ಮೈಸೂರು

60,000 ಉನ್ನತ ಶಿಕ್ಷಣಾರ್ಥಿಗಳಿಗೆ ಅನುಕೂಲ
ಮೈಸೂರು

60,000 ಉನ್ನತ ಶಿಕ್ಷಣಾರ್ಥಿಗಳಿಗೆ ಅನುಕೂಲ

July 6, 2018

ಮೈಸೂರು: ಕೋರ್ಸ್ ಆರಂಭಿಸಲು ಯುಜಿಸಿ ಮಾನ್ಯತೆ ನೀಡುವ ಎಲ್ಲಾ ಲಕ್ಷಣಗಳು ಕಂಡು ಬಂದಿರುವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವ 60,000 ಮಂದಿಗೆ ಅನುಕೂಲವಾಗಲಿದೆ ಎಂದು ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ. ನವದೆಹಲಿಯ ಯುಜಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ತಜ್ಞರ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಬಳಿಕ ದೂರವಾಣಿ ಮೂಲಕ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಂದು ವಾರ ಅಥವಾ 15 ದಿನಗಳಲ್ಲಿ ಮಾನ್ಯತೆ ದೊರೆಯಬಹುದೆಂಬ ನಿರೀಕ್ಷೆ ಇದೆ ಎಂದರು. ಸಭೆಯಲ್ಲಿ…

ಬೈಕಿಗೆ ಸಾರಿಗೆ ಬಸ್ ಡಿಕ್ಕಿ: ಸವಾರ ಸಾವು
ಮೈಸೂರು

ಬೈಕಿಗೆ ಸಾರಿಗೆ ಬಸ್ ಡಿಕ್ಕಿ: ಸವಾರ ಸಾವು

July 6, 2018

ಮೈಸೂರು: ಕೆ.ಎಸ್.ಆರ್.ಟಿ.ಸಿ ಗ್ರಾಮಾಂತರ ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಸಮೀಪ ಹುಣಸೂರು ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಹುಣಸೂರು ತಾಲೂಕಿನ ಮಧುಗಿರಿಕೊಪ್ಪಲು ನಿವಾಸಿ ನಂಜಪ್ಪಾಚಾರಿ ಅವರ ಮಗ ದೇವರಾಜಚಾರಿ(25) ಸಾವನ್ನಪ್ಪಿದವರು. ಬೆಳವಾಡಿ ಬಳಿಯ ಟೈಟನ್ ವಾಲ್ವ್ ಉದ್ಯೋಗಿಯಾಗಿದ್ದ ಅವರು, ಬೈಕ್ (ಕೆಎ 45, ವೈ 7119)ನಲ್ಲಿ ಬರುತ್ತಿದ್ದಾಗ ಹುಣಸೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ಮಂಡ್ಯ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿಬಸ್ (ಕೆಎ 11, ಎಫ್ 0421) ಬಿಳಿಕೆರೆ ಸಮೀಪ…

