ಮೈಸೂರು

ಹೈನುಗಾರಿಕೆಯಿಂದ ಗ್ರಾಮೀಣ ಜನರ ಪಟ್ಟಣ ವಲಸೆ ತಡೆ
ಮೈಸೂರು

ಹೈನುಗಾರಿಕೆಯಿಂದ ಗ್ರಾಮೀಣ ಜನರ ಪಟ್ಟಣ ವಲಸೆ ತಡೆ

July 17, 2018

ಮೈಸೂರು: ಹೈನುಗಾರಿಕೆ, ಗ್ರಾಮೀಣ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು. ಮೈಸೂರಿನ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಸೋಮವಾರ ಮೈಸೂರು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ…

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ
ಮೈಸೂರು

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ

July 17, 2018

ಮೈಸೂರು: ನೆನೆಗುದಿಗೆ ಬಿದ್ದಿರುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಕದಂಬ ಸೈನ್ಯ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ. ಸೇನೆಯ ರಾಜ್ಯಾಧ್ಯಕ್ಷ ಬೇಕ್ರಿ ಮಹೇಶ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಕನ್ನಡ ಭಾಷೆಯ ಪರಿಣಾಮಕಾರಿ ಅನುಷ್ಠಾನ ಇನ್ನಿತರ ಕನ್ನಡ ಬೆಳವಣಿಕೆಗೆ ಪೂರಕವಾದ ವರದಿಯನ್ನು ಸರೋಜಿನಿ ಮಹಿಷಿ ಅವರು ನೀಡಿದ್ದರು. ಆದರೆ ದಶಕಗಳೇ ಕಳೆದರೂ ವರದಿ ಜಾರಿಗೆ ಯಾವ ಸರ್ಕಾರಗಳು ಮನಸ್ಸು ಮಾಡಿಲ್ಲ ಎಂದು ಆರೋಪಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ…

ಜಗನ್ಮೋಹನ ಅರಮನೆ ಆರ್ಟ್  ಗ್ಯಾಲರಿಯಲ್ಲಿ ಆಡಿಯೋ ಗೈಡ್ ವ್ಯವಸ್ಥೆ : ದೇಶೀಯರ ಪ್ರವೇಶ ಶುಲ್ಕದಲ್ಲಿ 40 ರೂ. ಹೆಚ್ಚಳ
ಮೈಸೂರು

ಜಗನ್ಮೋಹನ ಅರಮನೆ ಆರ್ಟ್  ಗ್ಯಾಲರಿಯಲ್ಲಿ ಆಡಿಯೋ ಗೈಡ್ ವ್ಯವಸ್ಥೆ : ದೇಶೀಯರ ಪ್ರವೇಶ ಶುಲ್ಕದಲ್ಲಿ 40 ರೂ. ಹೆಚ್ಚಳ

July 17, 2018

ಮೈಸೂರು:  ನವೀಕರಣಗೊಂಡಿರುವ ಮೈಸೂರಿನ ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಪ್ರವಾಸಿಗರಿಗೆ ಹೊಸದಾಗಿ ಆಡಿಯೋ ಗೈಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಜಗನ್ಮೋಹನ ಅರಮನೆಗೆ 157 ವರ್ಷಗಳ ಇತಿಹಾಸವಿದ್ದು, ಕಳೆದ ಕೆಲ ವರ್ಷಗಳಿಂದ ಕಟ್ಟಡದ ಕೆಲ ಭಾಗ ಶಿಥಿಲಾವಸ್ಥೆ ತಲುಪಿ, ಮಳೆ ನೀರು ಸುರಿಯ ತೊಡಗಿತ್ತು. ಹಾಗಾಗಿ ಕಳೆದ ಒಂದು ವರ್ಷದಿಂದ ಈ ಅರಮನೆಯ ಆರ್ಟ್ ಗ್ಯಾಲರಿ ಕಟ್ಟಡವನ್ನು ಹಂತ ಹಂತವಾಗಿ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಮೈಸೂರಿನ ಪ್ರವಾಸಿ ತಾಣಗಳಲ್ಲಿ…

ಮೈಸೂರು ಬ್ರಾಹ್ಮಣ ಒಕ್ಕೂಟಗಳಿಂದ ಜಿ.ಟಿ.ದೇವೇಗೌಡರಿಗೆ ಅಭಿನಂದನೆ
ಮೈಸೂರು

ಮೈಸೂರು ಬ್ರಾಹ್ಮಣ ಒಕ್ಕೂಟಗಳಿಂದ ಜಿ.ಟಿ.ದೇವೇಗೌಡರಿಗೆ ಅಭಿನಂದನೆ

July 17, 2018

ಮೈಸೂರು:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರ ಸಮುದಾಯಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಶಂಕರ ಜಯಂತಿ ಆಚರಣೆಯನ್ನು ಬಜೆಟಿನಲ್ಲಿ ಪ್ರಕಟಿಸಿದ್ದು, ಇದಕ್ಕೆ ಪ್ರಮುಖ ಕಾರಣಕರ್ತರಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರನ್ನು ಮೈಸೂರು ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಪ್ರರ ಚಿಂತನಾ ಸಭೆಯಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ ಮಾತನಾಡಿ, ಕುಮಾರಪರ್ವ ಸಂದರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆ ಚಾಮುಂಡಿಪುರಂನಲ್ಲಿ ವಿಪ್ರಸಂಪರ್ಕ ಅಭಿಯಾನ ಆಯೋಜಿಸಿತ್ತು. ಈ ವೇಳೆ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಿ…

