ಮೈಸೂರು

ಮೈಸೂರಲ್ಲಿ ಟೆಂಟ್ ಟೂರಿಸಂ
ಮೈಸೂರು

ಮೈಸೂರಲ್ಲಿ ಟೆಂಟ್ ಟೂರಿಸಂ

July 1, 2018

ದಸರಾ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆಗೆ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಮುಂಭಾಗ ನೂರಾರು ಟೆಂಟ್‍ಗಳ ನಿರ್ಮಾಣ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೊಸ ಚಿಂತನೆ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರಿಗಾಗಿ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮುಂಭಾಗ ಮೈದಾನದಲ್ಲಿ `ಟೆಂಟ್ ಟೂರಿಸಂ’ಗೆ ನಿರ್ಧರಿಸಲಾಗಿದ್ದು, ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ ಎಂದು ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಾರೆ. ದಸರಾ…

ಬಾದಾಮಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ
ಮೈಸೂರು

ಬಾದಾಮಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

July 1, 2018

ಬೆಂಗಳೂರು: ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಬಾದಾಮಿ ವ್ಯಾಪ್ತಿಯಲ್ಲಿ ನೀರಿನ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು,ಕೂಡಲೇ ಪಾರ್ವತಿ ಕೆರೆ,ಗಂಜಿಕೆರೆ ಹಾಗೂ ಹಿರೇಕೆರೆಗಳಿಗೆ ನೀರು ತುಂಬಿಸಿ ನೆರವಾಗುವಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಕೆರೆ ತುಂಬಿಸುವ ಯೋಜನೆಗಳಿಗೆ 12 ಕೋಟಿ ವೆಚ್ಚವಾಗಲಿದೆ ಎನ್ನುವ ಅಂದಾಜು ಪಟ್ಟಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ಸಿದ್ದರಾಮಯ್ಯ ಸ್ಥಳೀಯರ ಅಭಿಪ್ರಾಯ, ಮನವಿಗಳನ್ನೂ ಉಲ್ಲೇಖಿಸಿ ಕೆರೆ…

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ
ಮೈಸೂರು

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ

July 1, 2018

ಮೈಸೂರು ಪತ್ರಕರ್ತರ ಸಂಘದಿಂದ ವೇದಿಕೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಉತ್ತರ ಬೆಂಬಲಿಗರು, ಸಾರ್ವಜನಿಕರಿಗೆ ಅವಕಾಶವಿಲ್ಲ; ಪತ್ರಕರ್ತರ ಸಮ್ಮುಖದಲ್ಲಿ ಸವಾಲ್‍ಗೆ ಜವಾಬ್ ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಹಗರಣ ಕುರಿತಂತೆ ಬಹಿರಂಗ ಚರ್ಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹಾಕಿದ್ದ ಸವಾಲನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವೀಕರಿಸಿದ್ದು, ಜು.3ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುಖಾಮುಖಿಯಾಗಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವೇದಿಕೆಯಲ್ಲಿ…

ಶಾಲಾ ಮಕ್ಕಳಲ್ಲಿ ಬಲಿಷ್ಠ, ಹಸಿರು ಭಾರತ ನಿರ್ಮಾಣದ ಸಂಕಲ್ಪಕ್ಕೆ ಶಾಸಕ ರಾಮದಾಸ್ ಮುನ್ನುಡಿ
ಮೈಸೂರು

ಶಾಲಾ ಮಕ್ಕಳಲ್ಲಿ ಬಲಿಷ್ಠ, ಹಸಿರು ಭಾರತ ನಿರ್ಮಾಣದ ಸಂಕಲ್ಪಕ್ಕೆ ಶಾಸಕ ರಾಮದಾಸ್ ಮುನ್ನುಡಿ

July 1, 2018

ಮೈಸೂರು: ಬಲಿಷ್ಠ ಭಾರತ ಹಾಗೂ ಹಸಿರು ಭಾರತ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಪ್ರೇರಣೆ ನೀಡುವ ಕಾರ್ಯಕ್ರಮವನ್ನು ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಕನಕಗಿರಿ ಶಾಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 5ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಬಲಿಷ್ಠ ಹಾಗೂ ಹಸಿರು ಭಾರತ ನಿರ್ಮಾಣ ಮುನ್ನುಡಿ ಬರೆಯುವ ಕಾರ್ಯಕ್ರಮದಲ್ಲಿ ಕನಕಗಿರಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಾಸಕ…

`ಮೈಸೂರು ಮಿತ್ರ’ ವರದಿ ಫಲಶ್ರುತಿ: ಚೆಲುವಾಂಬ ಆಸ್ಪತ್ರೆಗೆ ಬಂತು 25 ಮಂಚ
ಮೈಸೂರು

`ಮೈಸೂರು ಮಿತ್ರ’ ವರದಿ ಫಲಶ್ರುತಿ: ಚೆಲುವಾಂಬ ಆಸ್ಪತ್ರೆಗೆ ಬಂತು 25 ಮಂಚ

July 1, 2018

100 ಮಂಚಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ: ಅಧೀಕ್ಷಕಿ ಡಾ.ರಾಧಾಮಣ ಮೈಸೂರು: ಮೈಸೂರಿನ ಪ್ರತಿಷ್ಠಿತ ಚೆಲುವಾಂಬ ಆಸ್ಪತ್ರೆಯಲ್ಲಿ ಮಂಚಗಳ ಕೊರತೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆಸ್ಪತ್ರೆಗೆ ಸದ್ಯಕ್ಕೆ 25 ಮಂಚಗಳು ಬಂದಿದ್ದು, ಅವುಗಳನ್ನು ಆಸ್ಪತ್ರೆಯಲ್ಲಿ ಜಾಗ ಇರುವ ಕಡೆಗಳಲ್ಲಿ ಹಾಕಲಾಗಿದೆ. ಆಸ್ಪತ್ರೆಯಲ್ಲಿ ಮಂಚಗಳ ಕೊರತೆಯಿಂದಾಗಿ ನೆಲದ ಮೇಲೆ ಬೆಡ್‍ಗಳನ್ನು ಹಾಕಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳನ್ನು ಮಲಗಿಸಲಾಗಿದ್ದ ಬಗ್ಗೆ ಇತ್ತೀಚೆಗೆ `ಮೈಸೂರು ಮಿತ್ರ’ ಬೆಳಕು ಚೆಲ್ಲಿತ್ತು. ಪತ್ರಿಕೆ ವರದಿ ನೋಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಆಸ್ಪತ್ರೆಗೆ ದಿಢೀರ್…

ಎಂ.ಜಿ.ಕೊಪ್ಪಲಿನಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಎಂ.ಜಿ.ಕೊಪ್ಪಲಿನಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

July 1, 2018

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಇಂದು ಮಂಚೇಗೌಡನಕೊಪ್ಪಲಿನಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು. ಬೆಳಿಗ್ಗೆ 7.30 ಗಂಟೆಗೆ ಮುಡಾ, ಪಾಲಿಕೆ, ವಾಣಿವಿಲಾಸ ವಾಟರ್ ವಕ್ರ್ಸ್, ಆರೋಗ್ಯಾಧಿಕಾರಿಗಳೊಂದಿಗೆ ಮಂಚೇಗೌಡನಕೊಪ್ಪಲು ಮತ್ತು ಸುತ್ತಲಿನ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಪರಿಶೀಲಿಸಿದರು. ಎಂ.ಜಿ.ಕೊಪ್ಪಲಿನ ದೊಡ್ಡ ಮೋರಿಯಲ್ಲಿ ನೀರು ಹರಿದು ಹೋಗಲು ಅಡ್ಡಿಯಾಗಿ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದರು. ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಹೊಸದಾಗಿ ಪೈಪ್‍ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದು ಮುಚ್ಚದೇ ಬಿಟ್ಟಿರುವುದರಿಂದ ವಾಹನ ಸಂಚಾರಕ್ಕೆ…

ವಿಶ್ವನಾಥ್, ಸಿದ್ದರಾಮಯ್ಯ ಮುಸುಕಿನ ಗುದ್ದಾಟದಿಂದ ಕುರುಬ ಸಮಾಜಕ್ಕೇ ನಷ್ಟ
ಮೈಸೂರು

ವಿಶ್ವನಾಥ್, ಸಿದ್ದರಾಮಯ್ಯ ಮುಸುಕಿನ ಗುದ್ದಾಟದಿಂದ ಕುರುಬ ಸಮಾಜಕ್ಕೇ ನಷ್ಟ

July 1, 2018

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಅಡಗೂರು ಹೆಚ್.ವಿಶ್ವನಾಥ್ ನಡುವಿನ ಮುಸುಕಿನ ಗುದ್ದಾಟದಲ್ಲಿ ಕುರುಬ ಸಮಾಜ ಬಡವಾಗುತ್ತಿದೆ ಎಂದು ಹಾಲು ಮತ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ದಾವಣಗೆರೆ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ 14 ಕೋಟಿಯಷ್ಟಿರುವ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿರುವ ಕುರುಬ ಸಮಾಜದ ಜನಸಂಖ್ಯೆ ರಾಜ್ಯದ 30 ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಿಲ್ಲ. ಇಂತಹ ಸ್ಥಿತಿಯಲ್ಲಿ ಜೀವಿಸುತ್ತಿರುವ ಸಮುದಾಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು…

ಕಡಿಮೆ ಪದಗಳ ವಿಶಾಲಾರ್ಥ ಕೊಡುವುದೇ ಮುಕ್ತಕ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
ಮೈಸೂರು

ಕಡಿಮೆ ಪದಗಳ ವಿಶಾಲಾರ್ಥ ಕೊಡುವುದೇ ಮುಕ್ತಕ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್

