ಕಡಿಮೆ ಪದಗಳ ವಿಶಾಲಾರ್ಥ ಕೊಡುವುದೇ ಮುಕ್ತಕ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
ಮೈಸೂರು

ಕಡಿಮೆ ಪದಗಳ ವಿಶಾಲಾರ್ಥ ಕೊಡುವುದೇ ಮುಕ್ತಕ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್

July 1, 2018

ಮೈಸೂರು: ಕವಿತೆಗಳಲ್ಲಿ ಹೆಚ್ಚು ಅರ್ಥವನ್ನು ಕೊಡುವ ಕೊನೆಯ ಎರಡು ಸಾಲುಗಳೇ ಮುಕ್ತಕ ಎಂದು ಮುಕ್ತಕ ಕವಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ತಿಳಿಸಿದರು.

ನಗರದ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್, ಕಾವ್ಯರಂಜನಿ ಸಭಾದ ಸಂಯುಕ್ತಾಶ್ರಯದಲ್ಲಿ ನಡೆದ ‘ಮುಕ್ತಕ ಕಾವ್ಯಸಿರಿ-ಗಾನಲಹರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವತಂತ್ರವಾದ ಸಂಸ್ಕøತಿಯನ್ನು ಮುಕ್ತಕ ಒಳಗೊಂಡಿದ್ದು, ಸಾಹಿತ್ಯವನ್ನು ಪ್ರೋತ್ಸಾಹಿಸುತ್ತದೆ.

ಯಾವುದೇ ಕಾವ್ಯ ಪ್ರಾಕಾರಗಳು ಜನಮನವನ್ನು ಮುಟ್ಟಬೇಕಾದರೆ ಹಾಡಿನ ಮೂಲಕ ಸಾಧ್ಯ. ಪಠ್ಯ ರೂಪದಲ್ಲಿರುವ ಮುಕ್ತಕಗಳನ್ನು ಹಾಡುತ್ತಿರುವುದು ವಿಶೇಷವಾಗಿದೆ. ಮುಕ್ತಕ ಎಂಬುದು ಕಡಿಮೆ ಶಬ್ದಗಳಿಂದ ಕಟ್ಟುವಂತಹದ್ದು, ಕನ್ನಡ ಪ್ರಾಚೀನ ಕಾಲದಿಂದಲೂ ಮುಕ್ತಕವು ತನ್ನ ಪರಂಪರೆಯನ್ನು ಹೊಂದಿದೆ.ಮುಕ್ತ ಎಂದರೆ ವಿಶಾಲ ಅರ್ಥವನ್ನು ನೀಡುತ್ತದೆ. ಆದರೆ, ಮುಕ್ತಕ ಎಂಬುದು ಕಡಿಮೆ ಪದಗಳಿಂದ ವಿಶಾಲ ಅರ್ಥವನ್ನು ನೀಡುತ್ತದೆ.

ಮುಕ್ತಕಗಳನ್ನು ಹಾಡುವುದು ಹಾಡುಗಾರನ ಸಾಮಥ್ರ್ಯವನ್ನು ನಿರ್ಧರಿಸುತ್ತದೆ. ಗಮಕ ಶೈಲಿ ಮತ್ತು ತಾಲವನ್ನು ಇರಿಸಿಕೊಂಡು ಮುಕ್ತಕಗಳನ್ನು ಹಾಡಲಾಗುತ್ತದೆ ಎಂದರು.ನಂತರ ಗಣಪತಿಗೆ ನಮಿಸುವ ಹಾಡಿನಿಂದ ಗಾನಲಹರಿಯನ್ನು ಪ್ರಾರಂಭಿಸಲಾಯಿತು. ಆಯ್ದ ಮುಕ್ತಕಗಳನ್ನು ಕಲಾವಿದರಾದ ಶುಭಾ ರಾಘವೇಂದ್ರ, ಅನ್ನಪೂರ್ಣ ನಾಗೇಂದ್ರ, ವಸಂತಾ ವೆಂಕಟೇಶ್, ಸತ್ಯಲಕ್ಷ್ಮೀ ಅನಂತ ಪದ್ಮನಾಭ, ಶಶಿಕಲಾ ಚಂದ್ರಶೇಖರ್ ಹಾಗೂ ವಾದ್ಯ ಸಹಕಾರ ಗಣೇಶ್ ಭಟ್, ರಮೇಶ್ ಧನೂರು, ಗುರುದತ್ತ ಇವರಿಂದ ಮೂಡಿಬಂದ ಮುಕ್ತಕಗಳು ಕೆಳುಗರನ್ನು ಸಾಹಿತ್ಯ ಲೋಕದಲ್ಲಿ ತೇಲುವಂತೆ ಮಾಡಿದವು.
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‍ನ ಅಧ್ಯಕ್ಷ ಎಸ್. ರಾಮಪ್ರಸಾದ್, ಕಾವ್ಯರಂಜನಿ ಸಭಾ ಅಧ್ಯಕ್ಷ ಕಿ.ರು ರಾಮಚಂದ್ರ, ನಿರ್ದೇಶಕಿ ಡಾ. ಜ್ಯೋತಿ ಶಂಕರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »