ಮೈಸೂರು

ಕೃಷಿ ತಜ್ಞ ಸ್ವಾಮಿನಾಥನ್ ಜೊತೆ ರೈತರ ಸಮಸ್ಯೆ ಕುರಿತು ಕುಮಾರಸ್ವಾಮಿ ಚರ್ಚೆ
ಮೈಸೂರು

ಕೃಷಿ ತಜ್ಞ ಸ್ವಾಮಿನಾಥನ್ ಜೊತೆ ರೈತರ ಸಮಸ್ಯೆ ಕುರಿತು ಕುಮಾರಸ್ವಾಮಿ ಚರ್ಚೆ

July 14, 2018

ಬೆಂಗಳೂರು:  ರಾಜ್ಯದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ವಿಶ್ವದ ವಿವಿಧೆಡೆಗಳಲ್ಲಿ ಅಳವಡಿಸಿ ಕೊಳ್ಳಲಾದ ಉತ್ತಮ ಕೃಷಿ ಪದ್ದತಿಯ ಜಾರಿಗೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ತಿಳಿಸಿದ್ದಾರೆ. ರಾಜ್ಯದಲ್ಲಿ ರೈತರ ಸುಧಾರಣೆ, ಕೃಷಿ ಅಭಿವೃದ್ದಿಗೆ ಕಾರಣವಾಗಿದ್ದ ಕೃಷಿ ತಜ್ಞ ಡಾ.ಎಸ್.ಎಸ್. ಸ್ವಾಮಿನಾಥನ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಕುಮಾರಸ್ವಾಮಿ ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ಅಳವಡಿಕೆ ಕುರಿತಂತೆ ಬಜೆಟ್ ಪ್ರಸ್ತಾವನೆಯನ್ನು ಸ್ವಾಮಿನಾಥನ್ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ…

ಪೆಟ್ರೋಲ್ ರೂ. 1.14, ಡೀಸೆಲ್ ರೂ.1.12 ಹೆಚ್ಚಳ
ಮೈಸೂರು

ಪೆಟ್ರೋಲ್ ರೂ. 1.14, ಡೀಸೆಲ್ ರೂ.1.12 ಹೆಚ್ಚಳ

July 14, 2018

ಬೆಂಗಳೂರು: ಪೆಟ್ರೋಲ್ ಬೆಲೆ ರೂ. 1.14 ಮತ್ತು ಡೀಸೆಲ್ ಬೆಲೆ ರೂ. 1.12ರಷ್ಟು ಹೆಚ್ಚಳ ಮಾಡಲಾ ಗದೆ. ಬಜೆಟ್‍ನಲ್ಲಿ ರಾಜ್ಯ ಸರ್ಕಾರವು ತೈಲ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಇಂದು ಮಧ್ಯ ರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ.

ಬಜೆಟ್ ಅಧಿವೇಶನಕ್ಕೆ ತೆರೆ, ಮುಂದಿನ ಅಧಿವೇಶನ  ಬೆಳಗಾವಿಗೆ ಶಿಫ್ಟ್
ಮೈಸೂರು

ಬಜೆಟ್ ಅಧಿವೇಶನಕ್ಕೆ ತೆರೆ, ಮುಂದಿನ ಅಧಿವೇಶನ  ಬೆಳಗಾವಿಗೆ ಶಿಫ್ಟ್

July 14, 2018

ಬೆಂಗಳೂರು: 11 ದಿನಗಳ ಬಜೆಟ್ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಮುಂದಿನ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‍ಗೆ ಅಂಗೀಕಾರ, ರೈತರ ಸಾಲ ಮನ್ನಾ ಮೊತ್ತವನ್ನು 40 ಸಾವಿರ ಕೋಟಿ ರುಪಾಯಿಗೆ ಏರಿಕೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಅಧಿವೇಶನ ದಲ್ಲಿ ತೆಗೆದುಕೊಳ್ಳಲಾಗಿದೆ. ನಿನ್ನೆ ಬಿಜೆಪಿ ಸಭಾತ್ಯಾಗದ ಮಧ್ಯೆಯೇ ಕರ್ನಾಟಕ ಧನವಿನಿಯೋಗ ವಿಧೇಯಕ, ಮೋಟಾರು ವಾಹನಗಳ ತೆರಿಗೆ…