July 1, 2018

ಮೈಸೂರು: ಕವಿತೆಗಳಲ್ಲಿ ಹೆಚ್ಚು ಅರ್ಥವನ್ನು ಕೊಡುವ ಕೊನೆಯ ಎರಡು ಸಾಲುಗಳೇ ಮುಕ್ತಕ ಎಂದು ಮುಕ್ತಕ ಕವಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ತಿಳಿಸಿದರು. ನಗರದ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್, ಕಾವ್ಯರಂಜನಿ ಸಭಾದ ಸಂಯುಕ್ತಾಶ್ರಯದಲ್ಲಿ ನಡೆದ ‘ಮುಕ್ತಕ ಕಾವ್ಯಸಿರಿ-ಗಾನಲಹರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರವಾದ ಸಂಸ್ಕøತಿಯನ್ನು ಮುಕ್ತಕ ಒಳಗೊಂಡಿದ್ದು, ಸಾಹಿತ್ಯವನ್ನು ಪ್ರೋತ್ಸಾಹಿಸುತ್ತದೆ. ಯಾವುದೇ ಕಾವ್ಯ ಪ್ರಾಕಾರಗಳು ಜನಮನವನ್ನು ಮುಟ್ಟಬೇಕಾದರೆ ಹಾಡಿನ ಮೂಲಕ ಸಾಧ್ಯ. ಪಠ್ಯ ರೂಪದಲ್ಲಿರುವ ಮುಕ್ತಕಗಳನ್ನು ಹಾಡುತ್ತಿರುವುದು ವಿಶೇಷವಾಗಿದೆ….

ವಿಹೆಚ್‍ಪಿ ಮುಖಂಡ ಮುರಳಿಧರ್ ಗೆ ನುಡಿನಮನ
ಮೈಸೂರು

ವಿಹೆಚ್‍ಪಿ ಮುಖಂಡ ಮುರಳಿಧರ್ ಗೆ ನುಡಿನಮನ

July 1, 2018

ಮೈಸೂರು: ಇತ್ತೀಚೆಗೆ ನಿಧನರಾದ ವಿಹೆಚ್‍ಪಿ ಮುಖಂಡರಾದ ಜಿ.ಮುರುಳಿಧರ್ ಅವರು ಸಂಘದ ಸಕ್ರಿಯ ಕಾರ್ಯಕರ್ತರಾಗಿ, ಹಲವು ವರ್ಷಗಳಿಂದ ಸಂಘದ ಬೆಳವಣಿಗೆಗೆ ಶ್ರಮಿಸಿದ್ದರು ಎಂದು ದಕ್ಷಿಣ ಪ್ರಾಂತ ಸಂಘ ಚಾಲಕ ಮಾ.ವೆಂಕಟರಾವ್ ತಿಳಿಸಿದರು. ಜೆಎಲ್‍ಬಿ ರಸ್ತೆಯ ಮಾಧವ ಕೃಪಾ ಆವರಣದಲ್ಲಿ ವಿಹೆಚ್‍ಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ವಿಹೆಚ್‍ಪಿಯ ಪ್ರಾಂತ ಸಹ ಸೇವಾ ಪ್ರಮುಖ್ ಮುರುಳಿಧರ್ ಅವರ ಭಾವಚಿತ್ರಕ್ಕೆ ದಕ್ಷಿಣ ಪ್ರಾಂತ ಸಂಘ ಚಾಲಕ ಮಾ.ವೆಂಕಟರಾವ್, ಆರ್‍ಎಸ್‍ಎಸ್ ಮುಖಂಡರಾದ ಡಾ.ವಾಮನ್ ರಾವ್ ಬಾಪಟ್, ಬಸವರಾಜ್ ಅವರು ಪುಷ್ಪಾರ್ಚನೆ…

ಬೆಂಬಲ ಬೆಲೆ ಯೋಜನೆಯಡಿ  ಭತ್ತ ಖರೀದಿಗೆ ಕ್ರಮ: ಡಿಸಿ
ಮೈಸೂರು

ಬೆಂಬಲ ಬೆಲೆ ಯೋಜನೆಯಡಿ  ಭತ್ತ ಖರೀದಿಗೆ ಕ್ರಮ: ಡಿಸಿ

July 1, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2018ರ ಜುಲೈನಿಂದ ಹಿಂಗಾರು ಬೆಳೆಯ ಭತ್ತ ಖರೀದಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ಹಿಂಗಾರು(ರಬಿ) ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಯನ್ನು ಜುಲೈ ಮಾಹೆಯಿಂದ ಪ್ರಾರಂಭಿಸಿ 31-08-2018ಕ್ಕೆ ಮುಕ್ತಾಯಗೊಳಿಸಲಾಗುವುದು. ಕರ್ನಾಟಕ ಆಹಾರ…

1 1,513 1,514 1,515 1,516 1,517 1,611
Translate »