ನಾಳೆ ಬ್ರಾಹ್ಮಣ ಯುವಕರಿಗೆ ಕೌಶಲ್ಯಾಭಿವೃದ್ದಿ ಕಾರ್ಯಾಗಾರ
ಮೈಸೂರು

ನಾಳೆ ಬ್ರಾಹ್ಮಣ ಯುವಕರಿಗೆ ಕೌಶಲ್ಯಾಭಿವೃದ್ದಿ ಕಾರ್ಯಾಗಾರ

July 14, 2018

ಮೈಸೂರು: ಆಂತಾರಾಷ್ಟ್ರೀಯ ಕೌಶಲ್ಯ ದಿನಾಚರಣೆ ಅಂಗವಾಗಿ ಮೈಸೂರಿನ ವಿಪ್ರ ಉದ್ಯಮಿಗಳ ಸಂಘದ ಆಶ್ರಯದಲ್ಲಿ ಜು.15ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಸರಸ್ವತಿಪುರಂ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಯುವ ಬ್ರಾಹ್ಮಣ ಉದ್ಯಮಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಉದ್ದಿಮ ಪ್ರಾರಂಭಿಸುವ ಬಗೆ, ಕಚ್ಛಾ ವಸ್ತುಗಳನ್ನು ಎಲ್ಲಿಂದ ತರಿಸಿಕೊಳ್ಳಬೇಕು?, ಉದ್ದಿಮೆ ಆರಂಭಿಸುವಾಗ ಅನುಸರಿಸಬೇಕಾದ ಸಿದ್ಧತಾ ಕ್ರಮಗಳು, ಬಂಡವಾಳ ಹೂಡುವ ಬಗ್ಗೆ, ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯುವ ವಿಧಾನ, ಮಾರುಕಟ್ಟೆ ಆಭಿವೃದ್ಧಿಪಡಿಸುವ ಬಗೆ ಇತ್ಯಾದಿ ಕುರಿತು ಕಾರ್ಯಾಗಾರದಲ್ಲಿ ಪರಿಣಿತ ಉದ್ಯಮಿಗಳು ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಬ್ರಾಹ್ಮಣ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮಿಗಳು ಭಾಗವಹಿಸಿ ಬ್ರಾಹ್ಮಣ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ . ಈ ಕಾರ್ಯಾಗಾರದಲ್ಲಿ ಬ್ರಾಹ್ಮಣ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ನಾಗರಾಜು, ವಿಪ್ರ ಯುವಸೇನೆ ಅಧ್ಯಕ್ಷ ಪ್ರದೀಪ್, ರಾಜೇಶ್ ಬೋರೆ ಉಪಸ್ಥಿತರಿದ್ದರು.

Translate »