ಸಂಸದ ಪ್ರತಾಪ ಸಿಂಹರಿಂದ ಹತ್ತು ಪಥದ ಹೆದ್ದಾರಿ ಕಾಮಗಾರಿ ಪರಿಶೀಲನೆ
ಮೈಸೂರು

ಸಂಸದ ಪ್ರತಾಪ ಸಿಂಹರಿಂದ ಹತ್ತು ಪಥದ ಹೆದ್ದಾರಿ ಕಾಮಗಾರಿ ಪರಿಶೀಲನೆ

July 14, 2018

ಮೈಸೂರು:  ಮೈಸೂರು-ಬೆಂಗಳೂರು ಮುಖ್ಯರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್‍ನಿಂದ ಟೋಲ್‍ಗೇಟ್‍ವರೆಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ 10 ಪಥದ ರಸ್ತೆಯ ಕಾಮಗಾರಿಯನ್ನು ಶುಕ್ರವಾರ ಸಂಸದ ಪ್ರತಾಪ ಸಿಂಹ ಪರಿಶೀಲಿಸಿ, ರಸ್ತೆ ವಿಭಜಕ ಸೇರಿದಂತೆ ವಿವಿಧೆಡೆ ಇರುವ ನ್ಯೂನತೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ರಿಂಗ್ ರಸ್ತೆಯ ಜಂಕ್ಷನ್‍ನಿಂದ ಪರಿಶೀಲನೆ ಆರಂಭಿಸಿದ ಅವರು ರಸ್ತೆ ವಿಭಜಕದಲ್ಲಿರುವ ನ್ಯೂನತೆ, ನಾಲ್ಕು ರಸ್ತೆಗಳು ಸೇರುವ ಜಂಕ್ಷನ್‍ನಲ್ಲಿ ರಸ್ತೆ ಅಗಲೀಕರಣ ಮಾಡುವ ವೇಳೆ ಎಸಗಿರುವ ದೋಷವನ್ನು ಸರಿಪಡಿಸುವಂತೆ ಸೂಚನೆ ನೀಡಿದರಲ್ಲದೆ, ಕಾಮಗಾರಿಯ ಗುಣಮಟ್ಟ ಹಾಗೂ…

ಮೈಸೂರು ಭೇಟಿ ಮೊದಲ ದಿನ ಸಚಿವ ಜಿ.ಟಿ.ದೇವೇಗೌಡರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ
ಮೈಸೂರು

ಮೈಸೂರು ಭೇಟಿ ಮೊದಲ ದಿನ ಸಚಿವ ಜಿ.ಟಿ.ದೇವೇಗೌಡರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ

July 14, 2018

ಮೈಸೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದು, ಜಿ.ಟಿ.ದೇವೇಗೌಡರು ಇಂದು ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಾದ ನಂತರ ಇದೇ ಪ್ರಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿದ ಅವರು, ತಮ್ಮ ಕುಟುಂಬದ ಸದಸ್ಯರೊಂದಿಗೆ ಮೊದಲು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಬಳಿಕ ಉತ್ತನಹಳ್ಳಿಯಲ್ಲಿರುವ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ತಮ್ಮ ಸ್ವಗ್ರಾಮ ಗುಂಗ್ರಾಲ್ ಛತ್ರದಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ್ದಲ್ಲದೇ ನಂಜನಗೂಡು ನಂಜುಂಡೇಶ್ವರನಿಗೆ ವಿಶೇಷ ಪೂಜೆ…

ಚಿನ್ನದ ಮೇಲೆ ಬಂಡವಾಳ ಹೂಡಿಕೆ ನಿರರ್ಥಕ: ಷೇರು ಪೇಟೆ ಬಂಡವಾಳ ಹೂಡಿಕೆ ಬಾಲಾಜಿ ರಾವ್ ಅಭಿಮತ
ಮೈಸೂರು

ಚಿನ್ನದ ಮೇಲೆ ಬಂಡವಾಳ ಹೂಡಿಕೆ ನಿರರ್ಥಕ: ಷೇರು ಪೇಟೆ ಬಂಡವಾಳ ಹೂಡಿಕೆ ಬಾಲಾಜಿ ರಾವ್ ಅಭಿಮತ

July 14, 2018

ಮೈಸೂರು: ಚಿನ್ನ ಸೇರಿದಂತೆ ಇತರೆ ಚರಾಸ್ತಿಗಳ ಮೇಲೆ ಭಾವನಾತ್ಮಕ ಚಿಂತನೆಯೊಂದಿಗೆ ಹೆಚ್ಚಿನ ಬಂಡವಾಳ ಹೂಡಿದರೆ, ಯಾವುದೇ ಪ್ರಯೋಜನವಿಲ್ಲ ಎಂದು ಷೇರುಪೇಟೆ ಬಂಡವಾಳ ಹೂಡಿಕೆ ತರಬೇತುದಾರ ಡಿ.ಜಿ.ಬಾಲಾಜಿ ರಾವ್ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್(ಇಂಡಿಯಾ) ಮೈಸೂರು ಘಟಕ ಹಾಗೂ ಪ್ರೂಡೆಟ್ ಕಾರ್ಪೊರೇಟ್ ಅಡ್ವೈಸರಿ ಸರ್ವಿಸ್ಸ್(ಲಿ), ಹೆಚ್‍ಡಿಎಫ್‍ಸಿ ಮ್ಯೂಚುಯಲ್ ಫಂಡ್ ಸಹಯೋಗದೊಂದಿಗೆ ಆಯೋಜಿಸಿದ್ದ `ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ’ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೂಡಿಕೆದಾರರು ಭಾವನಾತ್ಮಕವಾಗಿ ಅಗತ್ಯಕ್ಕಿಂತ…

ದೂರ ಕ್ರಮಿಸುವ ರೈಲುಗಳಿಗೆ ಟ್ರೈನ್ ಕ್ಯಾಪ್ಟನ್ ನೇಮಕ
ಮೈಸೂರು

ದೂರ ಕ್ರಮಿಸುವ ರೈಲುಗಳಿಗೆ ಟ್ರೈನ್ ಕ್ಯಾಪ್ಟನ್ ನೇಮಕ

July 14, 2018

ಮೈಸೂರು: ಅತೀ ದೂರ ಸಂಚರಿಸುವ ಎಕ್ಸ್‍ಪ್ರೆಸ್ ರೈಲು ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಟ್ರೈನ್ ಕ್ಯಾಪ್ಟನ್‍ಗಳನ್ನು ನೇಮಿಸಲಾಗಿದೆ. 2018ರ ಜುಲೈ6ರಿಂದ ಟ್ರೈನ್ ಕ್ಯಾಪ್ಟನ್ ಪರಿಕಲ್ಪನೆಯನ್ನು ಪರಿಚಯಿಸಿದ್ದು, ಮೈಸೂರು -ನಿಜಾಮುದ್ದೀನ್ ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ವಾರದ ಎಕ್ಸ್‍ಪ್ರೆಸ್ ಪ್ರಥಮವಾಗಿ ಜಾರಿಗೊಳಿಸಿದ ರೈಲಾಗಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆಪರೇ ಷನ್ಸ್, ಭದ್ರತೆ, ಕೇಟರಿಂಗ್, ಹೌಸ್ ಕೀಪಿಂಗ್ ಸೇವಾ ಸಿಬ್ಬಂದಿಯೊಂದಿಗೆ ಸಹಕರಿಸಿ ರೈಲು ಪ್ರಯಾಣದ ಅವಧಿಯಲ್ಲಿ ದೂರು, ಪ್ರಯಾಣಿಕರ ಕುಂದು-ಕೊರತೆಗಳನ್ನು ವಿಚಾರಿಸಿ ಸಮಸ್ಯೆ ಪರಿಹರಿಸಲು ಟ್ರೈನ್ ಕ್ಯಾಪ್ಟನ್ ಕಾರ್ಯ ನಿರ್ವಹಿಸುವರು ಎಂದು ಮೈಸೂರು…

ಸಾಮೂಹಿಕ ವರ್ಗಾವಣೆ ಖಂಡಿಸಿ ವಿನ್ಯಾಸ್ಇ ನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಸಾಮೂಹಿಕ ವರ್ಗಾವಣೆ ಖಂಡಿಸಿ ವಿನ್ಯಾಸ್ಇ ನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ಪ್ರತಿಭಟನೆ

July 14, 2018

ಮೈಸೂರು: ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಆಡಳಿತ ವರ್ಗವು ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಿನ್ಯಾಸ್ ಇನ್ನೋವೇಟಿವ್ ಕಂಪೆನಿಯಲ್ಲಿ 200 ಮಂದಿ ಮಹಿಳೆಯರು ಸೇರಿದಂತೆ 450 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಅನುಭವವುಳ್ಳ ನುರಿತ ಕಾರ್ಮಿಕರಾಗಿದ್ದಾರೆ. ಹಾಗಾಗಿ ಈ ಕಂಪೆನಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಎಲೆಕ್ಟ್ರಾನಿಕ್ಸ್ ಬೋಡ್ರ್ಸ್ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಜತೆಗೆ…

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವಿವಿಧ ಪ್ರಶಸ್ತಿ ಪ್ರಕಟ
ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವಿವಿಧ ಪ್ರಶಸ್ತಿ ಪ್ರಕಟ

July 14, 2018

‘ಮೈಸೂರು ಮಿತ್ರ’ದ ರಾಜಕುಮಾರ್ ಭಾವಸಾರ್‍ಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಮೈಸೂರು:  ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪ್ರತಿ ವರ್ಷ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕೊಡಮಾಡುವ `ಜೀವಮಾನ ಸಾಧನೆ ಪ್ರಶಸ್ತಿ’ ಈ ವರ್ಷ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಪತ್ರಿಕೆ ಹಿರಿಯ ವರದಿಗಾರ ರಾಜಕುಮಾರ್ ಭಾವಸಾರ್ ಅವರಿಗೆ ಲಭಿಸಿದೆ. ವಿವಿಧ ಪ್ರಶಸ್ತಿಗೆ ಆಯ್ಕೆಯಾದವರು ವರ್ಷದ ವರದಿಗಾರ: ಹರೀಶ್ ತಲಕಾಡು, ವರದಿಗಾರ, ವಿಜಯ ಕರ್ನಾಟಕ ದಿನಪತ್ರಿಕೆ, ವರ್ಷದ ಛಾಯಾಗ್ರಾಹಕ: ಉದಯಶಂಕರ್, ಛಾಯಾಗ್ರಾಹಕ, ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್…

ನಾಳೆ ಬ್ರಾಹ್ಮಣ ಯುವಕರಿಗೆ ಕೌಶಲ್ಯಾಭಿವೃದ್ದಿ ಕಾರ್ಯಾಗಾರ
ಮೈಸೂರು

ನಾಳೆ ಬ್ರಾಹ್ಮಣ ಯುವಕರಿಗೆ ಕೌಶಲ್ಯಾಭಿವೃದ್ದಿ ಕಾರ್ಯಾಗಾರ

July 14, 2018

ಮೈಸೂರು: ಆಂತಾರಾಷ್ಟ್ರೀಯ ಕೌಶಲ್ಯ ದಿನಾಚರಣೆ ಅಂಗವಾಗಿ ಮೈಸೂರಿನ ವಿಪ್ರ ಉದ್ಯಮಿಗಳ ಸಂಘದ ಆಶ್ರಯದಲ್ಲಿ ಜು.15ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಯುವ ಬ್ರಾಹ್ಮಣ ಉದ್ಯಮಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಉದ್ದಿಮ ಪ್ರಾರಂಭಿಸುವ ಬಗೆ, ಕಚ್ಛಾ ವಸ್ತುಗಳನ್ನು ಎಲ್ಲಿಂದ ತರಿಸಿಕೊಳ್ಳಬೇಕು?, ಉದ್ದಿಮೆ ಆರಂಭಿಸುವಾಗ ಅನುಸರಿಸಬೇಕಾದ ಸಿದ್ಧತಾ…

1 1,488 1,489 1,490 1,491 1,492 1,611
Translate »