ಇಂದು ಮೈತ್ರಿ ಬಜೆಟ್: ಸಾಲ ಮನ್ನಾದತ್ತ ಅನ್ನದಾತನ ಆಸೆಗಣ್ಣು
ಮೈಸೂರು

ಇಂದು ಮೈತ್ರಿ ಬಜೆಟ್: ಸಾಲ ಮನ್ನಾದತ್ತ ಅನ್ನದಾತನ ಆಸೆಗಣ್ಣು

July 5, 2018

ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ರೈತರ ಮನೆ ಬಾಗಿಲಿಗೆ ಬ್ಯಾಂಕಿನವರಿಂದ ಋಣಮುಕ್ತ ಪತ್ರ ಭರವಸೆ ಮೊದಲ ಹಂತದಲ್ಲಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ಪೂರ್ಣ ಬೆಳೆ ಸಾಲ ಮನ್ನಾ ರೈತರ ಹೆಸರಿನಲ್ಲಿ ಸಾಲ ಪಡೆದಿರುವ ಕುಳಗಳಿಗೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಾಗದು ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯಕ್ಕೆ ಹಿಂದಿನ ಸರ್ಕಾರದ ಪ್ರೋತ್ಸಾಹ ಬಾಣಂತಿಯರಿಗೆ 6 ತಿಂಗಳ ಕಾಲ ಪ್ರತಿ ತಿಂಗಳು 6 ಸಾವಿರ ರೂ. ಭತ್ಯೆ, ವಯೋವೃದ್ಧರಿಗೆ ಮಾಸಿಕ ವೃದ್ಧಾಪ್ಯ ವೇತನ…

ದಿನೇಶ್ ಗುಂಡೂರಾವ್ ಕೆಪಿಸಿಸಿ ನೂತನ ಅಧ್ಯಕ್ಷ
ಮೈಸೂರು

ದಿನೇಶ್ ಗುಂಡೂರಾವ್ ಕೆಪಿಸಿಸಿ ನೂತನ ಅಧ್ಯಕ್ಷ

July 5, 2018

ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ, ಗಣೇಶ್ ಹುಕ್ಕೇರಿ ಮುಖ್ಯ ಸಚೇತಕ ಬೆಂಗಳೂರು: ಕರ್ನಾ ಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಎಐಸಿಸಿ ನೇಮಕ ಮಾಡಿದೆ. ಸಚಿವ ಸ್ಥಾನ ವಂಚಿತರಾಗಿದ್ದ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಸಮಾಧಾನ ಪಡಿಸಲಾಗಿದೆ. ವಿಧಾನಸಭೆಯ ಮುಖ್ಯಸಚೇತಕ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯ ಗಣೇಶ್ ಹುಕ್ಕೇರಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಬದಲಾವಣೆ ತರಲು ಹೊರಟಿರುವ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಯುವಕರಿಗೆ…

33 ಕೋಟಿ ಸಾಲ ಬಾಕಿಗಾಗಿ ಮೈಸೂರಲ್ಲಿ ವಾಣಿಜ್ಯ  ಸಂಕೀರ್ಣಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಬೀಗಮುದ್ರೆ
ಮೈಸೂರು

33 ಕೋಟಿ ಸಾಲ ಬಾಕಿಗಾಗಿ ಮೈಸೂರಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಬೀಗಮುದ್ರೆ

July 5, 2018

2001ರಲ್ಲಿ ಪಡೆದ 1.91 ಕೋಟಿ ಸಾಲ 17 ವರ್ಷಗಳ ನಂತರ 33 ಕೋಟಿಗೆ ಬೆಳೆದಿದೆ! ಮೈಸೂರು:  ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಮೈಸೂರಿನ ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯ ಜಂಕ್ಷನ್‍ನಲ್ಲಿರುವ ನಾಲ್ಕು ಅಂತಸ್ತಿನ ವಾಣ ಜ್ಯ ಸಂಕೀರ್ಣಕ್ಕೆ ಡೆಟ್ ರಿಕವರಿ ಟ್ರಿಬ್ಯೂನಲ್ (ಡಿಆರ್‍ಟಿ) ಆದೇಶ ದಂತೆ ಬೀಗಮುದ್ರೆ ಹಾಕಲಾಯಿತು. ವಾಣಿಜ್ಯ ಕಟ್ಟಡ ಮಾಲೀಕರು ಕುವೆಂಪು ನಗರ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಪಡೆದಿದ್ದ 1.91 ಕೋಟಿ ರೂ. ಸಾಲಕ್ಕೆ ಸಂಬಂಧಿಸಿದಂತೆ 2001ರಿಂದ ಇಲ್ಲಿವರೆಗೆ ತ್ರೈಮಾಸಿಕ…

