ಕಳೆದ ಸಾಲಿನ ಅತಿಥಿ ಉಪನ್ಯಾಸಕರಿಗೆ ಈ ಬಾರಿಯೂ ಅವಕಾಶ
ಮೈಸೂರು

ಕಳೆದ ಸಾಲಿನ ಅತಿಥಿ ಉಪನ್ಯಾಸಕರಿಗೆ ಈ ಬಾರಿಯೂ ಅವಕಾಶ

July 5, 2018

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸು ತ್ತಿದ್ದ 10,146 ಅತಿಥಿ ಉಪನ್ಯಾಸಕರ ಸೇವೆ ಯನ್ನು 2018-19ನೇ ಸಾಲಿನಲ್ಲೂ ಮುಂದುವರೆಸಲು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಆದೇಶಿಸಿದ್ದಾರೆ. ನಮ್ಮ ನೇಮಕ ಆಗುವುದೋ ಇಲ್ಲವೋ ಎಂಬ ಅತಂತ್ರ ಸ್ಥಿತಿಯಲ್ಲಿ ಆತಂಕದಲ್ಲಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಸಚಿವ ಜಿಟಿಡಿ ಅವರ ಈ ನಿರ್ಧಾರ ದಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಆದರೆ ಈ ಉಪನ್ಯಾಸಕರು ಸೇವೆ ಯಲ್ಲಿ ಮುಂದುವರೆಯಲು ಕಡ್ಡಾಯ ವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ಉಳಿಕೆ ಹೆಚ್ಚುವರಿ ಅತಿಥಿ ಉಪನ್ಯಾಸಕರ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿ ಗಳನ್ನು ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡಿಕೊಳ್ಳುವಂತೆಯೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಜಿಟಿಡಿ ಆದೇಶ ನೀಡಿದ್ದಾರೆ.

Translate »