ಇಂದ್ರ ಧನುಷ್ ಅಭಿಯಾನದಡಿ ಮೈಸೂರಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಇಂದ್ರ ಧನುಷ್ ಅಭಿಯಾನದಡಿ ಮೈಸೂರಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ

July 17, 2018

ಮೈಸೂರು:  ಗರ್ಭಿಣಿಯರು ಮತ್ತು ಮಕ್ಕಳು ಅಗತ್ಯ ಲಸಿಕೆಗಳಿಂದ ವಂಚಿತರಾಗುವುದನ್ನು ತಡೆಗಟ್ಟುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ಇಂದ್ರಧನುಷ್ ಅಭಿಯಾನದಡಿ ಮೈಸೂರು ನಗರ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರಿನ ರಾಮಾನುಜ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಎಸ್.ಎ.ರಾಮದಾಸ್ ಮೈಸೂರು ನಗರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ…

ಸಾರ್ವಜನಿಕ ಸೇವಾ ರಸ್ತೆಯಲ್ಲಿ ತಲೆ ಎತ್ತಿವೆ `ನಿಗೂಢ’ ಮಳಿಗೆಗಳು!
ಮೈಸೂರು

ಸಾರ್ವಜನಿಕ ಸೇವಾ ರಸ್ತೆಯಲ್ಲಿ ತಲೆ ಎತ್ತಿವೆ `ನಿಗೂಢ’ ಮಳಿಗೆಗಳು!

July 17, 2018

ಮೈಸೂರು ಪಾಲಿಕೆ ಅಧಿಕಾರ ವರ್ಗಕ್ಕೆ ಇದರ ಬಗ್ಗೆ ಅರಿವಿಲ್ಲವಂತೆ! ಮೈಸೂರು: ಅತ್ತೆ ಕೊಟ್ಟ ಬಂಗಾರದ ಉಡುಗೊರೆಯನ್ನು ಅಳಿಯ ಬೇರೊಬ್ಬರಿಗೆ ದಾನ ಮಾಡಿದ ಎಂಬ ನಾಣ್ಣುಡಿಯಂತೆ, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಉಳಿದಿರುವ ಸಾರ್ವಜನಿಕ ಸೇವಾ ರಸ್ತೆಯಲ್ಲಿ, ಅನಧಿಕೃತ ಮಳಿಗೆಗಳ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು.. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವೀಸ್ ರಸ್ತೆ ಮತ್ತೆ ಸಾರ್ವಜನಿಕರ ಕೈತಪ್ಪುವಂತಿದೆ. ರಾಜಕಾಲುವೆ ಪಕ್ಕದ ಈ ಸರ್ವಿಸ್…

ವರುಣಾ ನಾಲೆಗೆ ನವೀಕರಣ ಭಾಗ್ಯ
ಮೈಸೂರು

ವರುಣಾ ನಾಲೆಗೆ ನವೀಕರಣ ಭಾಗ್ಯ

July 17, 2018

75 ಕೋಟಿ ವೆಚ್ಚದಲ್ಲಿ 3 ಪ್ಯಾಕೇಜ್‍ಗಳಲ್ಲಿ ಕಾಮಗಾರಿ ಮೈಸೂರು: ಮೈಸೂರಿನ ನಾಲ್ಕು ಹಾಗೂ ಮಂಡ್ಯದ ಒಂದು ತಾಲೂಕು ಸೇರಿ ಐದು ತಾಲೂಕುಗಳ ಕೃಷಿಭೂಮಿಗೆ ನೀರುಣಿಸುತ್ತಿರುವ ವರುಣಾ ನಾಲೆಯ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕೃಷಿ ಭೂಮಿಗೆ ಸಮರ್ಪಕ ನೀರು ದೊರೆಯುವ ವಿಶ್ವಾಸ ಮೂಡಿದೆ. ವರುಣಾ ನಾಲೆಯು 82 ಗ್ರಾಮಗಳ ಕೃಷಿ ಭೂಮಿಗೆ ಜೀವಸೆಲೆಯಾಗಿದೆ. ಇದರ ನಿರ್ಮಾಣಕ್ಕೆ 1979ರಲ್ಲಿ ಚಾಲನೆ ನೀಡಲಾಗಿತ್ತು. ನಿರ್ಮಾಣಗೊಂಡ ಬಳಿಕ ರೈತರ ನೀರಾವರಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿ ಹೊಸ ಭರವಸೆ ಮೂಡಿಸಿದ್ದ ವರುಣಾ ನಾಲೆ ಕಾಲ…

