1,466 1,467 1,611
Translate »