ಮೈಸೂರು

ಸೂರಿಗಾಗಿ ಅರ್ಜಿ ಸಲ್ಲಿಸಲು ಜು.30ರ ಕಾಲಾವಕಾಶ
ಮೈಸೂರು

ಸೂರಿಗಾಗಿ ಅರ್ಜಿ ಸಲ್ಲಿಸಲು ಜು.30ರ ಕಾಲಾವಕಾಶ

July 7, 2018

ವಿಧಾನಸಭೆಯಲ್ಲಿ ವಸತಿ ಸಚಿವ ಯು.ಟಿ. ಖಾದರ್ ವಿವರಣೆ ಅನರ್ಹರು ಅರ್ಜಿ ಸಲ್ಲಿಸಿದರೆ ಶಿಸ್ತು ಕ್ರಮ ಬೆಂಗಳೂರು:  ಸೂರಿಲ್ಲದವರಿಗೆ ವಸತಿ ಕಲ್ಪಿಸಲು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಶಾಶ್ವತ ಮನೆ ಇಲ್ಲದವರು ಇದೇ 30 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ವಸತಿ ಸಚಿವ ಯು.ಟಿ. ಖಾದರ್ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ ಇದುವರೆಗೆ ಒಟ್ಟು 15 ಲಕ್ಷ ನಿವೇಶನ ಹಾಗೂ ವಸತಿ ರಹಿತರನ್ನು ಗುರುತಿಸಲಾಗಿದೆ. ಗ್ರಾಮ ಪಂಚಾಯ್ತಿ ಅಭಿ ವೃದ್ಧಿ ಅಧಿಕಾರಿ ಹಾಗೂ ಗ್ರಾಮ…

ಧರ್ಮ ಕುಲಗೆಡಿಸಿದವರು ಸಚಿವಗಿರಿ  ಗಿಟ್ಟಿಸಿಕೊಳ್ಳಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ
ಮೈಸೂರು

ಧರ್ಮ ಕುಲಗೆಡಿಸಿದವರು ಸಚಿವಗಿರಿ  ಗಿಟ್ಟಿಸಿಕೊಳ್ಳಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ

July 7, 2018

ಕೊಳ್ಳೇಗಾಲ: -ಧರ್ಮ ಕುಲಗೆಡಿಸಿದವರು ಈಗ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಆ ವ್ಯಕ್ತಿ ಇಂದು ಸಮ್ಮಿಶ್ರ ಸರ್ಕಾರದಲ್ಲಿ ಸಚಿವಗಿರಿ ಗಿಟ್ಟಿಸಿಕೊಳ್ಳಲಾ ಗದೇ ವಿಲವಿಲ ಒದ್ದಾಡುತ್ತಿದ್ದಾರೆ. ಹೀಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲರ ಬಗ್ಗೆ ಮಾರ್ಮಿಕ ವಾಗಿ ನುಡಿದವರು ಬಾಳೆಹೊನ್ನೂರು ಪೀಠದ ರಂಭಾಪುರಿ ಪೀಠಾಧ್ಯಕ್ಷರಾದ ಡಾ. ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ. ಅವರು ತಾಲೂಕಿನ ಹೊಸವಾಡಿ ವೀರ ಭದ್ರಸ್ವಾಮಿ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಅಯೋಜಿಸಲಾಗಿದ್ದ ಧಾರ್ಮಿಕ…

ಮೈಸೂರು ವಿವಿ 113 ಬೋಧಕ ವರ್ಗದ ನೇಮಕ ಊರ್ಜಿತ
ಮೈಸೂರು

ಮೈಸೂರು ವಿವಿ 113 ಬೋಧಕ ವರ್ಗದ ನೇಮಕ ಊರ್ಜಿತ

July 7, 2018

 ಅನರ್ಹಗೊಳಿಸಿದ್ದ ಸರ್ಕಾರಕ್ಕೆ ಮುಖಭಂಗ ವಿವಿ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್ ಮೈಸೂರು: 2007ರಲ್ಲಿ ನೇಮಕವಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಹಂಗಾಮಿ ಕುಲಪತಿ ಪ್ರೊ. ಸಿ.ಬಸವರಾಜು ಸೇರಿದಂತೆ 9 ಪ್ರಾಧ್ಯಾ ಪಕರು, 30 ರೀಡರ್ ಗಳನ್ನು ಒಳಗೊಂಡಂತೆ ಎಲ್ಲಾ 113 ಬೋಧಕ ವರ್ಗದ ನೇಮಕ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಮೂರ್ತಿ ಬೋಪಣ್ಣ ಅವರು ಇಂದು ತೀರ್ಪು ನೀಡಿದ್ದು, ಮೈಸೂರು ವಿಶ್ವವಿದ್ಯಾನಿಲಯದ 113 ಮಂದಿ ಬೋಧಕ ವರ್ಗದ ನೇಮಕ ಕ್ರಮಬದ್ಧ ಎಂದು ತೀರ್ಪು…

43 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ
ಮೈಸೂರು

43 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲೆಗೆ ಬಡ್ತಿ

July 7, 2018

ಮೈಸೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೀಗ ಹೈಸ್ಕೂಲ್ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಿದೆ. ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಇಂದು ಡಿಡಿಪಿಐ ಮಮತಾ ಅವರು ಕೌನ್ಸಿಲಿಂಗ್ ನಡೆಸಿ ಬಿಇಡಿ ಪದವಿ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯಮಾವಳಿಯನುಸಾರ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ನಡೆಸಿ ಸ್ಥಳದಲ್ಲೇ ಆದೇಶ ಪ್ರತಿಗಳನ್ನೂ ವಿತರಿಸಿದರು. ಮೈಸೂರು ಜಿಲ್ಲೆಯಲ್ಲಿ ಒಟ್ಟು 119 ಹೈಸ್ಕೂಲ್ ಶಾಲಾ ಶಿಕ್ಷಕರ ಹುದ್ದೆ…

ಕಾಡಾ ಕಚೇರಿ ಮುಂದೆ ರೈತರ ಪ್ರತಿಭಟನೆ
ಮೈಸೂರು

ಕಾಡಾ ಕಚೇರಿ ಮುಂದೆ ರೈತರ ಪ್ರತಿಭಟನೆ

July 7, 2018

ಮೈಸೂರು:  ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗ ಬೇಕೆಂದು ಆಗ್ರಹಿಸಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಶುಕ್ರವಾರ ಮೈಸೂ ರಿನ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕಾಡಾ ಕಚೇರಿ ಬಳಿ ಜಮಾಯಿಸಿದ ರೈತರು, ಕಬಿನಿ ಜಲಾಶಯ ಭರ್ತಿಯಾಗಿ 25 ದಿನಗಳಾಗಿದ್ದರೂ ರೈತರ ಕೃಷಿ ಚಟುವಟಿಕೆಗಳಿಗೆ,…