ಮೈಸೂರು ಜನರ ಹಿತದೃಷ್ಟಿಯಿಂದ  ರೇಸ್ ಕ್ಲಬ್ ಸ್ಥಳಾಂತರ: ಸಚಿವ ಸಾ.ರಾ.ಮಹೇಶ್ ಪುನರುಚ್ಚಾರ
ಮೈಸೂರು

ಮೈಸೂರು ಜನರ ಹಿತದೃಷ್ಟಿಯಿಂದ  ರೇಸ್ ಕ್ಲಬ್ ಸ್ಥಳಾಂತರ: ಸಚಿವ ಸಾ.ರಾ.ಮಹೇಶ್ ಪುನರುಚ್ಚಾರ

July 17, 2018

ಮೈಸೂರು:  ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಮೈಸೂರಿನ ಜನರ ಹಿತದೃಷ್ಟಿಯಿಂದ ರೇಸ್‍ಕೋರ್ಸ್ ಕ್ಲಬ್ ಅನ್ನು ಸ್ಥಳಾಂತರ ಮಾಡುವುದಕ್ಕೆ ಮುಂದಾಗಿದ್ದೇನೆ. ಅನಧಿಕೃತ ಕಟ್ಟಡಗಳ ತೆರವಿಗೆ ಮೂರು ತಿಂಗಳು ಗಡುವು ನೀಡಲಾಗಿದ್ದು, ಗಡುವು ಪೂರ್ಣ ಗೊಂಡರೂ ತೆರವು ಮಾಡದೆ ಇದ್ದರೆ ಜಿಲ್ಲಾಡಳಿತದೊಂದಿಗೆ ಅಕ್ರಮ ಕಟ್ಟಡಗಳ ನೆಲಸಮ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪುನರುಚ್ಚರಿಸಿದ್ದಾರೆ. ಹೊಟೇಲ್ ಮಾಲೀಕರ ಸಂಘದ ಆವರಣದಲ್ಲಿ ಭಾನುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ರೇಸ್‍ಕೋರ್ಸ್ ಸ್ಥಳಾಂತರ ಮಾಡುವ ವಿಷಯದಲ್ಲಿ ನನ್ನ ಹಿತಾಸಕ್ತಿ ಅಡಗಿಲ್ಲ….

ಮುಮ್ಮಡಿ ಕೃಷ್ಣರಾಜ ಒಡೆಯರ್  ಜನ್ಮದಿನ ಆಚರಣೆ
ಮೈಸೂರು

ಮುಮ್ಮಡಿ ಕೃಷ್ಣರಾಜ ಒಡೆಯರ್  ಜನ್ಮದಿನ ಆಚರಣೆ

July 17, 2018

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಮುಂಭಾಗದಲ್ಲಿರುವ ರಾಗರಾಗಿಣಿ ಸಂಗೀತ ಮಂಟಪದಲ್ಲಿ ನಮ್ಮ ಕರ್ನಾಟಕ ಸೇನಾ ಪಡೆ ವತಿಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಚಾಮುಂಡಿಬೆಟ್ಟದ ಪ್ರಧಾನ ದೀಕ್ಷಿತರಾದ ಡಾ. ಶಶಿ ಶೇಖರ್ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಮತ್ತು ಚಾಮುಂಡಿಬೆಟ್ಟದ ಅಭಿವೃದ್ಧಿಯನ್ನು ಮಾಡಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಚಾಮುಂಡೇಶ್ವರಿ ದೇವಿಯ ಪರಮ ಭಕ್ತರಾಗಿದ್ದರು. ಆದ್ದರಿಂದ ಅವರ…

ಹತ್ಯೆ ಸಂಚು ಖಂಡಿಸಿ ಯಶ್ ಅಭಿಮಾನಿಗಳ ಪ್ರತಿಭಟನೆ
ಮೈಸೂರು

ಹತ್ಯೆ ಸಂಚು ಖಂಡಿಸಿ ಯಶ್ ಅಭಿಮಾನಿಗಳ ಪ್ರತಿಭಟನೆ

July 17, 2018

ಮೈಸೂರು:  ಕನ್ನಡದ ನಾಯಕ ನಟ ಯಶ್ ಕೊಲೆ ಸಂಚಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧೀ ಪುತ್ಥಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ನಟ ಯಶ್ ಅವರ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಕೊಲೆ ಸಂಚು ನಡೆಸಿರುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಂಧಿಸಿ ಕಾನೂನಿನಂತೆ ಕಠಿಣ ಶಿಕ್ಷೆ ವಿಧಿಸಬೇಕು….

1 1,484 1,485 1,486 1,487 1,488 1,611
Translate »