ಮೈಸೂರು

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ
ಮೈಸೂರು

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ

July 7, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡಿದ್ದು, ನಗರಾಧ್ಯಕ್ಷರಾಗಿ ಶ್ರೀನಿಧಿ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ ಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಜೆಪಿ ಸಂಸ್ಥಾಪಕ ಅಧ್ಯಕ್ಷ ಡಿ.ಮಹೇಶ್ ಗೌಡ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಸ್ಟ್ ಲೆಸ್ ಹಾಗೂ ಕ್ಯಾಶ್ ಲೆಸ್ ತತ್ವ ಸಿದ್ದಾಂತದ ಮೂಲಕ ಕೆಪಿಜೆಪಿ ಈಗಾಗಲೇ ರಾಜ್ಯದ ಮನೆ ಮಾತಾಗಿದೆ….

ಕೈಯಿಂದ ಸ್ವಚ್ಛತೆ ಮಾಡುವವರ ನೋಂದಣಿ ಅಭಿಯಾನ: ಮೈಸೂರು ತಾಲೂಕಲ್ಲಿ 400ಕ್ಕೂ ಅಧಿಕ ಮಂದಿ ನೋಂದಣ
ಮೈಸೂರು

ಕೈಯಿಂದ ಸ್ವಚ್ಛತೆ ಮಾಡುವವರ ನೋಂದಣಿ ಅಭಿಯಾನ: ಮೈಸೂರು ತಾಲೂಕಲ್ಲಿ 400ಕ್ಕೂ ಅಧಿಕ ಮಂದಿ ನೋಂದಣ

July 7, 2018

ಮೈಸೂರು:  ಮೈಸೂರು ಜಿಲ್ಲಾ ಪಂಚಾಯತ್ ಸಬಾಂಗಣದಲ್ಲಿ ಶುಕ್ರವಾರ ಕೇಂದ್ರ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ಶುಕ್ರವಾರ ನಡೆದ `ಮ್ಯಾನ್ಯುಯಲ್ ಸ್ಕ್ಯಾವೆಂಜರ್’ ವೃತ್ತಿ ಮಾಡುವವರ ನೋಂದಣಿ ಅಭಿಯಾನದಲ್ಲಿ ಮೈಸೂರು ತಾಲೂಕಿನ 36 ಗ್ರಾ.ಪಂಗಳ 400ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡರು. ಮೈಸೂರು ಜಿ.ಪಂ ಸಭಾಂಗಣದಲ್ಲಿ ನಡೆದ ನೋಂದಣಿ ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ಎಲ್ಲಾ ಗ್ರಾ.ಪಂಗಳ ಪಿಡಿಒಗಳು ಪಾಲ್ಗೊಂಡು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮಚಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ…

ಜೆಡಿಎಸ್ ಕೃಷ್ಣಾರೆಡ್ಡಿ ವಿಧಾನಸಭೆ ಉಪಾಧ್ಯಕ್ಷ
ಮೈಸೂರು

ಜೆಡಿಎಸ್ ಕೃಷ್ಣಾರೆಡ್ಡಿ ವಿಧಾನಸಭೆ ಉಪಾಧ್ಯಕ್ಷ

July 7, 2018

ಬೆಂಗಳೂರು: ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಎಂ. ಕೃಷ್ಣಾ ರೆಡ್ಡಿ ಆಯ್ಕೆಗೊಂಡಿ ದ್ದಾರೆ. ಕೃಷ್ಣಾರೆಡ್ಡಿ ಹೊರತು ಪಡಿಸಿ ಬೇರ್ಯಾರೂ ಅಭ್ಯರ್ಥಿಗಳಾಗಿ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ರಮೇಶ್‍ಕುಮಾರ್, ಉಪ ಸಭಾಧ್ಯಕ್ಷ ಸ್ಥಾನಕ್ಕೆ ರೆಡ್ಡಿ ಅವಿರೋಧ ಆಯ್ಕೆ ಪ್ರಕಟಿಸಿದರು. ಆಯ್ಕೆಗೆ ಕೃಷ್ಣಾರೆಡ್ಡಿ ಅಭಿನಂದನೆ ಸಲ್ಲಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಶೀರ್ವಾದ, ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿ ಯೂರಪ್ಪ ಸಹಕಾರದಿಂದ ಉಪ ಸಭಾಧ್ಯಕ್ಷನಾಗಿ ಆಯ್ಕೆಯಾಗಿರುವು…

ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ಶಾಸಕ ರಾಮದಾಸರಿಗೆ ಅಭಿನಂದನೆ
ಮೈಸೂರು

