ಇಂದು ಸ್ವಕುಳಸಾಳಿ ಸಮಾಜದ ಸಮಾವೇಶ
ಮೈಸೂರು

ಇಂದು ಸ್ವಕುಳಸಾಳಿ ಸಮಾಜದ ಸಮಾವೇಶ

July 29, 2018

ಮೈಸೂರು: ಮೈಸೂರಿನ ಸ್ವಕುಳಸಾಳಿ ಸಮಾಜದ (ನೇಕಾರ) ವತಿಯಿಂದ ನಾಳೆ (ಭಾನುವಾರ) ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜದ ಸಂಘಟನಾ ಸಮಾವೇಶ ಹಾಗೂ ರಾಜ್ಯ ಪದಾಧಿಕಾರಿಗಳ ವಾರ್ಷಿಕ ಸಾಮಾನ್ಯ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಸಮಾಜದ ಸಂಚಾಲಕ ಸುಬ್ರಹ್ಮಣ್ಯ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಶ್ರೀ ಗೀತಾ ಮಂದಿರದಲ್ಲಿ ಸಮಾವೇಶ ಹಾಗೂ ಸಭೆ ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ಮೇಯರ್ ಬಿ.ಭಾಗ್ಯವತಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಶಾಸಕ ಎಲ್.ನಾಗೇಂದ್ರ ಹಾಗೂ ವಿಶೇಷ ಆಹ್ವಾನಿತರಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಮೂರ್ತಿ, ಪಾಲಿಕೆ ಸದಸ್ಯ ಎಂ.ಸುನೀಲ್, ಅಖಿಲ ಭಾರತ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ್ ಅ.ಚಿಲ್ಲಾಳ ಪಾಲ್ಗೊಳ್ಳಲಿದ್ದಾರೆ ಎಂದರು. ಸಮಾಜದ ಮುಖಂಡರಾದ ಡಾ.ರಘುರಾಂ, ವೀರೇಂದ್ರ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »