ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವಿವಿಧ ಪ್ರಶಸ್ತಿ ಪ್ರಕಟ
ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವಿವಿಧ ಪ್ರಶಸ್ತಿ ಪ್ರಕಟ

July 14, 2018
  • ‘ಮೈಸೂರು ಮಿತ್ರ’ದ ರಾಜಕುಮಾರ್ ಭಾವಸಾರ್‍ಗೆ ‘ಜೀವಮಾನ ಸಾಧನೆ ಪ್ರಶಸ್ತಿ’

ಮೈಸೂರು:  ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪ್ರತಿ ವರ್ಷ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕೊಡಮಾಡುವ `ಜೀವಮಾನ ಸಾಧನೆ ಪ್ರಶಸ್ತಿ’ ಈ ವರ್ಷ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಪತ್ರಿಕೆ ಹಿರಿಯ ವರದಿಗಾರ ರಾಜಕುಮಾರ್ ಭಾವಸಾರ್ ಅವರಿಗೆ ಲಭಿಸಿದೆ.

ವಿವಿಧ ಪ್ರಶಸ್ತಿಗೆ ಆಯ್ಕೆಯಾದವರು

ವರ್ಷದ ವರದಿಗಾರ: ಹರೀಶ್ ತಲಕಾಡು, ವರದಿಗಾರ, ವಿಜಯ ಕರ್ನಾಟಕ ದಿನಪತ್ರಿಕೆ, ವರ್ಷದ ಛಾಯಾಗ್ರಾಹಕ: ಉದಯಶಂಕರ್, ಛಾಯಾಗ್ರಾಹಕ, ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ದಿನಪತ್ರಿಕೆ, ಜೀವಮಾನ ಸಾಧನೆ: ರಾಜಕುಮಾರ್ ಭಾವಸಾರ್, ಹಿರಿಯ ವರದಿಗಾರ, ಮೈಸೂರು ಮಿತ್ರ ದಿನಪತ್ರಿಕೆ. ವರ್ಷದ ಉಪಸಂಪಾದಕ: ದೊಡ್ಡನಹುಂಡಿ ರಾಜಣ್ಣ, ಉಪಸಂಪಾದಕ, ವಿಜಯವಾಣಿ ದಿನಪತ್ರಿಕೆ, ವರ್ಷದ ಗ್ರಾಮಾಂತರ ಪತ್ರಕರ್ತ: ಹನಗೋಡು ನಟರಾಜ್, ವರದಿಗಾರ, ವಿಜಯಕರ್ನಾಟಕ ದಿನಪತ್ರಿಕೆ, ಹುಣಸೂರು ಹಾಗೂ ವರ್ಷದ ಗ್ರಾಮಾಂತರ ಛಾಯಾಗ್ರಾಹಕ: ಕನ್ನಡ ಪ್ರಮೋದ್, ಹೆಗ್ಗಡದೇವನಕೋಟೆ.

ಜು.20ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಮೈಸೂರಿನ ಅಗ್ರಹಾರದಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು ತಿಳಿಸಿದ್ದಾರೆ.’

Translate »