ಡಿಕೆಶಿಯಲ್ಲಿ ಇನ್ನು ಪವರ್ ಇದೆ…ರೇವಣ್ಣಗೆ ವಾಸ್ತು ಪ್ರಕಾರ ಮುಂದ್ಗಡೆ ಸೀಟ್…
ಮೈಸೂರು

ಡಿಕೆಶಿಯಲ್ಲಿ ಇನ್ನು ಪವರ್ ಇದೆ…ರೇವಣ್ಣಗೆ ವಾಸ್ತು ಪ್ರಕಾರ ಮುಂದ್ಗಡೆ ಸೀಟ್…

July 5, 2018

ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನದ 3ನೇ ದಿನವಾದ ಇಂದು ಹಲವಾರು ಸ್ವಾರಸ್ಯ ಕರ ಸನ್ನಿವೇಶಗಳು ಕಂಡುಬಂದವು. ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತಮ್ಮ ಪಂಚಿಂಗ್ ಡೈಲಾಗ್ ಗಳು ಕೆಲವರನ್ನು ತಬ್ಬಿಬ್ಬಾಗಿಸಿದರೆ, ಉಳಿ ದವರನ್ನು ನಗೆಗಡಲಲ್ಲಿ ಮುಳುಗಿಸಿದವು. ಡಿಕೆಶಿ ಪವರ್ರು: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸದನಕ್ಕೆ ತಡವಾಗಿ ಆಗಮಿಸಿದಾಗ `ಶಭಾಷ್, ಡಿ.ಕೆ.ಶಿವಕುಮಾರ್ ಅವರು ಕೊನೆಗೂ ಆಗಮಿಸಿದರು. ಅವರಿಗೆ ಸ್ವಾಗತ’ ಎಂದು ಛೇಡಿಸಿದರು. ಡಿ.ಕೆ.ಶಿವಕುಮಾರ್ ಅವರು ತಮ್ಮ ಆಸನದಲ್ಲಿ ಆಸೀನರಾಗುತ್ತಿದ್ದಂತೆಯೇ ಕರೆಂಟ್ ಬಂತು. ಆಗ `ಏನೇ ಆದರೂ…

ಅಕ್ಟೋಬರ್ 2ನೇ ವಾರ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ!
ಮೈಸೂರು

ಅಕ್ಟೋಬರ್ 2ನೇ ವಾರ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ!

July 5, 2018

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಕ್ಟೋಬರ್ 2ನೇ ವಾರ ಮತ್ತೇ ಸಿಎಂ ಭಾಗ್ಯ ಒಲಿಯಲಿದೆ ಎಂದು ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇಂದು ತುಮಕೂರು ಜಿಲ್ಲೆ ನೊಣವಿನ ಕೆರೆ ಕಾಡಸಿದ್ಧೇಶ್ವರ ಮಠದಲ್ಲಿ ಏರ್ಪಡಿಸ ಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಯಡಿ ಯೂರಪ್ಪ ಜಾತಕ ಕುಂಡಲಿಯಲ್ಲಿ ಮಹಾಯೋಗವಿದೆ. ಅವರ ದಿಟ್ಟತನ ಎಲ್ಲರಿಗೂ ಮಾದರಿಯಾಗಿದೆ. ಕಷ್ಟವನ್ನು ಸಹಿಸಿಕೊಂಡು ಮುಂದೆ ಹೋಗುತ್ತಿದ್ದಾರೆ. ಅವರಿಗೆ ಮುಂದೆ ಶುಭವಿದೆ ಎಂದು ಹೇಳಿದರು. ಅವರ ಜಾತಕದ ಪ್ರಕಾರ…

ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ವಿಧಾನಸಭೆಯಲ್ಲಿ ಕಳವಳ
ಮೈಸೂರು

ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ವಿಧಾನಸಭೆಯಲ್ಲಿ ಕಳವಳ

July 5, 2018

ಬೆಂಗಳೂರು: ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಕಿರಾಣ ಅಂಗಡಿಗಳಿಂದ ಹಿಡಿದು ಹಲವು ಕಡೆ ಪರವಾನಗಿ ಇಲ್ಲದೆ ಮದ್ಯ ಮಾರಾಟವಾಗುತ್ತಿರುವುದರಿಂದ ಸಣ್ಣ ಸಣ್ಣ ಹುಡುಗರೂ ಮದ್ಯವ್ಯಸನಿಗಳಾಗುತ್ತಿದ್ದಾರೆ.ಹೀಗಾಗಿ ತಕ್ಷಣವೇ ಪರವಾನಗಿ ರಹಿತ ಮಾರಾಟವನ್ನು ಸರ್ಕಾರ ಕಟ್ಟು ನಿಟ್ಟಾಗಿ ತಡೆಗಟ್ಟಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಸಿ.ಪಾಟೀಲ್ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜ್ಯ ಸರ್ಕಾರ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿದೆ.ಆದರೆ ಲೈಸೆನ್ಸ್ ಇಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂದು ದೂರಿದರು. ಲೈಸೆನ್ಸ್ ಇರುವ ಮದ್ಯದಂಗಡಿಗಳಲ್ಲಿ ಮದ್ಯ…

ಕಳೆದ ಸಾಲಿನ ಅತಿಥಿ ಉಪನ್ಯಾಸಕರಿಗೆ ಈ ಬಾರಿಯೂ ಅವಕಾಶ
ಮೈಸೂರು

ಕಳೆದ ಸಾಲಿನ ಅತಿಥಿ ಉಪನ್ಯಾಸಕರಿಗೆ ಈ ಬಾರಿಯೂ ಅವಕಾಶ

July 5, 2018

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸು ತ್ತಿದ್ದ 10,146 ಅತಿಥಿ ಉಪನ್ಯಾಸಕರ ಸೇವೆ ಯನ್ನು 2018-19ನೇ ಸಾಲಿನಲ್ಲೂ ಮುಂದುವರೆಸಲು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಆದೇಶಿಸಿದ್ದಾರೆ. ನಮ್ಮ ನೇಮಕ ಆಗುವುದೋ ಇಲ್ಲವೋ ಎಂಬ ಅತಂತ್ರ ಸ್ಥಿತಿಯಲ್ಲಿ ಆತಂಕದಲ್ಲಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಸಚಿವ ಜಿಟಿಡಿ ಅವರ ಈ ನಿರ್ಧಾರ ದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಉಪನ್ಯಾಸಕರು ಸೇವೆ ಯಲ್ಲಿ ಮುಂದುವರೆಯಲು ಕಡ್ಡಾಯ ವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು ಹಾಗೂ…

ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿರುವುದು ವೈಜ್ಞಾನಿಕವಲ್ಲ-ಕುರುಬೂರು
ಮೈಸೂರು

ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿರುವುದು ವೈಜ್ಞಾನಿಕವಲ್ಲ-ಕುರುಬೂರು

July 5, 2018

ಮೈಸೂರು: ಭತ್ತ, ರಾಗಿ ಹಾಗೂ ಇನ್ನಿತರ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿರುವುದು ವೈಜ್ಞಾನಿಕವಲ್ಲ. ಚುನಾವಣಾ ಪೂರ್ವದಲ್ಲಿ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು, ಉತ್ಪಾದನಾ ವೆಚ್ಚ ಹಾಗೂ ಅದರ ಅರ್ಧ ಭಾಗ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿ, ಈಗ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಸಾಧ್ಯವಿಲ್ಲದಂತಹ ಬೆಲೆ ನಿಗದಿ ಮಾಡಿರುವುದು, ಹೆಚ್ಚಿನ ಸಹಕಾರಿಯಾಗಲಾರದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕೆಂದ್ರ ಬಜೆಟ್‍ನಲ್ಲಿಯು ಒಂದೂವರೆ ಪಟ್ಟು ಬೆಂಬಲ…

1 1,505 1,506 1,507 1,508 1,509 1,611
Translate »