ಪ್ರೀತಿಗೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಮಂಡ್ಯ, ಮೈಸೂರು

ಪ್ರೀತಿಗೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

July 7, 2018

ಮಂಡ್ಯ:  ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿ ದ್ದರಿಂದ ಪ್ರೇಮಿಗಳಿಬ್ಬರ ಜೀವನ ದುರಂತ ಅಂತ್ಯ ಕಂಡಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ಚಿಕ್ಕಾಯರಳ್ಳಿಯಲ್ಲಿ ನಡೆದಿದೆ. ಮೂಲತಃ ಹೆಚ್.ಡಿ.ಕೋಟೆ ತಾಲೂಕು ಯಡಿಯಾಲ ಗ್ರಾಮದ ನಿವಾಸಿಗಳಾದ ಶಿವು @ ಚಿನ್ನು ಬಿನ್ ವೆಂಕಟೇಶ್(19) ಮತ್ತು ಅನ್ನಪೂರ್ಣ ಬಿನ್ ಭಾಗ್ಯಮ್ಮ (18) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಘಟನೆ ಹಿನ್ನೆಲೆ: ಶಿವು ಮತ್ತು ಅನ್ನಪೂರ್ಣ ಇಬ್ಬರೂ ಬಸ್‍ನಲ್ಲಿ ಹೆಚ್.ಡಿ.ಕೋಟೆಯಿಂದ ಗುರುವಾರವೇ ಶ್ರೀರಂಗಪಟ್ಟಣಕ್ಕೆ ಬಂದಿದ್ದು, ಕೆಆರ್‍ಎಸ್‍ಗೆ ತೆರಳಿ ಅಲ್ಲಿ ಸುತ್ತಮುತ್ತ ಸುತ್ತಾಡಿದ್ದಾರೆ. ಸಂಜೆಯಾದ…

ನಂಜನಗೂಡು ಲಾಡ್ಜ್ ನಲ್ಲಿ ಮೈಸೂರು ಉದ್ಯಮಿ ಆತ್ಮಹತ್ಯೆ
ಮೈಸೂರು

ನಂಜನಗೂಡು ಲಾಡ್ಜ್ ನಲ್ಲಿ ಮೈಸೂರು ಉದ್ಯಮಿ ಆತ್ಮಹತ್ಯೆ

July 7, 2018

ನಂಜನಗೂಡು:  ಪಟ್ಟಣದ ಲಾಡ್ಜ್ ವೊಂದರಲ್ಲಿ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಕೆ.ಆರ್ ಮೊಹಲ್ಲಾದ ಹಳೇ ಬಂಡಿಕೇರಿ ನಿವಾಸಿ, ಕೇಬಲ್ ಆಪರೇಟರ್ ಜಿ.ಆರ್. ಬಾಬು(45) ಆತ್ಮಹತ್ಯೆಗೆ ಶರಣಾದವರು. ಪಟ್ಟಣದ ಖಾಸಗಿಬಸ್ ನಿಲ್ದಾಣದ ಸಮೀಪವಿರುವ ಬೃಂದಾವನ್ ಲಾಡ್ಜ್ ನ ಕೊಠಡಿಯಲ್ಲಿ ನಿನ್ನೆ ತಂಗಿದ್ದರು. ಇಂದು ಬೆಳಿಗ್ಗೆ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು, ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪಿಎಸ್‍ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೊಠಡಿ ಬಾಗಿಲು ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ….