ಬ್ರಾಹ್ಮಣ ಧರ್ಮ ಸಹಾಯ ಸಭಾದಿಂದ ಶಾಸಕ ರಾಮದಾಸರಿಗೆ ಅಭಿನಂದನೆ

July 7, 2018

ಮೈಸೂರು:  ಬ್ರಾಹ್ಮಣ ಧರ್ಮ ಸಹಾಯ ಸಭಾ ವತಿಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಅವರನ್ನು ಅಭಿನಂದಿಸಲಾಯಿತು.ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಕಲ್ಯಾಣ ಭವನದಲ್ಲಿ ಶುಕ್ರವಾರ ಇಳೈ ಆಳ್ವಾರ್ ಸ್ವಾಮೀಜಿ ಸಾನಿದ್ಯದಲ್ಲಿ ನಡೆದ ಸಮಾರಂಭದಲ್ಲಿ ಬ್ರಾಹ್ಮಣ ಧರ್ಮ ಸಹಾಯ ಸಭಾ ಸೇರಿದಂತೆ ವಿವಿಧ ವಿಪ್ರ ಸಂಘ ಸಂಸ್ಥೆಗಳು, ಶಾಸಕ ರಾಮದಾಸ್ ಅವರನ್ನು ಅಭಿನಂದಿಸಿದವು. ಬಳಿಕ ಮಾತನಾಡಿದ ಎಸ್.ಎ.ರಾಮದಾಸ್, ನಾನು ಅಭಿನಂದನೆ ಸ್ವೀಕರಿಸಲೆಂದು ಬಂದಿಲ್ಲ. ಚುನಾವಣೆ ಪೂರ್ವದಲ್ಲೇ ನನ್ನನ್ನು ನಿಮ್ಮ ಮಗನೆಂದು ಭಾವಿಸಿ, ಹರಸಿದ ನಿಮ್ಮನ್ನೆಲ್ಲಾ ಕಂಡು, ಆಶೀರ್ವಾದ…

ಟ್ರೇಡ್ ಲೈಸನ್ಸ್ ಪಡೆಯದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಬೀಗ
ಮೈಸೂರು

ಟ್ರೇಡ್ ಲೈಸನ್ಸ್ ಪಡೆಯದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಬೀಗ

July 7, 2018

ಮೈಸೂರು: ಉದ್ದಿಮೆ ಪರವಾನಗಿ ಪಡೆಯದೆ ವ್ಯಾಪಾರ ಮಾಡುತ್ತಿದ್ದ ಮೈಸೂರು ನಗರ ಬಸ್ ನಿಲ್ದಾಣದ 22 ಅಂಗಡಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಇಂದು ಬೀಗ ಮುದ್ರೆ ಮಾಡಿದ್ದಾರೆ. ಸಮಿತಿ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಸದಸ್ಯರುಗಳಾದ ಪುರುಷೋತ್ತಮ, ರಜನಿ ಅಣ್ಣಯ್ಯ, ಬಿ.ವಿ.ಮಂಜುನಾಥ, ಹಿರಿಯ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಅವರ ನೇತೃತ್ವದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಸಿಟಿ ಬಸ್ ಸ್ಟ್ಯಾಂಡಿನ 22 ಅಂಗಡಿ ಮಾಲೀಕರು ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆಯದಿರುವುದು ಕಂಡುಬಂದಿತು. ಅಂತಹ ಅಂಗಡಿಗಳ…

ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ: ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ: ವಿದ್ಯಾರ್ಥಿಗಳ ಪ್ರತಿಭಟನೆ

July 7, 2018

ಮೈಸೂರು:  ರಾಜ್ಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮೈಸೂರಿನ ವಿ.ವಿ.ಮೊಹಲ್ಲಾದಲ್ಲಿರುವ ಮಾತೃಮಂಡಳಿ ವೃತ್ತದ ಬಳಿ ಶುಕ್ರವಾರ ಸಂಜೆ ಜಮಾಯಿಸಿದ್ದ ವಿದ್ಯಾರ್ಥಿಗಳು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಬಗ್ಗೆ ಇದ್ದ ನಿರೀಕ್ಷೆಗಳು ಹುಸಿಯಾಗಿವೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ, ಸರ್ಕಾರಿ ಹಾಸ್ಟೆಲ್‍ಗಳ ಉನ್ನತೀಕರಣ ಸೇರಿದಂತೆ ಅವಶ್ಯಕವಾದ ಕಾರ್ಯಕ್ರಮಗಳ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಅಲ್ಲದೆ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿ…

ರಾಜ್ಯದಲ್ಲಿ 10,000 ಆರ್.ಟಿ.ಐ ಪ್ರಕರಣ ವಿಚಾರಣೆ ಬಾಕಿ
ಮೈಸೂರು

ರಾಜ್ಯದಲ್ಲಿ 10,000 ಆರ್.ಟಿ.ಐ ಪ್ರಕರಣ ವಿಚಾರಣೆ ಬಾಕಿ

July 7, 2018

ಮೈಸೂರು: ರಾಜ್ಯ ಮಾಹಿತಿ ಆಯೋಗದಲ್ಲಿ 10 ಸಾವಿರ ಆರ್.ಟಿ.ಐ ಮೇಲ್ಮನವಿ ಅರ್ಜಿ ವಿಚಾರಣೆಗೆ ಬಾಕಿ ಇವೆ ಎಂದು ರಾಜ್ಯ ಮಾಹಿತಿ ಆಯುಕ್ತ ಕೆ.ಎಂ.ಚಂದ್ರೇಗೌಡ ತಿಳಿಸಿದ್ದಾರೆ. ಮೈಸೂರಿನ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮಾಹಿತಿ ಹಕ್ಕು ಅಧಿನಿಯಮದಡಿ ಬಾಕಿ ಉಳಿದಿದ್ದ ಪ್ರಕರಣಗಳ ಮೇಲ್ಮನವಿಗಳ ವಿಚಾರಣೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಆಯೋಗಕ್ಕೆ ಈ ಭಾಗದಿಂದ 30 ಅರ್ಜಿಗಳು ಬಂದಿದ್ದವು. ಆ ಪೈಕಿ 16 ಇತ್ಯರ್ಥಗೊಂಡಿದ್ದು, ಸ್ಥಳದಲ್ಲೇ ಮಾಹಿತಿ ಕೊಡಿಸಲಾಗಿದೆ….

ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವತಿಯಿಂದ `ಪರಿಸರ’ ಕಾರ್ಯಕ್ರಮ
ಮೈಸೂರು

ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ವತಿಯಿಂದ `ಪರಿಸರ’ ಕಾರ್ಯಕ್ರಮ

July 7, 2018

ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ 550 ಸಸಿಗಳನ್ನು ನೆಟ್ಟರು ಮೈಸೂರು: ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸಂಸ್ಥೆಯು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಗ್ರಾಹಕರ ಪರಿಷತ್ತು, ಅರಣ್ಯ ಇಲಾಖೆ ಸಹಯೋಗದಲ್ಲಿ ಮೈಸೂರಿನ ಬನ್ನಿಮಂಟಪ ದಸರಾ ಕವಾಯತು ಮೈದಾನದಲ್ಲಿ ಶುಕ್ರವಾರ 550 ಸಸಿಗಳನ್ನು ನೆಡಲಾಯಿತು. ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಸಸಿ ನೆಟ್ಟು, ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈದಾನದ ಸುತ್ತಲ ಪ್ರದೇಶದಲ್ಲಿ ಮಹಾಘನಿ, ಸ್ಪಥೋಡಿಯಾ, ಹುಣಿಸೆ, ನೇರಳೆ,…

ಲೇಖಕ, ಪ್ರಕಾಶಕರಿಂದ ಪುಸ್ತಕ ಆಹ್ವಾನ
ಮೈಸೂರು

ಲೇಖಕ, ಪ್ರಕಾಶಕರಿಂದ ಪುಸ್ತಕ ಆಹ್ವಾನ

July 7, 2018

ಮೈಸೂರು: ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರ ಕಚೇರಿ ವತಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ 2018 ನೇ ಸಾಲಿನಲ್ಲಿ (ದಿ: 01.01.2018 ರಿಂದ ದಿ: 30.06.2018 ರವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟಣೆಯಾದ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಹಾಗೂ ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕ, ಲೇಖಕ ಪ್ರಕಾಶಕರಿಂದ ಪುಸ್ತಕ ಆಹಾನಿಸಿದೆ. ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕವನ್ನು ನಿರ್ದೇಶಕರು,…

ಬಸ್ಸಿಗೆ ಕಾಯುತ್ತಿದ್ದ ಮಹಿಳೆ  ಬ್ಯಾಗ್‍ನಿಂದ ಚಿನ್ನಾಭರಣ ಕಳವು
ಮೈಸೂರು

ಬಸ್ಸಿಗೆ ಕಾಯುತ್ತಿದ್ದ ಮಹಿಳೆ  ಬ್ಯಾಗ್‍ನಿಂದ ಚಿನ್ನಾಭರಣ ಕಳವು

July 7, 2018

ಮೈಸೂರು:  ಮಂಡ್ಯದಿಂದ ಬಂದು ಮನೆಗೆ ಹೋಗಲು ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ವ್ಯಾನಿಟಿ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಬೆಲೆ ಬಾಳುವ 66 ಗ್ರಾಂ ಚಿನ್ನದ ಆಭರಣಗಳನ್ನು ಖದೀಮರು ಎಗರಿಸಿರುವ ಘಟನೆ ಹಾಡಹಗಲೇ ಮೈಸೂರಿನ ಸಬರ್ಬನ್ ಬಸ್ ಸ್ಟ್ಯಾಂಡ್ ಎದುರು ಬಿಎನ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ಜಯಂತ್ ಎಂಬುವರ ಪತ್ನಿ ಶ್ರೀಮತಿ ಹೆಚ್.ಎಲ್.ರಕ್ಷಿತಾ ಆಭರಣ ಕಳೆದುಕೊಂಡವರು. ಸಂಬಂಧಿಕರ ಮದುವೆಗೆಂದು ಬುಧವಾರ ಸಂಜೆ ಮಂಡ್ಯಕ್ಕೆ ಮಗುವಿನೊಂದಿಗೆ ಹೋಗಿದ್ದ ರಕ್ಷಿತಾ, ತಾಯಿಯೊಂದಿಗೆ ಮಂಡ್ಯದಿಂದ ಒಂದೇ…

1 1,501 1,502 1,503 1,504 1,505 1,611
Translate »