ಪ್ರಕರಣಗಳ ಹಂಚಿಕೆಯಲ್ಲಿ ಸಿಜೆಐಗೆ ವಿಶೇಷ ಅಧಿಕಾರ: ಸುಪ್ರೀಂ ಕೋರ್ಟ್ ಪೀಠ
ಮೈಸೂರು

ಪ್ರಕರಣಗಳ ಹಂಚಿಕೆಯಲ್ಲಿ ಸಿಜೆಐಗೆ ವಿಶೇಷ ಅಧಿಕಾರ: ಸುಪ್ರೀಂ ಕೋರ್ಟ್ ಪೀಠ

July 7, 2018

ನವದೆಹಲಿ:  ಸುಪ್ರೀಂ ಕೋರ್ಟ್‍ನ ಸಮಾನ ನ್ಯಾಯಾ ಧೀಶರಲ್ಲಿ ಮುಖ್ಯ ನ್ಯಾಯಾ ಧೀಶರೇ ಮೊದಲಿಗ ರಾಗಿದ್ದು, ಅವರೇ ನ್ಯಾಯಾಲಯ ವಿವಿಧ ಪೀಠಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವ ವಿಶೇಷ ಅಧಿಕಾರ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಧೀಶರು ಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರ ನ್ನೊಳಗೊಂಡ ನ್ಯಾಯಪೀಠ ಇಂದು ಪ್ರತ್ಯೇಕ ತೀರ್ಪು ನೀಡಿ, ಸಮಾನ ನ್ಯಾಯಮೂರ್ತಿಗಳಲ್ಲಿ ಮುಖ್ಯ ನ್ಯಾಯಾಧೀಶರು ಮೊದಲ ಸ್ಥಾನ ಹೊಂದಿರುತ್ತಾರೆ. ಹೀಗಾಗಿ ಅವರು ಕೋರ್ಟಿನ ಆಡಳಿತಗಳಲ್ಲಿ ನಾಯಕತ್ವ ವಹಿಸುವ ಅಧಿಕಾರ ಹೊಂದಿರುತ್ತಾರೆ, ಅವುಗಳಲ್ಲಿ…

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ
ಮೈಸೂರು

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

July 7, 2018

 ಜು.20ರವರೆಗೆ ಸಿಹಿ ಉತ್ಪನ್ನಗಳಿಗೆ ಶೇ.10ರಷ್ಟು ರಿಯಾಯ್ತಿ  ನಂದಿನಿ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಮಾತ್ರ ಈ ಅವಕಾಶ ಮೈಸೂರು:  ಯಾವುದೇ ರಾಸಾಯನಿಕ ವಸ್ತು ಬಳಸದ, ಗುಣಮಟ್ಟದ ನಂದಿನಿ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮೈಮುಲ್ ಇಂದಿನಿಂದ ಜು.20ರವರೆಗೆ ‘ನಂದಿನಿ ಸಿಹಿ ಉತ್ಸವ’ ಹಮ್ಮಿಕೊಂಡಿದ್ದು, ಈ ಅವಧಿಯಲ್ಲಿ ನಂದಿನಿ ಸಿಹಿ ತಿಂಡಿಗಳಿಗೆ ಶೇ.10ರಷ್ಟು ರಿಯಾಯಿತಿ ಪ್ರಕಟಿಸಿದೆ. ಮೈಸೂರು-ಬನ್ನೂರು ಮುಖ್ಯ ರಸ್ತೆಯ ಹಾಲಿನ ಡೈರಿ ಮುಂಭಾಗದ ನಂದಿನಿ ಪಾರ್ಲರ್‍ನಲ್ಲಿ ಶುಕ್ರವಾರ ಬೆಳಿಗ್ಗೆ `ನಂದಿನಿ ಸಿಹಿ ಉತ್ಸವ’ಕ್ಕೆ ಮೈಸೂರು ಜಿಲ್ಲಾ…

ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಹೋಟೆಲ್  ಉದ್ಯಮ ಪೂರಕ ತರಬೇತಿ ಕೇಂದ್ರ
ಮೈಸೂರು

ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಹೋಟೆಲ್  ಉದ್ಯಮ ಪೂರಕ ತರಬೇತಿ ಕೇಂದ್ರ

July 7, 2018

ಮೈಸೂರು:  ಅತಿಥಿ ಸತ್ಕಾರ ಕ್ಷೇತ್ರದಲ್ಲಿ ನುರಿತ ಮತ್ತು ಅರ್ಹ ಮಾನವ ಸಂಪನ್ಮೂಲವನ್ನು ಹೋಟೆಲ್ ಉದ್ಯಮಕ್ಕೆ ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಫುಡ್ ಕ್ರಾಫ್ಟ್ ಸಂಸ್ಥೆ ಮೈಸೂರಿನಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸುತ್ತಿದೆ ಎಂದು ಸಂಸ್ಥೆಯ ಉಪನ್ಯಾಸಕ ಜಗದೀಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ ಮೆಂಟ್ ಅಂಡ್ ಕೇಟರಿಂಗ್ ಟೆಕ್ನಾಲಜಿಯಿಂದ ಅನುಮೋದಿಸಲ್ಪಟ್ಟಿರುವ…

1 1,500 1,501 1,502 1,503 1,504 1,611
Translate »